VIDEO: ಔಟಾ-ನಾಟೌಟಾ? ಹೊಸ ವಿವಾದಕ್ಕೆ ಕಾರಣವಾದ ವಿಚಿತ್ರ ಕ್ಯಾಚ್

| Updated By: ಝಾಹಿರ್ ಯೂಸುಫ್

Updated on: Jan 02, 2023 | 4:54 PM

BBL 2023: ಬಿಗ್ ಬ್ಯಾಷ್ ಲೀಗ್​ನ 25ನೇ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಹಾಗೂ ಸಿಡ್ನಿ ಸಿಕ್ಸರ್ಸ್​ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬ್ರಿಸ್ಬೇನ್ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 224 ರನ್​ ಕಲೆಹಾಕಿತು.

VIDEO: ಔಟಾ-ನಾಟೌಟಾ? ಹೊಸ ವಿವಾದಕ್ಕೆ ಕಾರಣವಾದ ವಿಚಿತ್ರ ಕ್ಯಾಚ್
Michael Neser
Follow us on

 Big Bash League 2022-23: ಕ್ರಿಕೆಟ್​ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಈ ಕ್ಯಾಚ್​ಗಳನ್ನು ಔಟ್ ಎಂದು ನಿರ್ಧರಿಸಲು ಒಂದಷ್ಟು ನಿಯಮಗಳೂ ಕೂಡ ಇದೆ. ಆದರೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ (BBL 2023) ಆಟಗಾರನೊಬ್ಬ ಹಿಡಿದ ಕ್ಯಾಚ್ ಇದೀಗ ಔಟಾ ಅಥವಾ ನಾಟೌಟಾ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಇಲ್ಲಿ ಅಂಪೈರ್ ಪ್ರಕಾರ ಔಟ್ ಆದರೆ, ಐಸಿಸಿ ನಿಯಮದ ಪ್ರಕಾರ ನೌಟೌಟ್​. ಇದುವೇ ಈಗ ಹೊಸ ಚರ್ಚೆಗೆ ಕಾರಣವಾಗಿರುವುದು ವಿಶೇಷ.

ಬಿಗ್ ಬ್ಯಾಷ್ ಲೀಗ್​ನ 25ನೇ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಹಾಗೂ ಸಿಡ್ನಿ ಸಿಕ್ಸರ್ಸ್​ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬ್ರಿಸ್ಬೇನ್ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 224 ರನ್​ ಕಲೆಹಾಕಿತು.

ಇದನ್ನೂ ಓದಿ
IPL 2023: 2 ದೇಶಗಳಿಂದ ಐಪಿಎಲ್​ಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗ
IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
IPL 2023: ಐಪಿಎಲ್​ಗೆ ನಮೀಬಿಯಾ, ಐರ್ಲೆಂಡ್, ಜಿಂಬಾಬ್ವೆ ಆಟಗಾರರು ಎಂಟ್ರಿ
IPL 2023 RCB Team: RCB ಹೊಸ ತಂಡ ಹೀಗಿದೆ

ಈ ಬೃಹತ್ ಗುರಿಯನ್ನು ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ಪರ ಜೇಮ್ಸ್ ವಿನ್ಸ್ (41) ಹಾಗೂ ಜೋರ್ಡನ್ ಸಿಲ್ಕ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಅದರಲ್ಲೂ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋರ್ಡನ್ ಸಿಲ್ಕ್ 22 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 41 ರನ್​ ಚಚ್ಚಿ ಪಂದ್ಯವನ್ನು ಗೆಲ್ಲಿಸಿಕೊಡುವ ಭರವಸೆ ಮೂಡಿಸಿದ್ದರು.

