AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs DC Highlights, IPL 2024: ಆರ್​ಸಿಬಿ ಸಾಂಘಿಕ ದಾಳಿಗೆ ತಲೆಬಾಗಿದ ಡೆಲ್ಲಿ

Royal Challengers Bengaluru vs Delhi Capitals Highlights in Kannada: ಐಪಿಎಲ್ 2024ರ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸೋಲಿಸಿದೆ. ಇದು ಆರ್‌ಸಿಬಿಯ ಸತತ ಐದನೇ ಗೆಲುವಾಗಿದ್ದು, ಈ ಗೆಲುವಿನೊಂದಿಗೆ ತಂಡವು ಇನ್ನೂ ಪ್ಲೇ ಆಫ್‌ ರೇಸ್‌ನಲ್ಲಿದೆ.

RCB vs DC Highlights, IPL 2024: ಆರ್​ಸಿಬಿ ಸಾಂಘಿಕ ದಾಳಿಗೆ ತಲೆಬಾಗಿದ ಡೆಲ್ಲಿ
ಪೃಥ್ವಿಶಂಕರ
|

Updated on:May 12, 2024 | 11:29 PM

Share

ಐಪಿಎಲ್ 2024ರ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸೋಲಿಸಿದೆ. ಇದು ಆರ್‌ಸಿಬಿಯ ಸತತ ಐದನೇ ಗೆಲುವಾಗಿದ್ದು, ಈ ಗೆಲುವಿನೊಂದಿಗೆ ತಂಡವು ಇನ್ನೂ ಪ್ಲೇ ಆಫ್‌ ರೇಸ್‌ನಲ್ಲಿದೆ. 13 ಪಂದ್ಯಗಳಲ್ಲಿ ಆರು ಗೆಲುವು ಮತ್ತು ಏಳು ಸೋಲುಗಳೊಂದಿಗೆ 12 ಅಂಕಗಳನ್ನು ಹೊಂದಿದೆ. ಡೆಲ್ಲಿ ವಿರುದ್ಧದ ಗೆಲುವಿನೊಂದಿಗೆ ತಂಡ ಐದನೇ ಸ್ಥಾನಕ್ಕೆ ತಲುಪಿದ್ದು, ಆರ್​ಸಿಬಿ ತನ್ನ ಕೊನೆಯ ಪಂದ್ಯವನ್ನು ಮೇ 18 ರಂದು ಚಿನ್ನಸ್ವಾಮಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಬೇಕಾಗಿದೆ. ಈ ಪಂದ್ಯದ ಮೇಲೆ ಉಭಯ ತಂಡಗಳ ಭವಿಷ್ಯ ನಿಂತಿದೆ. ಚೆನ್ನೈ ಗೆದ್ದರೆ ಆರ್‌ಸಿಬಿ ಪ್ಲೇಆಫ್ ರೇಸ್‌ನಿಂದ ಹೊರಗುಳಿಯಲಿದೆ. ಅದೇ ಸಮಯದಲ್ಲಿ, ಬೆಂಗಳೂರು ಗೆದ್ದರೆ, ಉತ್ತಮ ಅಂತರದಿಂದ ಗೆಲ್ಲಬೇಕು, ಇದರಿಂದ ನೆಟ್ ರನ್ ರೇಟ್ ಚೆನ್ನೈಗಿಂತ ಉತ್ತಮವಾಗುತ್ತದೆ. ಇದರ ನಂತರವೂ ಬೆಂಗಳೂರು ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ.

