DC vs CSK, IPL 2021: ಸಿಎಸ್​ಕೆಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್​

TV9 Web
| Updated By: ಝಾಹಿರ್ ಯೂಸುಫ್

Updated on:Oct 04, 2021 | 11:17 PM

Delhi Capitals vs Chennai Super Kings: ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 9 ಮತ್ತು ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

DC vs CSK, IPL 2021: ಸಿಎಸ್​ಕೆಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್​
DC vs CSK

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 50ನೇ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂ. ಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (DC vs CSK) ವಿರುದ್ದ 3 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು ಅಂಬಾಟಿ ರಾಯುಡು ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ನಲ್ಲಿ 5 ವಿಕೆಟ್​ ಕಳೆದುಕೊಂಡು 136 ರನ್​ ಕಲೆಹಾಕಿತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ಗೆ ಅಂತಿಮ ಓವರ್​ನಲ್ಲಿ 6 ರನ್​ಗಳ ಅವಶ್ಯಕತೆಯಿತ್ತು. ಕೊನೆಯ 3 ಎಸೆತಗಳಲ್ಲಿ 2 ರನ್ ಬೇಕಿದ್ದ ವೇಳೆ ಬ್ರಾವೊ ಎಸೆತದಲ್ಲಿ ಕಗಿಸೊ ರಬಾಡ ಬೌಂಡರಿ ಬಾರಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ತಂಡ 19.4 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 139 ರನ್​ ಬಾರಿಸಿ 3 ವಿಕೆಟ್​ಗಳ ರೋಚಕ ಜಯ ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ.

CSK 136/5 (20)

DC 139/7 (19.4)

ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 9 ಮತ್ತು ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ರಿಪಲ್ ಪಟೇಲ್, ಅಕ್ಷರ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

LIVE NEWS & UPDATES

The liveblog has ended.
  • 04 Oct 2021 11:07 PM (IST)

    ಡೆಲ್ಲಿ ಕ್ಯಾಪಿಟಲ್ಸ್​ಗೆ 3 ವಿಕೆಟ್​ಗಳ ರೋಚಕ ಜಯ

    2 ರನ್ ಬೇಕಿದ್ದ ವೇಳೆ ಬ್ರಾವೊ ಎಸೆತದಲ್ಲಿ ಫೋರ್ ಬಾರಿಸಿದ ರಬಾಡ

  • 04 Oct 2021 11:05 PM (IST)

    ಅಕ್ಷರ್ ಪಟೇಲ್ ಔಟ್

    ಬ್ರಾವೊ ಎಸೆತದಲ್ಲಿ ಫ್ರಂಟ್ ಫೀಲ್ಡರ್​ ಮೊಯೀನ್ ಅಲಿಗೆ ಕ್ಯಾಚ್ ನೀಡಿದ ಅಕ್ಷರ್ ಪಟೇಲ್

    3 ಎಸೆತಗಳಲ್ಲಿ 2 ರನ್​ಗಳ ಅವಶ್ಯಕತೆ

    DC 135/7 (19.3)

      

  • 04 Oct 2021 10:59 PM (IST)

    6 ಎಸೆತಗಳಲ್ಲಿ 6 ರನ್​ಗಳ ಅವಶ್ಯಕತೆ

    DC 131/6 (19)

    ಕ್ರೀಸ್​ನಲ್ಲಿ ಹೆಟ್ಮೆಯರ್-ಅಕ್ಷರ್ ಪಟೇಲ್ ಬ್ಯಾಟಿಂಗ್

      

  • 04 Oct 2021 10:58 PM (IST)

    ಹಿಟ್​-ಮೆಯರ್

    ಹ್ಯಾಝಲ್​ವುಡ್ ಎಸೆತಕ್ಕೆ ಹೆಟ್ಮೆಯರ್ ಸೂಪರ್ ಶಾಟ್…ಚೆಂಡು ಸ್ಟೇಡಿಯಂಗೆ…ಸಿಕ್ಸ್

    DC 130/6 (18.5)

      

  • 04 Oct 2021 10:54 PM (IST)

    12 ಎಸೆತಗಳಲ್ಲಿ 16 ರನ್​ಗಳ ಅವಶ್ಯಕತೆ

    DC 121/6 (18)

