AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs RCB, WPL 2023: ಆರ್​ಸಿಬಿ ತಂಡಕ್ಕೆ ಸತತ 5ನೇ ಸೋಲು

Delhi Capitals vs Royal Challengers Bangalore: ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.

DC vs RCB, WPL 2023: ಆರ್​ಸಿಬಿ ತಂಡಕ್ಕೆ ಸತತ 5ನೇ ಸೋಲು
RCB vs DC
TV9 Web
| Edited By: |

Updated on:Mar 13, 2023 | 11:24 PM

Share

DC vs RCB, WPL 2023: ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್​ ಪ್ರೀಮಿಯರ್ ಲೀಗ್​ನ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಎಲ್ಲಿಸ್ ಪೆರ್ರಿ (67) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 150 ರನ್​ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಅದರಲ್ಲೂ ಅಂತಿಮ ಓವರ್​ನಲ್ಲಿ ಡೆಲ್ಲಿಗೆ ಗೆಲ್ಲಲು 9 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಜೆಸ್ ಜೊನಾಸನ್ ಆರ್​ಸಿಬಿ ಕೈಯಿಂದ ಜಯವನ್ನು ಕಸಿದುಕೊಂಡರು. ಅಲ್ಲದೆ 19.4 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಇದರೊಂದಿಗೆ ವುಮೆನ್ಸ್ ಪ್ರೀಮಿಯರ್​ ಲೀಗ್​ನಲ್ಲಿ ಆಡಿದ 5 ಪಂದ್ಯಗಳಲ್ಲೂ ಆರ್​ಸಿಬಿ ತಂಡ ಸೋಲನುಭವಿಸಿದೆ. ಅಲ್ಲದೆ ಇದುವರೆಗೆ ಗೆಲುವಿನ ಖಾತೆ ತೆರೆಯಲು ವಿಫಲವಾಗಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.

ಆರ್​ಸಿಬಿ- 150/4 (20)

ಡೆಲ್ಲಿ ಕ್ಯಾಪಿಟಲ್ಸ್- 154/4 (19.4)

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ಟಾರಾ ನೋರಿಸ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್

ಡೆಲ್ಲಿ ಕ್ಯಾಪಿಟಲ್ಸ್​ ತಂಡ: ಮೆಗ್ ಲ್ಯಾನಿಂಗ್ (ನಾಯಕಿ) , ತಾನಿಯಾ ಭಾಟಿಯಾ (ವಿಕೆಟ್ ಕೀಪರ್) , ಶಫಾಲಿ ವರ್ಮಾ , ಲಾರಾ ಹ್ಯಾರಿಸ್ , ಜೆಮಿಮಾ ರೋಡ್ರಿಗಸ್ , ಮರಿಝನ್ನೆ ಕಪ್ , ಜೆಸ್ ಜೊನಾಸೆನ್ , ಮಿನ್ನು ಮಣಿ , ರಾಧಾ ಯಾದವ್ , ಶಿಖಾ ಪಾಂಡೆ , ತಾರಾ ನಾರ್ರಿಸ್ , ಅರುಂಧತಿ ಎ ಕಾಪ್ಸೆಯ್ , ಜಾಸ್ ಅಲ್ ಕಾಪ್ತಾರ್ , ಟಿಟಾಸ್ ಸಾಧು , ಸ್ನೇಹ ದೀಪ್ತಿ , ಪೂನಂ ಯಾದವ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ಸೋಫಿ ಡಿವೈನ್ , ಎಲ್ಲಿಸ್ ಪೆರ್ರಿ , ಕನಿಕಾ ಅಹುಜಾ , ಹೀದರ್ ನೈಟ್ , ಶ್ರೇಯಾಂಕಾ ಪಾಟೀಲ್ , ಎರಿನ್ ಬರ್ನ್ಸ್ , ಕೋಮಲ್ ಝಂಝಾದ್ , ರೇಣುಕಾ ಠಾಕೂರ್ ಸಿಂಗ್ , ಸಹನಾ ಪವಾರ್ , ಪೂನಮ್ ಖೇಮ್ನಾರ್ , ದಿಶಾ ಕಸತ್, ಮೇಗನ್ ಶುಟ್, ಡೇನ್ ವ್ಯಾನ್ ನೀಕರ್ಕ್ , ಪ್ರೀತಿ ಬೋಸ್ , ಇಂದ್ರಾಣಿ ರಾಯ್ , ಆಶಾ ಶೋಬನಾ.

LIVE NEWS & UPDATES

The liveblog has ended.
  • 13 Mar 2023 10:43 PM (IST)

    DC vs RCB Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ

    RCBW 150/4 (20)

    DCW 154/4 (19.4)

    6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್​

  • 13 Mar 2023 10:42 PM (IST)

    DC vs RCB Live Score, WPL 2023: ಭರ್ಜರಿ ಸಿಕ್ಸ್

    ರೇಣುಕಾ ಸಿಂಗ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ಜೆಸ್ ಜೊನಾಸನ್

    RCBW 150/4 (20)

    DCW 150/4 (19.3)

     

  • 13 Mar 2023 10:39 PM (IST)

    DC vs RCB Live Score, WPL 2023: 9 ರನ್​ಗಳ ಅವಶ್ಯಕತೆ

    RCBW 150/4 (20)

    DCW 142/4 (19)

    ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು ಕೊನೆಯ ಓವರ್​ನಲ್ಲಿ 9 ರನ್​ಗಳ ಅವಶ್ಯಕತೆ

  • 13 Mar 2023 10:38 PM (IST)

    DC vs RCB Live Score, WPL 2023: ಸ್ವೀಪ್ ಶಾಟ್

    ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಸ್ವೀಪ್ ಶಾಟ್ ಬೌಂಡರಿ ಬಾರಿಸಿದ ಜೆಸ್

    DCW 141/4 (18.4)

      

  • 13 Mar 2023 10:35 PM (IST)

    DC vs RCB Live Score, WPL 2023: 12 ಎಸೆತಗಳು ಬಾಕಿ

    ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 12 ಎಸೆತಗಳಲ್ಲಿ 16 ರನ್​ಗಳ ಅವಶ್ಯಕತೆ

    RCBW 150/4 (20)

    DCW 135/4 (18)

      

  • 13 Mar 2023 10:32 PM (IST)

    DC vs RCB Live Score, WPL 2023: ಭರ್ಜರಿ ಸಿಕ್ಸ್

    ಎಲ್ಲಿಸ್ ಪೆರ್ರಿ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಮರಿಝನ್ನೆ ಕಪ್

    DCW 133/4 (17.3)

      

  • 13 Mar 2023 10:29 PM (IST)

    DC vs RCB Live Score, WPL 2023: 3 ಓವರ್​ಗಳು ಬಾಕಿ

    DCW 127/4 (17)

      

    ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 18 ಎಸೆತಗಳಲ್ಲಿ 24 ರನ್​ಗಳ ಗುರಿ

  • 13 Mar 2023 10:28 PM (IST)

    DC vs RCB Live Score, WPL 2023: ರಾಕೆಟ್ ಶಾಟ್

    ಮೇಗನ್ ಶುಟ್ ಎಸೆತದಲ್ಲಿ ಆಫ್​ ಸೈಡ್​ನತ್ತ ಪವರ್​ಫುಲ್ ಶಾಟ್ ಬಾರಿಸಿದ ಮರಿಝನ್ನೆ ಕಪ್

    DCW 126/4 (16.5)

      

  • 13 Mar 2023 10:25 PM (IST)

    DC vs RCB Live Score, WPL 2023: 24 ಎಸೆತಗಳು ಬಾಕಿ

    RCBW 150/4 (20)

    DCW 122/4 (16)

      

    ಡೆಲ್ಲಿ ಕ್ಯಾಪಿಟಲ್ಸ್​ಗೆ 24 ಎಸೆತಗಳಲ್ಲಿ 29 ರನ್​ಗಳ ಅವಶ್ಯಕತೆ
  • 13 Mar 2023 10:24 PM (IST)

    DC vs RCB Live Score, WPL 2023: ಜೆಸ್ ಬೌಂಡರಿ

    ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಆಫ್​ ಸೈಡ್​ನತ್ತ ಬೌಂಡರಿ ಬಾರಿಸಿದ ಎಡಗೈ ಆಟಗಾರ್ತಿ ಜೆಸ್ ಜೊನಾಸನ್

