PV Sindhu: ಪಿವಿ ಸಿಂಧುಗೆ ಅಭಿನಂದನೆ: ಮತ್ತೊಮ್ಮೆ ಭಾರತೀಯರ ಮನಗೆದ್ದ ಡೇವಿಡ್ ವಾರ್ನರ್..!

| Updated By: ಝಾಹಿರ್ ಯೂಸುಫ್

Updated on: Aug 10, 2022 | 1:25 PM

PV Sindhu: ಪಿವಿ ಸಿಂಧು 2014 ಮತ್ತು 2018 ರ ಕಾಮನ್​ವೆಲ್ತ್​ ಆವೃತ್ತಿಗಳಲ್ಲಿ ಕಂಚು ಮತ್ತು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಇದೀಗ ಚಿನ್ನದ ಪದಕ ಗೆಲ್ಲುವ ಮೂಲಕ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತಕ್ಕಾಗಿ ಮೂರು ವಿಭಿನ್ನ ಪದಕಗಳನ್ನು ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ.

PV Sindhu: ಪಿವಿ ಸಿಂಧುಗೆ ಅಭಿನಂದನೆ: ಮತ್ತೊಮ್ಮೆ ಭಾರತೀಯರ ಮನಗೆದ್ದ ಡೇವಿಡ್ ವಾರ್ನರ್..!
PV Sindhu-David Warner
Follow us on

ಕಾಮನ್‌ವೆಲ್ತ್ ಗೇಮ್ಸ್ 2022 ರ ಕೊನೆಯ ದಿನದಂದು ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು (PV Sindhu) ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದ ಭಾರತೀಯ ಆಟಗಾರ್ತಿ ಎಂಬ ವಿಶೇಷ ದಾಖಲೆಯನ್ನು ಬರೆದಿದ್ದರು.  2014 ಮತ್ತು 2018 ರ ಕಾಮನ್​ವೆಲ್ತ್ ಗೇಮ್ಸ್​​ ಆವೃತ್ತಿಗಳಲ್ಲಿ ಕಂಚು ಮತ್ತು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದ ಸಿಂಧು ಈ ಬಾರಿ ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದರು. ಸಿಂಧು ಅವರ ಈ ಅಭೂತಪೂರ್ವ ಸಾಧನೆಯನ್ನು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕೊಂಡಾಡಿದ್ದರು. ಅದರಲ್ಲೂ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಹಾಗೂ ಅವರ ಪತ್ನಿ ಕ್ಯಾಂಡಿಸ್ ಕೂಡ ಭಾರತದ ಬಂಗಾರದ ಪದಕ ವಿಜೇತೆಯನ್ನು ಅಭಿನಂದಿಸಿದ್ದು ವಿಶೇಷ.

ಪಿವಿ ಸಿಂಧು ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಅತ್ತ ಕಡೆಯಿಂದ ಡೇವಿಡ್ ವಾರ್ನರ್​…’ವೆಲ್ಡನ್ ಸಿಂಧು..ಅದ್ಭುತ ಸಾಧನೆ’ ಎಂದು ಟ್ವೀಟ್ ಮಾಡಿದ್ದರು. ಹಾಗೆಯೇ ಕಾಮನ್ ವೆಲ್ತ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಸಿಂಧುಗೆ ಅಭಿನಂದನೆಗಳು..ನಿಮ್ಮ ಯಶಸ್ಸು ಅದ್ಭುತ’ ಎಂದು ವಾರ್ನರ್ ಪತ್ನಿ ಕ್ಯಾಂಡಿಸ್ ಸೋಷಿಯಲ್ ಮೀಡಿಯಾ ಮೂಲಕ ಅಭಿನಂದನೆ ಸಲ್ಲಿಸಿದ್ದರು.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ವಾರ್ನರ್ ದಂಪತಿಯ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಪಿವಿ ಸಿಂಧು.. ‘ತುಂಬಾ ಧನ್ಯವಾದಗಳು’ ಎಂದು ಉತ್ತರಿಸಿದ್ದಾರೆ. ಇದೀಗ ವಾರ್ನರ್ ಅವರ ಈ ಟ್ವೀಟ್​ಗಳು ವೈರಲ್ ಆಗಿದ್ದು, ಆಸೀಸ್ ಕ್ರಿಕೆಟಿಗನ ಕ್ರೀಡಾಸ್ಪೂರ್ತಿಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಅದರಲ್ಲೂ ಹೈದರಾಬಾದ್ ಮೂಲದವರಾಗಿರುವ ಪಿವಿ ಸಿಂಧು ಅವರನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡದ ಮಾಜಿ ಆಟಗಾರ ಅಭಿನಂದಿಸಿದಕ್ಕೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಐಪಿಎಲ್​ ಮೂಲಕ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ತುಂಬಾ ಹತ್ತಿರವಾಗಿರುವ ಡೇವಿಡ್ ವಾರ್ನರ್, ಭಾರತೀಯರ ಸಾಧನೆಗೂ ಮೆಚ್ಚುಗೆಗಳನ್ನು ವ್ಯಕ್ತಪಡಿಸುವ ಮೂಲಕ ಇದೀಗ ಎಲ್ಲರ ಮನಗೆದ್ದಿದ್ದಾರೆ.

 

Published On - 1:24 pm, Wed, 10 August 22