AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂ ಕಾರಣಕ್ಕೆ ನಿಷೇಧಕ್ಕೊಳಗಾದ ಮೂವರು ಆಟಗಾರರು..!

Cricket News: ಕ್ರಿಕೆಟ್​ ಅಂಗಳದಲ್ಲಿ ಬಾಲ್ ವಿರೂಪಗೊಳಿಸಿ, ಅನುಚಿತ ವರ್ತನೆ ತೋರಿ ನಿಷೇಧಕ್ಕೆ ಒಳಗಾಗಿರುವವರ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಮೂವರು ಆಟಗಾರರು ಶೂ ಕಾರಣದಿಂದಾಗಿ ಕ್ರಿಕೆಟ್​ನಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ಅದಕ್ಕೇನು ಕಾರಣ? ಅವರು ಮಾಡಿದ ತಪ್ಪೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

ಶೂ ಕಾರಣಕ್ಕೆ ನಿಷೇಧಕ್ಕೊಳಗಾದ ಮೂವರು ಆಟಗಾರರು..!
Cricket
ಝಾಹಿರ್ ಯೂಸುಫ್
|

Updated on:May 11, 2025 | 12:43 PM

Share

ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಆಟಗಾರರು ಹಲವು ಕಾರಣಗಳಿಂದಾಗಿ ನಿಷೇಧಕ್ಕೊಳಗಾಗಿದ್ದಾರೆ. ಇದರಲ್ಲಿ ಮೂವರು ಆಟಗಾರರು ಶೂ ಕಾರಣದಿಂದ ನಿಷೇಧಕ್ಕೊಳಗಾಗಿರುವುದು ವಿಶೇಷ. ಶೂ ಕೂಡ ಆಟಗಾರನನ್ನು ನಿಷೇಧಿಸಬಹುದೇ? ಎಂದು ಕೇಳಿದ್ರೆ ಖಂಡಿತವಾಗಿಯೂ ಇಲ್ಲ. ಆದರೆ ಶೂ ಮೇಲಿನ ಬರಹ ಹಾಗೂ ಅಶಿಸ್ತುಗಳಿಂದ ಈ ಮೂವರು ಆಟಗಾರರ ಮೇಲೆ ನಿಷೇಧ ಹೇರಲಾಗಿತ್ತು. ಇವರಲ್ಲಿ ಇಬ್ಬರು ಆಸ್ಟ್ರೇಲಿಯನ್ನರಾದರೆ, ಒಬ್ಬರು ಇಂಗ್ಲೆಂಡ್​ನ ಕ್ರಿಕೆಟಿಗ. ಹೀಗೆ ಶೂ ಕಾರಣದಿಂದ ನಿಷೇಧಕ್ಕೊಳಗಾದ ಮೂವರು ಆಟಗಾರರ ಕಿರು ಪರಿಚಯ ಇಲ್ಲಿದೆ…

ಜಾನ್ ಬೆನಾಡ್: ಶೂ ಸಮಸ್ಯೆಯಿಂದಾಗಿ ನಿಷೇಧ ಎದುರಿಸಿದ ಆಟಗಾರರಲ್ಲಿ ಆಸ್ಟ್ರೇಲಿಯಾದ ಜಾನ್ ಬೆನಾಡ್ ಮೊದಲಿಗರು. ಅವರು ಪ್ರಸಿದ್ಧ ಆಸ್ಟ್ರೇಲಿಯಾದ ಕ್ರಿಕೆಟಿಗ ರಿಚಿ ಬೆನಾಡ್ ಅವರ ಕಿರಿಯ ಸಹೋದರ. 1970 ರಲ್ಲಿ  ಆಸ್ಟ್ರೇಲಿಯಾ ಪರ ಕಣಕ್ಕಿಳಿದಾಗ ವಿಭಿನ್ನ ಶೂ ಧರಿಸಿದ್ದಕ್ಕಾಗಿ ಜಾನ್ ಅವರನ್ನು 2 ಪಂದ್ಯಗಳಿಂದ ನಿಷೇಧಿಸಲಾಗಿತ್ತು.

