IND vs BAN: ಚಿರತೆ ಜಿಗಿತ..! ಲಿಟನ್ ದಾಸ್ ಅದ್ಭುತ ಫೀಲ್ಡಿಂಗ್ಗೆ ಕೊಹ್ಲಿಯೇ ಶಾಕ್..! ವಿಡಿಯೋ ನೋಡಿ
IND vs BAN: ಗಾಳಿಯನ್ನು ಸೀಳುತ್ತಾ ಚಿರತೆಯಂತೆ ಎಗರಿ ಎರಡೂ ಕೈಗಳನ್ನು ಮುಂದಕ್ಕೆ ಚಾಚಿ, ಲಿಟನ್ ಹಿಡಿದ ಕ್ಯಾಚ್ಗೆ ಸ್ವತಃ ಕೊಹ್ಲಿಯೇ ಬೆರಗಾದರು. ಅಲ್ಲದೆ ಅವರು ತೆಗೆದುಕೊಂಡ ಕ್ಯಾಚ್ ವಿರಾಟ್ ಕೊಹ್ಲಿಯದ್ದು ಎಂಬುದು ದೊಡ್ಡ ವಿಷಯ.
ಮಿರ್‌ಪುರದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾ (India Vs Bangladesh) ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಲಿಟನ್ ದಾಸ್‌ಗೆ (Liton Das) ಪಂದ್ಯದ ಫಲಿತಾಂಶಕ್ಕೂ ಮುನ್ನವೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರಣ ಅವರು ಹಿಡಿದ ಆ ಅದ್ಭುತ ಕ್ಯಾಚ್, ಗಾಳಿಯನ್ನು ಸೀಳುತ್ತಾ ಚಿರತೆಯಂತೆ ಎಗರಿ ಎರಡೂ ಕೈಗಳನ್ನು ಮುಂದಕ್ಕೆ ಚಾಚಿ, ಲಿಟನ್ ಹಿಡಿದ ಕ್ಯಾಚ್ಗೆ ಸ್ವತಃ ಕೊಹ್ಲಿಯೇ ಬೆರಗಾದರು. ಅಲ್ಲದೆ ಅವರು ತೆಗೆದುಕೊಂಡ ಕ್ಯಾಚ್ ವಿರಾಟ್ ಕೊಹ್ಲಿಯದ್ದು (Virat Kohli) ಎಂಬುದು ದೊಡ್ಡ ವಿಷಯ. ಬಾಂಗ್ಲಾದೇಶ ವಿರುದ್ಧ ಅದ್ಭುತ ದಾಖಲೆ ಹೊಂದಿರುವ ಕೊಹ್ಲಿ ವಿಕೆಟ್ ಪಡೆದ ಬಾಂಗ್ಲಾ ತಂಡ ಸಂತಸದ ಅಲೆಯಲಲ್ಲಿ ಮಿಂದೇದಿತು. ಹಾಗೆಯೇ ಅದ್ಭುತ ಕ್ಯಾಚ್ಗೆ ಬಲಿಯಾದ ಕೊಹ್ಲಿ ಕೂಡ ಶಾಕ್ನಲ್ಲಿಯೇ ಪೆವಿಲಿಯನ್ಗೆ ಮರಳಿದರು.
ಅದ್ಭುತ ಶಾಟ್, ಅದ್ಭುತ ಕ್ಯಾಚ್
ಪಂದ್ಯದಲ್ಲಿ ಇದು ಶಕೀಬ್ ಅವರ ಮೊದಲ ಓವರ್ ಆಗಿತ್ತು. ಓವರ್‌ನ ನಾಲ್ಕನೇ ಎಸೆತವನ್ನು ವಿರಾಟ್ ಕೊಹ್ಲಿ ಶಾರ್ಟ್ ಕವರ್ ಕಡೆ ಆಡಿದರು. ಕೊಹ್ಲಿಯ ಆ ಶಾಟ್ ಖಂಡಿತ ಬೌಂಡರಿ ಸೇರುತ್ತದೆ ಎಂದು ಎಲ್ಲರೂ ಭಾಚಿಸಿದ್ದರು. ಆದರೆ ಅಲ್ಲಿ ನಡದಿದ್ದೆ ಬೇರೆ ಕಥೆ. 30 ಯಾರ್ಡ್ ಸರ್ಕಲ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಲಿಟನ್ ದಾಸ್ ಚಿರತೆಯಂತೆ ಎಗರಿ, ಚೆಂಡನ್ನು ಹಿಡಿದು ಯಾರೂ ನಿರೀಕ್ಷಿಸದ ಕೆಲಸ ಮಾಡಿದರು.
