Cheteshwar Pujara: 20 ಫೋರ್, 2 ಸಿಕ್ಸ್: ತೂಫಾನ್ ಶತಕ ಸಿಡಿಸಿದ ಚೇತೇಶ್ವರ ಪೂಜಾರ..!
Cheteshwar Pujara: ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಚೇತೇಶ್ವರ ಪೂಜಾರ ಸಸೆಕ್ಸ್ ತಂಡದ ಹಂಗಾಮಿ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ನಾಯಕನಾಗುತ್ತಿದ್ದಂತೆ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಪೂಜಾರ ಇದೀಗ ಸಸೆಕ್ಸ್ ತಂಡದ ಬೆನ್ನೆಲುಬಾಗಿ ನಿಂತಿದ್ದಾರೆ.

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್ (Royal London Cup) ಏಕದಿನ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರಾ (Cheteshwar Pujara) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಸೆಕ್ಸ್ ತಂಡದ ಪರ ನಾಯಕ ಪೂಜಾರ ಹಾಗೂ ಆರಂಭಿಕ ಆಟಗಾರ ಟಾಮ್ ಅಲ್ಸೋಪ್ ಸೆಂಚುರಿಸಿ ಸಿಡಿಸಿ ಮಿಂಚಿದ್ದರು. ಆರಂಭಿಕನಾಗಿ ಕಣಕ್ಕಿಳಿದ ಅಲ್ಸೋಪ್ 155 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 19 ಫೋರ್ನೊಂದಿಗೆ 189 ರನ್ ಬಾರಿಸಿದರು. ಇನ್ನು ಚೇತೇಶ್ವರ ಪೂಜಾರ ಕೇವಲ 75 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದರು.
ಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಪೂಜಾರ 90 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 20 ಫೋರ್ನೊಂದಿಗೆ 132 ರನ್ ಚಚ್ಚಿದರು. ವಿಶೇಷ ಎಂದರೆ ಅಲ್ಸೋಪ್ ಹಾಗೂ ಪೂಜಾರಾ ಅವರ ಈ ಭರ್ಜರಿ ಶತಕಗಳ ನೆರವಿನಿಂದ ಸಸೆಕ್ಸ್ ತಂಡವು ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 400 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಮಿಡ್ಲ್ಸೆಕ್ಸ್ ತಂಡದ ಪರ ಜೋ ಕ್ರಾಕ್ನೆಲ್ 71 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟ್ಸ್ಮನ್ಗಳು ಕ್ರೀಸ್ ಕಚ್ಚಿ ನಿಲ್ಲುವಲ್ಲಿ ವಿಫಲರಾಗಿದ್ದಾರೆ. ಪರಿಣಾಮ 243 ರನ್ಗಳಿಗೆ ಮಿಡ್ಲ್ಸೆಕ್ಸ್ ತಂಡವು ಸರ್ವಪತನ ಕಂಡಿತು. ಇದರೊಂದಿಗೆ 157 ರನ್ಗಳ ಭರ್ಜರಿ ಜಯ ಸಾಧಿಸಿ ಸಸೆಕ್ಸ್ ತಂಡವು ರಾಯಲ್ ಲಂಡನ್ ಕಪ್ನಲ್ಲಿ ಸೆಮಿಫೈನಲ್ಗೇರಿದೆ.
A century from just 75 balls for @cheteshwar1. ? ?
Just phemeomenal. ? pic.twitter.com/z6vrKyqDfp
— Sussex Cricket (@SussexCCC) August 23, 2022
ಪೂಜಾರ ನಾಯಕನಾಟ:
ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಚೇತೇಶ್ವರ ಪೂಜಾರ ಸಸೆಕ್ಸ್ ತಂಡದ ಹಂಗಾಮಿ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ನಾಯಕನಾಗುತ್ತಿದ್ದಂತೆ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಪೂಜಾರ ಇದೀಗ ಸಸೆಕ್ಸ್ ತಂಡದ ಬೆನ್ನೆಲುಬಾಗಿ ನಿಂತಿದ್ದಾರೆ. ಏಕೆಂದರೆ ಈ ಬಾರಿಯ ರಾಯಲ್ ಲಂಡನ್ ಕಪ್ನಲ್ಲಿ ಸಸೆಕ್ಸ್ ಪರ ಕೇವಲ 8 ಇನಿಂಗ್ಸ್ಗಳಿಂದ ಪೂಜಾರ ಒಟ್ಟು 614 ರನ್ ಕಲೆಹಾಕಿದ್ದಾರೆ. ಈ ವೇಳೆ 3 ಸ್ಪೋಟಕ ಶತಕ ಬಾರಿಸಿರುವುದು ವಿಶೇಷ. ಅಂದರೆ ಸಸೆಕ್ಸ್ ತಂಡದ ಗೆಲುವಿನಲ್ಲಿ ಟೀಮ್ ಇಂಡಿಯಾ ಆಟಗಾರ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
