ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ ಒಂದೇ ಒಂದು ಮ್ಯಾಚ್ ಇಲ್ಲ

ಉತ್ಸಾಹಭರಿತ ಕ್ರಿಕೆಟ್ ಪ್ರೇಮಿಗಳ ಫೇವರೆಟ್‌ ತಾಣಗಳಲ್ಲಿ ನಮ್ಮ ಸಿಲಿಕಾನ್‌ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಒಂದು. ಈ ಕ್ರೀಡಾಂಗಣವು 35,000 ಕ್ಕೂ ಹೆಚ್ಚು ಆಸನ ಸಾಮರ್ಥ್ಯವನ್ನು ಹೊಂದಿದ್ದು, ಐಕಾನಿಕ್ ಸ್ಟೇಡಿಯಂ ಎಂಬ ಪಟ್ಟವನ್ನು ಹೊಂದಿದೆ. ಈ ಸುಂದರವಾದ ಕ್ರೀಡಾಂಗಣದಲ್ಲಿ ಅನೇಕ ಕ್ರಿಕೆಟ್‌ ಪಂದ್ಯಗಳು ನಡೆದಿವೆ. ಅವುಗಳು ಅನೇಕ ಸಂತೋಷದಾಯಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಆದ್ರೆ, ಇದೀಗ ಆ ಒಂದು ದುರಂತದಿಂದ ಚಿನ್ನಸ್ವಾಮಿ ಸ್ಟೇಡಿಯಂ ಅಪಖ್ಯಾತಿಗೆ ಒಳಗಾಗಿದೆ.

ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ ಒಂದೇ ಒಂದು ಮ್ಯಾಚ್ ಇಲ್ಲ
M Chinnaswamy Stadium

Updated on: Nov 25, 2025 | 10:29 PM

ಬಹು ನಿರೀಕ್ಷಿತ 2026ರ ಟಿ20 ವಿಶ್ವಕಪ್‌ ಕ್ರಿಕೆಟ್​​ಗೆ ವೇದಿಕೆ ಸಜ್ಜಾಗಿದ್ದು, ಇಂದು (ನವೆಂಬರ್ 25) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2026ರ ಟಿ20 ವಿಶ್ವಕಪ್‌ನ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದ್ದು, ಶ್ರೀಲಂಕಾದ ಕೊಲಂಬೋ ಹಾಗೂ ಭಾರತದ ವಿವಿಧ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ. ಆದ್ರೆ ಕಾಲ್ತುಳಿತ ದುರಂತದಿಂದಾಗಿ ಐಸಿಸಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಪರಿಗಣಿಸಿಲ್ಲ,

ಫೆಬ್ರವರಿ 7 ರಿಂದ ಮಾರ್ಚ್‌ 8 ರವರೆಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಭಾರತ, ಶ್ರೀಲಂಕಾದಲ್ಲಿ ವಿಶ್ವಕಪ್​​ ಪಂದ್ಯಗಳ ಆಯೋಜನೆ ಮಾಡಲಾಗಿದೆ. ಆದ್ರೆ, ಬೆಂಗಳೂರು ಹೊರತುಪಡಿಸಿ ಅಹಮದಾಬಾದ್, ಕೋಲ್ಕತ್ತಾ, ಮುಂಬೈ, ದೆಹಲಿ, ಚೆನ್ನೈ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಆರ್​​ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಸಂಬಂಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದೇ ಒಂದು ಮ್ಯಾಚ್ ಆಯೋಜನೆ ಮಾಡಿಲ್ಲ. ಹೀಗಾಗಿ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.

ಇದನ್ನೂ ಓದಿ: IPL 2026: ಚಿನ್ನಸ್ವಾಮಿ ಸ್ಟೇಡಿಯಂ ನಿಷೇಧ: RCB ಕಣಕ್ಕಿಳಿಯುವುದು ಎಲ್ಲಿ?

