ಐಪಿಎಲ್ ನಂತರ 3 ಬಾರಿ ಬಯೋ ಬಬಲ್ ವಿಫಲ! ಕ್ರಿಕೆಟ್​ ಲೋಕದೊಳಗೆ ಕೊರೊನಾ ಎಂಟ್ರಿ; ಇದಕ್ಕೆಲ್ಲ ಯಾರು ಹೊಣೆ?

TV9 Digital Desk

| Edited By: ಪೃಥ್ವಿಶಂಕರ

Updated on: Sep 11, 2021 | 6:51 PM

ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಿದ್ದ ಸಮಯದಲ್ಲಿ ಚೆನ್ನೈ ಮೂಲದ ಕಂಪನಿಯಿಂದ ಆಟಗಾರರಿಗೆ ಟ್ರ್ಯಾಕಿಂಗ್ ಸಾಧನವನ್ನು ನೀಡಲಾಯಿತು. ಈ ಸಾಧನವು ಭಾರೀ ಕಳಪೆ ಗುಣಮಟ್ಟದ್ದಾಗಿತ್ತು. ಈ ಕಾರಣದಿಂದಾಗಿ ಆಟಗಾರರನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗಲಿಲ್ಲ.

ಐಪಿಎಲ್ ನಂತರ 3 ಬಾರಿ ಬಯೋ ಬಬಲ್ ವಿಫಲ! ಕ್ರಿಕೆಟ್​ ಲೋಕದೊಳಗೆ ಕೊರೊನಾ ಎಂಟ್ರಿ; ಇದಕ್ಕೆಲ್ಲ ಯಾರು ಹೊಣೆ?
ಪ್ರಾತಿನಿಧಿಕ ಚಿತ್ರ

ಬಯೋ ಬಬಲ್ ಮೂರು ಬಾರಿ ವಿಫಲವಾಗಿದೆ. ಆಟಗಾರರು ಸೋಂಕಿಗೆ ತುತ್ತಾದ ನಂತರ, ಪ್ರತಿ ಬಾರಿ ಏನಾಗುತ್ತಿದೆ? ನಿರ್ಲಕ್ಷ್ಯ ಎಲ್ಲಿದೆ? ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ಏರ್ಪಡುತ್ತದೆ. ಆಟಗಾರರು ಮತ್ತು ತರಬೇತುದಾರರು ಕೊರೊನಾ ಸೋಂಕಿಗೆ ಒಳಗಾದ ನಂತರ ಈ ವರ್ಷದ ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಐಪಿಎಲ್‌ನ 14 ನೇ ಸೀಸನ್ ಕೊನೆಗೊಂಡಿತು. ಐಪಿಎಲ್ ಸಮಯದಲ್ಲಿ 4 ಆಟಗಾರರು ಮತ್ತು ಇಬ್ಬರು ಕೋಚ್‌ಗಳು ಸೋಂಕಿಗೆ ಒಳಗಾಗಿದ್ದರು.

ಮೊದಲಿಗೆ, ಇಬ್ಬರು ಕೆಕೆಆರ್ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಎಲ್ ಬಾಲಾಜಿ ಕೊರೊನಾ ಸೋಂಕಿಗೆ ತುತ್ತಾಗುದ್ದರು. ಅದರ ನಂತರ, ಸನ್ ರೈಸರ್ಸ್ ಹೈದರಾಬಾದ್ ನ ರಿದ್ಧಿಮಾನ್ ಸಹಾ ಮತ್ತು ದೆಹಲಿ ಕ್ಯಾಪಿಟಲ್ಸ್ ನ ಅಮಿತ್ ಮಿಶ್ರಾ ಕೂಡ ಸೋಂಕಿಗೆ ಒಳಗಾದರು. ಇದರ ನಂತರ ಐಪಿಎಲ್ ಅನ್ನು ಮುಂದೂಡಬೇಕಾಯಿತು.

ಐಪಿಎಲ್‌ನಲ್ಲಿ ಬಯೋ ಬಬಲ್ ಎಲ್ಲಿ ವಿಫಲವಾಯಿತು? ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಿದ್ದ ಸಮಯದಲ್ಲಿ ಚೆನ್ನೈ ಮೂಲದ ಕಂಪನಿಯಿಂದ ಆಟಗಾರರಿಗೆ ಟ್ರ್ಯಾಕಿಂಗ್ ಸಾಧನವನ್ನು ನೀಡಲಾಯಿತು. ಈ ಸಾಧನವು ಭಾರೀ ಕಳಪೆ ಗುಣಮಟ್ಟದ್ದಾಗಿತ್ತು. ಈ ಕಾರಣದಿಂದಾಗಿ ಆಟಗಾರರನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗಲಿಲ್ಲ. ಫ್ರಾಂಚೈಸಿ ಕೂಡ ಈ ಬಗ್ಗೆ ಮಂಡಳಿಗೆ ದೂರು ನೀಡಿದೆ.