    DCW 122/4 (15.5)

      

  • 13 Mar 2023 10:21 PM (IST)

    DC vs RCB Live Score, WPL 2023: 15 ಓವರ್ ಮುಕ್ತಾಯ

    DCW 114/4 (15)

     

    ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 30 ಎಸೆತಗಳಲ್ಲಿ 37 ರನ್​ಗಳ ಅವಶ್ಯಕತೆ

  • 13 Mar 2023 10:18 PM (IST)

    DC vs RCB Live Score, WPL 2023: ಆಕರ್ಷಕ ಬೌಂಡರಿ

    ಆಶಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಆಕರ್ಷಕ ಫೋರ್ ಬಾರಿಸಿದ ಜೆಸ್ ಜೊನಾಸನ್

    DCW 113/4 (14.5)

      

  • 13 Mar 2023 10:16 PM (IST)

    DC vs RCB Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ 4ನೇ ವಿಕೆಟ್ ಪತನ

    ಆಶಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕೀಪರ್​ಗೆ ಕ್ಯಾಚ್ ನೀಡಿ ಜೆಮಿಮಾ (32)

    DCW 109/4 (14.3)

      

  • 13 Mar 2023 10:09 PM (IST)

    DC vs RCB Live Score, WPL 2023: ಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್

    DCW 100/3 (13.3)

      

    ಕ್ರೀಸ್​ನಲ್ಲಿ ಜೆಮಿಮಾ – ಮರಿಝನ್ನೆ ಕಪ್ ಬ್ಯಾಟಿಂಗ್

  • 13 Mar 2023 10:04 PM (IST)

    DC vs RCB Live Score, WPL 2023: ವೆಲ್ಕಂ ಬೌಂಡರಿ

    ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಜೆಮಿಮಾ

    DCW 95/3 (12.2)

      

  • 13 Mar 2023 09:48 PM (IST)

    DC vs RCB Live Score, WPL 2023: 3ನೇ ವಿಕೆಟ್ ಪತನ

    ಆಶಾ ಶೋಬನಾ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಮೆಗ್ ಲ್ಯಾನಿಂಗ್ (15)

    DCW 70/3 (8.4)

      

  • 13 Mar 2023 09:40 PM (IST)

    DC vs RCB Live Score, WPL 2023: 7 ಓವರ್​ ಮುಕ್ತಾಯ

    DCW 60/2 (7)

      

    ಕ್ರೀಸ್​ನಲ್ಲಿ ಜೆಮಿಮಾ ರೋಡಿಗ್ರಸ್ – ಮೆಗ್ ಲ್ಯಾನಿಂಗ್ ಬ್ಯಾಟಿಂಗ್

  • 13 Mar 2023 09:34 PM (IST)

    DC vs RCB Live Score, WPL 2023: ಅರ್ಧಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್

    DCW 50/2 (5.4)

     ಕ್ರೀಸ್​ನಲ್ಲಿ ಮೆಗ್ ಲ್ಯಾನಿಂಗ್ – ಜೆಮಿಮಾ ರೋಡಿಗ್ರಸ್ ಬ್ಯಾಟಿಂಗ್

  • 13 Mar 2023 09:28 PM (IST)

    DC vs RCB Live Score, WPL 2023: 2ನೇ ವಿಕೆಟ್ ಪತನ

    ಪ್ರೀತಿ ಬೋಸ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಅಲೀಸ್ ಕ್ಯಾಪ್ಸಿ (38)

    DCW 45/2 (4.5)

      

  • 13 Mar 2023 09:27 PM (IST)

    DC vs RCB Live Score, WPL 2023: ಹ್ಯಾಟ್ರಿಕ್ ಫೋರ್

    ಪ್ರೀತಿ ಬೋಸ್ ಓವರ್​ನಲ್ಲಿ ಹ್ಯಾಟ್ರಿಕ್ ಫೋರ್ ಸಿಡಿಸಿದ ಅಲೀಸ್ ಕ್ಯಾಪ್ಸಿ

    DCW 45/1 (4.4)

      