ಇದನ್ನೂ ಓದಿ: IND vs BAN: ಗಬ್ಬರ್ ವೃತ್ತಿಜೀವನಕ್ಕೆ ಕುತ್ತು..! ಬಾಂಗ್ಲಾ ಪ್ರವಾಸದಲ್ಲೂ ಸಿಂಗಲ್ ಡಿಜಿಟ್ಗೆ ಸುಸ್ತಾದ ಧವನ್
ಬಾಂಗ್ಲಾ ತಂಡಕ್ಕೆ ಗೆದ್ದಷ್ಟೇ ಖುಷಿ
ಲಿಟನ್ ದಾಸ್ ಅವರ ಈ ಕ್ಯಾಚ್ ನೋಡಿದ ರೋಹಿತ್ ಶರ್ಮಾ ಕೂಡ ಆಶ್ಚರ್ಯಚಕಿತರಾದರು. ಅಲ್ಲದೆ ಬಾಂಗ್ಲಾದೇಶದ ಆಟಗಾರರ ಸಂಭ್ರಮವನ್ನು ನೋಡಿದರೆ ಅವರಿಗೆ ಗೆಲುವಿನ ಕೀಲಿಕೈ ಸಿಕ್ಕಿತೇನೋ ಎನಿಸ ತೊಡಗಿತು. ಈ ಪಂದ್ಯದಲ್ಲಿ ಎಂದಿನಂತೆ ನಿದಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ರೋಹಿತ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರು. ಆದರೆ ಈ ಇಬ್ಬರಿಗೂ ಶಕೀಬ್ ಒಂದೇ ಓವರ್ನಲ್ಲಿ ಪೆವಿಲಿಯನ್ ಹಾದಿ ತೋರಿಸಿದರು. ಈ ಓವರ್‌ನ ಎರಡನೇ ಎಸೆತದಲ್ಲಿ ನಾಯಕ ರೋಹಿತ್ ಬೌಲ್ಡ್ ಆದರೆ. 4ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫೀಲ್ಡಿಂಗ್ಗೆ ಬಲಿಯಾದರು.
You need this sort of flying catch to dismiss one of the best in the world #kingkohli How about the stunner by Liton Das! Brilliant! Even Kohli was stunned seeing it!#BANvIND #ViratKohli #Teamindia @imVkohli @Isam84 pic.twitter.com/joYrdMJTia
— Nayeem Sharar Ahmed (@NayeemShararr) December 4, 2022
ಧವನ್ ಕೂಡ ವಿಫಲ
ರೋಹಿತ್ ಹಾಗೂ ಕೊಹ್ಲಿ ಹೊರತುಪಡಿಸಿ ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಧವನ್ ಕೂಡ ಈ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ನ್ಯೂಜಿಲೆಂಡ್ ಸರಣಿಯಲ್ಲೂ ರನ್ ಗಳಿಸುವಲ್ಲಿ ವಿಫಲರಾಗಿದ್ದ ಧವನ್ ಬಾಂಗ್ಲಾ ವಿರುದ್ಧವೂ ಹೇಳಿಕೊಳ್ಳುವಂತಹ ಆಟ ಆಡಲಿಲ್ಲ. ಬಾಂಗ್ಲಾ ಸ್ಪಿನ್ನರ್, ಮೀರಜ್ ಎಸೆದ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಧವನ್ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದರು, ಆದರೆ ಶಾಟ್ ಆಡುವಲ್ಲಿ ವಿಫಲರಾದರು. ಧವನ್ ಎದೆಗೆ ಬಡಿದ ಚೆಂಡು ನಂತರ ಅವರ ಕೈ ಸವರಿ ಸೀದಾ ಸ್ಟಂಪ್‌ಗೆ ಬಡಿಯಿತು. ಹೀಗಾಗಿ ಧವನ್ ಅವರ ಕಳಪೆ ಬ್ಯಾಟಿಂಗ್ನಿಂದ ಅಭಿಮಾನಿಗಳು ಕೂಡ ನಿರಾಸೆಗೊಂಡಿದ್ದು, ಅವರನ್ನು ತಂಡದಿಂದ ಕೈಬಿಡುವಂತೆ ಒತ್ತಾಯಿಸಲು ಆರಂಭಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:48 pm, Sun, 4 December 22