IPL 2024: ಧೋನಿಯ ರೆಟ್ರೋ ಹೇರ್ ಸ್ಟೈಲ್ಗೆ ಬೌಲ್ಡ್ ಆದ ಡೇವಿಡ್ ವಾರ್ನರ್: ಏನು ಹೇಳಿದ್ರು ನೋಡಿ
MS Dhoni: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ವಾರ್ನರ್ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅವರ ಮೊದಲ ಐಪಿಎಲ್ ಆಗಿದೆ. ಇದೀಗ ಇವರು ಎಂಎಸ್ ಧೋನಿಯ ರೆಟ್ರೋ ಲುಕ್ ಮತ್ತು ಉದ್ದನೆಯ ಕೂದಲನ್ನು ಕಂಡು ಫಿದಾ ಆಗಿದ್ದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.

2024 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ನೊಂದಿಗೆ ಒಂದು ವರ್ಷದ ವಿರಾಮದ ಬಳಿಕ ಎಂಎಸ್ ಧೋನಿ (MS Dhoni) ಕ್ರಿಕೆಟ್ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಧೋನಿ, ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. 2023 ರ ಋತುವಿನಲ್ಲಿ, ಧೋನಿ ನೇತೃತ್ವದ ಸಿಎಸ್‌ಕೆ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿ ದಾಖಲೆಯ ಐದನೇ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಇದೀಗ ಪುನಃ ಇವರ ಆಟವನ್ನು ನೋಡಲು ಕೇವಲ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ, ವಿದೇಶಿ ಕ್ರಿಕೆಟಿಗರು ಕೂಡ ಕಾದು ಕುಳಿತಿದ್ದಾರೆ. ಇದರಲ್ಲಿ ಡೇವಿಡ್ ವಾರ್ನರ್ ಕೂಡ ಒಬ್ಬರು.
ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ವಾರ್ನರ್ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅವರ ಮೊದಲ ಐಪಿಎಲ್ ಆಗಿದೆ. ಇದೀಗ ಇವರು ಎಂಎಸ್ ಧೋನಿಯ ರೆಟ್ರೋ ಲುಕ್ ಮತ್ತು ಉದ್ದನೆಯ ಕೂದಲನ್ನು ಕಂಡು ಫಿದಾ ಆಗಿದ್ದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಧೋನಿಯ ನೋಟ ಮತ್ತು ಅವರ ಕೆಂಪು ಹೇರ್‌ಬ್ಯಾಂಡ್‌ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಲವಿಂಗ್ ದಿ ನ್ಯೂ ಹೆಡ್ ಬ್ಯಾಂಡ್’ ಎಂದು ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ವಿರಾಟ್ಗೆ ಬೇಕು ಕೇವಲ 6 ರನ್: ಐಪಿಎಲ್ನ ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಲಿದ್ದಾರೆ ಕೊಹ್ಲಿ
ವಾರ್ನರ್ ಮಾಡಿರುವ ಪೋಸ್ಟ್ ಇಲ್ಲಿದೆ ನೋಡಿ:
2023 ರ ಋತುವಿನ ನಂತರ ಧೋನಿ ನಿವೃತ್ತಿ ಹೊಂದುತ್ತಾರೆ ಎಂದು ಹಲವರು ಊಹಿಸಿದ್ದರು. ಆದರೆ, ಸಿಎಸ್ಕೆಯ ಪ್ರಶಸ್ತಿ ವಿಜಯದ ಬಳಿಕ ಮತ್ತು ಕಳೆದ ಋತುವಿನಲ್ಲಿ ಧೋನಿಗೆ ಅಭಿಮಾನಿಗಳು ತೋರಿಸಿದ ಪ್ರೀತಿಯನ್ನು ಮರುಪಡೆಯಲು 2024 ರ ಋತುವನ್ನು ಆಡಲಿದ್ದೇನೆ ಎಂದು ಬಹಿರಂಗಪಡಿಸಿದರು. ಸದ್ಯ ಐಪಿಎಲ್ 2024 ಮೆಗಾ ಈವೆಂಟ್‌ಗೆ ಕೆಲವೇ ದಿನಗಳು ಬಾಕಿ ಇರುವಾಗ, ಧೋನಿ ಸಿಎಸ್‌ಕೆ ಶಿಬಿರವನ್ನು ಸೇರಿಕೊಂಡಿದ್ದಾರೆ. ಸೂಪರ್ ಕಿಂಗ್ಸ್ ತಮ್ಮ ಆರಂಭಿಕ ಪಂದ್ಯವನ್ನು ಮಾರ್ಚ್ 22 ರಂದು ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಆಡಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊನ್ನೆಯಷ್ಟೆ ತನ್ನ ಪ್ರಮುಖ ಬ್ಯಾಟಿಂಗ್ ಶಕ್ತಿಯನ್ನು ಕಳೆದುಕೊಂಡಿತು. ಅಗ್ರ ಕ್ರಮಾಂಕದ ಬ್ಯಾಟರ್ ಡೆವೊನ್ ಕಾನ್ವೇ ಅವರು ಇಂಜುರಿಗೆ ತುತ್ತಾಗಿದ್ದಾರೆ. ಆದರೆ, ಮೆಗಾ ಹರಾಜಿನಲ್ಲಿ ಖರೀದಿಸಿರುವ ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಅವರಂತಹ ಆಟಗಾರರು ಬ್ಯಾಟಿಂಗ್ ಬಲವನ್ನು ಹೆಚ್ಚಿಸಲಿದ್ದಾರೆ. ಜೊತೆಗೆ ರುತುರಾಜ್ ಗಾಯಕ್ವಾಡ್, ಶಿವಂ ದುವೆ, ನಾಯಕ ಧೋನಿ ಯಂತಹ ಫಿನಿಶರ್ ಕೂಡ ಇದ್ದಾರೆ.
ವಿರಾಟ್ ಕೊಹ್ಲಿ ಆರ್‌ಸಿಬಿ ಕ್ಯಾಂಪ್ ಸೇರುವುದು ಯಾವಾಗ?: ಹೊರಬಿತ್ತು ದೊಡ್ಡ ಸುದ್ದಿ
ಚೆನ್ನೈ ಸೂಪರ್ ಕಿಂಗ್ಸ್ ತಂಡ:
ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶೇಖ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ಶಿವಂ ದುಬೆ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜ್ಯವರ್ಧನ್ ಹಂಗೇರ್‌ಗೆಕರ್, ದೀಪಕ್ ಚಹರ್, ಮಹಿಶ್ ತೀಕ್ಷನ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮತಿಶ್ ಪತಿರಾನ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೆರೆಲ್ ಮಿಚೆಲ್, ಮುಸ್ತಾಫಿಜುರ್ ರೆಹಮಾನ್, ಸಮೀರ್ ರಿಜ್ವಿ, ಅವಿನಾಶ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
