WPL 2023, DC vs MI FINAL, Highlights: ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಮುಂಬೈ
DC vs MI FINAL, WPL 2023: ಬ್ರಬನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸುವುದರೊಂದಿಗೆ ಪ್ರಶಸ್ತಿ ಎತ್ತಿಹಿಡಿದಿದೆ.

ಬ್ರಬನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸುವುದರೊಂದಿಗೆ ಪ್ರಶಸ್ತಿ ಎತ್ತಿಹಿಡಿದಿದೆ.ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ, ಮುಂಬೈ ಇಂಡಿಯನ್ಸ್ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
LIVE NEWS & UPDATES
-
6 ಎಸೆತಗಳಲ್ಲಿ 5 ರನ್ ಅಗತ್ಯ
ಪಂದ್ಯ ರೋಚಕ ಘಟ್ಟ ತಲುಪಿದ್ದು, ಈ ಓವರ್‌ನಲ್ಲಿ 2 ಅದ್ಭುತ ಬೌಂಡರಿ ಬಂದವು. ಮುಂಬೈ ಪರ ಎಮಿಲಿಯಾ ಕೆರ್ 13 ರನ್ ಹಾಗೂ ಸಿವರ್ ಬ್ರಂಟ್ 54 ರನ್ ಗಳಿಸಿ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಗೆಲುವಿಗೆ 6 ಎಸೆತಗಳಲ್ಲಿ 5 ರನ್ ಅಗತ್ಯವಿದೆ.
-
12 ಎಸೆತಗಳಲ್ಲಿ 21 ರನ್
ಮುಂಬೈ ಪರ ಎಮಿಲಿಯಾ ಕೆರ್ 1 ರನ್ ಹಾಗೂ ಸಿವರ್ ಬ್ರಂಟ್ 45 ರನ್ ಗಳಿಸಿ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಗೆಲುವಿಗೆ 12 ಎಸೆತಗಳಲ್ಲಿ 21 ರನ್ ಅಗತ್ಯವಿದೆ.
-
-
17 ಓವರ್ ಆಟ ಅಂತ್ಯ
ಮುಂಬೈ ಪರ ಎಮಿಲಿಯಾ ಕೆರ್ 1 ರನ್ ಹಾಗೂ ಸಿವರ್ ಬ್ರಂಟ್ 45 ರನ್ ಗಳಿಸಿ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಗೆಲುವಿಗೆ 18 ಎಸೆತಗಳಲ್ಲಿ 26 ರನ್ ಅಗತ್ಯವಿದೆ.
-
ಮೂರನೇ ವಿಕೆಟ್ ಪತನ
ಮುಂಬೈ ಇಂಡಿಯನ್ಸ್ ಮೂರನೇ ವಿಕೆಟ್ ಪತನಗೊಂಡಿತು, ನಾಯಕಿ ಹರ್ಮನ್‌ಪ್ರೀತ್ ಕೌರ್ 37 ರನ್‌ಗಳಿಗೆ ರನೌಟ್ ಆದರು.
-
15 ಓವರ್‌ಗಳ ಆಟ ಅಂತ್ಯ
ಈ ಓವರ್‌ನ ಮೊದಲ ಎಸೆತದಲ್ಲಿ ಅಮೋಘ ಬೌಂಡರಿ ಬಂದಿತು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 36 ರನ್ ಮತ್ತು ಸಿವರ್ ಬ್ರಂಟ್ 28 ರನ್‌ಗಳೊಂದಿಗೆ ಆಡುತ್ತಿದ್ದಾರೆ.
-
-
14 ಓವರ್‌ಗಳ ನಂತರ ಮುಂಬೈ ಸ್ಕೋರ್ 81/2
ಈ ಓವರ್‌ನಲ್ಲಿ ಮುಂಬೈ 5 ರನ್ ಗಳಿಸಿತು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 31 ರನ್ ಮತ್ತು ಸಿವರ್ ಬ್ರಂಟ್ 27 ರನ್‌ಗಳೊಂದಿಗೆ ಆಡುತ್ತಿದ್ದಾರೆ.