    ಕ್ರೀಸ್​ನಲ್ಲಿ ಹೆಟ್ಮೆಯರ್-ಅಕ್ಷರ್ ಪಟೇಲ್ ಬ್ಯಾಟಿಂಗ್

      

  • 04 Oct 2021 10:52 PM (IST)

    ಕ್ಯಾಚ್ ಡ್ರಾಪ್

    ಬ್ರಾವೊ ಎಸೆತದಲ್ಲಿ ಹೆಟ್ಮೆಯರ್ ಭರ್ಜರಿ ಹೊಡೆತ…ಬೌಂಡರಿ ಲೈನ್​ನಲ್ಲಿ ಕೃಷ್ಣಪ್ಪ ಗೌತಮ್ ಕ್ಯಾಚ್ ಡ್ರಾಪ್

    DC 120/6 (17.4)

      

  • 04 Oct 2021 10:50 PM (IST)

    ರಾಕೆಟ್ ಶಾಟ್

    ಬ್ರಾವೊ ಎಸೆತದಲ್ಲಿ ಹೆಟ್ಮೆಯರ್ ಸ್ಟೈಟ್ ಹಿಟ್​…ಫೋರ್

  • 04 Oct 2021 10:46 PM (IST)

    17 ಓವರ್ ಮುಕ್ತಾಯ

    CSK 136/5 (20)

    DC 109/6 (17)

      

  • 04 Oct 2021 10:41 PM (IST)

    ಕೊನೆಯ 4 ಓವರ್​ನಲ್ಲಿ 33 ರನ್​ಗಳ ಅವಶ್ಯಕತೆ

    DC 104/6 (16)

      

    ಕ್ರೀಸ್​ನಲ್ಲಿ ಹೆಟ್ಮೆಯರ್-ಅಕ್ಷರ್ ಪಟೇಲ್ ಬ್ಯಾಟಿಂಗ್

  • 04 Oct 2021 10:36 PM (IST)

    ಶಾರ್ದೂಲ್ ಬ್ಯೂಟಿ-ಧವನ್ ಔಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಶಿಖರ್ ಧವನ್ ರಾಕೆಟ್ ಶಾಟ್…ಅಧ್ಭುತವಾಗಿ ಕ್ಯಾಚ್​ ಹಿಡಿದ ಫ್ರಂಟ್ ಫೀಲ್ಡರ್ ಮೊಯೀನ್ ಅಲಿ

    CSK 136/5 (20)

    DC 99/6 (15)

      

  • 04 Oct 2021 10:30 PM (IST)

    ಅಶ್ವಿನ್ ಔಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಬೌಲ್ಡ್

    DC 98/5 (14.1)

     

  • 04 Oct 2021 10:24 PM (IST)

    ರಿಪಲ್ ಪಟೇಲ್ ಔಟ್

    ಪದಾರ್ಪಣೆ ಪಂದ್ಯದಲ್ಲಿ 18 ರನ್​ಗಳಿಸಿ ಜಡೇಜಾ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ರಿಪಲ್ ಪಟೇಲ್

    DC 94/4 (13)

     

  • 04 Oct 2021 10:16 PM (IST)

    ಸೂಪರ್ ಶಾಟ್

    ಜಡೇಜಾ ಎಸೆತದಲ್ಲಿ ಸ್ಮಾರ್ಟ್​ ಕ್ರಿಕೆಟ್​…ಗ್ಯಾಪ್ ಮೂಲಕ ಬೌಂಡರಿ ಬಾರಿಸಿದ ರಿಪಲ್ ಪಟೇಲ್

    DC 84/3 (11)

      

  • 04 Oct 2021 10:15 PM (IST)

    ಮೊದಲ ಫೋರ್

    ರಿಪಲ್ ಪಟೇಲ್ ಚೊಚ್ಚಲ ಐಪಿಎಲ್ ಬೌಂಡರಿ…ಜಡೇಜಾ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಹೊಡೆತ…ಫೋರ್

  • 04 Oct 2021 10:13 PM (IST)

    10 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ರಿಪಲ್ ಪಟೇಲ್-ಶಿಖರ್ ಧವನ್ ಬ್ಯಾಟಿಂಗ್

    CSK 136/5 (20)

