IPL 2022: RCB ತಂಡದಲ್ಲಿ ಉಳಿಸಿಕೊಳ್ಳಬೇಕಾದ 3 ಆಟಗಾರರನ್ನು ಹೆಸರಿಸಿದ ಲಾರಾ

| Updated By: ಝಾಹಿರ್ ಯೂಸುಫ್

Updated on: Oct 13, 2021 | 2:59 PM

Brian Lara: ಮ್ಯಾಕ್ಸ್​ವೆಲ್​ ಈ ಬಾರಿ ತಮ್ಮ ಮೇಲಿದ್ದ ನಿರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ. 14 ಕೋಟಿಗೂ ಅಧಿಕ ಮೊತ್ತಕ್ಕೆ ಆರ್​ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದ ಮ್ಯಾಕ್ಸ್​ವೆಲ್, ಬೆಲೆಗೆ ತಕ್ಕಂಥಹ ಆಟವನ್ನು ಆಡಿದ್ದಾರೆ.

IPL 2022: RCB ತಂಡದಲ್ಲಿ ಉಳಿಸಿಕೊಳ್ಳಬೇಕಾದ 3 ಆಟಗಾರರನ್ನು ಹೆಸರಿಸಿದ ಲಾರಾ
Brian Lara
Follow us on

ಆರ್​ಸಿಬಿ (RCB) ತಂಡ ಈ ಬಾರಿಯೂ ಕಪ್ ಗೆಲ್ಲುವಲ್ಲಿ ಎಡವಿದೆ. ಪ್ಲೇ ಆಫ್ ತಲುಪಿದರೂ ಫೈನಲ್ ರೇಸ್​ಗೇರುವಲ್ಲಿ ವಿಫಲವಾಗಿದೆ. ಇದಾಗ್ಯೂ ಈ ಸಲ ಆರ್​ಸಿಬಿ ತಂಡದ ಕೆಲ ಆಟಗಾರರು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಹೀಗಾಗಿಯೇ ಮುಂದಿನ ಸೀಸನ್​ನಲ್ಲಿ ಈ ಆಟಗಾರರು ಆರ್​ಸಿಬಿ ತಂಡದಲ್ಲಿರುವುದು ಉತ್ತಮ ಎಂದಿದ್ದಾರೆ ಲೆಜೆಂಡ್ ಬ್ರಿಯಾನ್ ಲಾರಾ (Brian Lara). ಮುಂದಿನ ಸೀಸನ್​ನಲ್ಲಿ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಬಹುತೇಕ ತಂಡಗಳು ಬದಲಾಗಲಿದೆ. ಅಷ್ಟೇ ಅಲ್ಲದೆ ಹೊಸ 2 ತಂಡಗಳು ಸೇರ್ಪಡೆಯಾಗಲಿದೆ. ಹೀಗಾಗಿ ಆರ್​ಸಿಬಿ ಮೂವರು ಬ್ಯಾಟರುಗಳನ್ನು ಉಳಿಸಿಕೊಳ್ಳುವುದು ಉತ್ತಮ ಎಂದು ಲಾರಾ ಸಲಹೆ ನೀಡಿದ್ದಾರೆ.

ಲಾರಾ ಪ್ರಕಾರ, ಆರ್​ಸಿಬಿ ತಂಡ ವಿರಾಟ್ ಕೊಹ್ಲಿಯನ್ನು ಉಳಿಸಿಕೊಳ್ಳಲೇಬೇಕು. ಮುಂದಿನ ಸೀಸನ್​ನಲ್ಲಿ ಅವರು ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಹಾಗೆಯೇ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಕೂಡ ರಿಟೇನ್ ಮಾಡುವುದು ಉತ್ತಮ.

ಏಕೆಂದರೆ ಮ್ಯಾಕ್ಸ್​ವೆಲ್​ ಈ ಬಾರಿ ತಮ್ಮ ಮೇಲಿದ್ದ ನಿರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ. 14 ಕೋಟಿಗೂ ಅಧಿಕ ಮೊತ್ತಕ್ಕೆ ಆರ್​ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದ ಮ್ಯಾಕ್ಸ್​ವೆಲ್, ಬೆಲೆಗೆ ತಕ್ಕಂಥಹ ಆಟವನ್ನು ಆಡಿದ್ದಾರೆ. ಹೀಗಾಗಿ ಅವರನ್ನು ಕೂಡ ಆಲ್​ರೌಂಡರ್ ಆಗಿ ತಂಡದಲ್ಲಿ ಇರಿಸಿಕೊಳ್ಳೋದು ಉತ್ತಮ.

ಇನ್ನು ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರನ್ನೂ ಸಹ ಆರ್​ಸಿಬಿ ಉಳಿಸಿಕೊಳ್ಳೋದು ಉತ್ತಮ ಎಂದಿದ್ದಾರೆ ಲಾರಾ. ಇದಾಗ್ಯೂ ಎಬಿ ಡಿವಿಲಿಯರ್ಸ್​ ಅನ್ನು ಕೈ ಬಿಡಬೇಕೆಂದು ಲಾರಾ ಅಭಿಪ್ರಾಯಪಟ್ಟರು.

ಏಕೆಂದರೆ ಎಬಿಡಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡುತ್ತಿಲ್ಲ. ಇಡೀ ವರ್ಷದಲ್ಲಿ ಆರು ವಾರ ಮಾತ್ರ ಕ್ರಿಕೆಟ್ ಆಡುತ್ತಾರೆ. ಇದೀಗ ಅವರಿಗೆ ವಯಸ್ಸಾಗಿದೆ. 42 ವರ್ಷದ ಕ್ರಿಸ್ ಗೇಲ್ ಇಡೀ ವರ್ಷ ಲೀಗ್ ಮೇಲೆ ಲೀಗ್​ಗಳಲ್ಲಿ ಆಡುತ್ತಲೆ ಇರುತ್ತಾರೆ. ಆದರೂ ಕೂಡ ಅವರು ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ಎಬಿಡಿ ಪರಿಸ್ಥಿತಿ ಕೂಡ ಹಾಗೆಯೇ ಇರಲಿದೆ ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:  KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ:ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್​ರೌಂಡರ್ ಆಯ್ಕೆ 

ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

(Brian Lara names 3 players RCB should retain ahead of IPL 2022)