ಬೆಂಗಳೂರು, ಡೆಲ್ಲಿ ಮತ್ತು ಲಕ್ನೋ ಮೂರು ತಂಡಗಳು ತಲಾ 12 ಅಂಕಗಳನ್ನು ಹೊಂದಿವೆ. ಲಕ್ನೋ ಇದುವರೆಗೆ ಕೇವಲ 11 ಪಂದ್ಯಗಳನ್ನು ಆಡಿದ್ದು, ಈ ತಂಡ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ 16 ಅಂಕಗಳನ್ನು ಸಂಪಾದಿಸಲಿದೆ. ಅದೇ ಸಮಯದಲ್ಲಿ ಡೆಲ್ಲಿ ಮತ್ತು ಬೆಂಗಳೂರು ತಲಾ 13 ಪಂದ್ಯಗಳನ್ನು ಆಡಿವೆ. ಈ ಸೋಲಿನೊಂದಿಗೆ ಡೆಲ್ಲಿ ಈಗ ಗರಿಷ್ಠ 14 ಅಂಕಗಳನ್ನು ಸಂಪಾದಿಸಬಹುದಾಗಿದೆ. ಕೋಲ್ಕತ್ತಾ ತಂಡ ಈಗಾಗಲೇ 18 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಅದೇ ಸಮಯದಲ್ಲಿ ರಾಜಸ್ಥಾನ 12 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಚೆನ್ನೈ 13 ಪಂದ್ಯಗಳಲ್ಲಿ 14 ಅಂಕಗಳನ್ನು ಹೊಂದಿದ್ದರೆ, ಸನ್ ರೈಸರ್ಸ್ 12 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಪಂದ್ಯದ ಕುರಿತು ಮಾತನಾಡುವುದಾದರೆ, ಮೊದಲು ಬ್ಯಾಟ್ ಮಾಡಿದ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 187 ರನ್ ಗಳಿಸಿತು. ತಂಡದ ಪರ ರಜತ್ ಪಾಟಿದಾರ್ 32 ಎಸೆತಗಳಲ್ಲಿ 52 ರನ್ ಮತ್ತು ವಿಲ್ ಜಾಕ್ಸ್ 29 ಎಸೆತಗಳಲ್ಲಿ 41 ರನ್ ಗಳಿಸಿದರು. ವಿರಾಟ್ ಕೊಹ್ಲಿ 27 ರನ್​ಗಳ ಕೊಡುಗೆ ನೀಡಿದರು. ಉತ್ತರವಾಗಿ ಡೆಲ್ಲಿ ತಂಡ 19.1 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 140 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ರಿಷಬ್ ಪಂತ್ ಬದಲಿಗೆ ಡೆಲ್ಲಿ ತಂಡದ ನಾಯಕರಾಗಿದ್ದ ಅಕ್ಷರ್ ಪಟೇಲ್ 39 ಎಸೆತಗಳಲ್ಲಿ 57 ರನ್ ಬಾರಿಸಿ ಗೆಲುವಿಗಾಗಿ ಹೋರಾಟ ನೀಡಿದರು. ಆರ್​ಸಿಬಿ ಪರ ಯಶ್ ದಯಾಲ್ ಮೂರು ಮತ್ತು ಲೋಕಿ ಫರ್ಗುಸನ್ ಎರಡು ವಿಕೆಟ್ ಪಡೆದರು.

LIVE NEWS & UPDATES

The liveblog has ended.
  • 12 May 2024 11:11 PM (IST)

    47 ರನ್‌ ಜಯ

    ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಜಯ ದಾಖಲಿಸುವ ಮೂಲಕ ಆರ್‌ಸಿಬಿ ತಂಡ ಪ್ಲೇಆಫ್‌ ನಿರೀಕ್ಷೆಯನ್ನು ಜೀವಂತವಾಗಿರಿಸಿಕೊಂಡಿದೆ.

  • 12 May 2024 11:09 PM (IST)

    18 ಓವರ್‌ ಮುಕ್ತಾಯ

    ಮುಖೇಶ್ ಕುಮಾರ್ ಕೇವಲ ಮೂರು ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. 18 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ. ಇಶಾಂತ್ ಶರ್ಮಾ ಮತ್ತು ಕುಲದೀಪ್ ಯಾದವ್ ಕ್ರೀಸ್‌ನಲ್ಲಿದ್ದಾರೆ.

