ಭಾರತದ ವಿರುದ್ಧದ ಹೇಳಿಕೆ ನಿಲ್ಲಿಸಿ, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಿ: ಪಿಸಿಬಿಗೆ ಐಸಿಸಿ ತಾಕೀತು..!

ICC Champions Trophy 2025: 2008 ರಿಂದ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ಕಳೆದ 12 ವರ್ಷಗಳಲ್ಲಿ ಉಭಯ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಯನ್ನು ಸಹ ಆಡಿಲ್ಲ. ಇದೀಗ ಐಸಿಸಿ ಟೂರ್ನಿಗೆ ಪಾಕಿಸ್ತಾನ್ ಆತಿಥ್ಯವಹಿಸಲು ಸಜ್ಜಾಗಿದೆ. ಆದರೆ ಪಾಕ್​ನಲ್ಲಿ ಟೂರ್ನಿ ಆಡಲು ಬಿಸಿಸಿಐ ನಿರಾಕರಿಸಿದೆ.

ಭಾರತದ ವಿರುದ್ಧದ ಹೇಳಿಕೆ ನಿಲ್ಲಿಸಿ, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಿ: ಪಿಸಿಬಿಗೆ ಐಸಿಸಿ ತಾಕೀತು..!
Champions Trophy 2025
Follow us
ಝಾಹಿರ್ ಯೂಸುಫ್
|

Updated on: Nov 20, 2024 | 8:17 AM

ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ರಂಪ ಮುಂದುವರೆದಿದೆ. ಒಂದೆಡೆ ಭಾರತ ಪಾಕ್​ನಲ್ಲಿ ಟೂರ್ನಿ ಆಡಲು ನಿರಾಕರಿಸಿದರೆ, ಮತ್ತೊಂದೆಡೆ ಪಾಕಿಸ್ತಾನ್ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಹಿಂದೇಟು ಹಾಕಿದೆ. ಈ ಎರಡು ಕ್ರಿಕೆಟ್ ಮಂಡಳಿಗಳ ನಿರ್ಧಾರದಿಂದ ಇದೀಗ ಐಸಿಸಿ ಸಂಕಷ್ಟಕ್ಕೆ ಸಿಲುಕಿದೆ. ಇದಾಗ್ಯೂ ಪಾಕಿಸ್ತಾನದಲ್ಲೇ ಟೂರ್ನಿ ಆಯೋಜಿಸಲು ಅನುವು ಮಾಡಿಕೊಡುವುದಾಗಿ ತಿಳಿಸಿರುವ ಐಸಿಸಿ, ಭಾರತಕ್ಕಾಗಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳಲೇಬೇಕು ಎಂದು ತಿಳಿಸಿದೆ.

ಎಎನ್​ಐ ವರದಿಯ ಪ್ರಕಾರ, ಐಸಿಸಿ ಅಧಿಕಾರಿಗಳು ಮುಂದಿನ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮನವೊಲಿಸುವ ಪ್ರಯತ್ನದಲ್ಲಿದ್ದಾರೆ. ಅಲ್ಲದೆ ಭಾರತವಿಲ್ಲದೆ ಟೂರ್ನಿ ಆಯೋಜಿಸಿದರೆ ಉಂಟಾಗುವ ನಷ್ಟವನ್ನು ಮತ್ತು ಅದರಿ ಪರಿಣಾಮವನ್ನು ಪಿಸಿಬಿ ಅಧಿಕಾರಿಗಳಿಗೆ ವಿವರಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಹೈಬ್ರಿಡ್ ಮಾದರಿಯೊಂದೇ ಪ್ರಸ್ತುತ ಆಯ್ಕೆ ಎಂದು ಐಸಿಸಿ ತಿಳಿಸಿದೆ.

