RCB vs CSK Highlights IPL 2023: ಆರ್‌ಸಿಬಿ ಸಾಂಘಿಕ ಹೋರಾಟ ವ್ಯರ್ಥ; ಚೆನ್ನೈಗೆ 8 ರನ್ ಜಯ
Chennai Super Kings vs Royal Challengers Bangalore IPL 2023 Highlights in Kannada: ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ರನ್‌ಗಳಿಂದ ಸೋಲಿಸಿತು
ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ರನ್‌ಗಳಿಂದ ಸೋಲಿಸಿತು. ಕೊನೆಯವರೆಗೂ ಗೆಲುವಿಗಾಗಿ ಹೋರಾಟ ನಡೆಸಿದ ಆರ್ಸಿಬಿಗೆ ಗೆಲುವು ದಕ್ಕಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಕಾನ್ವೇ ಹಾಗೂ ದುಬೆ ಅವರ ಅರ್ಧಶತಕದ ನೆರವಿನಿಂದ 227 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ಫಾಫ್ ಡು ಪ್ಲೆಸಿಸ್ ಹಾಗೂ ಮ್ಯಾಕ್ಸ್ವೆಲ್ ಅರ್ಧಶತಕದ ಹೋರಾಟದ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.
LIVE NEWS & UPDATES
-
ಚೆನ್ನೈಗೆ ಗೆಲುವು
ಚೆನ್ನೈ ತನ್ನ ತವರಿನಲ್ಲಿ ಬೆಂಗಳೂರು ತಂಡವನ್ನು ಎಂಟು ರನ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ ಚೆನ್ನೈ 6 ವಿಕೆಟ್ ಕಳೆದುಕೊಂಡು 226 ರನ್ ಗಳಿಸಿತ್ತು. ತವರಿನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 218 ರನ್ ಗಳಿಸಲಷ್ಟೇ ಶಕ್ತವಾಯಿತು.
-
ಪಾರ್ನೆಲ್ ಔಟ್
19ನೇ ಓವರ್‌ನ ಮೊದಲ ಎಸೆತದಲ್ಲಿ ವ್ಯಾನ್ ಪರ್ನಾಲ್ ಔಟಾದರು. ತುಷಾರ್ ದೇಶಪಾಂಡೆ ಅವರ ಮೊದಲ ಎಸೆತದಲ್ಲಿ ಪಾರ್ನೆಲ್ ಲಾಂಗ್ ಶಾಟ್ ಆಡಿದರು ಆದರೆ ಚೆಂಡು ನೇರವಾಗಿ ಲಾಂಗ್ ಆಫ್‌ನಲ್ಲಿ ನಿಂತಿದ್ದ ಶಿವಂ ದುಬೆ ಅವರ ಕೈಗೆ ಹೋಯಿತು.
-
ಶಹಬಾಜ್ ಅಹ್ಮದ್ ಔಟ್
18ನೇ ಓವರ್‌ನ ಮೊದಲ ಎಸೆತದಲ್ಲಿ ಶಹಬಾಜ್ ಅಹ್ಮದ್ ಔಟಾದರು. ಅವರು ಪತಿರಾನ ಎಸೆತದಲ್ಲಿ ದೊಡ್ಡ ಹೊಡೆತವನ್ನು ಆಡಲು ಬಯಸಿದ್ದರು ಆದರೆ ರುತುರಾಜ್ ಗಾಯಕ್ವಾಡ್ ಅವರ ಕ್ಯಾಚ್ ಪಡೆದರು.
ಕಾರ್ತಿಕ್ ಔಟ್
17ನೇ ಓವರ್‌ನ ಐದನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಔಟಾದರು. ದಿನೇಶ್ ಕಾರ್ತಿಕ್ ಅವರು ತುಷಾರ್ ದೇಶಪಾಂಡೆ ಅವರ ಶಾರ್ಟ್ ಬಾಲ್ ಅನ್ನು ಎಳೆದರು, ಟೀಕ್ಷಣ ಅವರು ಡೀಪ್ ಮಿಡ್ವಿಕೆಟ್‌ನಲ್ಲಿ ಕ್ಯಾಚ್ ಹಿಡಿದರು.
