
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ತವರು ನೆಲದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ ಲೀಗ್ನಲ್ಲಿ 7ನೇ ಜಯ ದಾಖಲಿಸಿದೆ. ಇದರೊಂದಿಗೆ 14 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಬಂದಿದ್ದರೆ, ರಾಜಸ್ಥಾನ ತಂಡವು 12 ಪಂದ್ಯಗಳಲ್ಲಿ ಎಂಟು ಗೆಲುವು ಮತ್ತು ನಾಲ್ಕು ಸೋಲಿನೊಂದಿಗೆ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 141 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ 18.2 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. ರವಿಚಂದ್ರನ್ ಅಶ್ವಿನ್ ಎರಡು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ಐದು ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸುವದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 141 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ 18.2 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. ರವಿಚಂದ್ರನ್ ಅಶ್ವಿನ್ ಎರಡು ವಿಕೆಟ್ ಪಡೆದರು.
ಚೆನ್ನೈ 11 ಓವರ್‌ಗಳ ಅಂತ್ಯಕ್ಕೆ ಎರಡು ವಿಕೆಟ್‌ಗೆ 84 ರನ್ ಗಳಿಸಿದೆ. ಇನ್ನು ಚೆನ್ನೈ ಗೆಲುವಿಗೆ 54 ಎಸೆತಗಳಲ್ಲಿ 58 ರನ್ ಅಗತ್ಯವಿದೆ. ರುತುರಾಜ್ 22 ರನ್ ಮತ್ತು ಮೊಯಿನ್ ಅಲಿ 9 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಡ್ಯಾರಿಲ್ ಮಿಚೆಲ್ 13 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
142 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ 6 ಓವರ್‌ಗಳಲ್ಲಿ ಅಂದರೆ ಪವರ್‌ಪ್ಲೇಯಲ್ಲಿ 56 ರನ್ ಗಳಿಸಿದೆ. ಡೆರಿಲ್ ಮಿಚೆಲ್ ಮತ್ತು ರುತುರಾಜ್ ಗಾಯಕ್ವಾಡ್ ಪ್ರಸ್ತುತ ಸಿಎಸ್‌ಕೆ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಚೆನ್ನೈ ಮೊದಲ ವಿಕೆಟ್ ಪತನವಾಗಿದೆ. ರಚಿನ್ ರವೀಂದ್ರ 18 ಎಸೆತಗಳಲ್ಲಿ 27 ರನ್ ಸಿಡಿಸಿ ಔಟಾಗಿದ್ದರೆ.
CSK ಸ್ಕೋರ್ 32/1
ಚೆನ್ನೈಗೆ ರಚಿನ್ ರವೀಂದ್ರ ಮತ್ತು ರಿಚುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿದ್ದಾರೆ. ಮೂರು ಓವರ್‌ಗಳ ಅಂತ್ಯಕ್ಕೆ ಚೆನ್ನೈ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ರಚಿನ್ 15 ಎಸೆತಗಳಲ್ಲಿ 24 ರನ್ ಮತ್ತು ರಿತುರಾಜ್ ಎರಡು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಸಿಮರ್‌ಜಿತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ಅವರ ಅದ್ಭುತ ಬೌಲಿಂಗ್‌ನ ಆಧಾರದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ತಂಡವನ್ನು 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 141 ರನ್‌ಗಳಿಗೆ ಸೀಮಿತಗೊಳಿಸಿದೆ. ರಾಜಸ್ಥಾನ ಪರ ರಿಯಾನ್ ಪರಾಗ್ 35 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ಅಜೇಯರಾಗಿ ಉಳಿದರು. ಚೆನ್ನೈ ಪರ ಸಿಮರ್ಜೀತ್ ಮೂರು ವಿಕೆಟ್ ಪಡೆದರೆ, ಕೊನೆಯ ಓವರ್ ನಲ್ಲಿ ತುಷಾರ್ ಎರಡು ವಿಕೆಟ್ ಪಡೆದರು.