ಪಿಸಿಬಿ ಹೇಳಿಕೆಗಳಿಗೆ ಬ್ರೇಕ್:

ಚಾಂಪಿಯನ್ಸ್ ಟ್ರೋಫಿ ಕುರಿತಾದ ತನ್ನ ನಿಲುವನ್ನು ಬಿಸಿಸಿಐ ಐಸಿಸಿಗೆ ತಿಳಿಸಿದೆ. ಆದರೆ ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಸೇರಿದಂತೆ, ಕೆಲ ಅಧಿಕಾರಿಗಳು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಭಾರತದ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ತಾಕೀತು ಮಾಡಿದೆ.

ಇಂತಹ ಹೇಳಿಕೆಗಳಿಂದ ಪರಿಸ್ಥಿತಿಯು ಮತ್ತಷ್ಟು ಉಲ್ಬಣವಾಗಲಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಐಸಿಸಿ ಎಚ್ಚರಿಸಿದೆ. ಹೀಗಾಗಿ ಯಾವುದೇ ಹೇಳಿಕೆ ನೀಡದೇ, ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಸಿದ್ಧತೆಗಳನ್ನು ಶುರು ಮಾಡಬೇಕೆಂದು ಪಿಸಿಬಿಗೆ ಐಸಿಸಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಏನಿದು ಹೈಬ್ರಿಡ್ ಮಾದರಿ?

ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆದರೆ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿದೆ. ಆದರೆ ಭಾರತದ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಇಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇ ನಲ್ಲಿ ಆಯೋಜನೆಗೊಳ್ಳಬಹುದು. ಹೀಗೆ ಒಂದು ಟೂರ್ನಿಯನ್ನು ಎರಡು ದೇಶಗಳಲ್ಲಿ ಆಯೋಜಿಸುವುದನ್ನು ಹೈಬ್ರಿಡ್ ಮಾದರಿ ಎನ್ನಲಾಗುತ್ತದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಬೇಕೆಂದು ಬಿಸಿಸಿಐ ಬೇಡಿಕೆಯಿಟ್ಟಿದೆ. ಏಕೆಂದರೆ 2023 ಏಷ್ಯಾಕಪ್ ಆಯೋಜನೆಯ ಹಕ್ಕು ಪಾಕ್ ಕ್ರಿಕೆಟ್ ಮಂಡಳಿ ಬಳಿಯಿತ್ತು. ಆದರೆ ಭಾರತ ತಂಡವು ಪಾಕ್​ಗೆ ತೆರಳಲು ಹಿಂದೇಟು ಹಾಕಿದ್ದರಿಂದ ಟೂರ್ನಿಯನ್ನು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು.

ಇದನ್ನೂ ಓದಿ: ಪಾಕಿಸ್ತಾನ್ ವಿರುದ್ಧ ಆಸ್ಟ್ರೇಲಿಯಾಗೆ ದಾಖಲೆ ವಿಜಯ

ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್​ನ್ನು ಆಯೋಜಿಸಲಾಗಿತ್ತು. ಇಲ್ಲಿ ಭಾರತ ತಂಡವು ಫೈನಲ್ ಸೇರಿದಂತೆ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿಯನ್ನೂ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಬಿಸಿಸಿಐ ಐಸಿಸಿಗೆ ತಿಳಿಸಿದೆ. ಹೀಗಾಗಿ ಈ ಬಾರಿಯ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯು ಪಾಕಿಸ್ತಾನ್ ಮತ್ತು ಯುಎಇ ನಲ್ಲಿ ಆಯೋಜನೆಗೊಳ್ಳುವ ಸಾಧ್ಯತೆಯಿದೆ.

