
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 ರ 29 ನೇ ಪಂದ್ಯದಲ್ಲಿ ಆತಿಥೇಯ ಮುಂಬೈ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಲೀಗ್ನಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಸಿಎಸ್ಕೆ ಪರ ರುತುರಾಜ್ ಗಾಯಕ್ವಾಡ್ ಹಾಗೂ ಶಿವಂ ದುಬೆ ಅರ್ಧಶತಕ ಸಿಡಿಸಿ ತಂಡವನ್ನು 200 ರ ಗಡಿ ದಾಟುವಂತೆ ಮಾಡಿದರು. ಈ ಗುರಿ ಬೆನ್ನಟ್ಟಿದ ಮುಂಬೈ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಲಷ್ಟೇ ಶಕ್ತವಾಗಿ 20 ರನ್‌ಗಳಿಂದ ಸೋಲೊಪ್ಪಿಕೊಂಡಿತು. ತಂಡದ ಪರ ಮಾಜಿ ನಾಯಕ ರೋಹಿತ್ ಶರ್ಮಾ ಶತಕ ಸಿಡಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ರೋಹಿತ್ ಶರ್ಮಾ ಶತಕದ ನಡುವೆಯೂ ಮುಂಬೈಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಚೆನ್ನೈ ತಂಡ ಮುಂಬೈ ತಂಡವನ್ನು 20 ರನ್‌ಗಳಿಂದ ಸೋಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಎರಡನೇ ಶತಕ ದಾಖಲಿಸಿದರು. 61 ಎಸೆತಗಳಲ್ಲಿ ಶತಕ ಪೂರೈಸಿದ ರೋಹಿತ್, 11 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಅಂತ್ಯಗೊಳಿಸಿದರು.
ಪತಿರಾನ ಮುಂಬೈನ ಆರನೇ ವಿಕೆಟ್ ಉರುಳಿಸಿದ್ದಾರೆ. ಅವರು ರೊಮಾರಿಯೊ ಶೆಫರ್ಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಸದ್ಯ ರೋಹಿತ್ ಶರ್ಮಾ 86 ರನ್ ಗಳಿಸಿದ್ದು, ಮೊಹಮ್ಮದ್ ನಬಿ ಖಾತೆ ತೆರೆಯದೆ ಕ್ರೀಸ್ ನಲ್ಲಿದ್ದಾರೆ. ತಂಡದ ಗೆಲುವಿಗೆ 13 ಎಸೆತಗಳಲ್ಲಿ 49 ರನ್‌ಗಳ ಅಗತ್ಯವಿದೆ.
ಟಿಮ್ ಡೇವಿಡ್ ರೂಪದಲ್ಲಿ ಮುಂಬೈ 5ನೇ ವಿಕೆಟ್ ಕಳೆದುಕೊಂಡಿದೆ. ಸತತ ಎರಡು ಸಿಕ್ಸರ್ ಬಾರಿಸಿದ ನಂತರ ಡೇವಿಡ್ ವಿಕೆಟ್ ಒಪ್ಪಿಸಿದರು. ಸದ್ಯ ರೋಹಿತ್ ಶರ್ಮಾ ಮತ್ತು ರೊಮಾರಿಯೊ ಶೆಫರ್ಡ್ ಕ್ರೀಸ್‌ನಲ್ಲಿದ್ದಾರೆ. ತಂಡದ ಗೆಲುವಿಗೆ 18 ಎಸೆತಗಳಲ್ಲಿ 53 ರನ್‌ಗಳ ಅಗತ್ಯವಿದೆ.
ತುಷಾರ್ ದೇಶಪಾಂಡೆ ಬೌಲಿಂಗ್ನಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಆರು ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿ ಔಟಾದರು. ಈ ಪಂದ್ಯ ಮುಂಬೈನ ಕೈಯಿಂದ ಜಾರಿದಂತಿದೆ. ತಂಡದ ಗೆಲುವಿಗೆ 27 ಎಸೆತಗಳಲ್ಲಿ 73 ರನ್‌ಗಳ ಅಗತ್ಯವಿದೆ.
