IPL 2024: ಆರ್​ಸಿಬಿ ಅಭಿಮಾನಿಗಳ ವಿರುದ್ಧ ಆರೋಪಗಳ ಸುರಿಮಳೆಗೈದ ಸಿಎಸ್​ಕೆ ಫ್ಯಾನ್ಸ್

IPL 2024: ತಂಡ ಗೆದ್ದ ಬಳಿಕ ಆರ್​ಸಿಬಿ ಅಭಿಮಾನಿಗಳು ರಾತ್ರಿ ಇಡೀ ಸಂಭ್ರಮಾಚರಣೆ ನಡೆಸಿದ್ದರು. ಇತ್ತ ಪ್ಲೇಆಫ್​ ರೇಸ್​ನಿಂದ ಹೊರಬಿದ್ದ ಸಿಎಸ್​ಕೆ ನಿರಾಸೆಯೊಂದಿಗೆ ಲೀಗ್​ಗೆ ವಿದಾಯ ಹೇಳಿದರೆ, ಈ ತಂಡದ ಅಭಿಮಾನಿಗಳು ಇದೀಗ ಆರ್​ಸಿಬಿ ಅಭಿಮಾನಿಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.​

IPL 2024: ಆರ್​ಸಿಬಿ ಅಭಿಮಾನಿಗಳ ವಿರುದ್ಧ ಆರೋಪಗಳ ಸುರಿಮಳೆಗೈದ ಸಿಎಸ್​ಕೆ ಫ್ಯಾನ್ಸ್
ಸಿಎಸ್​ಕೆ ಫ್ಯಾನ್ಸ್
Follow us
ಪೃಥ್ವಿಶಂಕರ
|

Updated on:May 19, 2024 | 5:25 PM

ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) 17ನೇ ಆವೃತ್ತಿಯ ಐಪಿಎಲ್​ನ (IPL 2024) ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಸುಮಾರು 3 ವಾರಗಳ ಹಿಂದೆ ಆರ್​ಸಿಬಿ, 8 ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ 10 ತಂಡಗಳ ಪೈಕಿ ಕೊನೆಯ ಸ್ಥಾನದಲ್ಲಿತ್ತು. ಅಲ್ಲದೆ ಸತತ 6 ಸೋಲು ಕಂಡಿದ್ದ ಆರ್​ಸಿಬಿ ಲೀಗ್​ ಹಂತದಲ್ಲೇ ಟೂರ್ನಿಯಿಂದ ಹೊರಬೀಳುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಆ ನಂತರ ಆರ್​ಸಿಬಿ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್​ಗೆ ಲಗ್ಗೆ ಇಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದು ತಂಡಕ್ಕೆ ಮಾತ್ರವಲ್ಲ, ಆರ್​ಸಿಬಿಯ ಕೋಟ್ಯಾಂತರ ಅಭಿಮಾನಿಗಳಿಗೂ ಮರೆಯದ ಕ್ಷಣವಾಗಿದೆ. ಹೀಗಾಗಿ ತಂಡ ಗೆದ್ದ ಬಳಿಕ ಆರ್​ಸಿಬಿ ಅಭಿಮಾನಿಗಳು ರಾತ್ರಿ ಇಡೀ ಸಂಭ್ರಮಾಚರಣೆ ನಡೆಸಿದ್ದರು. ಇತ್ತ ಪ್ಲೇಆಫ್​ ರೇಸ್​ನಿಂದ ಹೊರಬಿದ್ದ ಸಿಎಸ್​ಕೆ (CSK) ನಿರಾಸೆಯೊಂದಿಗೆ ಲೀಗ್​ಗೆ ವಿದಾಯ ಹೇಳಿದರೆ, ಈ ತಂಡದ ಅಭಿಮಾನಿಗಳು ಇದೀಗ ಆರ್​ಸಿಬಿ ಅಭಿಮಾನಿಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.​

ಫ್ಯಾನ್ಸ್ ವಾರ್

ವಾಸ್ತವವಾಗಿ ನಿನ್ನೆಯ ಪಂದ್ಯ ಬೆಂಗಳೂರಿನಲ್ಲೇ ನಡೆದರೂ ಎರಡು ತಂಡಗಳ ಆಟಗಾರರು ಭಾರಿ ಪ್ರಮಾಣದಲ್ಲಿ ಪಂದ್ಯವನ್ನು ವೀಕ್ಷಿಸಲು ಬಂದಿದ್ದರು. ಈ ಇಬ್ಬರ ಮುಖಾಮುಖಿಯಾದಾಗಲೆಲ್ಲ ಉಭಯ ತಂಡಗಳ ಅಭಿಮಾನಿಗಳ ನಡುವೆ ಮಾತಿನ ಚಕಮಕಿ, ಪರಸ್ಪರ ಹೀಯಾಳಿಸುವ ಘಟನೆಗಳು ನಡೆಯುವುದು ಸಹಜ. ಅದು ಬೆಂಗಳೂರೇ ಆಗಿರಲಿ, ಚೆನ್ನೈ ಆಗಿರಲಿ, ಎರಡೂ ತಂಡಗಳ ಅಭಿಮಾನಿಗಳ ನಡುವೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಅಭಿಮಾನಿಗಳ ಕಾಳಗದಿಂದ ತೊಂದರೆಗೊಳಗಾದವರು ಪಂದ್ಯ ಮುಗಿದ ಬಳಿಕ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಳನ್ನು ತೊಡಿಕ್ಕೊಳುವುದನ್ನು ನಾವು ನೋಡಿದ್ದೇವೆ.

