ನಾವು ಬದುಕಿದ್ದೇ ಹೆಚ್ಚು: ಭೀಕರ ಅನುಭವ ಬಿಚ್ಚಿಟ್ಟ ಬಾಂಗ್ಲಾದೇಶ ಕ್ರಿಕೆಟಿಗರು

| Updated By: ಝಾಹಿರ್ ಯೂಸುಫ್

Updated on: Jul 02, 2022 | 1:52 PM

West Indies vs Bangladesh: ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಡೊಮಿನಿಕಾ ದ್ವೀಪ ತಲುಪಿದೆ. 3 ಪಂದ್ಯಗಳ ಟಿ20 ಸರಣಿ ಶನಿವಾರದಿಂದ (ಜುಲೈ 2) ಶುರುವಾಗಲಿದೆ. ಮೊದಲ ಎರಡು ಪಂದ್ಯಗಳು ಡೊಮಿನಿಕಾದಲ್ಲಿ ಮತ್ತು ಮೂರನೇ ಪಂದ್ಯ ಗಯಾನಾದಲ್ಲಿ ನಡೆಯಲಿದೆ.

ನಾವು ಬದುಕಿದ್ದೇ ಹೆಚ್ಚು: ಭೀಕರ ಅನುಭವ ಬಿಚ್ಚಿಟ್ಟ ಬಾಂಗ್ಲಾದೇಶ ಕ್ರಿಕೆಟಿಗರು
Bangladesh team
Follow us on

ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ (West Indies vs Bangladesh) ಪ್ರವಾಸದಲ್ಲಿದೆ. ಆತಿಥೇಯ ದೇಶದ ವಿರುದ್ಧ ಟೆಸ್ಟ್‌ ಸರಣಿ ಸೋಲಿನ ಬಳಿಕ ಇದೀಗ ಟಿ20 ಸರಣಿಗಾಗಿ ಸಜ್ಜಾಗುತ್ತಿದೆ. ಈ ಸರಣಿಯ ಮೊದಲ ಪಂದ್ಯ ಜುಲೈ 2 ರಂದು ಡೊಮಿನಿಕಾ ದ್ವೀಪದಲ್ಲಿ ನಡೆಯಲಿದೆ. ದ್ವೀಪ ರಾಷ್ಟ್ರವಾಗಿರುವ ವೆಸ್ಟ್​ ಇಂಡೀಸ್​ನ ಪ್ರಮುಖ ದ್ವೀಪಗಳಲ್ಲಿ ಒಂದಾಗಿರುವ ಡೊಮಿನಿಕಾಗೆ ಸಮುದ್ರದ ಮೂಲಕವೇ ಪ್ರಯಾಣಿಸಬೇಕಾಗುತ್ತದೆ. ಅದರಂತೆ ಬಾಂಗ್ಲಾದೇಶ ತಂಡ ಸೇಂಟ್ ಲೂಸಿಯಾದಿಂದ ಸಮುದ್ರದ ಮೂಲಕ ಡೊಮಿನಿಕಾ ತಲುಪಿದೆ. ಈ ಐದು ಗಂಟೆಗಳ ಪ್ರಯಾಣವು ಬಾಂಗ್ಲಾ ಆಟಗಾರರಿಗೆ ಅವಿಸ್ಮರಣೀಯ ಅನುಭವದಂತಿತ್ತು. ಏಕೆಂದರೆ ಬಾಂಗ್ಲಾದೇಶದ ಯಾವುದೇ ಆಟಗಾರನು ಈ ಮೊದಲು ಸಣ್ಣ ದೋಣಿಯಲ್ಲಿ ಇಷ್ಟು ಸುದೀರ್ಘ ಪ್ರಯಾಣವನ್ನು ಮಾಡಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಡೊಮಿನಿಕಾ ತಲುಪುವ ವೇಳೆಗೆ ಬಹುತೇಕರ ಆಟಗಾರರ ಆರೋಗ್ಯ ಹದಗೆಟ್ಟಿತ್ತು. ಕೆಲವು ಆಟಗಾರರು ದಾರಿಯುದ್ದಕ್ಕೂ ವಾಂತಿ ಮಾಡಿಕೊಳ್ಳುತ್ತಲೇ ಇದ್ದರು.

ಬಾಂಗ್ಲಾದೇಶದ ಪತ್ರಿಕೆ ಪ್ರೋಥೋಮ್ ಅಲೋ ಪ್ರಕಾರ, ದೋಣಿ ಸಮುದ್ರದ ಮಧ್ಯಭಾಗವನ್ನು ತಲುಪಿದ ತಕ್ಷಣ ಎತ್ತರದ ಅಲೆಗಳು ನುಗ್ಗಿ ಬರಲಾರಂಭಿಸಿತು. ಇತ್ತ ಬಾಂಗ್ಲಾದೇಶ ತಂಡ ಪಯಣಿಸುತ್ತಿದ್ದ ದೋಣಿ ತುಂಬಾ ದೊಡ್ಡದಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, 6-7 ಅಡಿ ಎತ್ತರದ ಅಲೆಗಳ ನಡುವೆ ಪ್ರಯಾಣಿಸಬೇಕಾದ ಅನಿವಾರ್ಯತೆ ಒದಗಿ ಬಂತು. ಇದರಿಂದ ಆಟಗಾರರು ವಾಂತಿ ಮಾಡಿಕೊಳ್ಳತೊಡಗಿದರು.