ಕಾರ್ತಿಕ್ ಬೌಂಡರಿ
16ನೇ ಓವರ್‌ನ ಮೊದಲ ಎಸೆತದಲ್ಲಿ ದಿನೇಶ್ ಕಾರ್ತಿಕ್ ಬೌಂಡರಿ ಬಾರಿಸಿದರು.
ಕಾರ್ತಿಕ್ ಸಿಕ್ಸರ್
ರವೀಂದ್ರ ಜಡೇಜಾ ಎಸೆದ 15ನೇ ಓವರ್ನಲ್ಲಿ ಕಾರ್ತಿಕ್ ನಾಲ್ಕನೇ ಎಸೆತವನ್ನು ಸ್ಕೇವರ್ ಲೆಗ್ ಕಡೆಗೆ ಸಿಕ್ಸರ್ ಹೊಡೆದರು.
ಫಾಫ್ ಡು ಪ್ಲೆಸಿಸ್ ಔಟ್
4ನೇ ಓವರ್‌ನ ಕೊನೆಯ ಎಸೆತದಲ್ಲಿ ಫಾಫ್ ಡುಪ್ಲೆಸಿ ಔಟಾದರು. ಧೋನಿ ಅದ್ಭುತ ಕ್ಯಾಚ್ ಹಿಡಿದರು.
ಶಹಬಾಜ್ ಸಿಕ್ಸರ್
ಮೊಯಿನ್ ಅಲಿ ಓವರ್ನಲ್ಲಿ ಶಹಬಾಜ್ ಅಹ್ಮದ್ ಓವರ್‌ನ ಎರಡನೇ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. ಡುಪ್ಲೆಸಿಸ್ ನಾಲ್ಕನೇ ಎಸೆತದಲ್ಲಿ ಟರ್ನ್ ಶಾಟ್‌ನೊಂದಿಗೆ ಸಿಕ್ಸರ್ ಬಾರಿಸಿದರು.
ಮ್ಯಾಕ್ಸ್ವೆಲ್ ಔಟ್
13ನೇ ಓವರ್‌ನ ಮೊದಲ ಎಸೆತದಲ್ಲೇ ಮ್ಯಾಕ್ಸ್ವೆಲ್ ಕ್ಯಾಚಿತ್ತು ಔಟಾದರು. ಮ್ಯಾಕ್ಸಿ 36 ಎಸೆತಗಳಲ್ಲಿ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಮ್ಯಾಕ್ಸಿ ಅಬ್ಬರ
ತೀಕ್ಷಣ ಎಸೆದ 11ನೇ ಓವರ್‌ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಮ್ಯಾಕ್ಸ್ವೆಲ್, ಜಡೇಜಾ ಎಸೆದ 12ನೇ ಓವರ್‌ನ ಮೊದಲ ಎಸೆತದಲ್ಲೂ ಸ್ಟ್ರೈಟ್ ಹಿಟ್ ಮಾಡಿ ಸಿಕ್ಸರ್ ಹೊಡೆದರು.
ಮ್ಯಾಕ್ಸ್ವೆಲ್ ಅರ್ಧಶತಕ
ಪತಿರಾಣಾ ಎಸೆದ 10ನೇ ಓವರ್ನಲ್ಲಿ 2 ಬೌಂಡರಿ ಬಾರಿಸಿದ ಮ್ಯಾಕ್ಸ್ವೆಲ್ ತಮ್ಮ ಅರ್ಧಶತಕ ಪೂರೈಸಿದರು. ಆ ಬಳಿಕ 5ನೇ ಎಸೆತದಲ್ಲಿ ಸಿಕ್ಸರ್ ಕೂಡ ಬಾರಿಸಿದರು.