ಉಸ್ಮಾನ್ ಖ್ವಾಜಾ: ಡಿಸೆಂಬರ್ 2023 ರಲ್ಲಿ, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಕೂಡ ಶೂಗಳ ಕಾರಣದಿಂದಾಗಿ ನಿಷೇಧಕ್ಕೊಳಗಾಗಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸಮಯದಲ್ಲಿ ಅವರು ತಮ್ಮ ಶೂಗಳ ಮೇಲೆ ‘ಎಲ್ಲಾ ಜೀವಗಳು ಸಮಾನ’ ಹಾಗೂ ಸ್ವಾತಂತ್ರ್ಯ ಮಾನವ ಹಕ್ಕು ಎಂದು ಗಾಝ ಹೋರಾಟವನ್ನು ಬೆಂಬಲಿಸಿ ಬರಹಗಳನ್ನು ಬರೆದುಕೊಂಡಿದ್ದರು. ಹೀಗಾಗಿ ಉಸ್ಮಾನ್ ಖ್ವಾಜಾ ಅವರನ್ನು ಒಂದು ಪಂದ್ಯದಿಂದ ನಿಷೇಧಿಸಲಾಗಿತ್ತು.

ಮೊಯೀನ್ ಅಲಿ: ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಅವರಿಗೂ ಮೊದಲು, ಇಂಗ್ಲೆಂಡ್‌ನ ಮೊಯೀನ್ ಅಲಿ ಕೂಡ ತಮ್ಮ ಶೂಗಳ ಮೇಲೆ ಇದೇ ರೀತಿಯ ಘೋಷಣೆಯೊಂದಿಗೆ ಮೈದಾನಕ್ಕಿಳಿದಿದ್ದರು. 2014 ರಲ್ಲಿ ಭಾರತ ವಿರುದ್ಧದ ಟೆಸ್ಟ್ ಪಂದ್ಯದ ಸಮಯದಲ್ಲಿ, ಅವರು ತಮ್ಮ ಶೂಗಳ ಮೇಲೆ ‘ಸೇವ್ ಗಾಝ’ ಮತ್ತು ‘ಫ್ರೀ ಪ್ಯಾಲೆಸ್ಟೈನ್’ ಎಂದು ಬರೆದುಕೊಂಡು ಮೈದಾನಕ್ಕೆ ಪ್ರವೇಶಿಸಿದ್ದರು. ಹೀಗಾಗಿ ಅವರ ಮೇಲೆ ನಿಷೇಧ ಹೇರಲಾಗಿತ್ತು.

ಇದನ್ನೂ ಓದಿ: IPL 2025: ಮುಂದಿನ ಪಂದ್ಯಕ್ಕೆ RCB ನಾಯಕನೇ ಅಲಭ್ಯ..!

ಮೂವರು ಆಟಗಾರರ ಕ್ರಿಕೆಟ್ ವೃತ್ತಿಜೀವನ:

ಶೂ ಕಾರಣದಿಂದ ನಿಷೇಧಕ್ಕೊಳಗಾಗಿರುವ ಈ ಮೂವರು ಆಟಗಾರರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಜಾನ್ ಬೆನಾಡ್ ಆಸ್ಟ್ರೇಲಿಯಾ ಪರ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇನ್ನು ಉಸ್ಮಾನ್ ಖ್ವಾಜಾ ಆಸ್ಟ್ರೇಲಿಯಾ ಪರ ಇದುವರೆಗೆ 80 ಟೆಸ್ಟ್, 40 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹಾಗೆಯೇ ಮೊಯೀನ್ ಅಲಿ ಇಂಗ್ಲೆಂಡ್ ಪರ 68 ಟೆಸ್ಟ್, 138 ಏಕದಿನ ಮತ್ತು 92 ಟಿ20 ಪಂದ್ಯಗಳನ್ನು ಆಡಿದ್ದಾರೆ.

Published On - 12:42 pm, Sun, 11 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