ಕಣದಲ್ಲಿ RCB ಆಟಗಾರರು: ಬಂಗಾಳ, ಲಾಹೋರ್, ನಮೀಬಿಯಾ..ಹೀಗೊಂದು ಟಿ20 ಟೂರ್ನಿ

| Updated By: ಝಾಹಿರ್ ಯೂಸುಫ್

Updated on: Jul 24, 2022 | 10:33 AM

Bengal and Lahore Qalandars: ಟಿ20 ವಿಶ್ವಕಪ್​​ಗೂ ಮುನ್ನ ಬಂಗಾಳ ಕ್ರಿಕೆಟ್​ ತಂಡದ ಆಟಗಾರರಿಗೆ ವಿದೇಶದಲ್ಲಿ ಮಿಂಚುವ ಅವಕಾಶ ಸಿಕ್ಕಿದ್ದು, ಈ ಮೂಲಕ ಯಾವ ಆಟಗಾರ ಟೀಮ್ ಇಂಡಿಯಾದ ಕದ ತಟ್ಟಲ್ಲಿದ್ದಾರೆ ಕಾದು ನೋಡಬೇಕಿದೆ.

ಕಣದಲ್ಲಿ RCB ಆಟಗಾರರು: ಬಂಗಾಳ, ಲಾಹೋರ್, ನಮೀಬಿಯಾ..ಹೀಗೊಂದು ಟಿ20 ಟೂರ್ನಿ
ಸಾಂದರ್ಭಿಕ ಚಿತ್ರ
Follow us on

ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಅಕ್ಟೋಬರ್ 23 ಕ್ಕಾಗಿ ಕಾಯುತ್ತಿದ್ದಾರೆ. ಏಕೆಂದರೆ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ ಎರಡೂ ತಂಡಗಳು ಏಷ್ಯಾಕಪ್‌ನಲ್ಲಿ ಕೂಡ ಸೆಣಸಲಿದೆ. ಮತ್ತೊಂದೆಡೆ ಭಾರತ ಮತ್ತು ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡಗಳು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮುಖಾಮುಖಿಯಾಗಲಿವೆ. ಇದೆಲ್ಲದರ ನಡುವೆ ಭಾರತ-ಪಾಕಿಸ್ತಾನದ ಕ್ರಿಕೆಟಿಗರ ನಡುವೆ ಪೈಪೋಟಿ ಕಂಡು ಬರಲಿದೆ. ಅದು ಕೂಡ ನಮೀಬಿಯಾದಲ್ಲಿ ಎಂಬುದು ವಿಶೇಷ.

ಹೌದು, ನಮೀಬಿಯಾ ಕ್ರಿಕೆಟ್​ ಬೋರ್ಡ್​​ ವಿಶೇಷ ಗ್ಲೋಬಲ್ T20 ಸರಣಿಯನ್ನು ಆಯೋಜಿಸಲಿದೆ. ಅದರಲ್ಲಿ ಭಾರತದಿಂದ ಬಂಗಾಳ ಕ್ರಿಕೆಟ್ ತಂಡ ಭಾಗವಹಿಸಲಿದೆ. ವಿಶೇಷ ಎಂದರೆ ಇದೇ ಟೂರ್ನಿಯಲ್ಲಿ ಪಾಕಿಸ್ತಾನ ಸೂಪರ್ ಲೀಗ್ ತಂಡ ಲಾಹೋರ್ ಖಲಂದರ್ಸ್ ಕೂಡ ಕಾಣಿಸಿಕೊಳ್ಳಲಿದೆ.

