VIDEO: ಕ್ಯಾಚ್ ಹಿಡಿದ ಸಿರಾಜ್​ರನ್ನು ಮೈದಾನದಲ್ಲೇ ನಿಂದಿಸಿದ ಚಹರ್..!

Deepak Chahar - Mohammed Siraj: ಈ ಪಂದ್ಯದಲ್ಲಿ 228 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್​ಮನ್​ಗಳು ವಿಫಲರಾದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ 21 ಎಸೆತಗಳಲ್ಲಿ 46 ರನ್​ ಬಾರಿಸಿ ಅಬ್ಬರಿಸಿದರು.

VIDEO: ಕ್ಯಾಚ್ ಹಿಡಿದ ಸಿರಾಜ್​ರನ್ನು ಮೈದಾನದಲ್ಲೇ ನಿಂದಿಸಿದ ಚಹರ್..!
Deepak Chahar - Mohammed Siraj
Updated By: ಝಾಹಿರ್ ಯೂಸುಫ್

Updated on: Oct 05, 2022 | 10:25 AM

India vs South Africa 3rd T20: ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಮೂರು ಪಂದ್ಯಗಳ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 49 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿತು. ಇದಾಗ್ಯೂ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು.

ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸೌತ್ ಆಫ್ರಿಕಾ ಬ್ಯಾಟ್ಸ್​​ಮನ್​ಗಳಾದ ರಿಲೀ ರೊಸ್ಸೋ (48 ಎಸೆತಗಳಲ್ಲಿ 100 ರನ್) ಮತ್ತು ಕ್ವಿಂಟನ್ ಡಿ ಕಾಕ್ (43 ಎಸೆತಗಳಲ್ಲಿ 68) ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಹಾಗೆಯೇ ಅಂತಿಮ ಓವರ್​ ವೇಳೆ ಕಣಕ್ಕಿಳಿದ ಡೇವಿಡ್ ಮಿಲ್ಲರ್ ದೀಪಕ್ ಚಹರ್​ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸುವ ಮೂಲಕ ಅಬ್ಬರಿಸಿದರು. ಪರಿಣಾಮ ಸೌತ್ ಆಫ್ರಿಕಾ ತಂಡವು 20 ಓವರ್‌ಗಳಲ್ಲಿ 227/3 ರನ್​ಗಳ ಬೃಹತ್ ಮೊತ್ತ ಪೇರಿಸಿತು.

ಇದನ್ನೂ ಓದಿ
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಆದರೆ ಕೊನೆಯ ಓವರ್​ನ 5ನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಕ್ಯಾಚ್ ನೀಡಿದ್ದರು. ಚಹರ್​ ಎಸೆತದಲ್ಲಿ ಲೆಗ್​ಸೈಡ್​ನತ್ತ ಭರ್ಜರಿ ಶಾಟ್ ಬಾರಿಸಿದ್ದರು. ಈ ವೇಳೆ ಬೌಂಡರಿ ಲೈನ್​ನಲ್ಲಿದ್ದ ಮೊಹಮ್ಮದ್ ಸಿರಾಜ್ ಕ್ಯಾಚ್ ಹಿಡಿದರೂ, ಹಿಂದಕ್ಕೆ ಸಾಗಿ ಬೌಂಡರಿ ಲೈನ್ ಮೆಟ್ಟಿದರು. ಮೊದಲೇ ಎರಡು ಸಿಕ್ಸ್ ಹೊಡೆಸಿಕೊಂಡು ಕುಪಿತಗೊಂಡಿದ್ದ ದೀಪಕ್ ಚಹರ್ ಮತ್ತಷ್ಟು ಕೋಪಗೊಂಡರು. ಅಲ್ಲದೆ ಕ್ಯಾಚ್ ಹಿಡಿದು ಬೌಂಡರಿ ಲೈನ್ ಮೆಟ್ಟಿದ ಸಿರಾಜ್​ ರನ್ನು ಮೈದಾನದಲ್ಲೇ ನಿಂದಿಸಿದರು. ಇತ್ತ  ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಆಕ್ರೋಶವನ್ನು ಹಾವಭಾವದ ಮೂಲಕ ಪ್ರದರ್ಶಿಸಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ 228 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್​ಮನ್​ಗಳು ವಿಫಲರಾದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ 21 ಎಸೆತಗಳಲ್ಲಿ 46 ರನ್​ ಬಾರಿಸಿ ಅಬ್ಬರಿಸಿದರು. ಆದರೆ ಉತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದ ಸೌತ್ ಆಫ್ರಿಕಾ ತಂಡವು ಅಂತಿಮವಾಗಿ 18.3 ಓವರ್​ಗಳಲ್ಲಿ ಟೀಮ್ ಇಂಡಿಯಾವನ್ನು 170 ರನ್​ಗಳಿಗೆ ಆಲೌಟ್ ಮಾಡಿತು. ಈ ಮೂಲಕ ಗೆಲುವಿನೊಂದಿಗೆ ಸರಣಿಯನ್ನು ಅಂತ್ಯಗೊಳಿಸಿದೆ.