    DC 75/3 (10)

     

  • 04 Oct 2021 10:06 PM (IST)

    ರಿಷಭ್ ಪಂತ್ ಔಟ್

    ಜಡೇಜಾ ಎಸೆತದಲ್ಲಿ ಬಿಗ್ ಹಿಟ್​ಗೆ ಯತ್ನ…ಮೊಯೀನ್ ಅಲಿ ಸುಲಭ ಕ್ಯಾಚ್…ರಿಷಭ್ ಪಂತ್ (15) ಔಟ್

    DC 71/3 (8.5)

      

  • 04 Oct 2021 10:04 PM (IST)

    ಬೌಂಡರಿಷಭ್

    ಜಡೇಜಾ ಎಸೆತದಲ್ಲಿ ಪಂತ್ ಸ್ಟ್ರೈಟ್ ಹಿಟ್…ಫೋರ್

  • 04 Oct 2021 10:00 PM (IST)

    ಪಂತ್ ಪವರ್

    ಮೊಯೀನ್ ಅಲಿ ಎಸೆತಕ್ಕೆ ರಿಷಭ್ ಪಂತ್ ಬಿಗ್ ಸಿಕ್ಸ್​ನ ಪ್ರತ್ಯುತ್ತರ

    ಕ್ರೀಸ್​ನಲ್ಲಿ ರಿಷಭ್ ಪಂತ್-ಶಿಖರ್ ಧವನ್ ಬ್ಯಾಟಿಂಗ್

    DC 63/2 (8)

      

  • 04 Oct 2021 09:51 PM (IST)

    ಶೇಯಸ್ ಅಯ್ಯರ್ ಔಟ್

    ಜೋಶ್ ಹ್ಯಾಝಲ್​ವುಡ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಶ್ರೇಯಸ್ ಅಯ್ಯರ್

    DC 51/2 (5.5)

     

  • 04 Oct 2021 09:49 PM (IST)

    50 ರನ್ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್-ಶಿಖರ್ ಧವನ್ ಬ್ಯಾಟಿಂಗ್

    DC 51/1 (5.4)

     

  • 04 Oct 2021 09:46 PM (IST)

    ಧವನ್ ಅಬ್ಬರ

    ದೀಪಕ್ ಚಹರ್ ಒಂದೇ ಓವರ್​ನಲ್ಲಿ 6, 4, 4, 6..ಸಿಕ್ಸ್ ಸಿಡಿಸಿದ ಶಿಖರ್ ಧವನ್

    DC 48/1 (5)

      

      

  • 04 Oct 2021 09:38 PM (IST)

    3 ಓವರ್ ಮುಕ್ತಾಯ

    ಡೆಲ್ಲಿ ಕ್ಯಾಪಿಟಲ್ಸ್​ ಆರಂಭಿಕ ಆಟಗಾರ ಪೃಥ್ವಿ ಶಾ (18) ಔಟ್

    ದೀಪಕ್ ಚಹರ್​ಗೆ ಮೊದಲ ವಿಕೆಟ್

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್-ಶಿಖರ್ ಧವನ್ ಬ್ಯಾಟಿಂಗ್

    DC 25/1 (3.2)

      

  • 04 Oct 2021 09:15 PM (IST)

    ಡೆಲ್ಲಿ ಕ್ಯಾಪಿಟಲ್ಸ್​: ಟಾರ್ಗೆಟ್-137

  • 04 Oct 2021 09:13 PM (IST)

    ಟಾರ್ಗೆಟ್​-137

    ಡೆಲ್ಲಿ ಕ್ಯಾಪಿಟಲ್ಸ್​ಗೆ 137 ರನ್​ಗಳ ಟಾರ್ಗೆಟ್ ನೀಡಿದ ಚೆನ್ನೈ ಸೂಪರ್ ಕಿಂಗ್ಸ್​

    CSK 136/5 (20)

      

  • 04 Oct 2021 09:10 PM (IST)

    ಸಿಎಸ್​ಕೆ ಪರ ಅಂಬಾಟಿ ರಾಯುಡು 55 ರನ್

  • 04 Oct 2021 09:06 PM (IST)

