ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಮೊದಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಝರ್ಸ್ ತಂಡವು 8 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ. ತಲಾ 10 ಓವರ್ಗಳಂತೆ ನಾಲ್ಕು ಇನಿಂಗ್ಸ್ ಮೂಲಕ ಆಡಲಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಾಲ್ ಟೈಗರ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಮೊದಲ 10 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 73 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು 5 ವಿಕೆಟ್ ನಷ್ಟಕ್ಕೆ 93 ರನ್ ಪೇರಿಸಿತು. 20 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬೆಂಗಾಲ್ ತಂಡವು 6 ವಿಕೆಟ್ ನಷ್ಟಕ್ಕೆ 76 ರನ್ಗಳಿಸಲಷ್ಟೇ ಶಕ್ತರಾದರು.
ಮೊದಲ ಇನಿಂಗ್ಸ್ನ 20 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ ಕರ್ನಾಟಕ ತಂಡಕ್ಕೆ ಗೆಲ್ಲಲು 57 ರನ್ಗಳ ಅವಶ್ಯಕತೆಯಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಬುಲ್ಡೋಝರ್ಸ್ ಪರ ರಾಜೀವ್ 11 ಎಸೆತಗಳಲ್ಲಿ 23 ರನ್ ಬಾರಿಸಿದರು. ಹಾಗೆಯೇ ಕಿಚ್ಚ ಸುದೀಪ್ 11 ಎಸೆತಗಳಲ್ಲಿ 15 ರನ್ ಬಾರಿಸಿ ಉತ್ತಮ ಸಾಥ್ ನೀಡಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗೋಲ್ಡನ್ ಸ್ಟಾರ್ ಗಣೇಶ್ 10 ರನ್ಗಳಿಸಿದರು.
ಪರಿಣಾಮ 6.4 ಓವರ್ನಲ್ಲಿ 57 ರನ್ ಬಾರಿಸಿ ಕರ್ನಾಟಕ ಬುಲ್ಡೋಝರ್ಸ್ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ 2023 ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದೆ.
ಕರ್ನಾಟಕ ಬುಲ್ಡೋಝರ್ಸ್ ತಂಡ: ಪ್ರದೀಪ್, ರಾಜೀವ್ ಹೆಚ್, ಕಿಚ್ಚ ಸುದೀಪ್, ಸುನೀಲ್ ರಾವ್, ಜಯರಾಮ್ ಕಾರ್ತಿಕ್, ಪ್ರತಾಪ್, ಪ್ರಸನ್ನ, ಶಿವರಾಜ್ ಕುಮಾರ್, ಗಣೇಶ್, ಕೃಷ್ಣ, ಸೌರವ್ ಲೋಕೇಶ್, ಚಂದನ್, ಅರ್ಜುನ್ ಯೋಗಿ, ನಿರೂಪ್ ಭಂಡಾರಿ, ನಂದ ಕಿಶೋರ್, ಸಾಗರ್ ಗೌಡ.
ಬೆಂಗಾಲ್ ಟೈಗರ್ಸ್ ತಂಡ: ಉದಯ್, ಇಂದ್ರಶಿಶ್, ಮೋಹನ್, ಸುಮನ್, ಜಾಯ್, ಜೋ, ಯೂಸುಫ್, ಜೀತು ಕಮಲ್, ಜಮ್ಮಿ, ರತ್ನದೀಪ್ ಘೋಷ್, ಆನಂದ ಚೌಧರಿ, ಸ್ಯಾಂಡಿ, ಆದಿತ್ಯ ರಾಯ್ ಬ್ಯಾನರ್ಜಿ, ಅರ್ಮಾನ್ ಅಹಮದ್, ಮಾಂಟಿ, ರಾಹುಲ್ ಮಜುಂದಾರ್, ಗೌರವ್ ಚಕ್ರವರ್ತಿ, ಬೋನಿ, ಸೌರವ್ ದಾಸ್.
ಈ ಪಂದ್ಯಗಳನ್ನು ಯಾವ ಚಾನೆಲ್ಗಳಲ್ಲಿ ಲೈವ್ ವೀಕ್ಷಿಸಬಹುದು?
ಹಾಗೆಯೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಯೂಟ್ಯೂಬ್ ಚಾನೆಲ್ನಲ್ಲೂ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.
Published On - 7:12 pm, Sat, 18 February 23