Devdutt Padikkal: Siuuu…ದೇವದತ್ ಪಡಿಕ್ಕಲ್ ಯಾರ ಫ್ಯಾನ್ ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Sep 08, 2021 | 4:40 PM

Devdutt Padikkal - Cristiano Ronaldo: ಸೀ...(SIIII) ಸೆಲೆಬ್ರೇಷನ್ ಎಂದು ಕರೆಯಲಾಗುವ ರೊನಾಲ್ಡೊ ಅವರ ಜಂಪಿಂಗ್ ಸಂಭ್ರಮವನ್ನು ಅನುಕರಿಸಿರುವ ದೇವದತ್ ಪಡಿಕ್ಕಲ್ ತಮ್ಮ ವಿಡಿಯೋವನ್ನು RCB ತನ್ನ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

Devdutt Padikkal: Siuuu...ದೇವದತ್ ಪಡಿಕ್ಕಲ್ ಯಾರ ಫ್ಯಾನ್ ಗೊತ್ತಾ?
Devdutt Padikkal
Follow us on

ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಫುಟ್​ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರ ಅಪ್ಪಟ ಅಭಿಮಾನಿ ಎಂಬುದು ಗೊತ್ತಿರುವ ವಿಷಯ. ಅವರೊಂದಿಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡದಲ್ಲಿ ಮತ್ತೋರ್ವ CR7 (ಕ್ರಿಸ್ಟಿಯಾನೊ ರೊನಾಲ್ಡೊ) ಅಭಿಮಾನಿ ಇದ್ದಾರೆ. ಅವರು ಮತ್ಯಾರೂ ಅಲ್ಲ ದೇವದತ್ ಪಡಿಕ್ಕಲ್ (Devdutt Padikkal). ಹೌದು, ಪಡಿಕ್ಕಲ್ ಕೂಡ ಕ್ರಿಸ್ಟಿಯಾನೊ ಅವರ ಬಿಗ್ ಫ್ಯಾನ್. ಅತ್ತ ಯುಎಇನಲ್ಲಿ ಐಪಿಎಲ್​ನ ದ್ವಿತಿಯಾರ್ಧಕ್ಕಾಗಿ ಅಭ್ಯಾಸವನ್ನು ಆರಂಭಿಸಿರುವ ಆಟಗಾರರು ಫುಟ್​ಬಾಲ್ ಆಡಿದ್ದಾರೆ. ಈ ವೇಳೆ ಗೋಲು ದಾಖಲಿಸು ವಿಡಿಯೋ ಚಿತ್ರೀಕರಿಸಿಕೊಂಡಿರುವ ಪಡಿಕ್ಕಲ್ ಕ್ರಿಸ್ಟಿಯಾನೊ ರೊನಾಲ್ಡೊ ಅವರಂತೆ ಸಂಭ್ರಮದ ಶೈಲಿಯನ್ನು ಅನುಕರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಸಿಯು…(Siuuu) ಸೆಲೆಬ್ರೇಷನ್ ಎಂದು ಕರೆಯಲಾಗುವ ರೊನಾಲ್ಡೊ ಅವರ ಜಂಪಿಂಗ್ ಸಂಭ್ರಮವನ್ನು ಅನುಕರಿಸಿರುವ ದೇವದತ್ ಪಡಿಕ್ಕಲ್ ತಮ್ಮ ವಿಡಿಯೋವನ್ನು RCB ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಡಿಡಿಪಿ (ದೇವದತ್ ಪಡಿಕ್ಕಲ್) ಯಾವ ಫುಟ್​ಬಾಲ್ ಆಟಗಾರನ ಅಭಿಮಾನಿಗಳ ಹೇಳಿ” ಎಂದು ಕ್ಯಾಪ್ಷನ್ ಮೂಲಕ ಪ್ರಶ್ನಿಸಿದ್ದಾರೆ. ಇತ್ತ ಪಡಿಕ್ಕಲ್ ಸಂಭ್ರಮದ ಪೋಸ್ಟ್ ನೋಡಿ ಅಭಿಮಾನಿಗಳು CR7 ಕಮೆಂಟ್​ಗಳ ಸುರಿಮಳೆಗೈದಿದ್ದಾರೆ. ಇದೀಗ ಪಡಿಕ್ಕಲ್ CR7 ಸೆಲೆಬ್ರೇಷನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೊನಾಲ್ಡೊ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಹಳೆಯ ಕ್ಲಬ್​ ಮ್ಯಾಂಚೆಸ್ಟರ್ ಯುನೈಟೆಡ್​ಗೆ ಮರಳಿದ್ದರು. CR7 ಹೋಮ್ ಕಮಿಂಗ್ ಸೋಷಿಯಲ್ ಮೀಡಿಯಾದಲ್ಲಿ ತರಂಗ ಸೃಷ್ಟಿಸಿತ್ತು. ಈ ಕ್ರೇಜ್​ನಲ್ಲಿ ದೇವದತ್ ಪಡಿಕ್ಕಲ್ ಕೂಡ ತೇಲುತ್ತಿದ್ದಾರೆ. ಏಕೆಂದರೆ ದೇವದತ್ ಪಡಿಕ್ಕಲ್ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್​ಬಾಲ್ ಕ್ಲಬ್ ಅಭಿಮಾನಿ. ಕ್ರಿಸ್ಟಿಯಾನೊ ಯುನೈಟೆಡ್ ಕ್ಲಬ್ ತೊರೆಯುತ್ತಿದ್ದಂತೆ ಅಭಿಮಾನಿಗಳು ಅವರನ್ನು ಹಿಂಬಾಲಿಸಿದ್ದರು. ಅದರಂತೆ ಆ ಬಳಿಕ ಪಡಿಕ್ಕಲ್ ರಿಯಲ್ ಮ್ಯಾಡ್ರಿಡ್ ಕ್ಲಬ್​ ಅನ್ನು ನೆಚ್ಚಿಕೊಂಡಿದ್ದರು. ಇದೀಗ ಹಳೆಯ ಹುಲಿ ಮತ್ತೆ ಮನೆಗೆ ