DC vs SRH Prediction Playing XI: ಇಬ್ಬರಿಗೂ ಗೆಲುವು ಅನಿವಾರ್ಯ; ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

| Updated By: ಪೃಥ್ವಿಶಂಕರ

Updated on: May 04, 2022 | 6:10 PM

DC vs SRH Prediction Playing XI IPL 2022: ಡೆಲ್ಲಿ ಮತ್ತು ಸನ್ ರೈಸರ್ಸ್ ಎರಡೂ ಇದುವರೆಗೆ ಸಮಾನ ಪಂದ್ಯಗಳನ್ನು ಆಡಿವೆ. ಸನ್ ರೈಸರ್ಸ್ ಐದು ಪಂದ್ಯಗಳಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದ್ದರೆ, ಡೆಲ್ಲಿ ಐದರಲ್ಲಿ ಸೋತು ನಾಲ್ಕರಲ್ಲಿ ಗೆದ್ದಿದೆ. ಸನ್ ರೈಸರ್ಸ್ ತಂಡ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ದೆಹಲಿ ತಂಡ ಎಂಟು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

DC vs SRH Prediction Playing XI: ಇಬ್ಬರಿಗೂ ಗೆಲುವು ಅನಿವಾರ್ಯ; ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11
DC vs SRH
Follow us on

ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League)ನ ಪ್ರಸಕ್ತ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಸ್ಥಿರತೆಯ ಕೊರತೆಯನ್ನು ಎದುರಿಸುತ್ತಿದೆ. ಬೌಲಿಂಗ್‌ನಿಂದ ಹಿಡಿದು ಬ್ಯಾಟಿಂಗ್‌ವರೆಗೂ ಸ್ಥಿರತೆಯಲ್ಲಿ ತಂಡ ಕೊರತೆ ಎದುರಿಸುತ್ತಿದೆ. ಐಪಿಎಲ್-2022ರಲ್ಲಿ ಡೆಲ್ಲಿ ತಂಡದ ಒಬ್ಬರು ಅಥವಾ ಇಬ್ಬರು ಆಟಗಾರರನ್ನು ಹೊರತುಪಡಿಸಿ ಯಾರೂ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಂಡಕ್ಕೆ ಪ್ಲೇಆಫ್ ಹಾದಿ ಕಷ್ಟಕರವಾಗಿ ಕಾಣುತ್ತಿದೆ. ಆದರೆ, ಇನ್ನೂ ಐದು ಪಂದ್ಯಗಳನ್ನು ಆಡಬೇಕಿದ್ದು, ಅದರಲ್ಲಿ ಸ್ಥಿರತೆ ಪ್ರದರ್ಶಿಸಿ ಗೆಲ್ಲಬೇಕಿದೆ. ಈ ಚಿಂತನೆಯ ನಂತರ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಗುರುವಾರ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಅವರಿಗೆ ಗೆಲುವಿನ ಅವಶ್ಯಕತೆಯಿದೆ.

ಡೆಲ್ಲಿ ಮತ್ತು ಸನ್ ರೈಸರ್ಸ್ ಎರಡೂ ಇದುವರೆಗೆ ಸಮಾನ ಪಂದ್ಯಗಳನ್ನು ಆಡಿವೆ. ಸನ್ ರೈಸರ್ಸ್ ಐದು ಪಂದ್ಯಗಳಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದ್ದರೆ, ಡೆಲ್ಲಿ ಐದರಲ್ಲಿ ಸೋತು ನಾಲ್ಕರಲ್ಲಿ ಗೆದ್ದಿದೆ. ಸನ್ ರೈಸರ್ಸ್ ತಂಡ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ದೆಹಲಿ ತಂಡ ಎಂಟು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಡೆಲ್ಲಿಗೆ ಈ ಪಂದ್ಯದಲ್ಲಿ ಗೆಲುವಿನ ಅನಿವಾರ್ಯತೆ ಎದುರಾಗಿದೆ. ಸೋಲು ಮುಂದಿನ ಸುತ್ತಿಗೆ ತಲುಪುವ ಸಮೀಕರಣವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿದೆ.