ವೇಗದ ಬೌಲರ್ ಶೋರಿಫುಲ್ ಇಸ್ಲಾಂ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಫೀಸ್ ಇಕ್ಬಾಲ್ ಇಬ್ಬರ ಆರೋಗ್ಯ ಹದಗೆಟ್ಟಿತು. ಪ್ರಯಾಣದ ಸಮಯದಲ್ಲಿ ಇಬ್ಬರೂ ಹಲವಾರು ಬಾರಿ ವಾಂತಿ ಮಾಡಿಕೊಂಡರು. ಬಾಂಗ್ಲಾದೇಶ ತಂಡ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪಂದ್ಯಕ್ಕಾಗಿ ದೋಣಿಯಲ್ಲಿ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಪ್ರಯಾಣಿಸಿದೆ. ಆದರೆ ಪ್ರಯಾಣ ಬಾಂಗ್ಲಾ ಆಟಗಾರರಿಗೆ ಸಾವಿನ ಭಯ ಹುಟ್ಟಿಸಿತ್ತು.

ಇದನ್ನೂ ಓದಿ
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಈ ಬಗ್ಗೆ ಮಾತನಾಡಿದ ಬಾಂಗ್ಲಾದೇಶ ಕ್ರಿಕೆಟಿಗನೊಬ್ಬ ಘಟನೆಯನ್ನು ವಿವರಿಸಿದ್ದಾರೆ. ಒಂದೆಡೆ ಭೀಕರ ಅಲೆಗಳು ಬರುತ್ತಿದೆ. ಮತ್ತೊಂದೆಡೆ ನಮ್ಮ ಆರೋಗ್ಯ ಕೂಡ ಹದಗೆಟ್ಟಿತು. ಈ ವೇಳೆ ನಾವಿನ್ನು ಬದುಕಿ ಉಳಿಯುವುದಿಲ್ಲ ಎಂದೆನಿಸುತ್ತಿತ್ತು. ಪ್ರತಿ ಅಲೆ ಬರುವಾಗಲೂ ನಾವು ಸಾವನ್ನು ಎದುರು ನೋಡುತ್ತಿದ್ದೆವು. ಒಂದಾರ್ಥದಲ್ಲಿ ನಾವು ಬದುಕಿದ್ದೇ ಹೆಚ್ಚು. ನಮ್ಮ ಪಾಲಿಗೆ ಇದು ನನ್ನ ವೃತ್ತಿ ಜೀವನದ ಅತ್ಯಂತ ಕೆಟ್ಟ ಪ್ರವಾಸವಾಗಿದೆ ಎಂದು ಬಾಂಗ್ಲಾ ಆಟಗಾರರು ಹೇಳಿದ್ದಾರೆ.

ನಾನು ಹಲವು ದೇಶಗಳಿಗೆ ಪ್ರವಾಸ ಮಾಡಿದ್ದೇನೆ. ಆದರೆ, ಈ ರೀತಿಯ ಅನುಭವ ಇದೇ ಮೊದಲ ಬಾರಿಗೆ ಆಗಿದೆ. ನಮ್ಮಲ್ಲಿ ಯಾವ ಆಟಗಾರರಿಗೂ ಹೀಗೆ ದೀರ್ಘಾವಧಿಯವರೆಗೆ ದೋಣಿಯಲ್ಲಿ ಪ್ರಯಾಣಿಸಿದ ಅನುಭವವಿಲ್ಲ. ಪ್ರಯಾಣಿಸಿ ಕ್ರಿಕೆಟ್ ಆಡುವುದನ್ನು ಮರೆತುಬಿಡಿ, ನಮ್ಮಲ್ಲಿ ಒಬ್ಬ ಆಟಗಾರನು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದಕ್ಕೇನು ಹೇಳುವುದು. ಇದು ನನ್ನ ಜೀವನದ ಅತ್ಯಂತ ಕೆಟ್ಟ ಪ್ರವಾಸವಾಗಿದೆ ಎಂದು ಬಾಂಗ್ಲಾ ತಂಡದ ಮತ್ತೋರ್ವ ಕ್ರಿಕೆಟಿಗ ಹೇಳಿದ್ದಾರೆ.

ಸದ್ಯ ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಡೊಮಿನಿಕಾ ದ್ವೀಪ ತಲುಪಿದೆ. 3 ಪಂದ್ಯಗಳ ಟಿ20 ಸರಣಿ ಶನಿವಾರದಿಂದ (ಜುಲೈ 2) ಶುರುವಾಗಲಿದೆ. ಮೊದಲ ಎರಡು ಪಂದ್ಯಗಳು ಡೊಮಿನಿಕಾದಲ್ಲಿ ಮತ್ತು ಮೂರನೇ ಪಂದ್ಯ ಗಯಾನಾದಲ್ಲಿ ನಡೆಯಲಿದೆ.

Published On - 1:14 pm, Sat, 2 July 22