CSK vs PBKS: ಐಪಿಎಲ್​ನಲ್ಲಿಂದು ಚೆನ್ನೈ–ಪಂಜಾಬ್ ಮುಖಾಮುಖಿ: ಹ್ಯಾಟ್ರಿಕ್ ಸೋಲಿಂದ ಪಾರಾಗುತ್ತಾ ಸಿಎಸ್​​ಕೆ

IPL 2022, Chennai Super Kings vs Punjab Kings: ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೆಟ್ಟ ಆರಂಭ ಪಡೆದುಕೊಂಡರೂ ಹಾಲಿ ಚಾಂಪಿಯನ್ ಎಂಬುದು ಮರೆಯುವಂತಿಲ್ಲ. ಅನುಭವಿ ಆಟಗಾರರ ದಂಡೇ ತಂಡದಲ್ಲಿದೆ. ಯಾವ ಹಂತದಲ್ಲಿಯೂ ತಿರುಗಿ ಬೀಳುವ ಸಾಮರ್ಥ್ಯವಿರುವ ಆಟಗಾರರ ಪಡೆಯಿದೆ.

CSK vs PBKS: ಐಪಿಎಲ್​ನಲ್ಲಿಂದು ಚೆನ್ನೈ–ಪಂಜಾಬ್ ಮುಖಾಮುಖಿ: ಹ್ಯಾಟ್ರಿಕ್ ಸೋಲಿಂದ ಪಾರಾಗುತ್ತಾ ಸಿಎಸ್​​ಕೆ
CSK vs PBKS IPL 2022
Follow us
TV9 Web
| Updated By: Vinay Bhat

Updated on: Apr 03, 2022 | 8:25 AM

ಐಪಿಎಲ್​ 2022ರಲ್ಲಿಂದು (IPL 2022) ಒಂದು ಪಂದ್ಯ ನಡೆಯಲಿದ್ದು ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ (CSK vs PBKS) ಅನ್ನು ಎದುರಿಸಲಿದೆ. ಈಗಾಗಲೇ ಆಡಿರುವ ಎರಡು ಪಂದ್ಯಗಳ ಪೈಕಿ ಎರಡರಲ್ಲೂ ಮುಗ್ಗರಿಸಿರುವ ಸಿಎಸ್​ಕೆ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿ ಗೆಲುವಿನ ಖಾತೆ ತೆರೆಯುತ್ತಾ ಎಂಬುದು ನೋಡಬೇಕಿದೆ. ಇತ್ತ ಒಂದು ಸೋಲು ಒಂದು ಗೆಲುವು ಸಾಧಿಸಿರುವ ಪಂಜಾಬ್ ಕಿಂಗ್ಸ್​ಗೂ ಈ ಪಂದ್ಯ ಮಹತ್ವದ್ದಾಗಿದೆ. ಹೀಗಾಗಿ ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಚೆನ್ನೈಗೆ ಜಡೇಜಾ (Ravindra Jadeja) ನಾಯಕತ್ವ ಯಾಕೋ ವರ್ಕ್ ಆದಾಗೆ ಕಾಣಿಸುತ್ತಿಲ್ಲ. ಹೀಗಾಗಿ ಹೊಸ ಯೋಜನೆಯೊಂದಿಗೆ ಸಿಎಸ್​ಕೆ ಕಣಕ್ಕಿಳಿಯಬೇಕಾದ ಒತ್ತಡದಲ್ಲಿದೆ. ಅಲ್ಲದೆ ತಂಡದಲ್ಲಿ ಮಹತ್ವದ ಬದಲಾವಣೆ ಆಗುವ ಸಂಭವವಿದೆ. ಪಂಜಾಬ್ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಕೂಡ ಹೊಸ ಆಟಗಾರರನ್ನು ನೋಡುವ ಸಾಧ್ಯತೆ ಇದೆ.

ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೆಟ್ಟ ಆರಂಭ ಪಡೆದುಕೊಂಡರೂ ಹಾಲಿ ಚಾಂಪಿಯನ್ ಎಂಬುದು ಮರೆಯುವಂತಿಲ್ಲ. ಅನುಭವಿ ಆಟಗಾರರ ದಂಡೇ ತಂಡದಲ್ಲಿದೆ. ಯಾವ ಹಂತದಲ್ಲಿಯೂ ತಿರುಗಿ ಬೀಳುವ ಸಾಮರ್ಥ್ಯವಿರುವ ಆಟಗಾರರ ಪಡೆಯಿದೆ. ಆದರೆ, ಕಳೆದ ಬಾರಿಯ ಆರೇಂಜ್​ ಕ್ಯಾಪ್​​ ವಿನ್ನರ್​​ ರುತುರಾಜ್​ ಗಾಯಕ್ವಾಡ್​​​​ ರನ್​ ಬೇಟೆ ಆರಂಭಿಸಿಲ್ಲ ಅನ್ನುವುದು ಸಿಎಸ್​ಕೆಯ ಚಿಂತೆ. ಆದರೆ ರಾಬಿನ್​ ಉತ್ತಪ್ಪ ಡೇಂಜರಸ್​ ಆಗಿ ಆಡುತ್ತಿದ್ದಾರೆ. ಮೊಯಿನ್​​ ಅಲಿಯ ಬ್ಯಾಟಿಂಗ್​​ ಬಲ ಸಿಕ್ಕಿದೆ. ಶಿವಂ ದುಬೆ ಭಡ್ತಿ ಪಡೆದು ಬಂದು ಶಕ್ತಿ ತೋರಿಸಿದ್ದಾರೆ. ಅಂಬಟಿ ರಾಯುಡು ಕೂಡ ಸಂಕಷ್ಟದಲ್ಲಿ ಕೈ ಹಿಡಿಯುವ ಆಟಗಾರ. ಜಡೇಜಾ, ಧೋನಿ, ಬ್ರಾವೋ ಮತ್ತು ಪ್ರಿಟೋರಿಯಸ್​​ ಫಿನಿಷಿಂಗ್​​ ಟಚ್​​ ಕೊಟ್ಟರೆ ಪಂಜಾಬ್ ಸೋಲು ಕಟ್ಟಿಟ್ಟ ಬುತ್ತಿ.

ಆದರೆ ಸಿಎಸ್​ಕೆ ಬೌಲಿಂಗ್ ವಿಭಾಗ​​ ಕೊಂಚ ದುರ್ಬಲವಾಗಿದೆ​​. ದೀಪಕ್ ಚಹರ್ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಹೀಗಾಗಿ ಫಿಟ್​​ ಆಗಿರುವ ಆ್ಯಡಂ ಮಿಲ್ನೆ ತುಷಾರ್​ ದೇಶಪಾಂಡೆ ಜಾಗಕ್ಕೆ ಬರಬಹುದು. ಬ್ರಾವೋ ಮತ್ತು ಪ್ರಿಟೋರಿಯಸ್​​ ಬೌಲಿಂಗ್​​ ಶಕ್ತಿ ತೋರಿಸಿದ್ದಾರೆ. ಮೊಯಿನ್​ ಅಲಿ ಮತ್ತು ರವೀಂದ್ರ ಜಡೇಜಾ ಹೆಚ್ಚು ಬೌಲಿಂಗ್​​ ಮಾಡಿಲ್ಲ. ಆದರೆ ಅವರ ಶಕ್ತಿ ಬಗ್ಗೆ ಸಂಶಯವಿಲ್ಲ. ಇಂದಿನ ಪಂದ್ಯದಲ್ಲಿ ಸಿಎಸ್​ಕೆ ಸಂಘಟಿತ ಪ್ರದರ್ಶನ ತೋರುವ ಅಗತ್ಯವಿದೆ.

