DCW vs UPW, WPL 2023: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭರ್ಜರಿ ಜಯ

ಝಾಹಿರ್ ಯೂಸುಫ್
| Updated By: Digi Tech Desk

Updated on:Mar 08, 2023 | 2:14 PM

Delhi Capitals Women vs UP Warriorz: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 211 ರನ್​ ಕಲೆಹಾಕಿದೆ.

DCW vs UPW, WPL 2023: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭರ್ಜರಿ ಜಯ
DCW vs UPW

DCW vs UPW Live Score, WPL 2023: ಡಿವೈ ಪಾಟೀಲ್ ಸ್ಟೇಡಿಯಂ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 5ನೇ ಪಂದ್ಯದಲ್ಲಿ  ಯುಪಿ ವಾರಿಯರ್ಸ್ (UP Warriorz) ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಯಕಿ ಮೆಗ್ ಲ್ಯಾನಿಂಗ್ ಅವರ 70 ರನ್​ಗಳ ನೆರವಿನೊಂದಿಗೆ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್​ ಕಲೆಹಾಕಿತು. 212 ರನ್​ಗಳ ಕಠಿಣ ಗುರಿ ಪಡೆದ ಯುಪಿ ವಾರಿಯರ್ಸ್ ಪರ ತಹ್ಲಿಯಾ ಮೆಗ್​ಕ್ರಾಥ್ ಅಜೇಯ 90 ರನ್​ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. ಅಂತಿಮವಾಗಿ ಯುಪಿ ವಾರಿಯರ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 169 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 42 ರನ್​ಗಳಿಂದ ಜಯಭೇರಿ ಬಾರಿಸಿತು.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರೊಡ್ರಿಗಸ್, ಆಲಿಸ್ ಕ್ಯಾಪ್ಸಿ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ಟಾರಾ ನೋರಿಸ್.

ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರೊಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ಟಾರಾ ನೋರಿಸ್, ಜಸಿಯಾ ಅಖ್ತರ್, ಮಿನ್ನು ಮಣಿ, ಅಪರ್ಣಾ ಮೊಂಡಲ್, ಟೈಟಾಸ್ ಸಾಧು, ಸ್ನೇಹಾ ದೀಪ್ತಿ, ಲಾರಾ ಹ್ಯಾರಿಸ್, ಪೂನಂ ಯಾದವ್

ಯುಪಿ ವಾರಿಯರ್ಸ್ ತಂಡ: ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಲಬ್ಯುರೆನಿಮ್ ಇಸ್ಮಾಯಿಲ್, ಲಬ್ಯುರೆನಿಮ್ ಬೆಲೆಕ್ಸ್ , ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ರಿ.

LIVE NEWS & UPDATES

The liveblog has ended.
  • 07 Mar 2023 11:10 PM (IST)

    DCW vs UPW Live Score, WPL 2023: ಸೋಲಿನಲ್ಲೂ ಮಿಂಚಿದ ತಹ್ಲಿಯಾ

    ಯುಪಿ ವಾರಿಯರ್ಸ್ ಪರ 50 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ನೊಂದಿಗೆ ಅಜೇಯ 90 ರನ್​ ಬಾರಿಸಿದ ತಹ್ಲಿಯಾ ಮೆಕ್​ಗ್ರಾಥ್

    ತಹ್ಲಿಯಾ ಏಕಾಂಗಿ ಹೋರಾಟದ ಹೊರತಾಗಿಯೂ 42 ರನ್​ಗಳಿಂದ ಸೋಲನುಭವಿಸಿದ ಯುಪಿ ವಾರಿಯರ್ಸ್​

    DCW 211/4 (20)

    UPW 169/5 (20)

  • 07 Mar 2023 11:06 PM (IST)

    DCW vs UPW Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭರ್ಜರಿ ಜಯ

    DCW 211/4 (20)

    UPW 169/5 (20)

      

    42 ರನ್​ಗಳ ಭರ್ಜರಿ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್
  • 07 Mar 2023 11:01 PM (IST)