ಜಡೇಜಾಗೆ ಸಿಕ್ಸರ್, ಫಾಫ್ ಅರ್ಧಶತಕ
9nಏ ಓವರ್ ಬೌಲ್ ಮಾಡಿದ ಜಡೇಜಾ ಅವರ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಗ್ಲೆನ್ ಆರ್‌ಸಿಬಿ ಸ್ಕೋರ್ ಅನ್ನು ಶತಕದ ಗಡಿ ದಾಟಿಸಿದರು. ಹಾಗೆಯೇ ಕೊನೆಯ ಎಸೆತದಲ್ಲಿ ಸಿಂಗಲ್ ಕದ್ದ ಫಾಫ್ ತಮ್ಮ ಅರ್ಧಶತಕ ಪೂರೈಸಿದರು.
ಮ್ಯಾಕ್ಸ್ವೆಲ್ ಸಿಕ್ಸರ್
ಜಡೇಜಾ ಎಸೆದ 7ನೇ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಆದರೆ 8ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ 1 ಬೌಂಡರಿ ಹಾಗೂ 1 ಸಿಕ್ಸರ್ ಹೊಡೆದರು.
ಪವರ್ ಪ್ಲೇ ಅಂತ್ಯ
ತೀಕ್ಷಣ ಎಸೆದ 6ನೇ ಓವರ್ನಲ್ಲಿ ಫಾಫ್ ಲಾಂಗ್ ಆಫ್‌ನಲ್ಲಿ ಸಿಕ್ಸರ್ ಬಾರಿಸಿದರೆ, ಕೊನೆಯ ಎಸೆತದಲ್ಲಿ ಮ್ಯಾಕ್ಸ್ವೆಲ್ ಕೂಡ ಒಂದು ಸಿಕ್ಸರ್ ಹೊಡೆದರು. ಪವರ್ ಪ್ಲೇ ಅಂತ್ಯಕ್ಕೆ ಆರ್‌ಸಿಬಿ 2 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿದೆ.
ಅರ್ಧಶತಕ ಪೂರ್ಣ
ಆರ್‌ಸಿಬಿ ಅರ್ಧಶತಕ ಪೂರ್ಣಗೊಂಡಿದೆ. 5ನೇ ಓವರ್‌ನ ಮೊದಲ ಎಸೆತವನ್ನು ಸ್ಟ್ರೈಟ್ ಹಿಟ್ ಸಿಕ್ಸರ್ ಬಾರಿಸಿದ ಫಾಫ್ ಆರ್‌ಸಿಬಿ ಸ್ಕೋರ್ ಅನ್ನು 50ರ ಗಡಿ ದಾಟಿಸಿದರು. ಈ ಓವರ್ನಲ್ಲಿ ಇನ್ನೂ 2 ಬೌಂಡರಿ ಬಂದವು.
ಫಾಫ್ ಸಿಕ್ಸರ್
ದೇಶಪಾಂಡೆ ಎಸೆದ 4ನೇ ಓವರ್ನಲ್ಲಿ ಆರ್‌ಸಿಬಿ ನಾಯಕ ಫಾಫ್ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಈ ಓವರ್ನಲ್ಲಿ ಒಟ್ಟು 15 ರನ್ ಬಂದವು.
ಗ್ಲೆನ್ ಸಿಕ್ಸರ್
3ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ 2 ಸಿಕ್ಸರ್ ಬಾರಿಸಿದರು. ಆರ್ಸಿಬಿಗೆ ಇಂತಹ ಬಿಗ್ ಶಾಟ್ಗಳ ತುಂಬಾ ಅವಶ್ಯಕವಾಗಿದೆ.
ಮಹಿಪಾಲ್ ಔಟ್
ಬೃಹತ್ ಗುರಿ ಬೆನ್ನತ್ತಿದ ಬೆಂಗಳೂರು ಆರಂಭದಲ್ಲೇ ಮತ್ತೊಂದು ಹಿನ್ನಡೆ ಅನುಭವಿಸಿದೆ. ಎರಡನೇ ಓವರ್‌ನಲ್ಲಿ ಮಹಿಪಾಲ್ ಲೊಮ್ರೋರ್ ಔಟಾದರು.
