SRH vs PBKS Highlights, IPL 2024: ಪಂಜಾಬ್ ವಿರುದ್ಧ ಗೆದ್ದ ಹೈದರಾಬಾದ್
Sunrisers Hyderabad vs Punjab Kings Highlights in Kannada: ಐಪಿಎಲ್ 2024ರ 69ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತು. ಉತ್ತರವಾಗಿ ಸನ್ ರೈಸರ್ಸ್ 19.1 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಐಪಿಎಲ್ 2024ರ 69ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಇದಾದ ಬಳಿಕ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡವು ಅತ್ಯಂತ ಕಳಪೆ ಆರಂಭ ಪಡೆದರೂ ಅಭಿಷೇಕ್ ಶರ್ಮಾ ಅವರ 66 ಹಾಗೂ ಹೆನ್ರಿಚ್ ಕ್ಲಾಸೆನ್ ಅವರ 42 ರನ್‌ಗಳ ನೆರವಿನಿಂದ 4 ವಿಕೆಟ್ಗಳ ಜಯ ಸಾಧಿಸಿತು.
LIVE NEWS & UPDATES
-
ಹೈದರಾಬಾದ್‌ಗೆ ಸುಲಭ ಜಯ
ಐಪಿಎಲ್ 2024ರ 69ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತು. ಉತ್ತರವಾಗಿ ಸನ್ ರೈಸರ್ಸ್ 19.1 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
-
16 ಓವರ್ ಪೂರ್ಣ
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 215 ರನ್‌ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 16 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ.
-
ನಿತೀಶ್ ಕುಮಾರ್ ರೆಡ್ಡಿ ಔಟ್
ಸನ್‌ರೈಸರ್ಸ್ ಹೈದರಾಬಾದ್ 176 ರನ್ ಗಳಿಸುವಷ್ಟರಲ್ಲಿ ನಿತೀಶ್ ಕುಮಾರ್ ರೆಡ್ಡಿ ರೂಪದಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಹೈದರಾಬಾದ್ ಗೆಲುವಿಗೆ ಕೊನೆಯ 6 ಓವರ್‌ಗಳಲ್ಲಿ ಇನ್ನೂ 39 ರನ್ ಗಳಿಸಬೇಕಿದೆ.
ಅಭಿಷೇಕ್ ಶರ್ಮಾ ಔಟ್
11ನೇ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಮೂರನೇ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 66 ರನ್ ಗಳಿಸಿ ಔಟಾದರು.
11 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ ಮೂರು ವಿಕೆಟ್‌ಗೆ 134 ರನ್ ಆಗಿದೆ. ಗೆಲುವಿಗೆ 54 ಎಸೆತಗಳಲ್ಲಿ 81 ರನ್‌ಗಳ ಅಗತ್ಯವಿದೆ.
ಅಭಿಷೇಕ್ ಅರ್ಧಶತಕ
ಒಂಬತ್ತು ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎರಡು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿದೆ. ಗೆಲುವಿಗೆ 66 ಎಸೆತಗಳಲ್ಲಿ 105 ರನ್‌ಗಳ ಅಗತ್ಯವಿದೆ. ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ ಐಪಿಎಲ್ ವೃತ್ತಿಜೀವನದ ಏಳನೇ ಅರ್ಧಶತಕ ದಾಖಲಿಸಿದರು.
ಎರಡನೇ ವಿಕೆಟ್
ಐದನೇ ಓವರ್‌ನಲ್ಲಿ ಹೈದರಾಬಾದ್ ಎರಡನೇ ವಿಕೆಟ್ ಕಳೆದುಕೊಂಡಿದೆ. ರಾಹುಲ್ ತ್ರಿಪಾಠಿ 18 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 33 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇವರಿಬ್ಬರ ನಡುವೆ 72 ರನ್‌ಗಳ ಜೊತೆಯಾಟವಿತ್ತು.
4 ಓವರ್‌ಗಳಲ್ಲಿ 50 ರನ್
ಪಂಜಾಬ್ ಕಿಂಗ್ಸ್ ವಿರುದ್ಧದ 215 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 4 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 50 ರನ್ ಗಳಿಸಿದೆ. ಅಭಿಷೇಕ್ ಶರ್ಮಾ 21 ರನ್ ಗಳಿಸಿ ಆಡುತ್ತಿದ್ದರೆ, ರಾಹುಲ್ ತ್ರಿಪಾಠಿ 24 ರನ್ ಗಳಿಸಿ ಆಡುತ್ತಿದ್ದಾರೆ.
ಮೊದಲ ಎಸೆತದಲ್ಲೇ ಹೈದರಾಬಾದ್‌ಗೆ ಆಘಾತ
ಸನ್‌ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಆಘಾತ ಅನುಭವಿಸಿತು. ಅರ್ಷದೀಪ್ ಸಿಂಗ್ ಟ್ರಾವಿಸ್ ಹೆಡ್ ಅನ್ನು ಕ್ಲೀನ್ ಬೌಲ್ಡ್ ಮಾಡಿದರು.
214 ರನ್ ಟಾರ್ಗೆಟ್
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳ ಆಟದ ಅಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 214 ರನ್ ಗಳಿಸಿತು. ಪಂಜಾಬ್ ಪರ ಪ್ರಭಾಸಿಮ್ರಾನ್ ಸಿಂಗ್ 71 ರನ್, ರುಸ್ಸೋ 49 ರನ್ ಗಳಿಸಿದರು. ಹೈದರಾಬಾದ್ ಪರ ಟಿ ನಟರಾಜನ್ 2 ವಿಕೆಟ್ ಪಡೆದರೆ, ಕಮ್ಮಿನ್ಸ್ 1 ವಿಕೆಟ್ ಪಡೆದರು.
5ನೇ ವಿಕೆಟ್
ಕೇವಲ 2 ರನ್ ಗಳಿಸಿ ಅಶುತೋಷ್ ಶರ್ಮಾ ಟಿ ನಟರಾಜನ್‌ಗೆ ಬಲಿಯಾದರು.
2ನೇ ವಿಕೆಟ್ ಪತನ
15ನೇ ಓವರ್‌ನಲ್ಲಿ ಪಂಜಾಬ್ ಎರಡನೇ ವಿಕೆಟ್ ಕಳೆದುಕೊಂಡಿದೆ. ಶ್ರೀಲಂಕಾದ ಸ್ಪಿನ್ನರ್ ವಿಜಯಕಾಂತ್ ವ್ಯಾಸಕಾಂತ್ ಅವರು ಪ್ರಭಾಸಿಮ್ರನ್ ಅವರ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಭಾಸಿಮ್ರನ್ 45 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 71 ರನ್ ಗಳಿಸಿ ಔಟಾದರು. 15 ಓವರ್‌ಗಳ ನಂತರ ಪಂಜಾಬ್ ಸ್ಕೋರ್ ಎರಡು ವಿಕೆಟ್‌ಗೆ 159 ರನ್ ಆಗಿದೆ.
ಪ್ರಭಾಸಿಮ್ರಾನ್ ಅರ್ಧಶತಕ
34 ಎಸೆತಗಳಲ್ಲಿ ಪ್ರಭಾಸಿಮ್ರಾನ್ ಸಿಂಗ್ ಐಪಿಎಲ್ ವೃತ್ತಿಜೀವನದ ಮೂರನೇ ಅರ್ಧಶತಕ ದಾಖಲಿಸಿದರು. 11 ಓವರ್‌ಗಳ ನಂತರ ಪಂಜಾಬ್ ಸ್ಕೋರ್ ಒಂದು ವಿಕೆಟ್‌ಗೆ 109 ರನ್ ಆಗಿದೆ.
ಅಥರ್ವ ಔಟ್
10ನೇ ಓವರ್‌ನಲ್ಲಿ 97 ರನ್‌ಗಳಿದ್ದಾಗ ಪಂಜಾಬ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 46 ರನ್ ಗಳಿಸಿ ಅಥರ್ವ ಟೇಡೆ ಔಟಾದರು.
ಪವರ್ ಪ್ಲೇ ಅಂತ್ಯ
ಪವರ್‌ಪ್ಲೇ ಮುಗಿದಿದೆ. ಪಂಜಾಬ್ ಆರು ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 61 ರನ್ ಗಳಿಸಿದೆ. ಪ್ರಸ್ತುತ 19 ಎಸೆತಗಳಲ್ಲಿ 33 ರನ್ ಗಳಿಸಿ ಪ್ರಭಾಸಿಮ್ರಾನ್ ಸಿಂಗ್ ಮತ್ತು 17 ಎಸೆತಗಳಲ್ಲಿ 27 ರನ್ ಗಳಿಸಿ ಅಥರ್ವ ಟೈಡೆ ಕ್ರೀಸ್‌ನಲ್ಲಿದ್ದಾರೆ.
ಪಂಜಾಬ್ ಇನ್ನಿಂಗ್ಸ್ ಆರಂಭ
ಪಂಜಾಬ್ ಇನ್ನಿಂಗ್ಸ್ ಆರಂಭವಾಗಿದೆ. ಪ್ರಭುಸಿಮ್ರಾನ್ ಸಿಂಗ್ ಮತ್ತು ಅಥರ್ವ ಟೈಡೆ ಕ್ರೀಸ್‌ನಲ್ಲಿದ್ದಾರೆ. ಎರಡು ಓವರ್‌ಗಳ ನಂತರ ಪಂಜಾಬ್ ಸ್ಕೋರ್ ಯಾವುದೇ ವಿಕೆಟ್ ಇಲ್ಲದೆ 12 ರನ್ ಆಗಿದೆ.
ಸನ್‌ರೈಸರ್ಸ್ ಹೈದರಾಬಾದ್
ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಸನ್ವಿರ್ ಸಿಂಗ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ವಿಜಯಕಾಂತ್ ವ್ಯಾಸಕಾಂತ್, ಟಿ ನಟರಾಜನ್.
ಪಂಜಾಬ್ ಕಿಂಗ್ಸ್
ಪ್ರಭ್‌ಸಿಮ್ರಾನ್ ಸಿಂಗ್, ಅಥರ್ವ ಟೇಡೆ, ರಿಲೆ ರೂಸೋ, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆ/ನಾಯಕ), ಅಶುತೋಷ್ ಶರ್ಮಾ, ಶಿವಂ ಸಿಂಗ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ಹರ್ಷಲ್ ಪಟೇಲ್, ರಾಹುಲ್ ಚಾಹರ್.
ಟಾಸ್ ಗೆದ್ದ ಪಂಜಾಬ್
ಟಾಸ್ ಗೆದ್ದ ಪಂಜಾಬ್ ನಾಯಕ ಜಿತೇಶ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - May 19,2024 3:01 PM