    DCW vs UPW Live Score, WPL 2023: ಕೊನೆಯ ಓವರ್

    6 ಎಸೆತಗಳಲ್ಲಿ 57 ರನ್​ಗಳ ಗುರಿ

    UPW 155/5 (19)

    ಕ್ರೀಸ್​ನಲ್ಲಿ ತಹ್ಲಿಯಾ-ಸಿಮ್ರಾನ್ ಬ್ಯಾಟಿಂಗ್

  • 07 Mar 2023 10:59 PM (IST)

    DCW vs UPW Live Score, WPL 2023: ಭರ್ಜರಿ ಸಿಕ್ಸ್

    ಜೆಸ್​ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ತಹ್ಲಿಯಾ

    UPW 144/5 (18.2)

      

  • 07 Mar 2023 10:57 PM (IST)

    DCW vs UPW Live Score, WPL 2023: 18 ಓವರ್ ಮುಕ್ತಾಯ

    UPW 137/5 (18)

      

    ಕೊನೆಯ 2 ಓವರ್​ಗಳಲ್ಲಿ 75 ರನ್​ಗಳ ಗುರಿ

    ಕ್ರೀಸ್​ನಲ್ಲಿ ತಹ್ಲಿಯಾ-ಸಿಮ್ರಾನ್ ಬ್ಯಾಟಿಂಗ್

  • 07 Mar 2023 10:54 PM (IST)

    DCW vs UPW Live Score, WPL 2023: ಅರ್ಧಶತಕ ಪೂರೈಸಿದ ತಹ್ಲಿಯಾ

    36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ತಹ್ಲಿಯಾ ಮೆಕ್​ಗ್ರಾಥ್

    UPW 124/5 (17.1)

      

  • 07 Mar 2023 10:46 PM (IST)

    DCW vs UPW Live Score, WPL 2023: ಸೋಲಿನ ಸುಳಿಯಲ್ಲಿ ಯುಪಿ ವಾರಿಯರ್ಸ್​

    ಯುಪಿ ವಾರಿಯರ್ಸ್​ಗೆ ಗೆಲ್ಲಲು 4 ಓವರ್​ಗಳಲ್ಲಿ 99 ರನ್​ಗಳ ಅವಶ್ಯಕತೆ

    UPW 113/4 (16)

      

    ಕ್ರೀಸ್​ನಲ್ಲಿ ದೇವಿಕಾ ವೈದ್ಯ-ತಹ್ಲಿಯಾ ಬ್ಯಾಟಿಂಗ್

  • 07 Mar 2023 10:39 PM (IST)

    DCW vs UPW Live Score, WPL 2023: ಕೊನೆಯ 6 ಓವರ್ ಬಾಕಿ

    ಯುಪಿ ವಾರಿಯರ್ಸ್​ಗೆ ಗೆಲ್ಲಲು 36 ಎಸೆತಗಳಲ್ಲಿ 109 ರನ್​ಗಳ ಅವಶ್ಯಕತೆ

    UPW 103/4 (14)

      

  • 07 Mar 2023 10:36 PM (IST)

    DCW vs UPW Live Score, WPL 2023: ಯುಪಿ ವಾರಿಯರ್ಸ್​ ತಂಡದ 4 ವಿಕೆಟ್ ಪತನ

    UPW 95/4 (13)

      

    ಕ್ರೀಸ್​ನಲ್ಲಿ ದೇವಿಕಾ ವೈದ್ಯ-ತಹ್ಲಿಯಾ ಬ್ಯಾಟಿಂಗ್

  • 07 Mar 2023 10:12 PM (IST)

    DCW vs UPW Live Score, WPL 2023: ಅರ್ಧಶತಕ ಪೂರೈಸಿದ ಯುಪಿ ವಾರಿಯರ್ಸ್​

    UPW 51/3 (8)

      