ಡು ಪ್ಲೆಸಿಸ್ ಬೌಂಡರಿ
ಎರಡನೇ ಓವರ್‌ನಲ್ಲಿ ಡುಪ್ಲೆಸಿಸ್ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಪಡೆದರು. ಇದು ಕ್ಯಾಚ್ ಆಗಿದ್ದರೂ, ಧೋನಿಯ ಗ್ಲೌಸ್‌ಗಳನ್ನು ದಾಟಿ ನೇರವಾಗಿ ಬೌಂಡರಿಗೆ ಹೋಯಿತು.
ಕೊಹ್ಲಿ ಔಟ್
ಮೊದಲ ಓವರ್‌ನ 4ನೇ ಎಸೆತದಲ್ಲಿ ಕೊಹ್ಲಿ ಔಟಾದರು.
227 ರನ್ ಟಾರ್ಗೆಟ್
20ನೇ ಓವರ್ ಬೌಲ್ ಮಾಡಿದ ಹರ್ಷಲ್ 2 ನೋ ಬಾಲ್ ಬೌಲ್ ಮಾಡಿದ್ದರಿಂದ ಅವರನ್ನು ಬೌಲಿಂಗ್ನಿಂದ ಹೊರಹಾಕಲಾಯಿತು. ಆ ಬಳಿಕ ಬಂದ ಮ್ಯಾಕ್ಸ್ವೆಲ್ ಒಂದು ಸಿಕ್ಸರ್ ಹೊಡೆಸಿಕೊಂಡರೆ, ಆ ಬಳಿಕ ಜಡೇಜಾ ವಿಕೆಟ್ ಉರುಳಿಸಿದರು. ಅಂತಿಮವಾಗಿ ಚೆನ್ನೈ 226 ರನ್ ಬಾರಿಸಿತು.
ಅಲಿ ಸಿಕ್ಸರ್
ಸಿರಾಜ್ ಎಸೆದ 19ನೇ ಓವರ್‌ನ ಮೊದಲ ಎಸೆತದಲ್ಲಿ ಮೊಯಿನ್ ಅಲಿ ಸಿಕ್ಸರ್ ಬಾರಿಸಿದರು.
ರಾಯುಡು ಔಟ್
18ನೇ ಓವರ್‌ನ ಮೊದಲ ಎಸೆತದಲ್ಲಿ ರಾಯುಡು ಬೌಂಡರಿ ಬಾರಿಸಿದರೆ, ನಂತರದ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಆದರೆ 4ನೇ ಎಸೆತದಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
ದುಬೆ ಅರ್ಧಶತಕ, ಔಟ್
ಪರ್ನೆಲ್ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ದುಬೆ 3ನೇ ಎಸೆತದಲ್ಲಿ ಲಾಂಗ್ ಆಫ್‌ನಲ್ಲಿ ಕ್ಯಾಚಿತ್ತು ಔಟಾದರು.
ಕಾನ್ವೇ ಔಟ್
ಹರ್ಷಲ್ ಎಸೆದ 16ನೇ ಓವರ್‌ನ 2ನೇ ಎಸೆತದಲ್ಲಿ ದುಬೆ ಬೌಂಡರಿ ಬಾರಿಸಿದರೆ, 4ನೇ ಎಸೆತದಲ್ಲಿ ಕಾನ್ವೇ ಬೌಲ್ಡ್ ಆದರು.
ಚೆನ್ನೈ 150 ರನ್ ಪೂರ್ಣ
15ನೇ ಓವರ್ ಅಂತ್ಯಕ್ಕೆ ಚೆನ್ನೈ 150ರ ಗಡಿ ದಾಟಿದೆ. ವೈಶಾಕ್ ಎಸೆದ 15ನೇ ಓವರ್ನಲ್ಲಿ ದುಬೆ ಲಾಂಗ್ ಆಫ್‌ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರೆ, 5ನೇ ಎಸೆತದಲ್ಲಿ ಕಾನ್ವೇ ಇನ್ನೊಂದು ಸಿಕ್ಸರ್ ಹೊಡೆದರು.
ದುಬೆ ಸಿಕ್ಸರ್
12ನೇ ಓವರ್ ಎಸೆದ ಹರ್ಷಲ್ ಪಟೇಲ್ ಅವರ 2ನೇ ಎಸೆತವನ್ನು ದುಬೆ ಲಾಂಗ್ ಆನ್ನಲ್ಲಿ 111 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು.