  • 13 Mar 2023 09:26 PM (IST)

    DC vs RCB Live Score, WPL 2023: ಮತ್ತೊಂದು ಬೌಂಡರಿ

    ಪ್ರೀತಿ ಬೋಸ್ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಫೋರ್ ಬಾರಿಸಿದ ಅಲೀಸ್ ಕ್ಯಾಪ್ಸಿ

    DCW 33/1 (4.1)

      

  • 13 Mar 2023 09:22 PM (IST)

    DC vs RCB Live Score, WPL 2023: ಸ್ಕೂಪ್ ಶಾಟ್

    ರೇಣುಕಾ ಸಿಂಗ್ ಎಸೆತದಲ್ಲಿ ಸ್ಕೂಪ್ ಶಾಟ್ ಮೂಲಕ ಹಿಂಬದಿಯತ್ತ ಫೋರ್ ಬಾರಿಸಿದ ಕ್ಯಾಪ್ಸಿ

    DCW 20/1 (3.2)

      

  • 13 Mar 2023 09:20 PM (IST)

    DC vs RCB Live Score, WPL 2023: 3 ಓವರ್ ಮುಕ್ತಾಯ

    DCW 16/1 (3)

      

    ಕ್ರೀಸ್​ನಲ್ಲಿ ಅಲೀಸ್ ಕ್ಯಾಪ್ಸಿ ಹಾಗೂ ಮೆಗ್ ಲ್ಯಾನಿಂಗ್ ಬ್ಯಾಟಿಂಗ್

  • 13 Mar 2023 09:10 PM (IST)

    DC vs RCB Live Score, WPL 2023: ​ಮೊದಲ ವಿಕೆಟ್ ಪತನ

    ಮೇಗನ್ ಶುಟ್ ಎಸೆತದಲ್ಲಿ ಶಫಾಲಿ ವರ್ಮಾ (0) ಕ್ಲೀನ್ ಬೌಲ್ಡ್

    DCW 1/1 (0.2)

      

  • 13 Mar 2023 08:53 PM (IST)

    DC vs RCB Live Score, WPL 2023: ಆರ್​ಸಿನಿ ಇನಿಂಗ್ಸ್​ ಅಂತ್ಯ

    RCBW 150/4 (20)

      

    ಆರ್​ಸಿಬಿ ಪರ ಅರ್ಧಶತಕ ಬಾರಿಸಿ ಮಿಂಚಿದ ಎಲ್ಲಿಸ್ ಪೆರ್ರಿ (67)

    ಡೆಲ್ಲಿ ಕ್ಯಾಪಿಟಲ್ಸ್​ಗೆ 151 ರನ್​ಗಳ ಗುರಿ ನೀಡಿದ ಆರ್​​ಸಿಬಿ

  • 13 Mar 2023 08:51 PM (IST)

    DC vs RCB Live Score, WPL 2023: ಸೂಪರ್ ಸಿಕ್ಸ್

    ಜೆಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಎಲ್ಲಿಸ್ ಪೆರ್ರಿ

    RCBW 146/4 (19.2)

      

  • 13 Mar 2023 08:50 PM (IST)

    DC vs RCB Live Score, WPL 2023: ಕೊನೆಯ ಓವರ್ ಬಾಕಿ

    RCBW 139/4 (19)

      

    ಕ್ರೀಸ್​ನಲ್ಲಿ ಎಲ್ಲಿಸ್ ಪೆರ್ರಿ – ಶ್ರೇಯಾಂಕಾ ಪಾಟೀಲ್

  • 13 Mar 2023 08:46 PM (IST)

    DC vs RCB Live Score, WPL 2023: 4ನೇ ವಿಕೆಟ್ ಪತನ

    ಶಿಖಾ ಪಾಂಡೆ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ರಿಚಾ ಘೋಷ್ (37)

    RCBW 137/4 (18.2)

      

  • 13 Mar 2023 08:42 PM (IST)

    DC vs RCB Live Score, WPL 2023: ಸ್ಟ್ರೈಟ್ ಹಿಟ್ ಸಿಕ್ಸ್

    ಜೆಸ್ ಎಸೆತದಲ್ಲಿ ಸ್ಟೈಟ್ ಹಿಟ್ ಸಿಕ್ಸ್ ಬಾರಿಸಿದ ರಿಚಾ ಘೋಷ್

    RCBW 135/3 (17.5)