    ಕ್ರೀಸ್​ನಲ್ಲಿ ತಹ್ಲಿಯಾ-ದೀಪ್ತಿ ಶರ್ಮಾ ಬ್ಯಾಟಿಂಗ್

  • 07 Mar 2023 10:09 PM (IST)

    DCW vs UPW Live Score, WPL 2023: ಬ್ಯಾಕ್ ಟು ಬ್ಯಾಕ್ ಫೋರ್

    ಟಾರಾ ನೋರಿಸ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ತಹ್ಲಿಯಾ

    UPW 46/3 (7)

      

  • 07 Mar 2023 10:05 PM (IST)

    DCW vs UPW Live Score, WPL 2023: ಪವರ್​ಪ್ಲೇ ಮುಕ್ತಾಯ

    ಮೊದಲ 6 ಓವರ್​ಗಳಲ್ಲಿ ಕೇವಲ 33 ರನ್​ ಕಲೆಹಾಕಿದ ಯುಪಿ ವಾರಿಯರ್ಸ್

    UPW 33/3 (6)

    ಕ್ರೀಸ್​ನಲ್ಲಿ ದೀಪ್ತಿ ಶರ್ಮಾ-ತಹ್ಲಿಯಾ ಬ್ಯಾಟಿಂಗ್

      

  • 07 Mar 2023 09:58 PM (IST)

    DCW vs UPW Live Score, WPL 2023: 3ನೇ ವಿಕೆಟ್ ಪತನ

    ಮರಿಝನ್ನೆ ಕಪ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಶ್ವೇತಾ ಸೆಹ್ರಾವತ್ (1)

    UPW 31/3 (4.2)

     

  • 07 Mar 2023 09:55 PM (IST)

    DCW vs UPW Live Score, WPL 2023: 2ನೇ ವಿಕೆಟ್ ಪತನ

    ಜೊನಾಸೆನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಸುಲಭ ಕ್ಯಾಚ್ ನೀಡಿದ ಕಿರಣ್ ನವಗಿರೆ (2)

    UPW 31/2 (3.5)

     

  • 07 Mar 2023 09:53 PM (IST)

    DCW vs UPW Live Score, WPL 2023: ಯುಪಿ ವಾರಿಯರ್ಸ್​ ಮೊದಲ ವಿಕೆಟ್ ಪತನ

    ಜೆಸ್ ಜೊನಾಸನ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಅಲಿಸ್ಸಾ ಹೀಲಿ (24)

    UPW 29/1 (3.3)

     

  • 07 Mar 2023 09:47 PM (IST)

    DCW vs UPW Live Score, WPL 2023: ಯುಪಿ ವಾರಿಯರ್ಸ್​ ಉತ್ತಮ ಆರಂಭ

    2 ಓವರ್​ಗಳಲ್ಲಿ 22 ರನ್​

    UPW 22/0 (2)

    ಕ್ರೀಸ್​ನಲ್ಲಿ ಅಲಿಸ್ಸಾ ಹೀಲಿ ಹಾಗೂ ಶ್ವೇತಾ ಸೆಹ್ರಾವತ್ ಬ್ಯಾಟಿಂಗ್

  • 07 Mar 2023 09:42 PM (IST)

    DCW vs UPW Live Score, WPL 2023: ಉತ್ತಮ ಆರಂಭ

    ಮೊದಲ ಓವರ್​ನಲ್ಲಿ 9 ರನ್​

    UPW 9/0 (1)

      

    ಕ್ರೀಸ್​ನಲ್ಲಿ ಅಲಿಸ್ಸಾ ಹೀಲಿ ಹಾಗೂ ಶ್ವೇತಾ ಸೆಹ್ರಾವತ್ ಬ್ಯಾಟಿಂಗ್

  • 07 Mar 2023 09:39 PM (IST)

    DCW vs UPW Live Score, WPL 2023: ಮೊದಲ ಬೌಂಡರಿ

    ಮರಿಝನ್ನೆ ಎಸೆದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಹೀಲಿ

    ಬ್ಯಾಕ್ ಟು ಬ್ಯಾಕ್ 2 ಬೌಂಡರಿ

    UPW 8/0 (0.2)

