Team India: ಟೀಮ್ ಇಂಡಿಯಾ ಪಾಲಿಗೆ ದುಃಸ್ವಪ್ನವಾಗುತ್ತಿರುವ 19ನೇ ಓವರ್..!

| Updated By: ಝಾಹಿರ್ ಯೂಸುಫ್

Updated on: Sep 21, 2022 | 1:27 PM

Bhuvneshwar Kumar: ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ಬೌಲರ್​ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬರುತ್ತಿದೆ. ಅದರಲ್ಲೂ ಡೆತ್ ಓವರ್​ಗಳಲ್ಲಿ ಭುವನೇಶ್ವರ್ ಕುಮಾರ್ ದುಬಾರಿಯಾಗುತ್ತಿರುವುದು ಇದೀಗ ಟೀಮ್ ಮ್ಯಾನೇಜ್ಮೆಂಟ್​ನ ಚಿಂತೆಯನ್ನು ಹೆಚ್ಚಿಸಿದೆ.

Team India: ಟೀಮ್ ಇಂಡಿಯಾ ಪಾಲಿಗೆ ದುಃಸ್ವಪ್ನವಾಗುತ್ತಿರುವ 19ನೇ ಓವರ್..!
Rohit-Bhuvi
Follow us on

ಏಷ್ಯಾಕಪ್​ನಲ್ಲಿನ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ (Team India) ಮತ್ತೊಂದು ಸೋಲು ಕಂಡಿದೆ. ಅದು ಕೂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ. ಅಂದರೆ ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 208 ರನ್​ ಕಲೆಹಾಕಿದರೂ, ಟೀಮ್ ಇಂಡಿಯಾ ಸೋತಿದೆ. ಈ ಸೋಲಿಗೆ ಮುಖ್ಯ ಕಾರಣ ಟೀಮ್ ಇಂಡಿಯಾ ಬೌಲರ್​ಗಳ ಕಳಪೆ ಪ್ರದರ್ಶನ. ಏಕೆಂದರೆ ಆಸ್ಟ್ರೇಲಿಯಾಗೆ 6 ಓವರ್​ಗಳಲ್ಲಿ 64 ರನ್​ ಬೇಕಿದ್ದ ವೇಳೆ ಟೀಮ್ ಇಂಡಿಯಾ ಬೌಲರ್​ಗಳು ಹೆಚ್ಚಿನ ರನ್ ಬಿಟ್ಟುಕೊಟ್ಟರು. ಪರಿಣಾಮ 19.2 ಓವರ್​ಗಳಲ್ಲಿ 211 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡ 4 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿತು.

ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ಬೌಲರ್​ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬರುತ್ತಿದೆ. ಅದರಲ್ಲೂ ಡೆತ್ ಓವರ್​ಗಳಲ್ಲಿ ಭುವನೇಶ್ವರ್ ಕುಮಾರ್ ದುಬಾರಿಯಾಗುತ್ತಿರುವುದು ಇದೀಗ ಟೀಮ್ ಮ್ಯಾನೇಜ್ಮೆಂಟ್​ನ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಹೊಸ ಚೆಂಡಿನೊಂದಿಗೆ ಮಿಂಚುವ ಭುವಿ ಡೆತ್ ಓವರ್‌ಗಳಲ್ಲಿ (17 ನೇ ಮತ್ತು 19 ನೇ ಓವರ್‌ಗಳು) ದುಬಾರಿಯಾಗುತ್ತಾ ಬರುತ್ತಿದ್ದಾರೆ. ಕಳೆದ ಮೂರು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವನ್ನು ಕಸಿದುಕೊಂಡಿದ್ದು 19ನೇ ಓವರ್ ಎಂಬುದು ಇಲ್ಲಿ ವಿಶೇಷ. ಈ ಮೂರು ಓವರ್​ಗಳನ್ನು ಎಸೆದಿರುವುದು ಭುವನೇಶ್ವರ್ ಕುಮಾರ್ ಎಂಬುದು ಮತ್ತೊಂದು ವಿಶೇಷ.

