AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಕೊರೊನಾತಂಕ; ಐಪಿಎಲ್ ತಂಡದ ಮಾಲೀಕರೊಂದಿಗೆ ಸಭೆ ನಡೆಸಲು ಮುಂದಾದ ಬಿಸಿಸಿಐ

IPL 2022: ಐಪಿಎಲ್-2022 ರ ಪ್ಲಾನ್-ಬಿ ಕುರಿತು ಚರ್ಚಿಸಲು ಮುಂದಿನ ತಿಂಗಳು ಎಲ್ಲಾ ಫ್ರಾಂಚೈಸಿಗಳೊಂದಿಗೆ ಸಭೆ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜಿಸುತ್ತಿದೆ.

IPL 2022: ಕೊರೊನಾತಂಕ; ಐಪಿಎಲ್ ತಂಡದ ಮಾಲೀಕರೊಂದಿಗೆ ಸಭೆ ನಡೆಸಲು ಮುಂದಾದ ಬಿಸಿಸಿಐ
ಬಿಸಿಸಿಐ ಅಧಿಕಾರ ವರ್ಗ
TV9 Web
| Edited By: |

Updated on: Dec 23, 2021 | 4:55 PM

Share

ಐಪಿಎಲ್-2022 ರ ಪ್ಲಾನ್-ಬಿ ಕುರಿತು ಚರ್ಚಿಸಲು ಮುಂದಿನ ತಿಂಗಳು ಎಲ್ಲಾ ಫ್ರಾಂಚೈಸಿಗಳೊಂದಿಗೆ ಸಭೆ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜಿಸುತ್ತಿದೆ. ಪ್ರಸ್ತುತ, ಕೋವಿಡ್‌ನ ಹೊಸ ರೂಪಾಂತರವಾದ ಓಮಿಕ್ರಾನ್ ಪ್ರಕರಣಗಳು ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿವೆ. ಇದರಿಂದ ಬಿಸಿಸಿಐ ಆತಂಕಕ್ಕೆ ಒಳಗಾಗಿದೆ. ಏಪ್ರಿಲ್/ಮೇ ತಿಂಗಳಲ್ಲಿ ಕೋವಿಡ್‌ನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಬಿಸಿಸಿಐ ಕಳವಳ ವ್ಯಕ್ತಪಡಿಸಿದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಬಿಸಿಸಿಐ ಈ ಸಭೆಯಲ್ಲಿ ತಂಡದ ಮಾಲೀಕರೊಂದಿಗೆ ಎಲ್ಲಾ ರೀತಿಯ ಸನ್ನಿವೇಶಗಳನ್ನು ಚರ್ಚಿಸಲು ಬಯಸುತ್ತದೆ. ಆದಾಗ್ಯೂ BCCI ಯುಎಇಯಲ್ಲಿ ಈ ಲೀಗ್ ಅನ್ನು ಮತ್ತೆ ಆಯೋಜಿಸುವ ಮನಸ್ಥಿತಿಯಲ್ಲಿ ಕಂಡುಬರುತ್ತಿಲ್ಲ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ಏಪ್ರಿಲ್ 2 ರಿಂದ ಚೆನ್ನೈನಲ್ಲಿ ಲೀಗ್ ಅನ್ನು ಪ್ರಾರಂಭಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ದೇಶದಲ್ಲಿ ಕೋವಿಡ್ ಪರಿಸ್ಥಿತಿ ಹದಗೆಡದಿದ್ದರೆ, ಭಾರತದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಆದರೆ ಪರಿಸ್ಥಿತಿ ಹದಗೆಟ್ಟರೆ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಕಳೆದ ವರ್ಷ, ಕಾಂಕ್ರೀಟ್ ಪ್ಲಾನ್ ಬಿ ಕೊರತೆಯಿಂದಾಗಿ, BCCI ಲೀಗ್ ಅನ್ನು ಮಧ್ಯದಲ್ಲಿ ನಿಲ್ಲಿಸಿತು ಮತ್ತು ನಂತರ UAE ನಲ್ಲಿ ಉಳಿದ ಪಂದ್ಯಗಳನ್ನು ಆಯೋಜಿಸಿತ್ತು.