ಚೆನ್ನೈ 100 ರನ್ ಪೂರ್ಣ
11ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಶಿವಂ ದುಬೆ ಅವರು ಮ್ಯಾಕ್ಸ್ವೆಲ್ಗೆ ಲಾಂಗ್ ಸಿಕ್ಸರ್ ಬಾರಿಸಿ ಚೆನ್ನೈ ಸ್ಕೋರ್ 100ರ ಗಡಿ ದಾಟುವಂತೆ ಮಾಡಿದರು.
ಕಾನ್ವೇ ಅರ್ಧಶತಕ
ಕಾನ್ವೆ ಅರ್ಧಶತಕ ಪೂರೈಸಿದ್ದಾರೆ. 10ನೇ ಓವರ್‌ನ ಐದನೇ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದು ಈ ಸೀಸನ್ನಲ್ಲಿ ಅವರ ಸತತ ಎರಡನೇ ಅರ್ಧಶತಕವಾಗಿದೆ.
ರಹಾನೆ ಔಟ್
ಅಜಿಂಕ್ಯ ರಹಾನೆ ಔಟಾಗಿದ್ದಾರೆ. 10ನೇ ಓವರ್‌ನ ಮೂರನೇ ಎಸೆತದಲ್ಲಿ ವನಿಂದು ಹಸರಂಗ್ ಅವರನ್ನು ಬೌಲ್ಡ್ ಮಾಡಿದರು.
ಹರ್ಷಲ್ ದುಬಾರಿ
9ನೇ ಓವರ್ ಬೌಲ್ ಮಾಡಿದ ಹರ್ಷಲ್ ಈ ಓವರ್ನಲ್ಲಿ ರನ್ ನೀಡಿದರು. ಓವರ್‌ನ 2ನೇ ಎಸೆತವನ್ನು ಕಾನ್ವೇ ಓವರ್ ಮಿಡ್ ವಿಕೆಟ್ನಲ್ಲಿ ಸಿಕ್ಸರ್ಗಟ್ಟಿದರು. ಹಾಗೆಯೇ ಕೊನೆಯ ಎಸೆತದಲ್ಲಿ ರಹಾನೆ ಬೌಂಡರಿ ಬಾರಿಸಿದರು.
ಮ್ಯಾಕ್ಸ್ವೆಲ್ಗೆ ಸಿಕ್ಸರ್
7ನೇ ಓವರ್ ಎಸೆದ ಮ್ಯಾಕ್ಸ್ವೆಲ್ಗೆ ಕಾನ್ವೇ ಸ್ಟ್ರೈಟ್ ಹಿಟ್ ಮಾಡಿ ಸಿಕ್ಸರ್ ಬಾರಿಸಿದರು.
ರಹಾನೆ ಸಿಕ್ಸ್
ಪವರ್ ಪ್ಲೇ ಕೊನೆಯ ಓವರ್ನಲ್ಲಿ ರಹಾನೆ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಪರ್ನೆಲ್ ಅವರ ಈ ಓವರ್ ಕೊಂಚ ದುಬಾರಿಯಾಗಿತ್ತು.
ವೈಶಾಕ್ಗೆ ಸಿಕ್ಸ್
5ನೇ ಓವರ್ ಎಸೆದ ವೈಶಾಕ್ ಕೊಂಚ ದುಬಾರಿಯಾದರು. ಈ ಓವರ್‌ನ ಮೊದಲ ಎಸೆತದಲ್ಲಿ ಕಾನ್ವೇ ಬೌಂಡರಿ ಬಾರಿಸಿದರೆ, 3ನೇ ಎಸೆತದಲ್ಲಿ ರಹಾನೆ ಸಿಕ್ಸರ್ ಬಾರಿಸಿದರು.
4 ಓವರ್ ಅಂತ್ಯ
4ನೇ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಪರ್ನೆಲ್ ಅವರ ಈ ಓವರ್ನಲ್ಲಿ ಒಟ್ಟು 6 ರನ್ ಬಂದವು.
