ಐಪಿಎಲ್ಗೂ ಮುನ್ನ 6 ಸರಣಿ, 19 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ; ಇಲ್ಲಿದೆ ಪೂರ್ಣ ವೇಳಾಪಟ್ಟಿ
Team India: ಐಪಿಎಲ್ ಆರಂಭಕ್ಕೂ ಮುನ್ನ ಈ 19 ಪಂದ್ಯಗಳು ನಡೆಯಲಿವೆ. ಮುಂದಿನ 3 ತಿಂಗಳ ಕಾಲ ಭಾರತ ಬಲಿಷ್ಠ ತಂಡಗಳ ಎದುರು ಎಲ್ಲಾ ಮಾದರಿಯ ಕ್ರಿಕೆಟ್ ಸರಣಿ ಆಡಲಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಎರಡನೇ ಪಂದ್ಯವನ್ನು ಸೋಲುವುದರೊಂದಿಗೆ ಸರಣಿ ಕಳೆದುಕೊಂಡಿರುವ ಟೀಂ ಇಂಡಿಯಾ (India vs Bangladesh) ಇದೀಗ ಕೊನೆಯ ಪಂದ್ಯವನ್ನು ಗೆದ್ದು ವೈಟ್ ವಾಶ್ ಮುಖಭಂಗವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಲಿದೆ. ಈ ಪಂದ್ಯದ ಬಳಿಕ ಉಭಯ ತಂಡಗಳ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿಯೂ ನಡೆಯಲ್ಲಿದ್ದು, ಈ ಸರಣಿ ಡಿ. 26ರಂದು ಕೊನೆಗೊಳ್ಳಲಿದೆ. ಆ ಬಳಿಕ ಟೀಂ ಇಂಡಿಯಾ (Team India) ತವರಿನಲ್ಲಿ ಬೇರೆ ಬೇರೆ ದೇಶಗಳೊಂದಿಗೆ ಹಲವು ಸರಣಿಗಳನ್ನು ಆಡಲಿದ್ದು, ಆ ಸರಣಿಗಳ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಇಂದು ಬಿಡುಗಡೆಗೊಳಿಸಿದೆ. ಈ ವೇಳಾಪಟ್ಟಿಯ ಪ್ರಕಾರ ಟೀಂ ಇಂಡಿಯಾ ಒಟ್ಟಾರೆ ತವರಿನಲ್ಲಿ 19 ಪಂದ್ಯಗಳನ್ನು ಆಡಲಿದೆ.
ಐಪಿಎಲ್ ಆರಂಭಕ್ಕೂ ಮುನ್ನ ಈ 19 ಪಂದ್ಯಗಳು ನಡೆಯಲಿವೆ. ಮುಂದಿನ 3 ತಿಂಗಳ ಕಾಲ ಭಾರತ ಬಲಿಷ್ಠ ತಂಡಗಳ ಎದುರು ಎಲ್ಲಾ ಮಾದರಿಯ ಕ್ರಿಕೆಟ್ ಸರಣಿ ಆಡಲಿದೆ. ಟೀಂ ಇಂಡಿಯಾ ಈ ತವರು ಸರಣಿಯನ್ನು ಶ್ರೀಲಂಕಾಕ್ಕೆ ಆತಿಥ್ಯ ನೀಡುವ ಮೂಲಕ ಹೊಸ ವರ್ಷದೊಂದಿಗೆ ಪ್ರಾರಂಭಿಸಲಿದೆ. ಇದರ ನಂತರ ನ್ಯೂಜಿಲೆಂಡ್ ಮತ್ತು ನಂತರ ಆಸ್ಟ್ರೇಲಿಯಾಕ್ಕೆ ಆತಿಥ್ಯ ವಹಿಸಲಿದೆ. ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ತಂಡವು ತವರಿನಲ್ಲಿ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.
ಶ್ರೀಲಂಕಾದ ಸವಾಲನ್ನು ಎದುರಿಸಿದ ನಂತರ, ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಇದರ ನಂತರ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾದೊಂದಿಗೆ 4 ಟೆಸ್ಟ್ ಮತ್ತು ನಂತರ 3 ಏಕದಿನ ಪಂದ್ಯಗಳ ಸರಣಿಗಳನ್ನು ಆಡಲಿದೆ.
? NEWS ?: BCCI announces schedule for Mastercard home series against Sri Lanka, New Zealand & Australia. #TeamIndia | #INDvSL | #INDvNZ | #INDvAUS | @mastercardindia
More Details ?https://t.co/gEpahJztn5
— BCCI (@BCCI) December 8, 2022
ಶ್ರೀಲಂಕಾ ವಿರುದ್ಧ 3 ಟಿ20 ಮತ್ತು 3 ಏಕದಿನ
ಶ್ರೀಲಂಕಾ ಎದುರು ಟಿ20 ಸರಣಿಯನ್ನು ಹೊಸವರ್ಷದೊಂದಿಗೆ ಆರಂಭಿಸುವ ಟೀಂ ಇಂಡಿಯಾ ಜನವರಿ 3 ರಂದು ಮುಂಬೈನಲ್ಲಿ ಮೊದಲ ಟಿ20 ಪಂದ್ಯವನ್ನು ಆಡಲಿದೆ. ಈ ಟಿ20 ಸರಣಿಯು ಜನವರಿ 7 ರಂದು ಕೊನೆಗೊಳ್ಳಲಿದ್ದು, ನಂತರ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯು ಜನವರಿ 10 ರಿಂದ ಪ್ರಾರಂಭವಾಗಲಿದೆ.
