Cheteshwar pujara: ಸಸೆಕ್ಸ್ ತಂಡದ ನಾಯಕರಾಗಿ ಆಯ್ಕೆಯಾದ ಚೇತೇಶ್ವರ ಪೂಜಾರ
Cheteshwar pujara: ಚೇತೇಶ್ವರ ಪೂಜಾರ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಸೀಮಿತ ಓವರ್ ಗಳ ಸರಣಿ ಆಡಿದರೆ, ಪೂಜಾರ ಕೌಂಟಿ ಕ್ರಿಕೆಟ್ ನತ್ತ ಮುಖ ಮಾಡಿದ್ದರು.
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (Cheteshwar pujara) ಅವರನ್ನು ಸಸೆಕ್ಸ್‌ನ ಹಂಗಾಮಿ ನಾಯಕರನ್ನಾಗಿ ಮಾಡಲಾಗಿದೆ. ನಿಯಮಿತ ನಾಯಕ ಟಾಮ್ ಹೈನ್ಸ್ ಗಾಯಗೊಂಡ ಹಿನ್ನೆಲೆಯಲ್ಲಿ ಪೂಜಾರ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಮಿಡ್ಲ್‌ಸೆಕ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಪೂಜಾರ ಸಸೆಕ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪಂದ್ಯ ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ನಡೆಯಲಿರುವುದು ವಿಶೇಷ. ಅಂದರೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಚೇತೇಶ್ವರ ಪೂಜಾರಾ ನಾಯಕರಾಗಿ ಪಾದಾರ್ಪಣೆ ಮಾಡಲಿದ್ದಾರೆ.
ಲೀಸೆಸ್ಟರ್‌ಶೈರ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಟಾಮ್ ಹೈನ್ಸ್ ಕೈಗೆ ಗಾಯವಾಗಿತ್ತು. ಗಾಯವು ಗಂಭೀರವಾಗಿದ್ದರಿಂದ ಅವರಿಗೆ 5 ರಿಂದ 6 ವಾರಗಳ ಕಾಲ ವಿಶ್ರಾಂತಿ ನೀಡಲಾಗಿದೆ. ಹೈನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ನಿಭಾಯಿಸುವ ಜವಾಬ್ದಾರಿ ಪೂಜಾರ ಹೆಗಲೇರಿದೆ. ತಂಡದ ಪೂಜಾರ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಪೂಜಾರಾ ತುಂಬಾ ಉತ್ಸುಕರಾಗಿದ್ದಾರೆ ಸಸೆಕ್ಸ್ ತಂಡದ ಮುಖ್ಯ ಕೋಚ್ ಇಯಾನ್ ಸಾಲಿಸ್ಬರಿ ಹೇಳಿದ್ದಾರೆ.
ಚೇತೇಶ್ವರ ಪೂಜಾರ ತಂಡದೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಅಲ್ಲದೆ ಅವರು ತುಂಬಾ ಅನುಭವಿ ಆಟಗಾರ, ಒಂದು ತಂಡವನ್ನು ಹೇಗೆ ಮುನ್ನಡೆಸಬೇಕೆಂದು ಅವರಿಗೆ ಗೊತ್ತಿದೆ. ಹೀಗಾಗಿ ಪೂಜಾರರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ಸಸೆಕ್ಸ್ ಕೋಚ್ ಹೇಳಿದ್ದಾರೆ.
ಚೇತೇಶ್ವರ ಪೂಜಾರ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಸೀಮಿತ ಓವರ್ ಗಳ ಸರಣಿ ಆಡಿದರೆ, ಪೂಜಾರ ಕೌಂಟಿ ಕ್ರಿಕೆಟ್ ನತ್ತ ಮುಖ ಮಾಡಿದ್ದರು. ಅಲ್ಲದೆ ಮಿಡ್ಲ್‌ಸೆಕ್ಸ್ ವಿರುದ್ಧ ಅಜೇಯ 170, ಡರ್ಹಾಮ್ ವಿರುದ್ಧ 203, ವೋರ್ಸೆಸ್ಟರ್‌ಶೈರ್ ವಿರುದ್ಧ 109, ಕೌಂಟಿಯಲ್ಲಿ ಡರ್ಬಿಶೈರ್ ವಿರುದ್ಧ 201 ರನ್ ಗಳಿಸಿ ಅಬ್ಬರಿಸಿದ್ದರು. ಇದೀಗ ಈ ಭರ್ಜರಿ ಪ್ರದರ್ಶನದ ಫಲವಾಗಿ ಸಸೆಕ್ಸ್ ತಂಡದ ಹಂಗಾಮಿ ನಾಯಕರಾಗಿ ಚೇತೇಶ್ವರ ಪೂಜಾರ ಆಯ್ಕೆಯಾಗಿದ್ದಾರೆ.