      

  • 07 Mar 2023 09:23 PM (IST)

    DCW vs UPW Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ ಅಂತ್ಯ

    DCW 211/4 (20)

      

    ಯುಪಿ ವಾರಿಯರ್ಸ್​ಗೆ 212 ರನ್​ಗಳ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

  • 07 Mar 2023 09:20 PM (IST)

    DCW vs UPW Live Score, WPL 2023: ಭರ್ಜರಿ ಸಿಕ್ಸ್

    ದೀಪ್ತಿ ಶರ್ಮಾ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಜೆಸ್

    DCW 203/4 (19.2)

      

  • 07 Mar 2023 09:18 PM (IST)

    DCW vs UPW Live Score, WPL 2023: ಒಂದೇ ಓವರ್​ನಲ್ಲಿ 19 ರನ್

    ತಹ್ಲಿಯಾ ಓವರ್​ನಲ್ಲಿ 1 ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 19 ರನ್​ ಕಲೆಹಾಕಿದ ಜೆಸ್ – ಜೆಮಿಮಾ

    DCW 195/4 (19)

      

  • 07 Mar 2023 09:14 PM (IST)

    DCW vs UPW Live Score, WPL 2023: 18 ಓವರ್ ಮುಕ್ತಾಯ

    DCW 176/4 (18)

      

    ಕ್ರೀಸ್​ನಲ್ಲಿ ಜೆಸ್ ಜೊನಾಸನ್ – ಜೆಮಿಮಾ ಬ್ಯಾಟಿಂಗ್

  • 07 Mar 2023 09:09 PM (IST)

    DCW vs UPW Live Score, WPL 2023: ವಾಟ್ ಎ ಶಾಟ್

    ಅಂಜಲಿ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಆಕರ್ಷಕ ಸಿಕ್ಸ್ ಬಾರಿಸಿದ ಜೆಸ್

    DCW 164/4 (16.5)

      

  • 07 Mar 2023 08:56 PM (IST)

    DCW vs UPW Live Score, WPL 2023: 4ನೇ ವಿಕೆಟ್ ಪತನ

    ಶಬ್ನಿಮ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಅಲೀಸ್ ಕ್ಯಾಪ್ಸೆ (21)…ಸೋಫಿ ಉತ್ತಮ ಕ್ಯಾಚ್…ಕ್ಯಾಪ್ಸೆ ಔಟ್

    DCW 144/4 (14.2)

      

  • 07 Mar 2023 08:53 PM (IST)

    DCW vs UPW Live Score, WPL 2023: 14 ಓವರ್ ಮುಕ್ತಾಯ

    DCW 143/3 (14)

      

    ಕ್ರೀಸ್​ನಲ್ಲಿ ಜೆಮಿಮಾ ಹಾಗೂ ಅಲೀಸ್ ಕ್ಯಾಪ್ಸೆ ಬ್ಯಾಟಿಂಗ್

  • 07 Mar 2023 08:40 PM (IST)

    DCW vs UPW Live Score, WPL 2023: ಮೆಗ್ ಲ್ಯಾನಿಂಗ್ ಔಟ್

    ರಾಜೇಶ್ವರಿ ಗಾಯಕ್ವಾಡ್ ಎಸೆತದಲ್ಲಿ ಬೌಲ್ಡ್ ಆದ ಮೆಗ್ ಲ್ಯಾನಿಂಗ್ (72)

    DCW 112/3 (11.3)

      

  • 07 Mar 2023 08:37 PM (IST)

    DCW vs UPW Live Score, WPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಸೋಫಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ 2 ಬೌಂಡರಿ ಬಾರಿಸಿದ ಮೆಗ್ ಲ್ಯಾನಿಂಗ್

    DCW 106/2 (11)

      

  • 07 Mar 2023 08:36 PM (IST)

