
ಪ್ರಸ್ತುತ ಕ್ರಿಕೆಟ್ನ ಅತ್ಯಂತ ಜನಪ್ರಿಯ ಸ್ವರೂಪವೆಂದರೆ T20. ಆದರೆ ಚಿಕ್ಕ ಸ್ವರೂಪದ ವಿಷಯದಲ್ಲಿ ಕ್ರಿಕೆಟ್ ಟಿ20ಗೆ ಸೀಮಿತವಾಗಿಲ್ಲ. ಟಿ10 ಲೀಗ್ ಕೂಡ ಇದೆ. ಅದೂ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಆದರೆ, ಟಿ20 ಕ್ರಿಕೆಟ್ ಮಧ್ಯೆ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡಲು ಹೊಸ ಕ್ರಿಕೆಟ್ ಲೀಗ್ ಬರುತ್ತಿದೆ.ಹೌದು ಕೇವಲ 60 ಎಸೆತಗಳ ಕ್ರಿಕೆಟ್ ಲೀಗ್ (Sixty Ball League) ಒಂದು ಆರಂಭವಾಗುತ್ತಿದೆ. ಕ್ರಿಕೆಟ್ ವೆಸ್ಟ್ ಇಂಡೀಸ್, ಕೆರಿಬಿಯನ್ ಪ್ರೀಮಿಯರ್ ಲೀಗ್ನ ಸಂಘಟಕರು ಈ ಹೊಸ 60 ಬಾಲ್ ಲೀಗ್ ಅನ್ನು ಒಟ್ಟಿಗೆ ಪ್ರಾರಂಭಿಸಲಿದ್ದಾರೆ. ಸಿಕ್ಸ್ಟಿ ಬಾಲ್ ಲೀಗ್ ಎಂದು ಈ ಲೀಗ್ಗೆ ಹೆಸರಿಡಲಾಗಿದೆ. ಕೆರಿಬಿಯನ್ ಲೆಜೆಂಡ್ ಕ್ರಿಸ್ ಗೇಲ್ (Chris Gayle) ಬ್ರಾಂಡ್ ಅಂಬಾಸಿಡರ್ (brand ambassador) ಆಗಿ ಲೀಗ್ಗೆ ಸೇರ್ಪಡೆಗೊಂಡಿದ್ದಾರೆ.
ಈ 60 ಬಾಲ್ ಲೀಗ್ ಕುರಿತು ದೊಡ್ಡ ಘೋಷಣೆ ಇಂದು ಬುಧವಾರ ಮಾಡಲಾಗುವುದು. ಸಿಕ್ಸ್ಟಿ ಬಾಲ್ ಲೀಗ್ನ ಪ್ರೋಮೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಕೆರಿಬಿಯನ್ ಸ್ಟಾರ್ ಕ್ರಿಕೆಟಿಗ ಕ್ರಿಸ್ ಗೇಲ್ ಈ ಲೀಗ್ ಬಗ್ಗೆ ಅಪ್ ಡೇಟ್ ನೀಡಿದ್ದಾರೆ. ಈ ಹೊಸ ಲೀಗ್ ಕ್ರಿಕೆಟ್ ಅಭಿಮಾನಿಗಳನ್ನು ಎಷ್ಟು ರಂಜಿಸಬಲ್ಲದು ಎಂಬುದನ್ನು ಕಾಲವೇ ಹೇಳಬೇಕು. ಆದಾಗ್ಯೂ, 60 ಎಸೆತಗಳ ಲೀಗ್ ಅನ್ನು ನೋಡಲು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ವಿಭಿನ್ನ ಉತ್ಸಾಹದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ತಂಡದ ಮಾಜಿ ಓಪನರ್ ಕ್ರಿಸ್ ಗೇಲ್ ಭೇಟಿಯಾದ ವಿಜಯ್ ಮಲ್ಯ; ನೆಟ್ಟಿಗರ ರಿಯಾಕ್ಷನ್ ಹೇಗಿದೆ ಗೊತ್ತಾ?
ಕೆರಿಬಿಯನ್ ದಂತಕಥೆ ಕ್ರಿಸ್ ಗೇಲ್ ಆಡುತ್ತಾರಾ?
ಸಿಕ್ಸ್ಟಿ ಬಾಲ್ ಲೀಗ್ ನಿಯಮಗಳೇನು, ಈ ಟೂರ್ನಿ ಯಾವಾಗ ಆರಂಭವಾಗಲಿದೆ ಎಂಬುದು ಸದ್ಯದಲ್ಲೇ ತಿಳಿಯಲಿದೆ. ಈ ಹೊಸ ಲೀಗ್ನ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಸ್ ಗೇಲ್ ಅವರನ್ನು ಸೇರಿಸುವುದರೊಂದಿಗೆ, ಕ್ರಿಕೆಟ್ ವೆಸ್ಟ್ ಇಂಡೀಸ್ ಮತ್ತು ಸಿಪಿಎಲ್ ಸಂಘಟಕರು ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸಲು ಮುಂದಾಗಲಿದ್ದಾರೆ. ಆದರೆ, ಗೇಲ್ ಈ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಆದಾಗ್ಯೂ, ಗೇಲ್ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯನ್ನು ಈ 60 ಎಸೆತಗಳ ಲೀಗ್ನಲ್ಲಿ ಫೋರ್-ಸಿಕ್ಸರ್ಗಳ ಅಬ್ಬರದೊಂದಿಗೆ ಕಾಣಬಹುದು ಎಂದು ಊಹಿಸಲು ಪ್ರಾರಂಭಿಸಿದ್ದಾರೆ.
Published On - 6:25 pm, Wed, 22 June 22