  • 12 May 2024 10:54 PM (IST)

    ಅಕ್ಷರ್ ಪಟೇಲ್ ಔಟ್

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ದೊಡ್ಡ ಹೊಡೆತಕ್ಕೆ ಪ್ರಯತ್ನಿ ವಿಕೆಟ್ ಒಪ್ಪಿಸಿದರು. ಅಕ್ಷರ್ 57 ರನ್ ಬಾರಿಸಿ ಯಶ್ ದಯಾಳ್​ಗೆ ಬಲಿಯಾದರು.

  • 12 May 2024 10:48 PM (IST)

    ಆರನೇ ವಿಕೆಟ್

    ರಾಸಿಕ್ ಸಲಾಂ 12 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು.

  • 12 May 2024 10:43 PM (IST)

    ಅಕ್ಷರ್ ಪಟೇಲ್ ಅರ್ಧಶತಕ

    ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು ಅರ್ಧಶತಕ ಪೂರೈಸಿದ್ದಾರೆ.

  • 12 May 2024 10:39 PM (IST)

    12 ಓವರ್ ಅಂತ್ಯ

    ಡೆಲ್ಲಿ ತಂಡ 12 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 100 ರನ್ ಗಳಿಸಿದೆ. ತಂಡದ ಗೆಲುವಿಗೆ ಇನ್ನೂ 48 ಎಸೆತಗಳಲ್ಲಿ 88 ರನ್‌ಗಳ ಅಗತ್ಯವಿದೆ.

  • 12 May 2024 10:36 PM (IST)

    ಸ್ಟಬ್ಸ್ ರನ್ ಔಟ್

    ಟ್ರಿಸ್ಟಾನ್ ಸ್ಟಬ್ಸ್ ಕ್ಯಾಮರೂನ್ ಗ್ರೀನ್ ಎಸೆತದಲ್ಲಿ ರನ್ ಔಟ್ ಆದರು.

  • 12 May 2024 10:24 PM (IST)

    ಹೋಪ್ ಔಟ್

    ಡೆಲ್ಲಿ ತಂಡ 5ನೇ ವಿಕೆಟ್ ಕಳೆದುಕೊಂಡಿದೆ. ಶಾಯ್ ಹೋಪ್ 23 ಎಸೆತಗಳಲ್ಲಿ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    10 ಓವರ್‌ಗಳ ನಂತರ ಡೆಲ್ಲಿ ಸ್ಕೋರ್ ಐದು ವಿಕೆಟ್‌ಗೆ 87 ರನ್ ಆಗಿದೆ.

    ಡೆಲ್ಲಿಗೆ 60 ಎಸೆತಗಳಲ್ಲಿ 101 ರನ್ ಅಗತ್ಯವಿದೆ.

  • 12 May 2024 10:21 PM (IST)

    ಪವರ್‌ಪ್ಲೇ ಅಂತ್ಯ

    6 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದೆ. ಅಕ್ಷರ್ ಪಟೇಲ್ 10 ರನ್ ಮತ್ತು ಶಾಯ್ ಹೋಪ್ 18 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 12 May 2024 09:43 PM (IST)

    ಸತತ 2 ವಿಕೆಟ್

    ಡೆಲ್ಲಿ ಕ್ಯಾಪಿಟಲ್ಸ್‌ ಸತತ 2 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡಿದೆ. ಅಭಿಷೇಕ್ ಪೊರೆಲ್ ನಂತರ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಕೂಡ ಔಟಾಗಿದ್ದಾರೆ. ಈ 2 ವಿಕೆಟ್​ ಯಶ್ ದಯಾಳ್ ಓವರ್​​ನಲ್ಲಿ ಬಂದವು. ಡೆಲ್ಲಿ ತಂಡ 2.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿದೆ.

