India vs West Indies: ಭಾರತ-ವೆಸ್ಟ್ ಇಂಡೀಸ್​ ಸರಣಿ 6 ಸ್ಟೇಡಿಯಂನಲ್ಲಿ ನಡೆಯುವುದು ಅನುಮಾನ

| Updated By: ಝಾಹಿರ್ ಯೂಸುಫ್

Updated on: Jan 09, 2022 | 3:07 PM

India vs West Indies Schedule: , ದೇಶದ ಕೊರೋನಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಮುಂದಿನ ತಿಂಗಳೊಳಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ, ಪಂದ್ಯಗಳ ಸ್ಥಳ ಬದಲಾವಣೆ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

India vs West Indies: ಭಾರತ-ವೆಸ್ಟ್ ಇಂಡೀಸ್​ ಸರಣಿ 6 ಸ್ಟೇಡಿಯಂನಲ್ಲಿ ನಡೆಯುವುದು ಅನುಮಾನ
India vs West Indies
Follow us on

ಭಾರತ-ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿಯ ಜನವರಿ 15 ಕ್ಕೆ ಕೊನೆಗೊಳ್ಳಲಿದೆ. ಇದಾದ ಬಳಿಕ ಜನವರಿ 19 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಆ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ದ ಸರಣಿ ಆಡಲಿದೆ. ಫೆಬ್ರವರಿ 6 ರಿಂದ ಶುರುವಾಗಲಿರುವ ಈ ಸರಣಿಗೆ ಇದೀಗ ಕೊರೋನಾತಂಕ ಎದುರಾಗಿದೆ. ಏಕೆಂದರೆ ದೇಶಾದ್ಯಂತ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು, ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ದದ ಸರಣಿ ಆಯೋಜಿಸುವುದು ಬಿಸಿಸಿಐಗೆ ಸವಾಲಾಗಿ ಮಾರ್ಪಟ್ಟಿದೆ. ಕೆಲ ಮೂಲಗಳ ಮಾಹಿತಿ ಪ್ರಕಾರ, ಕೊರೋನಾ ಭೀತಿ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್​ ವಿರುದ್ದದ ಸೀಮಿತ ಓವರ್‌ಗಳ ಸರಣಿಗಾಗಿ ಸ್ಥಳಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ಬಿಸಿಸಿಐ ಚಿಂತಿಸಿದೆ. ಅಂದರೆ ಎರಡು ಅಥವಾ ಮೂರು ಸ್ಟೇಡಿಯಂಗಳಲ್ಲಿ ಇಡೀ ಸರಣಿಯನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿ ( ಭಾರತ vs ವೆಸ್ಟ್ ಇಂಡೀಸ್ ಸರಣಿ ) ಮುಂದಿನ ತಿಂಗಳು 6 ರಂದು ಅಹಮದಾಬಾದ್‌ನಲ್ಲಿ ಶುರುವಾಗಲಿದೆ. ಈ ಸರಣಿಯಲ್ಲಿ 3 ಏಕದಿನ ಪಂದ್ಯಗಳು ಹಾಗೂ 3 ಟಿ20 ಪಂದ್ಯಗಳನ್ನು ಆಡಲಾಗುತ್ತದೆ. ಅದರಂತೆ ಮೊದಲು ಏಕದಿನ ಸರಣಿ ನಡೆಯಲಿದ್ದು, ಆ ಬಳಿಕ ಟಿ20 ಪಂದ್ಯಗಳನ್ನು ಆಡಲಾಗುತ್ತದೆ. ಇದಕ್ಕಾಗಿ ಅಹಮದಾಬಾದ್( ಫೆಬ್ರವರಿ 6), ಜೈಪುರ (ಫೆಬ್ರವರಿ 9), ಕೋಲ್ಕತ್ತಾ (ಫೆಬ್ರವರಿ 12), ಕಟಕ್ (15 ಫೆಬ್ರವರಿ), ವಿಶಾಖಪಟ್ಟಣಂ (ಫೆಬ್ರವರಿ 18) ಮತ್ತು ತಿರುವನಂತಪುರಂ (ಫೆಬ್ರವರಿ 20) ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಇದೀಗ ಕೊರೋನಾತಂಕ ಇರುವ ಕಾರಣ ನಿಗದಿತ ಪಂದ್ಯಗಳ ಸ್ಥಳಗಳನ್ನು ಬದಲಿಸುವ ಸಾಧ್ಯತೆಯಿದೆ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ದೇಶದ ಕೊರೋನಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಮುಂದಿನ ತಿಂಗಳೊಳಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ, ಪಂದ್ಯಗಳ ಸ್ಥಳ ಬದಲಾವಣೆ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ ಪಂದ್ಯಗಳು ನಡೆಯುವ ಸ್ಟೇಡಿಯಂ ಬದಲಾಗುವುದನ್ನು ಖಚಿತಪಡಿಸಿದ್ದಾರೆ.

ಅದರಂತೆ ಬಿಸಿಸಿಐ 3 ವಿವಿಧ ಸ್ಥಳಗಳಲ್ಲಿ 6 ಪಂದ್ಯಗಳನ್ನು ಆಯೋಜಿಸಬಹುದು. ಪ್ರಸ್ತುತ ವೇಳಾಪಟ್ಟಿಯ ಪ್ರಕಾರ, ವೆಸ್ಟ್ ಇಂಡೀಸ್ ತಂಡವು ಫೆಬ್ರವರಿ 1 ರಂದು ಅಹಮದಾಬಾದ್‌ಗೆ ಆಗಮಿಸಲಿದ್ದು, ಆ ಬಳಿಕ ಮೂರು ದಿನಗಳ ಕಾಲ ಪ್ರತ್ಯೇಕ ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ. ಇದೀಗ ಕೊರೋನಾ ಕಾರಣದಿಂದ ದೇಶೀಯ ಟೂರ್ನಿಗಳನ್ನು ಮುಂದೂಡಿರುವ ಬಿಸಿಸಿಐ, ಸಂಪೂರ್ಣ ಬಯೋ ಬಬಲ್​ನಲ್ಲೇ ವೆಸ್ಟ್ ಇಂಡೀಸ್ ವಿರುದ್ದ ಸರಣಿ ಆಯೋಜಿಸಲು ಪ್ಲ್ಯಾನ್ ರೂಪಿಸುತ್ತಿದೆ.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(BCCI likely to reduce venues for WI series at home due to recent rise in corona cases)