-
ಕೌರ್ ಬೌಂಡರಿ
ಈ ಓವರ್‌ನಲ್ಲಿ ನಾಯಕಿ ಕೌರ್ ಅದ್ಭುತ ಬೌಂಡರಿ ಬಾರಿಸಿದರು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 28 ರನ್ ಮತ್ತು ಸಿವರ್ ಬ್ರಂಟ್ 26 ರನ್‌ಗಳೊಂದಿಗೆ ಆಡುತ್ತಿದ್ದಾರೆ.
-
2 ಬೌಂಡರಿ
ಈ ಓವರ್‌ನಲ್ಲಿ 2 ಬೌಂಡರಿಗಳು ಬಂದವು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 22 ಮತ್ತು ಸಿವರ್ ಬ್ರಂಟ್ 23 ರನ್‌ಗಳೊಂದಿಗೆ ಆಡುತ್ತಿದ್ದಾರೆ.
-
10 ಓವರ್ ಆಟ ಅಂತ್ಯ
ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 16 ರನ್ ಮತ್ತು ಸಿವರ್ ಬ್ರಂಟ್ 16 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಮುಂಬೈ ಗೆಲುವಿಗೆ 60 ಎಸೆತಗಳಲ್ಲಿ 80 ರನ್ ಬೇಕಿದೆ.
-
ಕೌರ್ ಬೌಂಡರಿ
ನಾಯಕಿ ಹರ್ಮನ್‌ಪ್ರೀತ್ ಕೌರ್ ಅಮೋಘ ಬೌಂಡರಿ ಬಾರಿಸಿದರು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 11 ರನ್ ಮತ್ತು ಸಿವರ್ ಬ್ರಂಟ್ 15 ರನ್‌ಗಳೊಂದಿಗೆ ಆಡುತ್ತಿದ್ದಾರೆ.
-
8 ಓವರ್‌ಗಳ ನಂತರ ಮುಂಬೈ ಸ್ಕೋರ್ 36/2
ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 4 ಮತ್ತು ಸಿವರ್ ಬ್ರಂಟ್ 13 ರನ್‌ಗಳೊಂದಿಗೆ ಆಡುತ್ತಿದ್ದಾರೆ.
-
ಪವರ್ ಪ್ಲೇ ಅಂತ್ಯ
ಜೊನಾಸನ್ ಅವರ ಓವರ್‌ನಲ್ಲಿ 1 ರನ್ ಕೂಡ ಬರಲಿಲ್ಲ. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 2 ರನ್ ಮತ್ತು ಸಿವರ್ ಬ್ರಂಟ್ 4 ರನ್‌ಗಳೊಂದಿಗೆ ಆಡುತ್ತಿದ್ದಾರೆ.
-
4 ಓವರ್ ಅಂತ್ಯ, 24/2
ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 1 ರನ್ ಮತ್ತು ಸಿವರ್ ಬ್ರಂಟ್ 2 ರನ್‌ಗಳೊಂದಿಗೆ ಆಡುತ್ತಿದ್ದಾರೆ.
-
ಮ್ಯಾಥ್ಯೂಸ್ ಔಟ್
ಮುಂಬೈ ಇಂಡಿಯನ್ಸ್‌ನ ಎರಡನೇ ವಿಕೆಟ್ ಪತನಗೊಂಡಿತು, ಡೆಲ್ಲಿ ಬೌಲರ್ ಜೊನಾಸನ್ ಅವರ ಓವರ್‌ನಲ್ಲಿ ಮ್ಯಾಥ್ಯೂಸ್ 14 ರನ್‌ಗಳಿಗೆ ಕ್ಯಾಚಿತ್ತು ನಿರ್ಗಮಿಸಿದರು.
-
3 ಓವರ್‌ಗಳ ನಂತರ ಮುಂಬೈ ಸ್ಕೋರ್ 22/1
ಈ ಓವರ್‌ನಲ್ಲಿ ಫೋರ್ ಬಂತು. ಮುಂಬೈ ಪರ ಮ್ಯಾಥ್ಯೂಸ್ 13 ರನ್ ಹಾಗೂ ಸಿವರ್ ಬ್ರಂಟ್ 2 ರನ್ ಗಳಿಸಿ ಆಡುತ್ತಿದ್ದಾರೆ.