ದೆಹಲಿ ತಂಡ ಹೇಗಿರಲಿದೆ?
ಡೆಲ್ಲಿ ತಂಡದಲ್ಲಿ ಡೇವಿಡ್ ವಾರ್ನರ್ ಉತ್ತಮ ಪ್ರದರ್ಶನ ತೋರಿದ್ದಾರೆ ಮತ್ತು ಪೃಥ್ವಿ ಶಾ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ ಆದರೆ ಇವರಿಬ್ಬರು ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಸನ್ ರೈಸರ್ಸ್ ವಿರುದ್ಧ ಈ ಜೋಡಿ ಉತ್ತಮ ಪ್ರದರ್ಶನ ನೀಡಬೇಕೆಂದು ಡೆಲ್ಲಿ ತಂಡ ಬಯಸುತ್ತದೆ. ಹೀಗಾಗಿ ಪಂತ್ ತಂಡದ ಬ್ಯಾಟಿಂಗ್​ ವಿಭಾಗದಲ್ಲಿ ಬದಲಾವಣೆ ಕಾಣುತ್ತಿಲ್ಲ ಆದರೆ ಬೌಲಿಂಗ್​ನಲ್ಲಿ ಬದಲಾವಣೆ ಕಾಣಬಹುದಾಗಿದೆ. ಖಲೀಲ್ ಅಹ್ಮದ್ ಅವರ ಗಾಯದ ಬಗ್ಗೆ ಪರಿಸ್ಥಿತಿ ಸ್ಪಷ್ಟವಾಗಿಲ್ಲ ಆದರೆ ಅವರು ಫಿಟ್ ಆಗಿದ್ದರೆ, ಚೇತನ್ ಸಕರಿಯಾ ಅವರನ್ನು ಬದಲಾಯಿಸಬಹುದು. ಎನ್ರಿಕ್ ನಾರ್ಕಿಯಾ ಅವರ ಫಿಟ್ನೆಸ್ ಬಗ್ಗೆ ಪರಿಸ್ಥಿತಿಯು ಸ್ಪಷ್ಟವಾಗಿಲ್ಲ. ಅವರು ಫಿಟ್ ಆಗಿದ್ದರೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬದಲಾಯಿಸಬಹುದು.

ಇದನ್ನೂ ಓದಿ
ICC Annual Ranking: 5 ವರ್ಷಗಳ ನಂತರ ಟೆಸ್ಟ್​ನಲ್ಲಿ ಭಾರತದ ಅಧಿಪತ್ಯ ಅಂತ್ಯ! ODI-T20ಯಲ್ಲಿ ಬೆಸ್ಟ್ ಯಾರು ಗೊತ್ತಾ?
Breaking News: ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ್ದ ಪತ್ರಕರ್ತನಿಗೆ 2 ವರ್ಷ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ..!
DC vs SRH IPL 2022 Head To Head: ಎರಡು ತಂಡಗಳಿಗೂ ಗೆಲುವು ಅಗತ್ಯ; ಇಬ್ಬರ ಮುಖಾಮುಖಿ ವರದಿ ಹೀಗಿದೆ

ಹೈದರಾಬಾದ್‌ನಲ್ಲಿ ಬದಲಾವಣೆ?
ಅದೇ ವೇಳೆ ಹೈದರಾಬಾದ್ ತಂಡದಲ್ಲಿ ಬದಲಾವಣೆ ಖಚಿತ. ತಂಡದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದು ಅವರ ಸ್ಥಾನದಲ್ಲಿ ಜೆ ಸುಚಿತ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ತಂಡದಲ್ಲಿ ಬೇರೆ ಯಾವುದೇ ಬದಲಾವಣೆಗಳು ಗೋಚರಿಸುತ್ತಿಲ್ಲ. ತಂಡದ ಬೌಲಿಂಗ್ ದಾಳಿ ಅಮೋಘ ಆಟ ತೋರುತ್ತಿದೆ. ಅಭಿಷೇಕ್ ಶರ್ಮಾ ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಸತತವಾಗಿ ರನ್ ಗಳಿಸುತ್ತಿರುವ ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್ ಮತ್ತು ಕೇನ್ ವಿಲಿಯಮ್ಸನ್ ಅವರ ವಿಷಯದಲ್ಲೂ ಇದೇ ಆಗಿದೆ.

ಎರಡೂ ತಂಡಗಳ ಪ್ಲೇಯಿಂಗ್-11 ಹೀಗಿದೆ

ಡೆಲ್ಲಿ ಕ್ಯಾಪಿಟಲ್ಸ್ – ರಿಷಬ್ ಪಂತ್, ಪೃಥ್ವಿ ಶಾ, ಡೇವಿಡ್ ವಾರ್ನರ್, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್/ಆನ್ರಿಕ್ ನಾರ್ಖಿಯಾ, ಚೇತನ್ ಸಕಾರಿಯಾ/ಖಲೀಲ್ ಅಹ್ಮದ್

ಸನ್‌ರೈಸರ್ಸ್ ಹೈದರಾಬಾದ್- ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಜೆ ಸುಚಿತ್, ಶಶಾಂಕ್ ಸಿಂಗ್, ಮಾರ್ಕೊ ಯಾನ್ಸನ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್.

Published On - 6:10 pm, Wed, 4 May 22