    ಸಿಎಸ್​ಕೆ ಇನಿಂಗ್ಸ್​ ಅಂತ್ಯ

    ಕೊನೆಯ ಓವರ್​ನಲ್ಲಿ ಕೇವಲ 4  ರನ್​ ನೀಡಿದ ಅವೇಶ್ ಖಾನ್

    CSK 136/5 (20)

      

  • 04 Oct 2021 09:02 PM (IST)

    ಧೋನಿ ಔಟ್

    ಅವೇಶ್ ಖಾನ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಧೋನಿ

  • 04 Oct 2021 08:59 PM (IST)

    ಕೊನೆಯ ಓವರ್​ ಬಾಕಿ

    CSK 132/4 (19)

    ಕ್ರೀಸ್​ನಲ್ಲಿ ಅಂಬಾಟಿ ರಾಯುಡು-ಧೋನಿ ಬ್ಯಾಟಿಂಗ್

  • 04 Oct 2021 08:57 PM (IST)

    ವಾಟ್ ಎ ಶಾಟ್

    ನೋಕಿಯಾ ಎಸೆತದಲ್ಲಿ ಕವರ್ಸ್​ನತ್ತ ರಾಯುಡು ಸೂಪರ್ ಶಾಟ್…ಸಿಕ್ಸ್

  • 04 Oct 2021 08:55 PM (IST)

    ರಾಯುಡು ಭರ್ಜರಿ ಬ್ಯಾಟಿಂಗ್

    CSK 118/4 (18)

      

  • 04 Oct 2021 08:53 PM (IST)

    ರಾಯುಡು ರಾಕೆಟ್

    ಅವೇಶ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ರಾಯುಡು ಸೂಪರ್ ಶಾಟ್…ಸಿಕ್ಸ್

  • 04 Oct 2021 08:51 PM (IST)

    ಮಿಸ್ ಫೀಲ್ಡ್​

    ಅವೇಶ್ ಖಾನ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ರಾಯುಡು ರಾಕೆಟ್ ಶಾಟ್…ಶಿಖರ್ ಧವನ್ ಮಿಸ್ ಫೀಲ್ಡ್​…ಫೋರ್

    CSK 108/4 (17.3)

     

  • 04 Oct 2021 08:47 PM (IST)

    ವೆಲ್ಕಂ ಬೌಂಡರಿ

    ರಬಾಡ ಎಸೆತದಲ್ಲಿ ರಾಯುಡು ಸ್ಟ್ರೈಟ್ ಹಿಟ್…ಚೆಂಡು ಬೌಂಡರಿಗೆ- ಫೋರ್

    ನೂರರ ಗಡಿದಾಟಿದ ಸಿಎಸ್​ಕೆ ಸ್ಕೋರ್

  • 04 Oct 2021 08:41 PM (IST)

    15 ಓವರ್ ಮುಕ್ತಾಯ

    CSK 93/4 (15)

     

  • 04 Oct 2021 08:31 PM (IST)

    13 ಓವರ್ ಮುಕ್ತಾಯ

    CSK 85/4 (13)

     

    ಕ್ರೀಸ್​ನಲ್ಲಿ ಅಂಬಾಟಿ ರಾಯುಡು-ಧೋನಿ ಬ್ಯಾಟಿಂಗ್

  • 04 Oct 2021 08:27 PM (IST)

    CSK 80/4 (12)

    ಕ್ರೀಸ್​ನಲ್ಲಿ ಅಂಬಾಟಿ ರಾಯುಡು-ಧೋನಿ ಬ್ಯಾಟಿಂಗ್

  • 04 Oct 2021 08:25 PM (IST)

    ವೆಲ್ಕಂ ಬೌಂಡರಿ

    ಅವೇಶ್ ಖಾನ್ ಎಸೆತದಲ್ಲಿ ರಾಯುಡು ಬ್ಯಾಟ್​ನಿಂದ ಥರ್ಡ್​ ಮ್ಯಾನ್​ನತ್ತ ಬೌಂಡರಿ-ಫೋರ್

    CSK 76/4 (11.2)

     

  • 04 Oct 2021 08:20 PM (IST)

    10 ಓವರ್​ ಮುಕ್ತಾಯ

    CSK 69/4 (10)

     

  • 04 Oct 2021 08:17 PM (IST)

