India vs Australia: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಟೀಮ್ ಇಂಡಿಯಾ (Team India) 2-1 ಅಂತರದಿಂದ ಗೆದ್ದುಕೊಂಡಿದೆ. ಈ ಭರ್ಜರಿ ಗೆಲುವಿನ ಬಳಿಕ ಟ್ರೋಫಿಯನ್ನು ಸ್ವೀಕರಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಳೆಯ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದು ವಿಶೇಷ. ಅಂದರೆ ಈ ಹಿಂದೆ ಟೀಮ್ ಇಂಡಿಯಾ ಸರಣಿ ಜಯಿಸಿದಾಗ ಟ್ರೋಫಿಯನ್ನು ಹೊಸ ಆಟಗಾರರಿಗೆ ಅಥವಾ ಕಿರಿಯ ಆಟಗಾರರಿಗೆ ನೀಡುವ ಸಂಪ್ರದಾಯವನ್ನು ಮಹೇಂದ್ರ ಸಿಂಗ್ ಧೋನಿ ಆರಂಭಿಸಿದ್ದರು. ಅದರಂತೆ ತಂಡಕ್ಕೆ ಆಯ್ಕೆಯಾಗುವ ಹೊಸ ಆಟಗಾರರಿಗೆ ಅಥವಾ ಕಿರಿಯ ಆಟಗಾರರಿಗೆ ಟ್ರೋಫಿಯನ್ನು ಹಸ್ತಾಂತರಿಸಿ ಪೋಸ್ ನೀಡಲಾಗುತ್ತಿತ್ತು.
ಧೋನಿ ಆರಂಭಿಸಿದ್ದ ಈ ವಿಶೇಷ ವಿಜಯೋತ್ಸವನ್ನು ವಿರಾಟ್ ಕೊಹ್ಲಿ ಕೂಡ ಮುಂದುವರೆಸಿದ್ದರು. ಇದಾದ ಬಳಿಕ ನಾಯಕನಾದ ರೋಹಿತ್ ಶರ್ಮಾ ಸಹ ಕೆಲ ಸರಣಿಗಳಲ್ಲಿ ಹೊಸ ಆಟಗಾರರಿಗೆ ಟ್ರೋಫಿಯನ್ನು ಹಸ್ತಾಂತರಿಸಿದ್ದರು.
ಆದರೆ ಈ ಬಾರಿ ರೋಹಿತ್ ಶರ್ಮಾ ಹಳೆಯ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಾರೆ. ಬದಲಾಗಿ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರನಿಗೆ ಟ್ರೋಫಿ ಹಸ್ತಾಂತರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಅದರಂತೆ ಈ ಬಾರಿ ದಿನೇಶ್ ಕಾರ್ತಿಕ್ಗೆ ಟ್ರೋಫಿಯನ್ನು ನೀಡಲಾಯಿತು. ಇದೇ ವೇಳೆ ಡಿಕೆ ನಿರಾಕರಿಸುತ್ತಿರುವುದು ಕೂಡ ವಿಡಿಯೋದಲ್ಲಿ ಕಾಣಬಹುದು. ಆದರೆ ಹಾರ್ದಿಕ್ ಪಾಂಡ್ಯ, ಅಶ್ವಿನ್ ಒತ್ತಾಯ ಮಾಡುವ ಮೂಲಕ ಡಿಕೆ ಕೈಯಿಂದ ಟ್ರೋಫಿಯನ್ನು ಎತ್ತಿ ಹಿಡಿಸಿದ್ದಾರೆ.
Winners Are Grinners! ☺️ ☺️
That moment when #TeamIndia Captain @ImRo45 received the #INDvAUS @mastercardindia T20I series trophy ? from the hands of Mr. @ThakurArunS, Treasurer, BCCI. ? ? pic.twitter.com/nr31xBrRBQ
— BCCI (@BCCI) September 25, 2022
ಕಂಬ್ಯಾಕ್ಗೆ ಗೌರವ:
ಅಂದಹಾಗೆ ದಿನೇಶ್ ಕಾರ್ತಿಕ್ ಅವರಿಗೆ ಟ್ರೋಫಿಯನ್ನು ನೀಡಲು ಮುಖ್ಯ ಕಾರಣ ಅವರ ಭರ್ಜರಿ ಕಂಬ್ಯಾಕ್. ಅಂದರೆ ಕಾರ್ತಿಕ್ 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಹಲವು ಬಾರಿ ತಂಡದಲ್ಲಿ ಕಾಣಿಸಿಕೊಂಡಿದ್ದರೂ, 2019 ರಲ್ಲಿ ಸಂಪೂರ್ಣವಾಗಿ ಹೊರಬಿದ್ದಿದ್ದರು. ಆ ನಂತರ ಕಾಮೆಂಟೇಟರ್ ಆಗಿ ಕೂಡ ಗುರುತಿಸಿಕೊಂಡರು. ಆದರೆ ಐಪಿಎಲ್ ಮೂಲಕ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ ಡಿಕೆ ಇದೀಗ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದಾರೆ.
ಅಲ್ಲದೆ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇದೇ ಕಾರಣದಿಂದಾಗಿ ನಾಯಕ ರೋಹಿತ್ ಶರ್ಮಾ 37 ವರ್ಷದ ದಿನೇಶ್ ಕಾರ್ತಿಕ್ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸುವ ಮೂಲಕ ಗಮನ ಸೆಳೆದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾಯಕನ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Published On - 12:55 pm, Mon, 26 September 22