  • 12 May 2024 09:36 PM (IST)

    ಡೇವಿಡ್ ವಾರ್ನರ್ ಔಟ್

    ಮೊದಲ ಓವರ್‌ನಲ್ಲಿಯೇ ಡೇವಿಡ್ ವಾರ್ನರ್ ಔಟಾದರು. ಕೇವಲ 2 ರನ್​ಗಳಿಗೆ ವಾರ್ನರ್ ಇನ್ನಿಂಗ್ಸ್ ಅಂತ್ಯವಾಯಿತು.

  • 12 May 2024 09:24 PM (IST)

    187 ರನ್ ಟಾರ್ಗೆಟ್

    ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲ್ಲಲು 188 ರನ್‌ಗಳ ಗುರಿ ನೀಡಿದೆ. ತಂಡದ ಪರ ರಜತ್ ಪಾಟಿದಾರ್ 52 ರನ್,  ವಿಲ್ ಜಾಕ್ಸ್ 41 ರನ್ ಕೊಡುಗೆ ನೀಡಿದರು.

  • 12 May 2024 09:11 PM (IST)

    ಏಳನೇ ವಿಕೆಟ್

    176 ಸ್ಕೋರ್‌ನಲ್ಲಿ ಬೆಂಗಳೂರು ಏಳನೇ ವಿಕೆಟ್ ಕಳೆದುಕೊಂಡಿದೆ. ರಾಸಿಖ್ ದಾರ್ ಸಲಾಮ್ ಸ್ವಪ್ನಿಲ್ ಸಿಂಗ್ ಅವರನ್ನು ಪೆವಿಲಿಯನ್​ಗಟ್ಟಿದ್ದಾರೆ.

    19 ಓವರ್‌ಗಳ ನಂತರ ಬೆಂಗಳೂರಿನ ಸ್ಕೋರ್ ಏಳು ವಿಕೆಟ್‌ಗೆ 179 ರನ್ ಆಗಿದೆ.

  • 12 May 2024 08:44 PM (IST)

    ಜಾಕ್ಸ್ ಔಟ್

    ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್ 41 ರನ್ ಗಳಿಸಿ ಔಟಾಗಿದ್ದಾರೆ.

  • 12 May 2024 08:36 PM (IST)

    ಪಾಟಿದಾರ್ ಔಟ್

    ರಜತ್ ಪಾಟಿದಾರ್ 32 ಎಸೆತಗಳಲ್ಲಿ 52 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

    ಆರ್‌ಸಿಬಿ 13 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿದೆ.

  • 12 May 2024 08:18 PM (IST)

    ಆರ್​​ಸಿಬಿ ಶತಕ ಪೂರ್ಣ

    ಆರಂಭದಲ್ಲೇ ಆರಂಭಿಕರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್​ಸಿಬಿಗೆ ಪಾಟಿದರ್ ಹಾಗೂ ಜ್ಯಾಕ್ಸ್​ ಬೆನ್ನೇಲುಬಾಗಿ ನಿಂತಿದ್ದಾರೆ. ಇವರಿಬ್ಬರ ಆಟದಿಂದ ಆರ್​ಸಿಬಿ 10 ಓವರ್​​ಗಳಲ್ಲಿ 110 ರನ್ ಕಲೆಹಾಕಿದೆ.

  • 12 May 2024 08:02 PM (IST)

    ಪವರ್ ಪ್ಲೇ ಅಂತ್ಯ

    ಆರ್​ಸಿಬಿ ಮೊದಲ 6 ಓವರ್​​ಗಳಲ್ಲಿ 2 ವಿಕೆಟ್ ಕಳೆದುಕೊಂಡು 61 ರನ್ ಕಲೆಹಾಕಿದೆ.

  • 12 May 2024 07:51 PM (IST)

    ವಿರಾಟ್ ಕೊಹ್ಲಿಯೂ ಔಟ್

    ಆರ್​ಸಿಬಿ ಇನ್ನಿಂಗ್ಸ್ ತತ್ತರಿಸಿದೆ. ತಂಡದ ಆಧಾರಸ್ತಂಭ ವಿರಾಟ್ ಕೊಹ್ಲಿ 27 ರನ್​​ಗಳಿಗೆ ಇನ್ನಿಂಗ್ಸ್ ಮುಗಿಸಿದರು.

