AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI Central Contracts: ಗುತ್ತಿಗೆಯಿಂದ ಹೊರಬಿದ್ದ ಕಿಶನ್- ಶ್ರೇಯಸ್​ಗೆ ಟೀಂ ಇಂಡಿಯಾದಲ್ಲಿ ಮತ್ತೆ ಸಿಗುತ್ತಾ ಚಾನ್ಸ್?

BCCI Central Contracts: ವಾಸ್ತವವಾಗಿ ಟೀಂ ಇಂಡಿಯಾ ತೊರೆದಿದ್ದ ಈ ಇಬ್ಬರು ಆಟಗಾರರಿಗೆ ಬಿಸಿಸಿಐ, ದೇಶೀ ಟೂರ್ನಿ ರಣಜಿ ಆಡುವಂತೆ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಆದರೆ ಈ ಇಬ್ಬರು ಆಟಗಾರರು ರಣಜಿ ಆಡದೆ ಐಪಿಎಲ್​ನತ್ತ ಗಮನ ಹರಿಸಲು ಆರಂಭಿಸಿದ್ದರು. ಇದು ಬಿಸಿಸಿಐ ಕೋಪಗೊಳ್ಳುವಂತೆ ಮಾಡಿತ್ತು.

BCCI Central Contracts: ಗುತ್ತಿಗೆಯಿಂದ ಹೊರಬಿದ್ದ ಕಿಶನ್- ಶ್ರೇಯಸ್​ಗೆ ಟೀಂ ಇಂಡಿಯಾದಲ್ಲಿ ಮತ್ತೆ ಸಿಗುತ್ತಾ ಚಾನ್ಸ್?
ಶ್ರೇಯಸ್ ಅಯ್ಯರ್, ಇಶಾನ್ ಕಿಶನ್
ಪೃಥ್ವಿಶಂಕರ
|

Updated on:Feb 28, 2024 | 10:37 PM

Share

ಬಿಸಿಸಿಐ ಇಂದು ಬಿಡುಗಡೆ ಮಾಡಿರುವ 2024- 25ನೇ ಸಾಲಿನ ವಾರ್ಷಿಕ ಕೇಂದ್ರ ಗುತ್ತಿಗೆ (BCCI Central Contracts) ಪಟ್ಟಿಯಲ್ಲಿ 30 ಆಟಗಾರರು ಸ್ಥಾನ ಪಡೆದಿದ್ದಾರೆ. ಅವರಲ್ಲಿ 11 ಆಟಗಾರರು ಹೊಸದಾಗಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಉಳಿದಂತೆ ಪಟ್ಟಿಯಲ್ಲಿರುವ ಆಟಗಾರರನ್ನು ಈ ಮೊದಲ ಊಹಿಸಲಾಗಿತ್ತು. ಉಳಿದಂತೆ ಯಾವ ಆಟಗಾರರ ಹೆಸರು ಪಟ್ಟಿಯಿಂದ ಹೊರಬೀಳಬಹುದು ಎಂಬುದು ಕೂಡ ಈ ಮೊದಲೇ ಖಚಿತವಾಗಿತ್ತು. ಆದರೆ ಇಬ್ಬರು ಸ್ಟಾರ್ ಆಟಗಾರನನ್ನು ಗುತ್ತಿಗೆಯಿಂದ ಹೊರಗಿಟ್ಟಿರುವ ಬಿಸಿಸಿಐ, ಟೀಂ ಇಂಡಿಯಾ (Team India) ಕ್ರಿಕೆಟಿಗರಿಗೆ ತನ್ನ ಆಜ್ಞೆಗಿಂತ ಯಾವುದು ದೊಡ್ಡದಲ್ಲ ಎಂಬ ಖಡಕ್ ಸಂದೇಶ ರವಾನಿಸಿದೆ. ಅಂದಹಾಗೆ ಬಿಸಿಸಿಐನ ಕೆಂಗಣ್ಣಿಗೆ ಗುರಿಯಾದ ಆ ಇಬ್ಬರು ಆಟಗಾರರು ಯಾರೆಂದರೆ ಒಬ್ಬರು ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್, ಇನ್ನೊಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan, Shreyas Iyer).