ಶ್ರೀಲಂಕಾ ವಿರುದ್ಧದ ಸರಣಿ ವೇಳಾಪಟ್ಟಿ
ದಿನಾಂಕ |
ಪಂದ್ಯ |
ಸ್ಥಳ |
03-01-2023 |
ಮೊದಲನೇ ಟಿ20 | ಮುಂಬೈ |
05-01-2023 | ಎರಡನೇ ಟಿ20 |
ಪುಣೆ |
07-01-2023 |
ಮೂರನೇ ಟಿ20 | ರಾಜ್‌ಕೋಟ್ |
10-01-2023 | ಮೊದಲ ಏಕದಿನ ಪಂದ್ಯ |
ಗುವಾಹಟಿ |
12-01-2023 |
ಎರಡನೇ ಏಕದಿನ ಪಂದ್ಯ | ಕೋಲ್ಕತ್ತಾ |
15-01-2023 | ಮೂರನೇ ಏಕದಿನ ಪಂದ್ಯ |
ತಿರುವನಂತಪುರಂ |
ನ್ಯೂಜಿಲೆಂಡ್ ವಿರುದ್ಧ 3 ಟಿ20 ಮತ್ತು 3 ಏಕದಿನ
ಜನವರಿ 18 ರಂದು ಅಂದರೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಮುಗಿದ ಮೂರು ದಿನಗಳ ನಂತರ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಜನವರಿ 24 ರಂದು ಏಕದಿನ ಸರಣಿ ಕೊನೆಗೊಳ್ಳಲಿದ್ದು, ಟಿ20 ಸರಣಿಯು ಜನವರಿ 27 ರಿಂದ ಫೆಬ್ರವರಿ 1 ರವರೆಗೆ ನಡೆಯಲಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿ ವೇಳಾಪಟ್ಟಿ
ದಿನಾಂಕ |
ಪಂದ್ಯ |
ಸ್ಥಳ |
18-01-2023 |
ಮೊದಲನೇ ಏಕದಿನ ಪಂದ್ಯ | ಹೈದರಾಬಾದ್ |
21-01-2023 | ಎರಡನೇ ಏಕದಿನ ಪಂದ್ಯ |
ರಾಯ್‌ಪುರ |
24-01-2023 |
ಮೂರನೇ ಏಕದಿನ ಪಂದ್ಯ | ಇಂದೋರ್ |
27-01-2023 | ಮೊದಲ ಟಿ20 ಪಂದ್ಯ |
ರಾಂಚಿ |
29-01-2023 |
ಎರಡನೇ ಟಿ20 ಪಂದ್ಯ | ಲಕ್ನೋ |
01-02-2023 | ಮೂರನೇ ಟಿ20 ಪಂದ್ಯ |
ಅಹಮದಾಬಾದ್ |
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿ
ಕಿವೀಸ್ ವಿರುದ್ಧ ಟಿ20 ಸರಣಿಯನ್ನು ಮುಗಿಸಿದ 8 ದಿನಗಳ ಬಳಿಕ ಟೀಂ ಇಂಡಿಯಾ, ಆಸ್ಟ್ರೇಲಿಯಾ ಜೊತೆ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಆಡಲಿದೆ. ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳಾಪಟ್ಟಿ
ದಿನಾಂಕ |
ಪಂದ್ಯ | ಸ್ಥಳ |
ಫೆ. 9ರಿಂದ ಫೆ. 13 |
ಮೊದಲನೇ ಟೆಸ್ಟ್ | ನಾಗ್ಪುರ |
ಫೆ. 17ರಿಂದ ಫೆ. 21 | ಎರಡನೇ ಟೆಸ್ಟ್ |
ದೆಹಲಿ |
ಮಾ. 1ರಿಂದ ಮಾ.5 |
ಮೂರನೇ ಟೆಸ್ಟ್ | ಧರ್ಮಶಾಲಾ |
ಮಾ. 9ರಿಂದ ಮಾ.13 | ನಾಲ್ಕನೇ ಟೆಸ್ಟ್ |
ಅಹಮದಾಬಾದ್ |
ಮಾರ್ಚ್ 17 |
ಮೊದಲನೇ ಏಕದಿನ ಪಂದ್ಯ | ಮುಂಬೈ |
ಮಾರ್ಚ್ 19 | ಎರಡನೇ ಏಕದಿನ ಪಂದ್ಯ |
ವಿಶಾಖಪಟ್ಟಣ |
ಮಾರ್ಚ್ 22 | ಮೂರನೇ ಏಕದಿನ ಪಂದ್ಯ |
ಚೆನ್ನೈ |
ರಾಯ್‌ಪುರಕ್ಕೂ ಆತಿಥ್ಯ ವಹಿಸುವ ಅವಕಾಶ
ಭಾರತದ 19 ಪಂದ್ಯಗಳಿಗೆ ಆತಿಥ್ಯ ವಹಿಸಲು ಮುಂಬೈ, ಪುಣೆ, ರಾಜ್‌ಕೋಟ್, ಗುವಾಹಟಿ, ಕೋಲ್ಕತ್ತಾ, ಹೈದರಾಬಾದ್, ರಾಂಚಿ, ಅಹಮದಾಬಾದ್, ನಾಗ್ಪುರ, ದೆಹಲಿ, ಧರ್ಮಶಾಲಾ, ಚೆನ್ನೈ ಮೈದಾನಗಳು ಮತ್ತೊಮ್ಮೆ ಸಿದ್ಧವಾಗಿವೆ. ಅದೇ ಸಮಯದಲ್ಲಿ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಲು ರಾಯ್‌ಪುರ ಕೂಡ ಸಜ್ಜಾಗಿದೆ. ರಾಯ್‌ಪುರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
Published On - 3:44 pm, Thu, 8 December 22