ಏಷ್ಯಾಕಪ್​ನಲ್ಲಿ ಪಾಕಿಸ್ತಾನ್ ವಿರುದ್ಧ 19ನೇ ಓವರ್ ಎಸೆದಿದ್ದ ಭುವನೇಶ್ವರ್​ ಕುಮಾರ್ 19 ರನ್​ ನೀಡಿದ್ದರು. ಇದರಿಂದ ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಬೇಕಾಯಿತು. ಇನ್ನು ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲೂ 19ನೇ ಓವರ್​ನಲ್ಲಿ 14 ರನ್ ಬಿಟ್ಟುಕೊಟ್ಟಿದ್ದರು. ಆ ಮ್ಯಾಚ್​ನಲ್ಲೂ ಟೀಮ್ ಇಂಡಿಯಾ ಪರಾಜಯಗೊಂಡಿತು.

ಇದನ್ನೂ ಓದಿ
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದೀಗ ಆಸ್ಟ್ರೇಲಿಯಾ ವಿರುದ್ಧ 19ನೇ ಓವರ್​ನಲ್ಲಿ 16 ರನ್​ ನೀಡುವ ಮೂಲಕ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಭುವನೇಶ್ವರ್​ ಕುಮಾರ್ ವಿಲನ್ ಆಗಿ ಹೊರಹೊಮ್ಮಿದ್ದಾರೆ. ಅಂದರೆ ಡೆತ್ ಓವರ್​ಗಳಲ್ಲಿ ಭುವಿ ಕಳಪೆ ದಾಖಲೆ ಹೊಂದಿದ್ದಾರೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

ಏಕೆಂದರೆ ಏಷ್ಯಾಕಪ್​ನಲ್ಲಿ ಪಾಕಿಸ್ತಾನ್ ವಿರುದ್ದ ಅಂತಿಮ ಹಂತದಲ್ಲಿ 2 ಓವರ್​ ಎಸೆದಿದ್ದ ಭುವಿ ನೀಡಿದ್ದು ಬರೋಬ್ಬರಿ 26 ರನ್​ಗಳು. ಹಾಗೆಯೇ ಶ್ರೀಲಂಕಾಗೆ ಗೆಲ್ಲಲು ಕೊನೆಯ ಎರಡು ಓವರ್‌ಗಳಲ್ಲಿ 21 ರನ್‌ಗಳ ಅಗತ್ಯವಿದ್ದಾಗ ಭುವನೇಶ್ವರ್ ಕುಮಾರ್‌ 19ನೇ ಓವರ್​ನಲ್ಲಿ 14 ರನ್ ನೀಡಿದರು. ಇದೀಗ ಆಸ್ಟ್ರೇಲಿಯಾ ವಿರುದ್ದ 4 ಓವರ್​ಗಳಲ್ಲಿ 52 ರನ್​ ಚಚ್ಚಿಸಿಕೊಳ್ಳುವ ಮೂಲಕ ಭುವಿ ಮತ್ತೊಮ್ಮೆ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದಾರೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಭುವನೇಶ್ವರ್​ ಕುಮಾರ್ ಪವರ್​ಪ್ಲೇ ವೇಳೆ 5.66 ರ ಸರಾಸರಿಯಲ್ಲಿ ನೀಡಿದ್ದರೆ, ಡೆತ್ ಓವರ್​ ವೇಳೆ 9.26 ಸರಾಸರಿಯಲ್ಲಿ ರನ್ ಬಿಟ್ಟುಕೊಡುತ್ತಾ ಬಂದಿದ್ದಾರೆ. ಅಂದರೆ ಡೆತ್​ ಓವರ್​ಗಳಲ್ಲಿ ಭುವಿ  10 ರನ್​ಗಳ ಅಸುಪಾಸಿನ ಸರಾಸರಿಯಲ್ಲಿ ರನ್ ನೀಡುತ್ತಿದ್ದಾರೆ. ಇದಾಗ್ಯೂ ಭುವನೇಶ್ವರ್ ಕುಮಾರ್ ಅವರನ್ನು ಡೆತ್​ ಓವರ್​ನಲ್ಲಿ ಬಳಸಿಕೊಳ್ಳುತ್ತಿರುವುದು ಏಕೆ ಎಂಬುದೇ ದೊಡ್ಡ ಪ್ರಶ್ನೆ.

 

 

Published On - 1:25 pm, Wed, 21 September 22