ಸ್ಟೇಡಿಯಂನಲ್ಲಿ ಸಬ್​ ಏರ್ ಸಿಸ್ಟಂ ತಂತ್ರಜ್ಞಾನ

ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಮಳೆ ಬಂದರೂ ಸಹ ಕೇವಲ ಹತ್ತು ಹದಿನೈದು ನಿಮಿಷದಲ್ಲಿ ಮತ್ತೆ ಮ್ಯಾಚ್​ ಆರಂಭಿಸುವ ಅವಕಾಶ ಮಾಡಿಕೊಡುವ ಅತ್ಯಾಧುನಿಕ ಸೌಲಭ್ಯ ಈ ಚಿನ್ನಸ್ವಾಮಿ ಕ್ರೀಡಾಂಗಣ ಒಳಗೊಂಡಿದೆ..ಹೌದು.. ಸ್ಟೇಡಿಯಂನಲ್ಲಿ ಸಬ್​ ಏರ್ ಸಿಸ್ಟಂ ತಂತ್ರಜ್ಞಾನ ಇದ್ದು, ಇದರ ಸಹಾಯದಿಂದ ಮೈದಾನದಲ್ಲಿ ತುಂಬಿಕೊಂಡ ನೀರನ್ನು ಬೇಗನೇ ಹಾರಹಾಕುವ ವ್ಯವಸ್ಥೆ ಇದೆ. ಹೀಗಾಗಿ ಈ ಮೈದಾನದಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾಗಿರುವುದು ವಿರಳ.

ಅಪಖ್ಯಾತಿ ಒಳಗಾದ ಚಿನ್ನಸ್ವಾಮಿ ಸ್ಟೇಡಿಯಂ

ಬೆಂಗಳೂರಿನ ಈ ಸುಂದರ, ಸುರ್ಜಿತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನ್ಯಾಷಲ್, ಇಂಟರ್​ನ್ಯಾಷನಲ್​​ ಕ್ರಿಕೆಟ್‌ ಪಂದ್ಯಗಳು ನಡೆದಿದ್ದು, ಅನೇಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ನಿಂದ ಹಿಡಿದು ರಿಕಿ ಪಾಂಟಿಂಗ್‌ವರೆಗೆ ಅನೇಕ ಹೆಸರಾಂತ ಆಟಗಾರರು ಇಲ್ಲಿ ಸ್ಮರಣೀಯ ಶತಕಗಳನ್ನು ಸಿಡಿಸಿದ್ದಾರೆ. ಈ ಸ್ಟೇಡಿಯಂನಲ್ಲಿ ಅನೇಕ ದಾಖಲೆಗಳು ನಿರ್ಮಾಣಗೊಂಡಿದ್ದು, ಅನೇಕ ರೆಕಾರ್ಡ್ ಬ್ರೇಕ್ ಆಗಿವೆ.  ಹಾಗೇ ಅತ್ಯಾಧುನಿಕ ಸೌಲಭ್ಯ ಈ ಚಿನ್ನಸ್ವಾಮಿ ಕ್ರೀಡಾಂಗಣ ಒಂದೇ ಒಂದು ದುರಂತಕ್ಕೆ ಅಪಖ್ಯಾತಿ ಪಡೆದುಕೊಂಡಿದೆ.

ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಆರ್​ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ತನಿಖೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಲೋಪದೋಷಗಳು ಬಹಿರಂಗವಾಗಿದ್ದವು. ಅಲ್ಲದೆ ಕ್ರೀಡಾಂಗಣದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಈ ದುರಂತದ ಬಳಿಕ ಬಿಸಿಸಿಐ ಬೆಂಗಳೂರಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿಲ್ಲ. ಇದೀಗ ಐಸಿಸಿ ಸಹ ಟಿ20 ವಿಶ್ವಕಪ್ ಟೂರ್ನಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಗಣನೆಗೆ ತೆಗೆದುಕೊಂಡಿಲ್ಲ. ಟಿ20 ವಿಶ್ವಕಪ್ ಮಾತ್ರವಲ್ಲದೇ ಮುಂಬರುವ ಐಪಿಎಲ್​ ಪಂದ್ಯಗಳೂ ಸಹ ಬೆಂಗಳೂರಿನಲ್ಲಿ ನಡೆಯುವುದು ಅನುಮಾನವಾಗಿದೆ.

Published On - 10:24 pm, Tue, 25 November 25