ಆರ್​ಸಿಬಿ ಫ್ಯಾನ್ಸ್ ವಿರುದ್ಧ ಗಂಭೀರ ಆರೋಪ

ಇದೀಗ ನಿನ್ನೆಯ ಪಂದ್ಯದಲ್ಲೂ ಈ ರೀತಿಯ ಘಟನೆ ನಡೆದಿರುವುದಾಗಿ ಸಿಎಸ್​ಕೆ ಅಭಿಮಾನಿಗಳು, ಆರ್​ಸಿಬಿ ಅಭಿಮಾನಿಗಳ ವಿರುದ್ಧ ಸಾಕಷ್ಟು ಆರೋಪಗಳನ್ನು ಹೊರಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಹಾಗೂ ಸುತ್ತಮುತ್ತ ಸಿಎಸ್​ಕೆ ಜೆರ್ಸಿ ತೊಟ್ಟವರಿಗೆ ಸಾಕಷ್ಟು ತೊಂದರೆ ನೀಡಲಾಗುತ್ತಿದೆ. ಆರ್​ಸಿಬಿ ಅಭಿಮಾನಿಗಳು, ಸಿಎಸ್​ಕೆ ಅಭಿಮಾನಿಗಳನ್ನು ನಿಂದಿಸುತ್ತಿದ್ದಾರೆ. ಕಂಠಪೂರ್ತಿ ಕುಡಿದು ದಾರಿಯಲ್ಲಿ ವೇಗವಾಗಿ ವಾಹನಗಳನ್ನು ಓಡಿಸುತ್ತಾ ದಾರಿಯಲ್ಲಿ ಹೊಗುತ್ತಿದ್ದ ಸಿಎಸ್​ಕೆ ಅಭಿಮಾನಿಗಳನ್ನು ಹೆದರಿಸುತ್ತಿದ್ದಾರೆ ಎಂದು ಅನ್ನಿ ಸ್ಟೀವ್ ಎಂಬ ಬಳಕೆದಾರರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಕೆಲವರು, ಆರ್​ಸಿಬಿ ಅಭಿಮಾನಿಗಳು ನಮ್ಮನ್ನು ರಸ್ತೆಯಲ್ಲೇ ಸಿಎಸ್​ಕೆ ಜೆರ್ಸಿ ತೆಗೆಯುವಂತೆ ಬೆದರಿಸಿದರು. ಇವರು ಮನುಷ್ಯರೇ ಅಲ್ಲ, ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ನಾವು ಕ್ರೀಡಾಂಗಣದಿಂದ ಹೊರ ನಡೆಯುತ್ತಿರುವಾಗಿ ಆರ್​ಸಿಬಿ ಅಭಿಮಾನಿಗಳು ನಮ್ಮನ್ನು ಕಂಡು ಜೋರಾಗಿ ಕಿರುಚುತ್ತಿದ್ದರು. ನಾವು ಭಯದಿಂದ ಕ್ಯಾಬ್ ಹತ್ತಿ ಮನೆಯತ್ತ ಹೊರಟೆವು ಎಂದು ಬರೆದುಕೊಂಡಿದ್ದಾರೆ.

ಇದೆಲ್ಲದರ ನಡುವೆಯೂ ಕೆಲವು ಆರ್​ಸಿಬಿ ಅಭಿಮಾನಿಗಳು ನಮ್ಮ ರಕ್ಷಣೆಗೆ ಬಂದರು ಮತ್ತು ಸುರಕ್ಷಿತವಾಗಿ ನಾವು ಅಲ್ಲಿಂದ ತೆರಳಲು ನಮಗೆ ಸಹಾಯ ಮಾಡಿದರು ಎಂದು ಇನ್ನೊಬ್ಬ ನೆಟ್ಟಿಗ ಬರೆದುಕೊಂಡಿದ್ದಾನೆ.

ಯಾವ ದೂರ ಬಂದಿಲ್ಲ ಎಂದ ಪೊಲೀಸ್

ಆದಾಗ್ಯೂ, ಸಿಎಸ್​ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆರ್​ಸಿಬಿ ಅಭಿಮಾನಿಗಳ ವಿರುದ್ಧ ಆರೋಪ ಹೊರಿಸಿದ್ದರಾದರೂ, ಈ ಬಗ್ಗೆ ಯಾವುದೇ ಪ್ರಕರಣಗಳು ಅಥವಾ ದೂರುಗಳು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈ ರೀತಿಯಾಗಿ ತೊಂದರೆಗೆ ಒಳಗಾದವರು  112 ಗೆ ಕರೆ ಮಾಡುವಂತೆ ಕೇಳಿಕೊಂಡಿದ್ದಾರೆ.

ಧನ್ಯವಾದ ತಿಳಿಸಿದ ಸಿಎಸ್​ಕೆ

ಏತನ್ಮಧ್ಯೆ, ಸಿಎಸ್​ಕೆ ತಂಡವನ್ನು ಬೆಂಬಲಿಸಲು ಬಂದಿದ್ದ ತನ್ನ ಅಭಿಮಾನಿಗಳಿಗೆ ಸಿಎಸ್​ಕೆ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದ್ದು, ‘ಇಂದು ಬೆಂಗಳೂರಿಗೆ ಬಂದು ನಮ್ಮನ್ನು ಬೆಂಬಲಿಸಿದ ನಮ್ಮ ಅಭಿಮಾನಿಗಳಿಗೆ, ನೀವು ಸುರಕ್ಷಿತವಾಗಿ ಮನೆಗೆ ತಲುಪಿದ್ದೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದೆ.

Published On - 5:22 pm, Sun, 19 May 24

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