ಅದರಂತೆ ಸಿಡ್ನಿ ಸಿಕ್ಸರ್ಸ್​ ತಂಡವು 18 ಓವರ್​ಗಳಲ್ಲಿ 199 ರನ್​ಗಳಿಸಿ ಗೆಲುವಿನತ್ತ ಮುಖ ಮಾಡಿತು. 19ನೇ ಓವರ್​ನಲ್ಲಿ ದಾಳಿಗಿಳಿದ ಮಾರ್ಕ್ ಸ್ಟೆಕೆಟೀ ಎಸೆತವನ್ನು ಜೋರ್ಡನ್ ಸಿಲ್ಕ್​ ಭರ್ಜರಿಯಾಗಿ ಬಾರಿಸಿದ್ದರು. ಅತ್ತ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಮೈಕೆಲ್ ನೇಸರ್ ಅಧ್ಬುತವಾಗಿ ಕ್ಯಾಚ್ ಹಿಡಿದರು. ಆದರೆ ಕ್ಯಾಚ್ ಹಿಡಿದ ಬಳಿಕ ಬೌಂಡರಿ ಲೈನ್​ ದಾಟುತ್ತಿದ್ದಂತೆ ನೇಸರ್ ಚೆಂಡನ್ನು ಮೇಲೆಕ್ಕೆ ಎಸೆದರು. ಇದಾದ ಬಳಿಕ ಬೌಂಡರಿ ಲೈನ್​ ಹೊರಗೆ ನಿಂತು ಜಿಗಿದು ಚೆಂಡನ್ನು ಬೌಂಡರಿ ಲೈನ್​ನೊಳಗೆ ಎಸೆದರು. ಅಲ್ಲದೆ ತಕ್ಷಣವೇ ಬೌಂಡರಿ ಲೈನ್​ನೊಳಗೆ ಬಂದ ನೇಸರ್ ಚೆಂಡನ್ನು ಹಿಡಿದರು.

ಇತ್ತ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದರಿಂದ ಕುಪಿತಗೊಂಡ ಜೋರ್ಡನ್ ಸಿಲ್ಕ್ ವಾಗ್ವಾದಕ್ಕೆ ಇಳಿದರು. ಇದಾಗ್ಯೂ ಅಂಪೈರ್ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಅಂಪೈರ್ ನೀಡಿದ ಈ ತೀರ್ಪು ಇದೀಗ ಚರ್ಚೆಗೆ ಕಾರಣವಾಗಿದೆ.
ಏಕೆಂದರೆ ಐಸಿಸಿ ನಿಯಮದ ಪ್ರಕಾರ, ಫೀಲ್ಡರ್ ಬೌಂಡರಿ ಹೊರಗೆ ಕಾಲಿಡುವ ಮುನ್ನ ಗಾಳಿಯಲ್ಲಿ ಚೆಂಡನ್ನು ಎಸೆದು ನಂತರ ಬೌಂಡರಿ ಒಳಗೆ ಹಿಂತಿರುಗಿ ಕ್ಯಾಚ್ ಅನ್ನು ಪೂರ್ಣಗೊಳಿಸಬೇಕು. ಆದರೆ ಮೈಕೆಲ್ ನೇಸರ್ ಚೆಂಡನ್ನು ಬೌಂಡರಿ ಹೊರಗೆ ನಿಂತು ಜಿಗಿಯುವ ಮೂಲಕ ಮೈದಾನಕ್ಕೆ ಎಸೆದಿರುವುದು ಸ್ಪಷ್ಟ.

ಇದಾಗ್ಯೂ ಅಂಪೈರ್ ಔಟ್ ಎಂದು ತೀರ್ಪು ನೀಡಿರುವುದು ಐಸಿಸಿಯ ನಿಯಮಗಳ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಷ್ಟೇ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಟಗಾರನನ್ನು ಈ ರೀತಿ ಔಟ್ ಮಾಡಬಹುದೇ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಏಕೆಂದರೆ ಸಿಕ್ಸ್​ ಆಗುವ ಚೆಂಡನ್ನು ಬೌಂಡರಿ ಹೊರಗೆ ನಿಂತು ಜಿಗಿಯುವ ಮೂಲಕ ಮೈದಾನಕ್ಕೆ ಎಸೆಯುವ ಅವಕಾಶವಂತು ಫೀಲ್ಡರ್​ಗಳಿಗೆ ಇದ್ದೇ ಇರುತ್ತದೆ. ಹೀಗಾಗಿ ಭವಿಷ್ಯದಲ್ಲಿ ಆಟಗಾರರು ಚೆಂಡನ್ನು ಗಮನಿಸಿ ಬೌಂಡರಿ ಹೊರಗೆ ನಿಂತು ಫೀಲ್ಡಿಂಗ್ ಮಾಡಿ ಕ್ಯಾಚ್ ಔಟ್ ಮಾಡಬಹುದೇ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಐಸಿಸಿ ಮುಂದಿಡುತ್ತಿದ್ದಾರೆ. ಒಟ್ಟಿನಲ್ಲಿ ಮೈಕೆಲ್ ನೇಸರ್ ಹಿಡಿದಿರುವ ವಿಚಿತ್ರ ಕ್ಯಾಚ್​ ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಬೌಂಡರಿ ಲೈನ್ ಕ್ಯಾಚ್ ನಿಯಮದಲ್ಲಿ ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.