    9 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಅಂಬಾಟಿ ರಾಯುಡು-ಧೋನಿ ಬ್ಯಾಟಿಂಗ್

    CSK 65/4 (9)

     

  • 04 Oct 2021 08:12 PM (IST)

    ರಾಬಿನ್ ಉತ್ತಪ್ಪ ಔಟ್

    ಅಶ್ವಿನ್ ಎಸೆತದಲ್ಲಿ ರಾಬಿನ್ ಉತ್ತಪ್ಪ ಬಿಗ್ ಹಿಟ್​ಗೆ ಯತ್ನ…ಬೌಲರ್​ಗೆ ನೇರವಾಗಿ ಕ್ಯಾಚ್…ಉತ್ತಪ್ಪ (19) ಔಟ್

    CSK 62/4 (8.3)

     

  • 04 Oct 2021 08:08 PM (IST)

    ಮೂರನೇ ವಿಕೆಟ್ ಪತನ

    ಅಕ್ಷರ್ ಪಟೇಲ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಮೊಯೀನ್ ಅಲಿ (5)

    CSK 59/3 (7.4)

     

  • 04 Oct 2021 08:01 PM (IST)

    ಪವರ್​ಪ್ಲೇ ಮುಕ್ತಾಯ

    CSK 48/2 (6)

    ಕ್ರೀಸ್​ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್

  • 04 Oct 2021 08:00 PM (IST)

    ಉತ್ತಪ್ಪ ಬೌಂಡರಿ

    ರಬಾಡ ಎಸೆತದಲ್ಲಿ ಫೋರ್ ಬಾರಿಸಿದ ರಾಬಿನ್ ಉತ್ತಪ್ಪ

  • 04 Oct 2021 07:57 PM (IST)

    5 ಓವರ್ ಮುಕ್ತಾಯ

    CSK 41/2 (5)

      

    ಕ್ರೀಸ್​ನಲ್ಲಿ ಮೊಯೀನ್ ಅಲಿ-ರಾಬಿನ್ ಉತ್ತಪ್ಪ ಬ್ಯಾಟಿಂಗ್

  • 04 Oct 2021 07:56 PM (IST)

    ರುತುರಾಜ್ ಔಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಅಶ್ವಿನ್​ಗೆ ಕ್ಯಾಚ್ ನೀಡಿ ಹೊರನಡೆದ ರುತುರಾಜ್ ಗಾಯಕ್ವಾಡ್ (13)

  • 04 Oct 2021 07:52 PM (IST)

    CSK 36/1 (4)

    ಕ್ರೀಸ್​ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್

  • 04 Oct 2021 07:49 PM (IST)

    ಶಾಟ್…ರುತು…ಶಾಟ್

    ಕಗಿಸೋ ರಬಾಡ ಎಸೆತಕ್ಕೆ ಸ್ಟ್ರೈಟ್ ಹಿಟ್ ಮೂಲಕ ಬೌಂಡರಿ ಬಾರಿಸಿದ ರುತುರಾಜ್

  • 04 Oct 2021 07:45 PM (IST)

    ಡುಪ್ಲೆಸಿಸ್​ ಔಟ್

    ಅಕ್ಷರ್ ಪಟೇಲ್ ಎಸೆತದಲ್ಲಿ ಡುಪ್ಲೆಸಿಸ್ ಲೆಗ್​ ಸೈಡ್​ನತ್ತ​ ಬಿಗ್ ಹಿಟ್​…ಬೌಂಡರಿ ಲೈನ್ ಬಳಿ ಶ್ರೇಯಸ್ ಅಯ್ಯರ್ ಅತ್ಯುತ್ತಮ ಕ್ಯಾಚ್–ಡುಪ್ಲೆಸಿಸ್​ ಔಟ್

    CSK 28/1 (2.4)

      

  • 04 Oct 2021 07:42 PM (IST)

    2ನೇ ಓವರ್ ಮುಕ್ತಾಯ

    CSK 26/0 (2)

      

  • 04 Oct 2021 07:41 PM (IST)

    ಪುಲ್​-ಫಾಫ್

    ಅವೇಶ್ ಖಾನ್ ಎಕ್ಸ್​ಟ್ರಾ ಬೌನ್ಸ್ ಎಸೆತಕ್ಕೆ ಪುಲ್ ಶಾಟ್ ಉತ್ತರ ನೀಡಿದ ಡುಪ್ಲೆಸಿಸ್​…ಫೋರ್

  • 04 Oct 2021 07:40 PM (IST)