ಇತ್ತ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದು ಮತ್ತೆ ಗೆಲುವಿನ ಲಯಕ್ಕೆ ಮರಳುವ ಪ್ರಯತ್ನದಲ್ಲಿದೆ. ನಾಯಕ ಮಯಾಂಕ್​​ ಅಗರ್ವಾಲ್​​, ಶಿಖರ್​ ಧವನ್​, ಭಾನುಕಾ ರಾಜಪಕ್ಸೆ ಮಾತ್ರ ಬ್ಯಾಟಿಂಗ್​ನಲ್ಲಿ ಮಿಂಚುತ್ತಿದ್ದು, ಇದು ಎದುರಾಳಿ ಬೌಲರ್​​ಗಳಿಗಿರುವ ತಲೆನೋವು. ರಾಜ್​ಭಾವಾ, ಶಾರೂಖ್​ ಖಾನ್​​ ಮತ್ತು ಓಡಿನ್​​ ಸ್ಮಿತ್​​ ಬಿಗ್​​ ಹಿಟ್ಟಿಂಗ್​ಗೆ ಫೇಮಸ್​. ಲಿವಿಂಗ್​​ ಸ್ಟೋನ್​​ ಆಟವೂ ಬ್ಯಾಲೆನ್ಸ್​​ ಇದೆ. ಬೌಲಿಂಗ್​​ನಲ್ಲಿ ರಬಾಡಾ, ಅರ್ಶದೀಪ್​​ ಮತ್ತು ರಾಹುಲ್​​ ಚಹರ್​​ ಮೇಲೆ ಹೆಚ್ಚು ನಂಬಿಕೆಯಿದೆ. ಬ್ರಾರ್​ ಮತ್ತು ಇತರೆ ಆಲ್​​ರೌಂಡರ್​​ಗಳು ಕೈ ಜೋಡಿಸಿದರೆ ಬೌಲಿಂಗ್​ ವಿಭಾಗ ಬಲಿಷ್ಠವಾಗುತ್ತದೆ.

ಪಿಚ್ ಹೇಗಿದೆ?: ಬ್ರಬೌರ್ನ್ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟರ್ ಹಾಗೂ ಬೌಲರ್‌ ಇಬ್ಬರಿಗೂ ಸಮಾನಾಗಿ ಬೆಂಬಲ ನೀಡುವ ಪಿಚ್ ಆಗಿದೆ. ಪಂದ್ಯ ಮುಂದುವರಿಯುತ್ತಿದ್ದಂತೆ ಇಬ್ಬನಿ ಬೀಳುವ ಕಾರಣ ಎರಡನೇ ಸರದಿಯಲ್ಲಿ ಬೌಲಿಂಗ್ ತಡೆಸುವ ತಂಡಗಳು ಸವಾಲನ್ನು ಎದುರಿಸುತ್ತದೆ. ಈ ಅಂಗಳದಲ್ಲಿಮ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 180 ಆಗಿದೆ. ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ ಅರ್ಧ ಪಂದ್ಯ ಗೆದ್ದಂತೆ ಎನ್ನಬಹುದು.

ಮುಖಾಮುಖಿ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 25 ಮುಖಾಮುಖಿ ಪಂದ್ಯಗಳು ನಡೆದಿದ್ದು, ಈ ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಪಂಜಾಬ್ ಕಿಂಗ್ಸ್ ಉಳಿದ 10 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಇತ್ತಂಡಗಳ ನಡುವಿನ ಮುಖಾಮುಖಿ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸ್ಪಷ್ಟ ಮೇಲುಗೈಯನ್ನು ಸಾಧಿಸಿದೆ.

ಸಿಎಸ್​ಕೆ ಸಂಭಾವ್ಯ ಇಲೆವೆನ್: ರುತುರಾಜ್ ಗಾಯಕ್‌ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಧೋನಿ (ವಿಕೆಟ್ ಕೀಪರ್),ರವೀಂದ್ರ ಜಡೇಜಾ, ಡ್ವೈನ್ ಪ್ರಿಟೋರಿಯಸ್, ಡ್ವೇನ್ ಬ್ರಾವೋ, ಮುಕೇಶ್ ಚೌಧರಿ, ಕೆಎಂ ಆಸಿಫ್.

ಪಂಜಾಬ್ ಸಂಭಾವ್ಯ ಇಲೆವೆನ್: ಮಯಾಂಕ್ ಅಗರ್ವಾಲ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್ಸ್ಟೋನ್, ಪ್ರಭ್​ಸಿಮ್ರಾನ್ ಸಿಂಗ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಹರ್, ಅರ್ಷದೀಪ್ ಸಿಂಗ್.

GT vs DC: ಹಾರ್ದಿಕ್ ಬೊಂಬಾಟ್ ನಾಯಕತ್ವ: ಪದಾರ್ಪಣೆ ಸೀಸನ್​ನಲ್ಲೇ ಗುಜರಾತ್ ಭರ್ಜರಿ ಆಟ