BCCI Central Contracts: ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಜುರೇಲ್, ಸರ್ಫರಾಜ್ ಹೆಸರು ಯಾಕಿಲ್ಲ?
BCCI Central Contracts: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇಬ್ಬರು ಯುವ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಮುಂದಿನ ಟೆಸ್ಟ್ ಬಳಿಕ ಕೇಂದ್ರ ವಾರ್ಷಿಕ ಒಪ್ಪಂದದಲ್ಲಿ ಸ್ಥಾನ ಪಡೆಯಲ್ಲಿದ್ದಾರೆ ಎಂದು ಹೇಳಿಕೊಂಡಿದೆ. ಹಾಗಿದ್ದರೆ, ಬಿಸಿಸಿಐ ಬಿಡುಗಡೆ ಮಾಡಿರುವ ಈಗಿನ ಪಟ್ಟಿಯಲ್ಲಿ ಈಇಬ್ಬರು ಆಟಗಾರರು ಯಾಕೆ ಸ್ಥಾನ ಪಡೆದಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಕಾರಣ ಬಿಸಿಸಿಐ ಅಳವಡಿಸಿರುವ ನಿಯಮ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ವಾರ್ಷಿಕ ಕೇಂದ್ರ ಒಪ್ಪಂದ ಪಟ್ಟಿಯನ್ನು ಫೆಬ್ರವರಿ 28 ಬುಧವಾರ ಬಿಡುಗಡೆ ಮಾಡಿದೆ. 2023-24 ನೇ ಸಾಲಿಗೆ ನೀಡಲಾದ ಈ ಒಪ್ಪಂದದಲ್ಲಿ (BCCI Central Contracts) ಪ್ರಸ್ತುತ 30 ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಅದರ ಹೊರತಾಗಿ ಪ್ರಸ್ತುತ ಪಟ್ಟಿಯಲ್ಲಿ ಸ್ಥಾನ ಪಡೆಯದ ಕೆಲವು ಯುವ ಆಟಗಾರರ ಹೆಸರುಗಳು ಪ್ರಸ್ತಾಪವಾಗುತ್ತಿರುವ ಬಗ್ಗೆಯೂ ಬಿಸಿಸಿಐ ಮಾಹಿತಿ ನೀಡಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇಬ್ಬರು ಯುವ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ (Sarfaraz Khan and Dhruv Jurel) ಮುಂದಿನ ಟೆಸ್ಟ್ ಬಳಿಕ ಕೇಂದ್ರ ವಾರ್ಷಿಕ ಒಪ್ಪಂದದಲ್ಲಿ ಸ್ಥಾನ ಪಡೆಯಲ್ಲಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಹಾಗಿದ್ದರೆ, ಬಿಸಿಸಿಐ ಬಿಡುಗಡೆ ಮಾಡಿರುವ ಈಗಿನ ಪಟ್ಟಿಯಲ್ಲಿ ಈ ಇಬ್ಬರು ಆಟಗಾರರು ಯಾಕೆ ಸ್ಥಾನ ಪಡೆದಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಕಾರಣ ಬಿಸಿಸಿಐ ಅಳವಡಿಸಿರುವ ನಿಯಮ.
ಈ ಆಟಗಾರರು ಮಾತ್ರ ಕೇಂದ್ರ ಒಪ್ಪಂದಕ್ಕೆ ಅರ್ಹರು
2024 ರ ಈ ಇತ್ತೀಚಿನ ಒಪ್ಪಂದದ ಅವಧಿಯಲ್ಲಿ ಕನಿಷ್ಠ 3 ಟೆಸ್ಟ್ ಪಂದ್ಯಗಳು ಅಥವಾ 8 ಏಕದಿನ ಪಂದ್ಯಗಳು ಅಥವಾ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆಟಗಾರರು ಮಾತ್ರ ಈ ಒಪ್ಪಂದದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಬಿಸಿಸಿಐ ತನ್ನ ವಿಶೇಷ ನಿಯಮದಲ್ಲಿ ತಿಳಿಸಿದೆ. ಅದರಂತೆ ಇದುವರೆಗೆ ಎರಡು ಪಂದ್ಯಗಳನ್ನಾಡಿರುವ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರನ್ನು ಒಪ್ಪಂದಕ್ಕೆ ಒಳಪಡಿಸಲು ಸಾಧ್ಯವಿಲ್ಲ. ಆದರೆ ಧರ್ಮಶಾಲಾದಲ್ಲಿ ನಡೆಯುವ ಐದನೇ ಟೆಸ್ಟ್ ಪಂದ್ಯದಲ್ಲಿ ಈ ಇಬ್ಬರು ಆಡಿದರೆ, ಅವರು ಸ್ವಯಂಚಾಲಿತವಾಗಿ ಸಿ ಗ್ರೇಡ್‌ಗೆ ಪ್ರವೇಶ ಪಡೆಯುತ್ತಾರೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಬಿಸಿಸಿಐ 15 ಆಟಗಾರರಿಗೆ ಸಿ ದರ್ಜೆಯಲ್ಲಿ ಸ್ಥಾನ ನೀಡಿದೆ. ಈ ದರ್ಜೆಯ ಆಟಗಾರರು ವಾರ್ಷಿಕ 1 ಕೋಟಿ ರೂಗಳನ್ನು ಸಂಭಾವನೆ ರೂಪದಲ್ಲಿ ಪಡೆಯಲ್ಲಿದ್ದಾರೆ.
BCCI Central Contracts: 11 ಆಟಗಾರರಿಗೆ ಚೊಚ್ಚಲ ಅವಕಾಶ; 7 ಆಟಗಾರರಿಗೆ ಕೋಕ್..!
ಈ ಯುವ ಆಟಗಾರರಿಗೆ ಲಾಟರಿ
ಮೊದಲ ಬಾರಿಗೆ ಬಿಸಿಸಿಐ ಅನೇಕ ಯುವ ಆಟಗಾರರಿಗೆ ಕೇಂದ್ರ ಒಪ್ಪಂದದಲ್ಲಿ ಸ್ಥಾನ ನೀಡಿದೆ. ಅವರುಗಳಲ್ಲಿ ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ರವಿ ಬಿಷ್ಣೋಯ್, ಶಿವಂ ದುಬೆ, ತಿಲಕ್ ವರ್ಮಾ, ಕೆಎಸ್ ಭರತ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ ಹೆಸರುಗಳು ಸೇರಿವೆ.
ಯಾವ ಆಟಗಾರ ಯಾವ ಗ್ರೇಡ್?
ಗ್ರೇಡ್ A+ (4):- ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
ಗ್ರೇಡ್ ಎ (4) :- ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ (5):- ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ (15):- ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 pm, Wed, 28 February 24