ಟಿ20 ವಿಶ್ವಕಪ್​ ತಯಾರಿಗಾಗಿ  ಭಾರತ-ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಆಟಗಾರರನ್ನು ಒಳಗೊಂಡಂತೆ ವಿಶೇಷ ಟಿ20 ಪಂದ್ಯಾವಳಿಯನ್ನು ಆಯೋಜಿಸಲು ನಮೀಬಿಯಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಅದರಂತೆ ಈ ಟೂರ್ನಿಯಲ್ಲಿ ನಾಲ್ಕು ತಂಡಗಳು ಕಣಕ್ಕಿಳಿಯಲಿದೆ. ಈ ತಂಡವಾಗಿ ಭಾರತದಿಂದ ಬಂಗಾಳ ಕ್ರಿಕೆಟ್ ತಂಡಕ್ಕೆ ಆಹ್ವಾನ ನೀಡಲಾಗಿದೆ. ಇದನ್ನು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ​​ಸಹ ಸ್ವೀಕರಿಸಿದ್ದು, ಇದೀಗ ಈ ಪಂದ್ಯಾವಳಿಗೆ ತಂಡವನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಬೆಂಗಾಲ್ ಕ್ರಿಕೆಟ್ ಅಸೋಷಿಯೇಷನ್ ಮುಖ್ಯಸ್ಥ ಅವಿಶೇಕ್ ದಾಲ್ಮಿಯಾ ಈ ಆಹ್ವಾನವನ್ನು ದೃಢಪಡಿಸಿದ್ದು, ಇದಕ್ಕೆ ಸಿಎಬಿ ಒಪ್ಪಿಗೆ ಸೂಚಿಸಿದೆ. ಇನ್ನು 16 ಸದಸ್ಯರ ತಂಡವನ್ನೂ ಪ್ರಕಟಿಸಲಾಗಿದ್ದು, ತಂಡದ ನಾಯಕತ್ವವನ್ನು ಅಭಿಮನ್ಯು ಈಶ್ವರನ್‌ಗೆ ವಹಿಸಲಾಗಿದೆ. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಶಹಬಾಜ್ ಅಹ್ಮದ್, ಆಕಾಶ್ ದೀಪ್ ಅವರಂತಹ ಆಟಗಾರರೂ ತಂಡದಲ್ಲಿದ್ದಾರೆ.

ಇನ್ನು ಪಾಕಿಸ್ತಾನದಿಂದ ಕಾಣಿಸಿಕೊಳ್ಳುತ್ತಿರುವುದು ಪಿಎಸ್​ಎಲ್​ನ ತಂಡ ಲಾಹೋರ್ ಖಲಂದರ್ಸ್. ಆದರೆ ಈ ತಂಡದ ಪ್ರಮುಖ ಆಟಗಾರರಾದ ಶಾಹಿನ್ ಅಫ್ರಿದಿ, ಫಖರ್ ಜಮಾನ್, ಮೊಹಮ್ಮದ್ ಹಫೀಜ್ ಅವರಂತಹ ಆಟಗಾರರು ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಮತ್ತೊಂದೆಡೆ ದಕ್ಷಿಣ ಆಫ್ರಿಕಾದಿಂದ ಯಾವ ತಂಡ ನಮೀಬಿಯಾ ವಿರುದ್ದ ಆಡಲಿದೆ ಎಂಬುದು ಇನ್ನಷ್ಟೇ ನಿರ್ಧಾರವಾಗಲಿದೆ.

ಒಟ್ಟಿನಲ್ಲಿ ಟಿ20 ವಿಶ್ವಕಪ್​​ಗೂ ಮುನ್ನ ಬಂಗಾಳ ಕ್ರಿಕೆಟ್​ ತಂಡದ ಆಟಗಾರರಿಗೆ ವಿದೇಶದಲ್ಲಿ ಮಿಂಚುವ ಅವಕಾಶ ಸಿಕ್ಕಿದ್ದು, ಈ ಮೂಲಕ ಯಾವ ಆಟಗಾರ ಟೀಮ್ ಇಂಡಿಯಾದ ಕದ ತಟ್ಟಲ್ಲಿದ್ದಾರೆ ಕಾದು ನೋಡಬೇಕಿದೆ.