ತುಷಾರ್ ದೇಶಪಾಂಡೆ ಸತತ ಎರಡನೇ ಎಸೆತದಲ್ಲಿ ವಿಕೆಟ್ ಪಡೆಯುವ ಮೂಲಕ ರಾಜಸ್ಥಾನದ ಇನ್ನಿಂಗ್ಸ್ ತತ್ತರಿಸುವಂತೆ ಮಾಡಿದ್ದಾರೆ. ಶುಭಂ ದುಬೆ ಮೊದಲ ಎಸೆತದಲ್ಲೇ ಖಾತೆ ತೆರೆಯದೆ ಔಟಾದರು. ಇದೀಗ ರವಿಚಂದ್ರನ್ ಅಶ್ವಿನ್ ಕ್ರೀಸ್‌ಗೆ ಬಂದಿದ್ದು, ಅವರೊಂದಿಗೆ ರಿಯಾನ್ ಪರಾಗ್ ಕ್ರೀಸ್‌ನಲ್ಲಿದ್ದಾರೆ.
ಚೆನ್ನೈ ಬೌಲರ್‌ಗಳ ಎದುರು ರಾಜಸ್ಥಾನದ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. 16 ಓವರ್‌ಗಳ ಅಂತ್ಯಕ್ಕೆ ರಾಜಸ್ಥಾನದ ಸ್ಕೋರ್ ಮೂರು ವಿಕೆಟ್‌ಗೆ 103 ರನ್ ಆಗಿದೆ. ರಿಯಾನ್ ಪರಾಗ್ 29 ರನ್ ಮತ್ತು ಧ್ರುವ್ ಜುರೆಲ್ 11 ರನ್ ಬಾರಿಸಿ ಆಡುತ್ತಿದ್ದಾರೆ.
ಆರಂಭಿಕ ಆಘಾತದ ನಂತರ, ರಾಜಸ್ಥಾನದ ರನ್ ರೇಟ್ ನಿಧಾನವಾಗಿದೆ ರಾಜಸ್ಥಾನ 11 ಓವರ್‌ಗಳ ಅಂತ್ಯಕ್ಕೆ ಎರಡು ವಿಕೆಟ್‌ಗೆ 68 ರನ್ ಗಳಿಸಿದೆ. ರಿಯಾನ್ ಪರಾಗ್ 15 ರನ್ ಮತ್ತು ಸಂಜು ಸ್ಯಾಮ್ಸನ್ ಆರು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಆರಂಭಿಕ ಜೋಸ್ ಬಟ್ಲರ್ ಕೂಡ ವಿಕೆಟ್ ಒಪ್ಪಿಸಿದ್ದಾರೆ. ಬಟ್ಲರ್ 25 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ನಾಯಕ ಸಂಜು ಸ್ಯಾಮ್ಸನ್ ಅವರೊಂದಿಗೆ ರಿಯಾನ್ ಪರಾಗ್ ಕ್ರೀಸ್‌ನಲ್ಲಿದ್ದಾರೆ.
ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡುವ ಮೂಲಕ ಸಿಮರ್ಜೀತ್ ಸಿಂಗ್ ರಾಜಸ್ಥಾನಕ್ಕೆ ಮೊದಲ ಹೊಡೆತ ನೀಡಿದರು. ಯಶಸ್ವಿ 21 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು.
ರಾಜಸ್ಥಾನ ಸ್ಥಿರ ಆರಂಭ ಮಾಡಿದೆ. ಮೂರು ಓವರ್‌ಗಳ ಅಂತ್ಯಕ್ಕೆ ರಾಜಸ್ಥಾನ ಯಾವುದೇ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿದೆ. ಜೋಸ್ ಬಟ್ಲರ್ 11 ರನ್ ಮತ್ತು ಯಶಸ್ವಿ ಮೂರು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಪರಾಗ್, ಶುಭಂ ದುಬೆ, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.
ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಡೆರಿಲ್ ಮಿಚೆಲ್, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮ್ರಂಜೀತ್ ಸಿಂಗ್, ಮಹೇಶ್ ತಿಕ್ಷಣ
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - 3:02 pm, Sun, 12 May 24