  • 12 May 2024 07:47 PM (IST)

    ನಾಯಕ ಫಾಫ್ ಔಟ್

    ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅವರ ಕಳಪೆ ಫಾರ್ಮ್​ ಈ ಪಂದ್ಯದಲ್ಲೂ ಮುಂದುವರೆದಿದೆ. ಫಾಫ್ 3ನೇ ಓವರ್​ನಲ್ಲಿ ಮುಖೇಶ್​ಗೆ ಬಲಿಯಾದರು.

  • 12 May 2024 07:46 PM (IST)

    ಆರ್​​ಸಿಬಿ ಇನ್ನಿಂಗ್ಸ್ ಆರಂಭ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಆರಂಭವಾಗಿದೆ. ನಾಯಕ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ. ಇಶಾಂತ್ ಶರ್ಮಾ ಅವರ ಮೊದಲ ಓವರ್‌ನಲ್ಲಿ 10 ರನ್‌ಗಳು ಬಂದವು.

  • 12 May 2024 07:10 PM (IST)

    ಡೆಲ್ಲಿ ಕ್ಯಾಪಿಟಲ್ಸ್

    ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಶಾಯ್ ಹೋಪ್, ಕುಮಾರ್ ಕುಶಾಗ್ರಾ, ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್ (ನಾಯಕ), ಕುಲ್ದೀಪ್ ಯಾದವ್, ರಸಿಖ್ ದಾರ್ ಸಲಾಮ್, ಮುಕೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

  • 12 May 2024 07:10 PM (IST)

    ರಾಯಲ್ ಚಾಲೆಂಜರ್ಸ್ ಬೆಂಗಳೂರು

    ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸ್ವಪ್ನಿಲ್ ಸಿಂಗ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್.

  • 12 May 2024 07:04 PM (IST)

    ಟಾಸ್ ಗೆದ್ದ ಡೆಲ್ಲಿ

    ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 12 May 2024 06:58 PM (IST)

    ರವೀಂದ್ರ ಜಡೇಜಾ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ಐದನೇ ವಿಕೆಟ್ ಕಳೆದುಕೊಂಡಿದೆ. ರವೀಂದ್ರ ಜಡೇಜಾ 5 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣಕ್ಕೆ ಅವರನ್ನು ಔಟ್ ಎಂದು ತೀರ್ಪು ನೀಡಲಾಗಿದೆ.

  • 12 May 2024 06:43 PM (IST)

    ಶಿವಂ ದುಬೆ ಔಟ್

    ಶಿವಂ ದುಬೆ 11 ಎಸೆತಗಳಲ್ಲಿ 18 ರನ್‌ಗಳ ಇನಿಂಗ್ಸ್‌ ಆಡಿ ವಿಕೆಟ್ ಒಪ್ಪಿಸಿದ್ದಾರೆ.

    ಚೆನ್ನೈ ಗೆಲುವಿಗೆ ಇನ್ನೂ 36 ಎಸೆತಗಳಲ್ಲಿ 35 ರನ್ ಅಗತ್ಯವಿದೆ.

    CSK ಸ್ಕೋರ್ 107/4

  • 12 May 2024 06:42 PM (IST)

    ಆರ್​ಸಿಬಿ- ಡೆಲ್ಲಿ ಮುಖಾಮುಖಿ ವರದಿ

    ಉಭಯ ತಂಡಗಳ ನಡುವೆ ಇದುವರೆಗೆ 30 ಪಂದ್ಯಗಳು ನಡೆದಿವೆ. ಈ ಪೈಕಿ ಬೆಂಗಳೂರು 18 ಪಂದ್ಯಗಳನ್ನು ಗೆದ್ದಿದ್ದರೆ, ದೆಹಲಿ 11 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದೆ.

Published On - May 12,2024 6:41 PM

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