ಅರಳಿ ಮರದ ಎಲೆ ದೀಪದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯ ತಿಳಿಯಿರಿ
ಅರಳಿ ಮರದ ಎಲೆ ದೀಪದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಐದು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಐದು ಗ್ರಹಗಳ ಶುಭ ಫಲವಿದೆ
ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು
ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು
ಮನೆಗೆ ನುಗ್ಗಿದ ಚಿರತೆಯಿಂದ ನಾಯಿಯ ಮೇಲೆ ಅಟ್ಯಾಕ್; ಶಾಕಿಂಗ್ ವಿಡಿಯೋ ವೈರಲ್
ಮನೆಗೆ ನುಗ್ಗಿದ ಚಿರತೆಯಿಂದ ನಾಯಿಯ ಮೇಲೆ ಅಟ್ಯಾಕ್; ಶಾಕಿಂಗ್ ವಿಡಿಯೋ ವೈರಲ್
ಮದುವೆ ಹಿಂದಿನ ರಾತ್ರಿ ಡ್ಯಾನ್ಸ್​ ಮಾಡುವಾಗ ಹೃದಯಾಘಾತದಿಂದ ಮದುಮಗ ಸಾವು!
ಮದುವೆ ಹಿಂದಿನ ರಾತ್ರಿ ಡ್ಯಾನ್ಸ್​ ಮಾಡುವಾಗ ಹೃದಯಾಘಾತದಿಂದ ಮದುಮಗ ಸಾವು!
ಶಿವಣ್ಣನ ರೀತಿ ಡೈಲಾಗ್ ಹೇಳಲು ಯಾರಿಗೆ ಸಾಧ್ಯ? ವೇದಿಕೆಯಲ್ಲಿ ಎಲ್ಲರೂ ಸುಸ್ತ್
ಶಿವಣ್ಣನ ರೀತಿ ಡೈಲಾಗ್ ಹೇಳಲು ಯಾರಿಗೆ ಸಾಧ್ಯ? ವೇದಿಕೆಯಲ್ಲಿ ಎಲ್ಲರೂ ಸುಸ್ತ್
ರಾಧಿಕ ಕರಿಯ ಅಂತ ಕರೆದ್ರೆ ಓಕೆ, ಜಮೀರ್ ಕರೆದ್ರೆ ಯಾಕೆ? ತೇಜಸ್ವಿನಿ ಗೌಡ
ರಾಧಿಕ ಕರಿಯ ಅಂತ ಕರೆದ್ರೆ ಓಕೆ, ಜಮೀರ್ ಕರೆದ್ರೆ ಯಾಕೆ? ತೇಜಸ್ವಿನಿ ಗೌಡ
‘ಭೈರತಿ ರಣಗಲ್ ಸೀಕ್ವೆಲ್ ಬರಲಿದೆ’: ಸಕ್ಸಸ್ ಮೀಟ್​ನಲ್ಲಿ ಶಿವಣ್ಣ ಮಾಹಿತಿ
‘ಭೈರತಿ ರಣಗಲ್ ಸೀಕ್ವೆಲ್ ಬರಲಿದೆ’: ಸಕ್ಸಸ್ ಮೀಟ್​ನಲ್ಲಿ ಶಿವಣ್ಣ ಮಾಹಿತಿ
ನಿರ್ದೇಶಕ ದೂರಿನ ಮೇರೆಗೆ ನಟನನ್ನು ಬಂಧಿಸಿರುವ ಚಂದ್ರಾ ಲೇಔಟ್ ಪೊಲೀಸರು
ನಿರ್ದೇಶಕ ದೂರಿನ ಮೇರೆಗೆ ನಟನನ್ನು ಬಂಧಿಸಿರುವ ಚಂದ್ರಾ ಲೇಔಟ್ ಪೊಲೀಸರು
ತೆಲಂಗಾಣದಲ್ಲಿ ಬಿಆರ್​ಎಸ್​ ನಾಯಕಿಯ ಗಂಡನಿಗೆ ಸುತ್ತಿಗೆಯಿಂದ ಹೊಡೆದ ಯುವಕ
ತೆಲಂಗಾಣದಲ್ಲಿ ಬಿಆರ್​ಎಸ್​ ನಾಯಕಿಯ ಗಂಡನಿಗೆ ಸುತ್ತಿಗೆಯಿಂದ ಹೊಡೆದ ಯುವಕ