-
ಮೊದಲ ವಿಕೆಟ್ ಪತನ
ಮುಂಬೈ ಇಂಡಿಯನ್ಸ್‌ನ ಮೊದಲ ವಿಕೆಟ್ ಪತನ, ರಾಧಾ ಯಾದವ್ ಅವರ ಓವರ್‌ನಲ್ಲಿ ಯಾಸ್ತಿಕಾ ಭಾಟಿಯಾ 4 ರನ್‌ಗಳಿಗೆ ಕ್ಯಾಚಿತ್ತು ಔಟಾದರು.
-
ಮೊದಲ ಓವರ್ ಅಂತ್ಯ
ಮೊದಲ ಓವರ್‌ನಲ್ಲಿ 2 ಬೌಂಡರಿ ಬಂದವು. ಮುಂಬೈ ಪರ ಮ್ಯಾಥ್ಯೂಸ್ 8 ಹಾಗೂ ಯಾಸ್ತಿಕಾ 0 ರನ್ ಗಳಿಸಿ ಆಡುತ್ತಿದ್ದಾರೆ.
-
ಡೆಲ್ಲಿ ಇನ್ನಿಂಗ್ಸ್ ಅಂತ್ಯ
ಅಂತಿಮ ಓವರ್‌ನಲ್ಲಿ 2 ಸಿಕ್ಸರ್ ಬಂದವು. ಅಂತಿಮವಾಗಿ ಡೆಲ್ಲಿ ಪರ ರಾಧಾ 27 ರನ್ ಹಾಗೂ ಶಿಖಾ ಪಾಂಡೆ 27 ರನ್ ಗಳಿಸಿ ಅಜೇಯರಾಗಿ ಮರಳಿದರು.
-
19 ಓವರ್ ಅಂತ್ಯ
ವಾಂಗ್ ಅವರ ಓವರ್‌ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಬಂತು. ಡೆಲ್ಲಿ ಪರ ರಾಧಾ 12 ರನ್ ಹಾಗೂ ಶಿಖಾ ಪಾಂಡೆ 26 ರನ್ ಗಳಿಸಿ ಆಡುತ್ತಿದ್ದಾರೆ.19 ಓವರ್‌ಗಳ ನಂತರ ಡೆಲ್ಲಿ ಸ್ಕೋರ್ 115/9.
-
18 ಓವರ್‌ಗಳ ನಂತರ ದೆಹಲಿ ಸ್ಕೋರ್ 95/9
ರಾಧಾ 7 ರನ್ ಮತ್ತು ಶಿಖಾ ಪಾಂಡೆ 11 ರನ್‌ಗಳಿಸಿ ಆಡುತ್ತಿದ್ದಾರೆ.18 ಓವರ್‌ಗಳ ನಂತರ ದೆಹಲಿಯ ಸ್ಕೋರ್ 95/9.
-
ಒಂಬತ್ತನೇ ವಿಕೆಟ್ ಪತನ
ಡೆಲ್ಲಿ ಕ್ಯಾಪಿಟಲ್ಸ್‌ನ ಒಂಬತ್ತನೇ ವಿಕೆಟ್ ಪತನ. ತಾನಿಯಾ ಭಾಟಿಯಾ 0 ರನ್‌ಗಳಿಗೆ ಔಟಾದರು.
-
ಎಂಟನೇ ವಿಕೆಟ್ ಪತನ
ಡೆಲ್ಲಿ ಕ್ಯಾಪಿಟಲ್ಸ್‌ನ ಎಂಟನೇ ವಿಕೆಟ್ ಪತನವಾಯಿತು, ಮಿನು 1 ರನ್‌ಗೆ ಸ್ಟಂಪ್‌ಔಟ್ ಆದರು.
-
15 ಓವರ್‌ಗಳ ನಂತರ ಡೆಲ್ಲಿ ಸ್ಕೋರ್ 79/7
ಡೆಲ್ಲಿ ಪರ ಶಿಖಾ 3 ರನ್ ಮತ್ತು ಮಿನು ಮಣಿ 1 ರನ್ ಗಳಿಸಿ ಆಡುತ್ತಿದ್ದಾರೆ.15 ಓವರ್‌ಗಳ ನಂತರ ಡೆಲ್ಲಿ ಸ್ಕೋರ್ 79/7.
-
7ನೇ ವಿಕೆಟ್
ಡೆಲ್ಲಿ ಕ್ಯಾಪಿಟಲ್ಸ್‌ನ ಏಳನೇ ವಿಕೆಟ್ ಪತನ, ಜೊನಾಸನ್ 2 ರನ್‌ಗಳಿಗೆ ಕ್ಯಾಚಿತ್ತು ಔಟಾಗಿದ್ದಾರೆ.
-
ಆರನೇ ವಿಕೆಟ್ ಪತನ
ಡೆಲ್ಲಿ ಕ್ಯಾಪಿಟಲ್ಸ್‌ನ ಆರನೇ ವಿಕೆಟ್ ಪತನ, ಅರುಧಂತಿ ರೆಡ್ಡಿ 0 ರನ್‌ಗೆ ಕ್ಯಾಚಿತ್ತು ಔಟಾದರು
-
ಮೆಗ್ ಲ್ಯಾನಿಂಗ್ ಔಟ್
ಡೆಲ್ಲಿ ಕ್ಯಾಪಿಟಲ್ಸ್ ಐದನೇ ವಿಕೆಟ್ ಪತನಗೊಂಡಿತು, ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 35 ರನ್ ಗಳಿಸಿ ರನೌಟ್ ಆದರು.
-
4ನೇ ವಿಕೆಟ್ ಪತನ
ಈ ಓವರ್‌ನಲ್ಲಿ ಮಾರಿಜಾನ್ ಕೆಪ್ 18 ರನ್ ಗಳಿಸಿ ಔಟಾದರು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 35 ರನ್ ಹಾಗೂ ಜೋನಾಸನ್ 1 ರನ್ ಗಳಿಸಿ ಆಡುತ್ತಿದ್ದಾರೆ.
-
10 ಓವರ್‌ಗಳ ಆಟ ಅಂತ್ಯ
ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 35 ರನ್ ಮತ್ತು ಮರಿಜಾನ್ ಕೇಪ್ 14 ರನ್ ಗಳಿಸಿ ಆಡುತ್ತಿದ್ದಾರೆ.10 ಓವರ್‌ಗಳ ನಂತರ ಡೆಲ್ಲಿ ಸ್ಕೋರ್ 68/3.
-
ಡೆಲ್ಲಿ ಅರ್ಧಶತಕ
ಮುಂಬೈ ಬೌಲರ್ ವಾಂಗ್ ಅವರ ಓವರ್‌ನಲ್ಲಿ ಡೆಲ್ಲಿ 5 ರನ್ ಗಳಿಸಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 27 ರನ್ ಹಾಗೂ ಮರಿಜನ್ ಕಾಪ್ 6 ರನ್ ಗಳಿಸಿ ಆಡುತ್ತಿದ್ದಾರೆ.
-
6ನೇ ಓವರ್‌ನಲ್ಲಿ 1 ರನ್
ಮುಂಬೈ ಬೌಲರ್ ಸೈಕಾ ಇಶಾಕ್ ಅವರ ಓವರ್‌ನಲ್ಲಿ ಡೆಲ್ಲಿ 1 ರನ್ ಗಳಿಸಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 17 ರನ್ ಹಾಗೂ ಮರಿಜಾನ್ ಕಪ್ 1 ರನ್ ಗಳಿಸಿ ಆಡುತ್ತಿದ್ದಾರೆ.
-
5 ಓವರ್ ಆಟ ಅಂತ್ಯ
ಮುಂಬೈ ಬೌಲರ್ ವಾಂಗ್ ಅವರ ಓವರ್‌ನಲ್ಲಿ ಡೆಲ್ಲಿ 3 ರನ್ ಗಳಿಸಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 16 ರನ್ ಹಾಗೂ ಮರಿಜಾನ್ ಕಪ್ 1 ರನ್ ಗಳಿಸಿ ಆಡುತ್ತಿದ್ದಾರೆ.
-
ಡೆಲ್ಲಿ ಕ್ಯಾಪಿಟಲ್ಸ್ ಮೂರನೇ ವಿಕೆಟ್ ಪತನ
ಡೆಲ್ಲಿ ಕ್ಯಾಪಿಟಲ್ಸ್‌ನ ಮೂರನೇ ವಿಕೆಟ್ ಪತನವಾಗಿದೆ. ವಾಂಗ್ ಅವರ ಫುಲ್ ಟಾಸ್ ಎಸೆತದಲ್ಲಿ 9 ರನ್ ಗಳಿಸಿದ್ದ ಜೆಮಿಮಾ ಕ್ಯಾಚಿತ್ತು ಔಟಾಗಿದ್ದಾರೆ.