ರುತುರಾಜ್ ಔಟ್
2ನೇ ಓವರ್ ಎಸೆಯಲು ಬಂದ ಸಿರಾಜ್, ಓವರ್‌ನ 2ನೇ ಎಸೆತದಲ್ಲಿ ರುತುರಾಜ್ ವಿಕೆಟ್ ಉರುಳಿಸಿದರು. ರುತುರಾಜ್ ವೈಡ್ ಫೈನ್ ಲೆಗ್ನಲ್ಲಿ ಕ್ಯಾಚಿತ್ತು ಔಟಾದರು.
ಕಾನ್ವೇ ಸಿಕ್ಸರ್
ಪರ್ನೆಲ್ ಎಸೆದ 2ನೇ ಓವರ್‌ನ ಮೂರನೇ ಎಸೆತದಲ್ಲಿ ಮಿಡ್ ವಿಕೆಟ್ನಲ್ಲಿ ಬೌಂಡರಿ ಬಾರಿಸಿದರೆ, ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
ಚೆನ್ನೈ ಬ್ಯಾಟಿಂಗ್ ಆರಂಭ
ಚೆನ್ನೈ ಪರ ರುತುರಾಜ್ ಹಾಗೂ ಕಾನ್ವೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆರ್‌ಸಿಬಿ ಪರ ಸಿರಾಜ್ ಮೊದಲ ಓವರ್ ಬೌಲ್ ಮಾಡಿದರು. ಈ ಓವರ್ನಲ್ಲಿ 3 ರನ್ ಬಂತು
ಉಭಯ ತಂಡಗಳು
? The @RCBTweets and @ChennaiIPL line-ups are IN ? ?
Follow the match ▶️ https://t.co/QZwZlNju3V #TATAIPL | #RCBvCSK pic.twitter.com/OhiomXlSBZ
— IndianPremierLeague (@IPL) April 17, 2023
ಚೆನ್ನೈ ಸೂಪರ್ ಕಿಂಗ್ಸ್
ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಮತಿಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ಟೀಕ್ಷಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ವನಿಂದು ಹಸರಂಗ, ವ್ಯಾನ್ ಪಾರ್ನೆಲ್, ವೈಶಾಕ್ ವಿಜಯ್ ಕುಮಾರ್, ಮೊಹಮ್ಮದ್ ಸಿರಾಜ್
ಆರ್‌ಸಿಬಿ ತಂಡದಲ್ಲಿ ಬದಲಾವಣೆ ಇಲ್ಲ
ಬೆಂಗಳೂರು ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಚೆನ್ನೈನಲ್ಲಿ ಬದಲಾವಣೆಯಾಗಿದೆ. ಸಿಸಾಂಡ ಮಗಾಳಾ ಗಾಯಗೊಂಡಿದ್ದು ಅವರ ಸ್ಥಾನಕ್ಕೆ ಪತಿರಾನ ತಂಡದಲ್ಲಿ ಆಯ್ಕೆಯಾಗಿದ್ದಾರೆ.
ಟಾಸ್ ಗೆದ್ದ ಆರ್‌ಸಿಬಿ
ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಲಿದೆ.
ಕೊನೆಯ ಮುಖಾಮುಖಿಯಲ್ಲಿ ಗೆದ್ದಿದ್ದ ಆರ್‌ಸಿಬಿ
2019ರಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಕೊನೆಯ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಬೆಂಗಳೂರು ಒಂದು ರನ್‌ನಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಧೋನಿ ಅಜೇಯ ಅರ್ಧಶತಕ ದಾಖಲಿಸಿದರು. ಆದರೆ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿರಲಿಲ್ಲ.
ಮುಖಾಮುಖಿ ವರದಿ
ಎರಡೂ ತಂಡಗಳು ಐಪಿಎಲ್ ಇತಿಹಾಸದಲ್ಲಿ 30 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 19 ಪಂದ್ಯಗಳನ್ನು ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿದ್ದರೆ, ಆರ್‌ಸಿಬಿ 10 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿದೆ.
Published On - Apr 17,2023 6:21 PM