    DCW vs UPW Live Score, WPL 2023: ಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್

    DCW 101/2 (10.4)

      

    ಕ್ರೀಸ್​ನಲ್ಲಿ ಜೆಮಿಮಾ-ಲ್ಯಾನಿಂಗ್ ಬ್ಯಾಟಿಂಗ್

  • 07 Mar 2023 08:35 PM (IST)

    DCW vs UPW Live Score, WPL 2023: ಮತ್ತೆ ಶುರುವಾದ ಪಂದ್ಯ

    ಮಳೆ ನಿಂತ ಬಳಿಕ ಮತ್ತೆ ಶುರುವಾದ ಪಂದ್ಯ

    ಡೆಲ್ಲಿ ಕ್ಯಾಪಿಟಲ್ಸ್ ತಂಡದ 2ನೇ ವಿಕೆಟ್ ಪತನ

    DCW 96/2 (10.2)

      

    ಸೋಫಿ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಮರಿಝನ್ನೆ ಕಪ್ (16)

  • 07 Mar 2023 08:20 PM (IST)

    DCW vs UPW Live Score, WPL 2023: ಮಳೆಯಿಂದಾಗಿ ಪಂದ್ಯ ಸ್ಥಗಿತ

    ಮಳೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ನಡುವಣ ಪಂದ್ಯ ಸ್ಥಗಿತ

    DCW 87/1 (9)

      ಕ್ರೀಸ್​ನಲ್ಲಿ ಮೆಗ್ ಲ್ಯಾನಿಂಗ್ (53) ಹಾಗೂ ಮರಿಝನ್ನೆ ಕಪ್ (9) ಬ್ಯಾಟಿಂಗ್

    ಶಫಾಲಿ ವರ್ಮಾ (17) ಔಟ್

  • 07 Mar 2023 08:07 PM (IST)

    DCW vs UPW Live Score, WPL 2023: ಅರ್ಧಶತಕ ಬಾರಿಸಿದ ಮೆಗ್ ಲ್ಯಾನಿಂಗ್

    ಭರ್ಜರಿ ಸಿಕ್ಸ್​ ಬಾರಿಸಿ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್​ ಲ್ಯಾನಿಂಗ್

    DCW 85/1 (8.3)

      

  • 07 Mar 2023 07:59 PM (IST)

    DCW vs UPW Live Score, WPL 2023: ಮೊದಲ ವಿಕೆಟ್ ಪತನ

    ತಹ್ಲಿಯಾ ಮೆಗ್ರಾಥ್​ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಶಾಟ್ ಬಾರಿಸಿದ ಶಫಾಲಿ ವರ್ಮಾ…ಕಿರಣ್ ನವಗಿರೆ ಅದ್ಭುತ ಡೈವಿಂಗ್ ಕ್ಯಾಚ್…ಶಫಾಲಿ ವರ್ಮಾ (17) ಔಟ್

    DCW 67/1 (6.3)

      

  • 07 Mar 2023 07:55 PM (IST)

    DCW vs UPW Live Score, WPL 2023: ಪವರ್​ಪ್ಲೇ ಮುಕ್ತಾಯ

    ರಾಜೇಶ್ವರಿ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಮೆಗ್ ಲ್ಯಾನಿಂಗ್

    ಮೊದಲ 6 ಓವರ್​ಗಳಲ್ಲಿ 62 ರನ್​ ಕಲೆಹಾಕಿದ ಶಫಾಲಿ ವರ್ಮಾ-ಲ್ಯಾನಿಂಗ್

    DCW 62/0 (6)

      

  • 07 Mar 2023 07:53 PM (IST)

    DCW vs UPW Live Score, WPL 2023: ಅರ್ಧಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್

    DCW 50/0 (5.2)

      

    ಕ್ರೀಸ್​ನಲ್ಲಿ ಮೆಗ್ ಲ್ಯಾನಿಂಗ್-ಶಫಾಲಿ ವರ್ಮಾ ಬ್ಯಾಟಿಂಗ್

  • 07 Mar 2023 07:51 PM (IST)