      

  • 13 Mar 2023 08:40 PM (IST)

    DC vs RCB Live Score, WPL 2023: ಭರ್ಜರಿ ಸಿಕ್ಸ್

    ಜೆಸ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ಎಲ್ಲಿಸ್ ಪೆರ್ರಿ

    RCBW 124/3 (17.2)

      

  • 13 Mar 2023 08:25 PM (IST)

    DC vs RCB Live Score, WPL 2023: ಆಕರ್ಷಕ ಬೌಂಡರಿ

    ಶಿಖಾ ಪಾಂಡೆ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಎಲ್ಲಿಸ್ ಪೆರ್ರಿ

    RCBW 72/3 (14.1)

      

  • 13 Mar 2023 08:18 PM (IST)

    DC vs RCB Live Score, WPL 2023: ವಾಟ್ ಎ ಕ್ಯಾಚ್

    ಟಾರಾ ನೋರಿಸ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಶಾಟ್ ಬಾರಿಸಿದ ಹೀದರ್ ನೈಟ್…ಅದ್ಭುತವಾಗಿ ಡೈವಿಂಗ್ ಕ್ಯಾಚ್ ಹಿಡಿದ ಶಿಖಾ ಪಾಂಡೆ…ಹೀದರ್ ನೈಟ್ (11) ಔಟ್

    RCBW 63/3 (12.4)

      

  • 13 Mar 2023 08:12 PM (IST)

    DC vs RCB Live Score, WPL 2023: 11 ಓವರ್ ಮುಕ್ತಾಯ

    RCBW 54/2 (11)

    ಕ್ರೀಸ್​ನಲ್ಲಿ ಎಲ್ಲಿಸ್ ಪೆರ್ರಿ – ಹೀದರ್​ ನೈಟ್ ಬ್ಯಾಟಿಂಗ್

  • 13 Mar 2023 08:08 PM (IST)

    DC vs RCB Live Score, WPL 2023: ವೆಲ್ಕಂ ಬೌಂಡರಿ

    ಜೆಸ್ ಎಸೆತದಲ್ಲಿ ಆಫ್​ ಸೈಡ್​ನತ್ತ ಫೋರ್ ಬಾರಿಸಿದ ಎಲ್ಲಿಸ್ ಪೆರ್ರಿ

    RCBW 49/2 (9.5)

      

  • 13 Mar 2023 08:05 PM (IST)

    DC vs RCB Live Score, WPL 2023: 2ನೇ ವಿಕೆಟ್ ಪತನ

    ಶಿಖಾ ಪಾಂಡೆ ಎಸೆತದಲ್ಲಿ ಸೋಫಿ ಡಿವೈನ್ ಕ್ಲೀನ್ ಬೌಲ್ಡ್ (21)

    ಆರ್​ಸಿಬಿ ತಂಡದ 2ನೇ ವಿಕೆಟ್ ಪತನ

    RCBW 41/2 (9)

      

  • 13 Mar 2023 07:59 PM (IST)

    DC vs RCB Live Score, WPL 2023: 8 ಓವರ್ ಮುಕ್ತಾಯ

    ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಬೌಲಿಂಗ್

    RCBW 38/1 (8)

      ಕ್ರೀಸ್​ನಲ್ಲಿ ಸೋಫಿ ಡಿವೈನ್ – ಎಲ್ಲಿಸ್ ಪೆರ್ರಿ ಬ್ಯಾಟಿಂಗ್

  • 13 Mar 2023 07:54 PM (IST)

    DC vs RCB Live Score, WPL 2023: ಆಕರ್ಷಕ ಬೌಂಡರಿ

    ರಾಧಾ ಯಾದವ್ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಎಲ್ಲಿಸ್ ಪೆರ್ರಿ

    RCBW 34/1 (6.4)

      

  • 13 Mar 2023 07:52 PM (IST)

    DC vs RCB Live Score, WPL 2023: ಪವರ್​ಪ್ಲೇ ಮುಕ್ತಾಯ

    RCBW 29/1 (6)