ತಿಲಕ್ ವರ್ಮಾ ರೂಪದಲ್ಲಿ ಮುಂಬೈ ಮೂರನೇ ವಿಕೆಟ್ ಕಳೆದುಕೊಂಡಿದೆ. ತಿಲಕ್ ಐದು ಬೌಂಡರಿಗಳ ಸಹಾಯದಿಂದ 31 ರನ್ ಗಳಿಸಿದರು. ಮೂರನೇ ವಿಕೆಟ್‌ಗೆ ರೋಹಿತ್ ಶರ್ಮಾ ಜೊತೆ 60 ರನ್‌ಗಳ ಜೊತೆಯಾಟ ನಡೆಸಿದರು. ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
207 ರನ್ ಗುರಿ ಬೆನ್ನಟ್ಟಿರುವ ಮುಂಬೈ 13 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 124 ರನ್ ಕಲೆಹಾಕಿದೆ. ರೋಹಿತ್ ಶರ್ಮಾ 75 ರನ್ ಹಾಗೂ ತಿಲಕ್ ವರ್ಮಾ 26 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದು, ಈ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ದಾಖಲಿಸಿದ್ದಾರೆ. ಇದುವರೆಗೆ ಅವರ ಬ್ಯಾಟ್‌ನಿಂದ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಬಂದಿವೆ. ಇದು ಅವರ ಐಪಿಎಲ್ ವೃತ್ತಿಜೀವನದ 43ನೇ ಅರ್ಧಶತಕವಾಗಿದೆ. ಒಂಬತ್ತು ಓವರ್‌ಗಳ ನಂತರ ತಂಡದ ಸ್ಕೋರ್ 81/2.
ಮುಂಬೈ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿದೆ. ತಂಡದ ಪರ ನಾಯಕ ರುತುರಾಜ್ 69 ರನ್ ಹಾಗೂ ಶಿವಂ ದುಬೆ 66 ರನ್ ಸಿಡಿಸಿ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು.
ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ 69 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ಬಲಿಯಾಗಿದ್ದಾರೆ. ರುತುರಾಜ್, ಶಿವಂ ದುಬೆ ಅವರೊಂದಿಗೆ ಮೂರನೇ ವಿಕೆಟ್‌ಗೆ 90 ರನ್‌ಗಳ ಬೃಹತ್ ಜೊತೆಯಾಟ ನಡೆಸಿದರು. ಡೇರಿಲ್ ಮಿಚೆಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 16 ಓವರ್‌ಗಳ ನಂತರ ತಂಡದ ಸ್ಕೋರ್ 151/3.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಾಯಕ ರುತುರಾಜ್ ಗಾಯಕ್ವಾಡ್ ಅಮೋಘ ಅರ್ಧಶತಕ ಬಾರಿಸಿದ್ದಾರೆ. ರುತುರಾಜ್ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು, ಶಿವಂ ದುಬೆ ಕೂಡ 27 ರನ್ ಬಾರಿಸಿ ಅಜೇಯರಾಗಿದ್ದಾರೆ. 13 ಓವರ್‌ಗಳ ನಂತರ ತಂಡದ ಸ್ಕೋರ್ 110/2
10 ಓವರ್‌ಗಳ ಆಟ ಮುಗಿದಿದೆ. ಚೆನ್ನೈ ಸ್ಕೋರ್ 80/2. ಸದ್ಯ ಗಾಯಕ್ವಾಡ್ 36 ರನ್ ಹಾಗೂ ದುಬೆ 19 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ವಿಕೆಟ್ ಕಳೆದುಕೊಂಡಿದೆ. ರಚಿನ್ ರವೀಂದ್ರ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 21 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಶಿವಂ ದುಬೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ಪವರ್‌ಪ್ಲೇ ಮುಗಿದಿದೆ. ಚೆನ್ನೈ ಒಂದು ವಿಕೆಟ್ ಕಳೆದುಕೊಂಡು 48 ರನ್ ಗಳಿಸಿದೆ. ಸದ್ಯ ರಚಿನ್ ರವೀಂದ್ರ 12 ರನ್ ಹಾಗೂ ರುತುರಾಜ್ ಗಾಯಕ್ವಾಡ್ 29 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಜೆರಾಲ್ಡ್ ಕೊಯೆಟ್ಜಿ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಅಜಿಂಕ್ಯ ರಹಾನೆಯನ್ನು ಔಟ್ ಮಾಡುವ ಮೂಲಕ ಚೆನ್ನೈಗೆ ಆಘಾತ ನೀಡಿದ್ದಾರೆ. ನಾಯಕ ರುತುರಾಜ್ ಗಾಯಕ್ವಾಡ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಎರಡು ಓವರ್‌ಗಳ ನಂತರ CSK ಸ್ಕೋರ್ 9/1
ಚೆನ್ನೈ ಇನ್ನಿಂಗ್ಸ್ ಆರಂಭವಾಗಿದೆ. ಆರಂಭಿಕರಾಗಿ ಅಜಿಂಕ್ಯ ರಹಾನೆ ಮತ್ತು ರಚಿನ್ ರವೀಂದ್ರ ಬಂದಿದ್ದಾರೆ. ರುತುರಾಜ್ ಗಾಯಕ್ವಾಡ್ ಬದಲಿಗೆ ರಹಾನೆಗೆ ಆರಂಭಿಕರಾಗಿ ಅವಕಾಶ ಸಿಕ್ಕಿದೆ.
ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಶ್ರೇಯಸ್ ಗೋಪಾಲ್, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ, ಆಕಾಶ್ ಮಧ್ವಲ್
ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರೆಹಮಾನ್.
ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:03 pm, Sun, 14 April 24