    DCW vs UPW Live Score, WPL 2023: 5 ಓವರ್ ಮುಕ್ತಾಯ

    DCW 45/0 (5)

      

    ಶಫಾಲಿ ವರ್ಮಾ (12) – ಮೆಗ್ ಲ್ಯಾನಿಂಗ್ (31) ಬಿರುಸಿನ ಬ್ಯಾಟಿಂಗ್

  • 07 Mar 2023 07:47 PM (IST)

    DCW vs UPW Live Score, WPL 2023: ಭರ್ಜರಿ ಸಿಕ್ಸ್

    ಅಂಜಲಿ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಫಾಲಿ ವರ್ಮಾ

    DCW 29/0 (4)

      

  • 07 Mar 2023 07:43 PM (IST)

    DCW vs UPW: Live Score, WPL 2023: 3 ಓವರ್ ಮುಕ್ತಾಯ

    DCW 18/0 (3)

      

    ಮೆಗ್ ಲ್ಯಾನಿಂಗ್ ಬಿರುಸಿನ ಬ್ಯಾಟಿಂಗ್…ಈಗಾಗಲೇ 2 ಫೋರ್ ಹಾಗೂ 1 ಸಿಕ್ಸ್ ಬಾರಿಸಿರುವ ಡೆಲ್ಲಿ ಕ್ಯಾಪ್ಟನ್

    ನಾಯಕಿಗೆ ಸಾಥ್ ನೀಡುತ್ತಿರುವ ಶಫಾಲಿ ವರ್ಮಾ

  • 07 Mar 2023 07:34 PM (IST)

    DCW vs UPW: Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ ಆರಂಭ

    ಮೊದಲ ಓವರ್ ಮುಕ್ತಾಯ

    ಶಬ್ನಿಮ್ ಓವರ್​ನ 5ನೇ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಮೆಗ್ ಲ್ಯಾನಿಂಗ್

    ಕ್ರೀಸ್​ನಲ್ಲಿ ಮೆಗ್ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಬ್ಯಾಟಿಂಗ್

    DCW 4/0 (1)

      

  • 07 Mar 2023 07:06 PM (IST)

    DCW vs UPW: Live Score, WPL 2023: ಯುಪಿ ವಾರಿಯರ್ಸ್ ಪ್ಲೇಯಿಂಗ್ ಇಲೆವೆನ್

    ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

  • 07 Mar 2023 07:05 PM (IST)

    DCW vs UPW: Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್​ ಪ್ಲೇಯಿಂಗ್ ಇಲೆವೆನ್

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರೊಡ್ರಿಗಸ್, ಆಲಿಸ್ ಕ್ಯಾಪ್ಸಿ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ಟಾರಾ ನೋರಿಸ್.

  • 07 Mar 2023 07:01 PM (IST)

    DCW vs UPW: Live Score, WPL 2023: ಟಾಸ್ ಗೆದ್ದ ಯುಪಿ ವಾರಿಯರ್ಸ್

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 07 Mar 2023 06:34 PM (IST)

    DCW vs UPW: Live Score, WPL 2023: ಯಪಿ ವಾರಿಯರ್ಸ್​ vs ಡೆಲ್ಲಿ ಕ್ಯಾಪಿಟಲ್ಸ್

    ಟಾಸ್ ಪ್ರಕ್ರಿಯೆ: 7 ಗಂಟೆಗೆ

    ಪಂದ್ಯ ಶುರು: 7.30 ಕ್ಕೆ

    ಸ್ಥಳ: ಡಿವೈ ಪಾಟೀಲ್ ಸ್ಟೇಡಿಯಂ, ಮುಂಬೈ

  • Published On - Mar 07,2023 6:31 PM

    Follow us
    ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
    ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
    ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
    ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
    ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
    ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
    ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
    ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
    ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
    ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
    ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
    ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
    ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
    ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
    ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
    ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
    ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
    ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು