INDW vs AUSW: ತವರಿನಲ್ಲಿ ಭಾರತ ಮಹಿಳಾ ತಂಡಕ್ಕೆ ಮುಖಭಂಗ: ಮೊದಲ ಪಂದ್ಯದಲ್ಲೇ ಸೋಲು

| Updated By: Vinay Bhat

Updated on: Dec 10, 2022 | 10:30 AM

India Women vs Australia Women: ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತಕ್ಕೆ ಶಫಾಲಿ ವರ್ಮಾ ಸ್ಫೋಟಕ ಆರಂಭ ಒದಗಿಸಿದರು. 10 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿ 21 ರನ್ ಗಳಿಸಿದರು. ಸ್ಮೃತಿ ಮಂದಾನ 22 ಎಸೆತಗಳಲ್ಲಿ 5 ಫೋನ್​ನೊಂದಿಗೆ 28 ರನ್ ಬಾರಿಸಿದರು.

INDW vs AUSW: ತವರಿನಲ್ಲಿ ಭಾರತ ಮಹಿಳಾ ತಂಡಕ್ಕೆ ಮುಖಭಂಗ: ಮೊದಲ ಪಂದ್ಯದಲ್ಲೇ ಸೋಲು
INDW vs AUSW
Follow us on

ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಿರುವ ಟಿ20 ಸರಣಿಯಲ್ಲಿ (T20 Series) ಭಾರತಕ್ಕೆ (India Women vs Australia Women) ಹಿನ್ನಡೆಯಾಗಿದೆ. ಶುಕ್ರವಾರ ಮುಂಬೈನ ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆಹಾಕಿದರೂ ಬೌಲರ್​ಗಳ ಕಳಪೆ ಪ್ರದರ್ಶನದಿಂದ ಭಾರತ ಮಹಿಳಾ ತಂಡ ಸೋಲು ಕಂಡಿದೆ. ಬೆತ್ ಮೋನಿ (Beth Mooney) ಅವರ ಅಜೇಯ ಬೊಂಬಾಟ್ ಆಟದ ನೆರವಿನಿಂದ ಆಸ್ಟ್ರೇಲಿಯಾ 9 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸೀಸ್ ಮಹಿಳಾ ತಂಡ 1-0 ಮುನ್ನಡೆ ಪಡೆದುಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತಕ್ಕೆ ಶಫಾಲಿ ವರ್ಮಾ ಸ್ಫೋಟಕ ಆರಂಭ ಒದಗಿಸಿದರು. 10 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿ 21 ರನ್ ಗಳಿಸಿದರು. ಸ್ಮೃತಿ ಮಂದಾನ 22 ಎಸೆತಗಳಲ್ಲಿ 5 ಫೋನ್​ನೊಂದಿಗೆ 28 ರನ್ ಬಾರಿಸಿದರು. ಜೆಮಿಯಾ ರೋಡ್ರಿಗಿಸ್ ಸೊನ್ನೆ ಸುತ್ತಿದ್ದು ತಂಡಕ್ಕೆ ಹಿನ್ನಡೆಯಾಯಿತು. ನಾಯಕಿ ಹರ್ಮನ್​ಪ್ರೀತ್ ಕೌರ್ 23 ಎಸೆತಗಳಲ್ಲಿ 21 ರನ್ ಬಾರಿಸಿದರು. ಈ ಸಂದರ್ಭ ದೇವಿಕ ವೈದ್ಯ ಹಾಗೂ ರಿಚ್ಚಾ ಗೋಷ್ ಕೆಲ ಹೊತ್ತು ತಂಡಕ್ಕೆ ಆಸರೆಯಾದರು. 20 ಎಸೆತಗಳಲ್ಲಿ 5 ಫೋರ್, 2 ಸಿಕ್ಸರ್ ಸಿಡಿಸದ ಗೋಷ್ 36 ರನ್ ಕಲೆಹಾಕಿದರು.