-
3 ಓವರ್‌ಗಳ ನಂತರ 29/2
ಈ ಓವರ್‌ನಲ್ಲಿ 3 ಬೌಂಡರಿಗಳು ಕಂಡವು.ಮುಂಬೈ ಬೌಲರ್ ಸಿವರ್ ಬ್ರಂಟ್ ಅವರ ಓವರ್‌ನಲ್ಲಿ ಡೆಲ್ಲಿ 13 ರನ್ ಗಳಿಸಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 10 ರನ್ ಹಾಗೂ ಜೆಮಿಮಾ 8 ರನ್ ಗಳಿಸಿ ಆಡುತ್ತಿದ್ದಾರೆ.
-
ಎರಡನೇ ವಿಕೆಟ್ ಪತನ
ವಾಂಗ್ ಒಂದೇ ಓವರ್‌ನಲ್ಲಿ ಮತ್ತೊಂದು ವಿಕೆಟ್ ಪತನವಾಗಿದೆ. ಆಲಿಸ್ ಕ್ಯಾಪ್ಸಿ ಶೂನ್ಯಕ್ಕೆ ಕ್ಯಾಚಿತ್ತು ಔಟಾದರು.
-
ಶಫಾಲಿ ಔಟ್
ಹಿಂದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ ಮುಂಬೈ ಬೌಲರ್ ವಾಂಗ್, ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ ವಿಕೆಟ್ ಉರುಳಿಸಿದ್ದಾರೆ. ಶೆಫಾಲಿ ವರ್ಮಾ 11 ರನ್‌ಗಳಿಗೆ ಕ್ಯಾಚಿತ್ತು ಔಟಾದರು.
-
ಮೊದಲ ಓವರ್‌ನ ನಂತರ ಡೆಲ್ಲಿ ಸ್ಕೋರ್ 2/0
ಮುಂಬೈ ಪರ ಮೊದಲ ಓವರ್ ಎಸೆದ ಸಿವರ್ ಬ್ರಂಟ್ ಅವರ ಓವರ್‌ನಲ್ಲಿ ಡೆಲ್ಲಿ 2 ರನ್ ಗಳಿಸಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 1 ರನ್ ಹಾಗೂ ಶೆಫಾಲಿ ವರ್ಮಾ 1 ರನ್ ಗಳಿಸಿ ಆಡುತ್ತಿದ್ದಾರೆ.
-
ಉಭಯ ತಂಡಗಳು
? Team Updates ?
What do you make of the two sides in the #Final ?#TATAWPL | #DCvMI pic.twitter.com/33MaS18dQH
— Women's Premier League (WPL) (@wplt20) March 26, 2023
-
ಮುಂಬೈ ಇಂಡಿಯನ್ಸ್
ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಲಿ ಮ್ಯಾಥ್ಯೂಸ್, ನೇಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂತಮಣಿ ಕಲಿತಾ, ಸೈಕಾ ಇಶಾಕ್
-
ಡೆಲ್ಲಿ ಕ್ಯಾಪಿಟಲ್ಸ್
ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಮೇರಿಜಾನ್ ಕೇಪ್, ಎಲಿಸ್ ಕ್ಯಾಪ್ಸಿ, ಜೆಸ್ ಜೊನಾಸನ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಶಿಖಾ ಪಾಂಡೆ, ಮಿನು ಮಣಿ
-
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್
ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಪಂದ್ಯ 7.30ಕ್ಕೆ ಆರಂಭವಾಗಲಿದೆ.
-
ಶೀಘ್ರದಲ್ಲೇ ಟಾಸ್
ಮಹಿಳೆಯರ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದ ಟಾಸ್ ಸಂಜೆ 7 ಗಂಟೆಗೆ ನಡೆಯುವ ಸಾಧ್ಯತೆಯಿದೆ.
Published On - Mar 26,2023 6:59 PM