ಬಿಸಿಸಿಐ ಖಡಕ್ ಎಚ್ಚರಿಕೆ

ವಾಸ್ತವವಾಗಿ ಟೀಂ ಇಂಡಿಯಾ ತೊರೆದಿದ್ದ ಈ ಇಬ್ಬರು ಆಟಗಾರರಿಗೆ ಬಿಸಿಸಿಐ, ದೇಶೀ ಟೂರ್ನಿ ರಣಜಿ ಆಡುವಂತೆ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಆದರೆ ಈ ಇಬ್ಬರು ಆಟಗಾರರು ರಣಜಿ ಆಡದೆ ಐಪಿಎಲ್​ನತ್ತ ಗಮನ ಹರಿಸಲು ಆರಂಭಿಸಿದ್ದರು. ಇದು ಬಿಸಿಸಿಐ ಕೋಪಗೊಳ್ಳುವಂತೆ ಮಾಡಿತ್ತು. ಅಲ್ಲದೆ ಈ ಇಬ್ಬರಂತೆಯೇ ಮುಂಬರುವ ಯುವ ಆಟಗಾರರು ಈ ಇಬ್ಬರ ಹಾದಿಯನ್ನೇ ತುಳಿದರೆ ಏನು ಮಾಡುವುದು ಎಂಬ ಆತಂಕವೂ ಸೃಷ್ಟಿಯಾಗಿತ್ತು. ಹೀಗಾಗಿ ಆರಂಭದಲ್ಲೇ ಇಂತಹ ಸ್ವನಿರ್ಧಾರಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಬಿಸಿಸಿಐ, ತನ್ನ ಮಾತನ್ನು ಕೇಳದ ಈ ಇಬ್ಬರು ಆಟಗಾರರನ್ನು ಕೇಂದ್ರ ಒಪ್ಪಂದಿಂದ ಹೊರಗಿಟ್ಟಿದೆ. ಹಾಗಿದ್ದರೆ ಈ ಇಬ್ಬರು ಆಟಗಾರರು ಮತ್ತೆ ಟೀಂ ಇಂಡಿಯಾದಲ್ಲಿ ಆಡಲು ಸಾಧ್ಯವಿಲ್ಲವೇ? ಈ ಇಬ್ಬರಿಗೆ ಟೀಂ ಇಂಡಿಯಾದ ಬಾಗಿಲು ಶಾಶ್ವತವಾಗಿ ಮುಚ್ಚಿದೆಯೇ? ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತಿರಬಹುದು. ಅದಕ್ಕೆಲ್ಲ ಉತ್ತರ ಇಲ್ಲಿದೆ.

BCCI Central Contracts: ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಜುರೇಲ್, ಸರ್ಫರಾಜ್ ಹೆಸರು ಯಾಕಿಲ್ಲ?

ಬಿಸಿಸಿಐ ಇಂದು ಬಿಡುಗಡೆ ಮಾಡಿರುವ ವಾರ್ಷಿಕ ಒಪ್ಪಂದದ ಪಟ್ಟಿಯಲ್ಲಿ ಆಟಗಾರರ ಹೆಸರಿನೊಂದಿಗೆ ಎಲ್ಲಾ ಆಟಗಾರರಿಗೆ ಪ್ರಮುಖ ಸೂಚನೆಯನ್ನು ನೀಡಿದೆ. ಅದರಂತೆ ಕೇಂದ್ರ ಒಪ್ಪಂದದಡಿ ಬರುವ ಅಥ್ಲೀಟ್‌ಗಳು ಟೀಂ ಇಂಡಿಯಾ ಪರ ಆಡದೇ ಇದ್ದಾಗ ದೇಶಿಯ ಕ್ರಿಕೆಟ್‌ನಲ್ಲಿ ಆಡಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಬಿಸಿಸಿಐ ಮತ್ತೊಮ್ಮೆ ಎಲ್ಲ ಆಟಗಾರರಿಗೆ ನೀಡಿದೆ. ಇತ್ತೀಚೆಗೆ ಬಿಸಿಸಿಐ ಇದನ್ನು ಹಲವು ಬಾರಿ ಪುನರುಚ್ಚರಿಸಿತ್ತು. ಅದಾಗ್ಯೂ ಬಿಸಿಸಿಐ ಸೂಚನೆಯನ್ನು ಕಡೆಗಣಿಸಿದ್ದ ಪರಿಣಾಮವಾಗಿ ಇದೀಗ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಒಪ್ಪಂದದಿಂದ ಬಿಡುಗಡೆ ಮಾಡಲಾಗಿದೆ.

ಟೀಂ ಇಂಡಿಯಾಗೆ ಮತ್ತೆ ಮರಳುವುದು ಹೇಗೆ?

ಸದ್ಯ ಬಿಸಿಸಿಐ ಒಪ್ಪಂದಿಂದ ಹೊರಗಿರುವ ಶ್ರೇಯಸ್ ಮತ್ತು ಇಶಾನ್ ಟೀಂ ಇಂಡಿಯಾಗೆ ಮರಳಲು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರ – ಹೌದು. ಕೇಂದ್ರ ಒಪ್ಪಂದವನ್ನು ಪಡೆಯದಿರುವುದು ಎಂದರೆ ಇಬ್ಬರೂ ತಂಡಕ್ಕೆ ಮರಳಲು ಸಾಧ್ಯವಿಲ್ಲ ಅಥವಾ ಇಬ್ಬರೂ ಮತ್ತೆ ಒಪ್ಪಂದವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ಒಪ್ಪಂದಗಳಿಲ್ಲದೆಯೂ ಇಬ್ಬರೂ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಬಹುದು. ಆ ನಂತರ ಇಬ್ಬರೂ ಟೀಂ ಇಂಡಿಯಾದಲ್ಲಿ ನಿರಂತರವಾಗಿ ಆಡಿದರೆ ಮುಂದಿನ ಕೇಂದ್ರ ಒಪ್ಪಂದದಲ್ಲಿ ಮತ್ತೊಮ್ಮೆ ಸ್ಥಾನ ಪಡೆಯಬಹುದು. ಆದರೆ ಇದರಲ್ಲಿ ಒಂದೇ ಒಂದು ಷರತ್ತು ಇದೆ. ಅದೆನೆಂದರೆ ಇಬ್ಬರೂ ಆಟಗಾರರು ಮೊದಲು ಐಪಿಎಲ್ ಮತ್ತು ಇತರ ದೇಶೀಯ ಪಂದ್ಯಾವಳಿಗಳನ್ನು ಆಡಬೇಕಾಗುತ್ತದೆ. ಅಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ಖಂಡಿತ ಟೀಂ ಇಂಡಿಯಾದಲ್ಲಿ ಅವಕಾಶ ಸಿಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:33 pm, Wed, 28 February 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