IND vs BAN: ಜಡೇಜಾ, ಶಮಿ ಬದಲು ಯುವ ದೇಶೀ ಪ್ರತಿಭೆಗಳಿಗೆ ಮಣೆ ಹಾಕಿದ ಬಿಸಿಸಿಐ

ಇದನ್ನೂ ಓದಿ
IND vs BAN: ಇಂದು ಭಾರತ- ಬಾಂಗ್ಲಾದೇಶ ತೃತೀಯ ಏಕದಿನ: ರಾಹುಲ್ ನಾಯಕತ್ವಕ್ಕೆ ದೊಡ್ಡ ಸವಾಲು
FIFA World Cup: ಫಿಫಾ ವಿಶ್ವಕಪ್​ನಿಂದ ಹೊರಬಿದ್ದ ಬ್ರೆಜಿಲ್, ನೆದರ್ಲೆಂಡ್ಸ್: ಸೆಮಿ ಫೈನಲ್​ಗೇರಿದ ಕ್ರೊವೇಷ್ಯಾ, ಅರ್ಜೆಂಟೀನಾ
‘ಇದು ನಮ್ಮ ವೈಯಕ್ತಿಕ ವಿಷಯ’: ವಿಚ್ಛೇದನದ ವದಂತಿಗಳಿಗೆ ಕೊನೆಗೂ ಪ್ರತಿಕ್ರಿಯಿಸಿದ ಶೋಯೆಬ್ ಮಲಿಕ್
IND Vs BAN, 3rd ODI: ವೈಟ್​ವಾಶ್ ಸುಳಿಯಲ್ಲಿ ಟೀಂ ಇಂಡಿಯಾ; ಅಂತಿಮ ಪಂದ್ಯದ ಆರಂಭ ಯಾವಾಗ?

ನಂತರ ದೀಪ್ತಿ ಶರ್ಮಾ ಜೊತೆಯಾದ ದೇವಿಕಾ ಮತ್ತೊಂದು ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ತಂಡದ ಮೊತ್ತವನ್ನು 170ಕ್ಕೆ ತಂದಿಟ್ಟರು. ದೇವಿಕಾ 24 ಎಸೆತಗಳಲ್ಲಿ 25 ರನ್ ಗಳಿಸಿದರೆ, ದೀಪ್ತಿ ಕೇವಲ 15 ಎಸೆತಗಳಲ್ಲಿ 36 ರನ್ ಚಚ್ಚಿದರು. ಪರಿಣಾಮ ಭಾರತ ಮಹಿಳಾ ತಂಡ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. ಆಸ್ಟ್ರೇಲಿಯಾ ಪರ ಎಲಿಸ್ಸಾ ಪೆರಿ 2 ವಿಕೆಟ್ ಪಡೆದರು.

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಮಹಿಳಾ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಬೆತ್ ಮೋನಿ ಹಾಗೂ ನಾಯಕಿ ಅಲೈಸಾ ಹೀಲೆ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಮೊದಲ ವಿಕೆಟ್​ಗೆ ಈ ಜೋಡಿ 73 ರನ್​ಗಳ ಕಾಣಿಕೆ ನೀಡಿತು. ಅಲೈಸಾ 23 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಬಾರಿಸಿ 37 ರನ್ ಬಾರಿಸಿದರು. ನಂತರ ತಹಿಲಾ ಮೆಕ್​ಗ್ರಾತ್ ಜೊತೆಯಾದ ಬೆತ್ ಅಮೋಘ ಜೊತೆಯಾಟ ಆಡಿದರು. ನಂತರ ಒಂದೂ ವಿಕೆಟ್ ಕಳೆದುಕೊಳ್ಳದ ಆಸೀಸ್ ಗೆಲುವಿನ ನಗೆ ಬೀರಿತು. 18.1 ಓವರ್​ನಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 173 ರನ್ ಸಿಡಿಸಿ ಆಸೀಸ್ 9 ವಿಕೆಟ್​ಗಳ ಜಯ ಸಾಧಿಸಿತು. ಬೆತ್ 57 ಎಸೆತಗಳಲ್ಲಿ 16 ಫೋರ್​ನೊಂದಿಗೆ ಅಜೇಯ 89 ರನ್ ಮತ್ತು ತಹಿಲಾ 29 ಎಸೆತಗಳಲ್ಲಿ ಅಜೇಯ 40 ರನ್ ಕಲೆಹಾಕಿದರು.

ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ವನಿತಯರ ನಡುವೆ ಒಟ್ಟು ಐದು ಟಿ20 ಪಂದ್ಯಗಳನ್ನು ಆಯೋಜಿಸಲಾಗಿದೆ. ಡಿ. 11 ರಂದು ಎರಡನೇ ಟಿ20 ಪಂದ್ಯ ನಡೆದರೆ, ಡಿ. 14 ಮೂರನೇ ಪಂದ್ಯ, ಡಿ. 17 ಮತ್ತು ಡಿ. 20 ರಂದು ನಾಲ್ಕು ಮತ್ತು ಐದನೇ ಟಿ20 ನಡೆಯಲಿದೆ. ಇದರಲ್ಲಿ ಮೊದಲ ಎರಡು ಪಂದ್ಯ ಡಿ.ವೈ. ಪಾಟಿಲ್ ಸ್ಟೇಡಿಯಂ, ಉಳಿದ ಮೂರು ಪಂದ್ಯ ಸಿಸಿಐ ನಲ್ಲಿ ಆಯೋಜಿಸಲಾಗಿದೆ. 2023 ರಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್​ನ ತಯಾರಿಗಾಗಿ ಆಯೋಜಿಸುತ್ತಿರುವ ಪಂದ್ಯ ಇದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:30 am, Sat, 10 December 22