    ಫಾಫ್-ಶಾಟ್

    ಅವೇಶ್ ಖಾನ್ ಎಸೆತದಲ್ಲಿ ಆಫ್​ಸೈಡ್​ನತ್ತ ಬ್ಯೂಟಿಫುಲ್ ಶಾಟ್…ಫಾಫ್ ಡುಪ್ಲೆಸಿಸ್​ ಬ್ಯಾಟ್​ನಿಂದ ಫೋರ್

  • 04 Oct 2021 07:37 PM (IST)

    ಮೊದಲ ಓವರ್ ಮುಕ್ತಾಯ

    CSK 16/0 (1)

      

  • 04 Oct 2021 07:36 PM (IST)

    ರುತು-ರಾಜ

    ಅನ್ರಿಕ್ ನೋಕಿಯಾ ಎಸೆತದಲ್ಲಿ ರುತುರಾಜ್ ಬ್ಯಾಟ್​ ಎಡ್ಜ್…ಥರ್ಡ್​ ಮ್ಯಾನ್ ಫೀಲ್ಡರ್ ಮೂಲಕ ಮೊದಲ ಬೌಂಡರಿ

  • 04 Oct 2021 07:32 PM (IST)

    ವೈಡ್+ಫೋರ್

    ಅನ್ರಿಕ್ ನೋಕಿಯಾ ಅಗಲವಾದ ಎಸೆದ…ಅತಿರಿಕ್ತ ರನ್​ ಮೂಲಕ ಸಿಎಸ್​ಕೆಗೆ ಮೊದಲ ಬೌಂಡರಿ

  • 04 Oct 2021 07:31 PM (IST)

    ಮೊದಲ ಓವರ್

    ಬೌಲಿಂಗ್; ಅನ್ರಿಕ್ ನೋಕಿಯಾ

    ಆರಂಭಿಕರು: ಫಾಫ್ ಡುಪ್ಲೆಸಿಸ್, ರುತುರಾಜ್ ಗಾಯಕ್ವಾಡ್

  • 04 Oct 2021 07:12 PM (IST)

    ಕಣಕ್ಕಿಳಿಯುವ ಕಲಿಗಳು: ಸಿಎಸ್​ಕೆ ಪರ ಉತ್ತಪ್ಪ ಪದಾರ್ಪಣೆ

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ರಿಪಲ್ ಪಟೇಲ್, ಅಕ್ಷರ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

  • 04 Oct 2021 07:09 PM (IST)

    ಟಾಸ್ ವಿಡಿಯೋ

  • 04 Oct 2021 07:05 PM (IST)

    ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ರಿಪಲ್ ಪಟೇಲ್, ಅಕ್ಷರ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

  • 04 Oct 2021 07:04 PM (IST)

    ಡೆಲ್ಲಿ ಪರ ರಿಪಲ್ ಪಟೇಲ್ ಪದಾರ್ಪಣೆ

  • 04 Oct 2021 07:02 PM (IST)

    ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • 04 Oct 2021 06:32 PM (IST)

    ಗುರುವಿಗೆ ಶಿಷ್ಯನ ಸವಾಲು

  • 04 Oct 2021 06:31 PM (IST)

    ಡೇಂಜರಸ್ ಡಿಸಿ ಪಡೆ ಆಗಮನ

  • 04 Oct 2021 06:30 PM (IST)

    ಯೆಲ್ಲೊ ಪಡೆ ಆಗಮನ

  • 04 Oct 2021 06:29 PM (IST)

    DC vs CSK ಮುಖಾಮುಖಿ ಅಂಕಿ ಅಂಶಗಳು

  • 04 Oct 2021 06:28 PM (IST)

    ಪಿಚ್​ ಹಿಟ್ಟರ್: ಪಂತ್ ಪಿಚ್​ ಪರಿಶೀಲನೆ

  • Published On - Oct 04,2021 6:25 PM

    Follow us
    ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
    ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
    ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
    ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
    ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
    ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
    ‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
    ‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
    ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
    ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
    ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
    ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
    Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
    Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
    ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
    ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
    ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
    ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
    ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
    ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