ಮುಂಬೈ-ಪುಣೆಯಲ್ಲಿ ಪಂದ್ಯಾವಳಿ? ಮುಂಬೈ ಮತ್ತು ಪುಣೆ ಅಥವಾ ಗುಜರಾತ್‌ನಲ್ಲಿ ಲೀಗ್ ಅನ್ನು ಆಯೋಜಿಸಲು ಬಿಸಿಸಿಐ ಪರಿಗಣಿಸುತ್ತಿದೆ ಎಂದು ಕ್ರಿಕ್‌ಬಜ್ ತನ್ನ ವರದಿಯಲ್ಲಿ ಹಲವಾರು ಫ್ರಾಂಚೈಸಿ ಅಧಿಕಾರಿಗಳನ್ನು ಉಲ್ಲೇಖಿಸಿ ಬರೆದಿದೆ. ಕೋವಿಡ್ ಪರಿಸ್ಥಿತಿ ಹದಗೆಡುತ್ತಿರುವುದನ್ನು ನೋಡಿ, ಬಿಸಿಸಿಐ ಇಡೀ ಪಂದ್ಯಾವಳಿಯನ್ನು ಮುಂಬೈ ಮತ್ತು ಪುಣೆ ಅಥವಾ ಅಹಮದಾಬಾದ್, ಬರೋಡಾ ಮತ್ತು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಆಯೋಜಿಸುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿದೆ. ಕಳೆದ ಬಾರಿಯಂತೆ ಯುಎಇಯಲ್ಲಿ ಲೀಗ್ ಅನ್ನು ಆಯೋಜಿಸಲು ಮಂಡಳಿಯು ಯೋಚಿಸುತ್ತಿಲ್ಲ ಎಂದು ಹಲವಾರು ಫ್ರಾಂಚೈಸಿಗಳ ಅಧಿಕಾರಿಗಳು ತಿಳಿಸಿದ್ದಾರೆ.

ಪಂದ್ಯಾವಳಿಯನ್ನು ಮಧ್ಯದಲ್ಲಿ ನಿಲ್ಲಿಸಬೇಕಾಯಿತು ಐಪಿಎಲ್-2020 ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಿಸಿಸಿಐ ಆಯೋಜಿಸಿತ್ತು. ಇದರ ನಂತರ, ಕಳೆದ ವರ್ಷ 2021 ರಲ್ಲಿ ಭಾರತದಲ್ಲಿ ಲೀಗ್ ಅನ್ನು ಆಯೋಜಿಸಲಾಯಿತು, ಆದರೆ ಮೇ ಮೊದಲ ವಾರದಲ್ಲಿ, ಕೋವಿಡ್ ಐಪಿಎಲ್‌ನ ಬಯೋ ಬಬಲ್‌ಗೆ ನುಗ್ಗಿತು, ಇದರಿಂದಾಗಿ ಲೀಗ್ ಅನ್ನು ಮಧ್ಯದಲ್ಲಿ ನಿಲ್ಲಿಸಲಾಯಿತು ಮತ್ತು ನಂತರ ನಾಲ್ಕು ತಿಂಗಳ ನಂತರ ಯುನೈಟೆಡ್ ಅರಬ್​ನಲ್ಲಿ ಉಳಿದ ಪಂದ್ಯಗಳು ನಡೆದವು.

ಇದನ್ನೂ ಓದಿ:IPL Auction 2022: ಐಪಿಎಲ್ 2022 ಮೆಗಾ ಆಕ್ಷನ್​ಗೆ ದಿನಾಂಕ ಫಿಕ್ಸ್: ಬೆಂಗಳೂರಿನಲ್ಲಿ ಎರಡು ದಿನ ಹರಾಜು ಪ್ರಕ್ರಿಯೆ

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