      

    ಕ್ರೀಸ್​ನಲ್ಲಿ ಸೋಫಿ ಡಿವೈನ್ – ಎಲ್ಲಿಸ್ ಪೆರ್ರಿ ಬ್ಯಾಟಿಂಗ್

  • 13 Mar 2023 07:46 PM (IST)

    DC vs RCB Live Score, WPL 2023: ಆರ್​ಸಿಬಿ ಮೊದಲ ವಿಕೆಟ್ ಪತನ

    ಶಿಖಾ ಪಾಂಡೆ ಎಸೆತದಲ್ಲಿ ಸ್ಮೃತಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್​ನಲ್ಲಿ ಜೆಮಿಮಾ ಉತ್ತಮ ಕ್ಯಾಚ್..ಸ್ಮೃತಿ ಮಂಧಾನ (8) ಔಟ್.

    RCBW 24/1 (4.1)

      

  • 13 Mar 2023 07:43 PM (IST)

    DC vs RCB Live Score, WPL 2023: ಪವರ್​ಫುಲ್ ಶಾಟ್

    ಕ್ಯಾಪ್ಸಿ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಸೋಫಿ ಡಿವೈನ್

    RCBW 22/0 (3.3)

      

  • 13 Mar 2023 07:42 PM (IST)

    DC vs RCB Live Score, WPL 2023: ​3 ಓವರ್ ಮುಕ್ತಾಯ

    RCBW 17/0 (3)

      

    ಕ್ರೀಸ್​ನಲ್ಲಿ ಸ್ಮೃತಿ ಮಂಧಾನ-ಸೋಫಿ ಡಿವೈನ್ ಬ್ಯಾಟಿಂಗ್

  • 13 Mar 2023 07:35 PM (IST)

    DC vs RCB Live Score, WPL 2023: ​ಮೊದಲ ಬೌಂಡರಿ

    ಅಲೀಸ್ ಕ್ಯಾಪ್ಸಿ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸೋಫಿ ಡಿವೈನ್

    RCBW 4/0 (1.1)

      

  • 13 Mar 2023 07:33 PM (IST)

    DC vs RCB Live Score, WPL 2023: ​ಮೇಡನ್ ಓವರ್

    ಮರಿಝನ್ನೆ ಕಪ್ ಎಸೆದ ಮೊದಲ ಓವರ್​ನಲ್ಲಿ ಒಂದೇ ಒಂದು ರನ್​ಗಳಿಸದ ಸ್ಮೃತಿ ಮಂಧಾನ

    RCBW 0/0 (1)

  • 13 Mar 2023 07:30 PM (IST)

    DC vs RCB Live Score, WPL 2023: ಆರ್​ಸಿಬಿ ಇನಿಂಗ್ಸ್ ಆರಂಭ

    ಮೊದಲ ಓವರ್​: ಮರಿಝನ್ನೆ ಕಪ್

    ಆರಂಭಿಕರು: ಸ್ಮೃತಿ ಮಂಧಾನ ಹಾಗೂ ಸೋಫಿ ಡಿವೈನ್

  • 13 Mar 2023 07:10 PM (IST)

    DC vs RCB Live Score, WPL 2023: ಆರ್​ಸಿಬಿ ಪ್ಲೇಯಿಂಗ್ ಇಲೆವೆನ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್

  • 13 Mar 2023 07:07 PM (IST)

    DC vs RCB Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ಟಾರಾ ನೋರಿಸ್.

  • 13 Mar 2023 07:03 PM (IST)

    DC vs RCB Live Score, WPL 2023: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

    ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 13 Mar 2023 06:33 PM (IST)

    DC vs RCB Live Score, WPL 2023: ಆರ್​ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್

    ಟಾಸ್ ಪ್ರಕ್ರಿಯೆ: 7 ಗಂಟೆಗೆ

    ಪಂದ್ಯ ಶುರು: 7.3 0 ರಿಂದ

    ಸ್ಥಳ: ಡಿವೈ ಪಾಟೀಲ್ ಸ್ಟೇಡಿಯಂ, ಮುಂಬೈ

Published On - Mar 13,2023 6:31 PM

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