ಶ್ರೀಲಂಕಾ ಪ್ರವಾಸದಲ್ಲಿ ವೈದ್ಯಕೀಯ ಅಧಿಕಾರಿಯ ನಿರ್ಲಕ್ಷ್ಯ ಈ ವರ್ಷದ ಜುಲೈನಲ್ಲಿ, ಭಾರತೀಯ ತಂಡದ ಆಟಗಾರ ಕೃಣಾಲ್ ಪಾಂಡ್ಯ ಶ್ರೀಲಂಕಾ ಪ್ರವಾಸದ ವೇಳೆ ಕೊರೊನಾಗೆ ತುತ್ತಾದರು. ಇದರಿಂದಾಗಿ ಏಳು ಆಟಗಾರರು ಪ್ರತ್ಯೇಕವಾಗಿರಬೇಕಾಯಿತು. ಇದರ ನಂತರ, ನೆಟ್ ಬೌಲರ್​ಗಳನ್ನು ಎರಡನೇ ಮತ್ತು ಮೂರನೇ ಟಿ 20 ಗೆ ತಂಡದಲ್ಲಿ ಸೇರಿಸಲಾಯಿತು. ಇದರಲ್ಲಿ ಕೊರೊನಾ ಪ್ರೋಟೋಕಾಲ್ ಅನುಸರಿಸುವಲ್ಲಿ ವೈದ್ಯಕೀಯ ಅಧಿಕಾರಿಯ ನಿರ್ಲಕ್ಷ್ಯವು ಬಹಿರಂಗವಾಯಿತು.

ಇಂಗ್ಲೆಂಡ್ ಪ್ರವಾಸದಲ್ಲಿ ಕೊರೊನಾ ಪ್ರೋಟೋಕಾಲ್ ಉಲ್ಲಂಘಿಸಿದ ಆಟಗಾರರು ಇಂಗ್ಲೆಂಡ್ ಪ್ರವಾಸದ ವೇಳೆ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ಫಿಸಿಯೋ ನಿತಿನ್ ಪಟೇಲ್, ಯೋಗೇಶ್ ಪರ್ಮಾರ್ ಐದು ಟೆಸ್ಟ್ ಸರಣಿಯ ನಡುವೆ ಸೋಂಕಿಗೆ ಒಳಗಾಗಿದ್ದರು. ಈ ಕಾರಣದಿಂದಾಗಿ ಕೊನೆಯ ಟೆಸ್ಟ್​ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಅದೇ ಸಮಯದಲ್ಲಿ, ಸರಣಿಯ ಆರಂಭದ ಮೊದಲು, ರಿಷಬ್ ಪಂತ್ ಕೂಡ ಸೋಂಕಿಗೆ ಒಳಗಾಗಿದ್ದರು. ಪ್ರವಾಸದ ಸಮಯದಲ್ಲಿ ಕೊರೊನಾದ ಪ್ರೋಟೋಕಾಲ್ ಅನ್ನು ಸರಿಯಾಗಿ ಅನುಸರಿಸದಿರುವುದರ ಬಗ್ಗೆಯೂ ಮಾತನಾಡಲಾಯಿತು.

ಸರಣಿಯ ಆರಂಭಕ್ಕೂ ಮೊದಲು, ಅನೇಕ ಆಟಗಾರರು ಮಾಸ್ಕ್ ಹಾಕದೆ ಯೂರೋ ಕಪ್ ಫೈನಲ್ ಮತ್ತು ವಿಂಬಲ್ಡನ್ ಪಂದ್ಯಗಳನ್ನು ವೀಕ್ಷಿಸಲು ತೆರಳಿದ್ದರು. ಅದೇ ಸಮಯದಲ್ಲಿ, ಬಯೋ ಬಬಲ್ ಅನ್ನು ಹೋಟೆಲ್‌ನಲ್ಲಿ ಸರಿಯಾಗಿ ಪಾಲಿಸಲಾಗಲಿಲ್ಲ. ಸರಣಿಯ ಮಧ್ಯದಲ್ಲಿ, ತಂಡದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಮತ್ತು ತಂಡದ ನಾಯಕ ವಿರಾಟ್ ಕೊಹ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರಿಂದ ತಂಡದೊಳಕ್ಕೆ ಕೊರೊನಾ ಎಂಟ್ರಿಕೊಟ್ಟಿತ್ತು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada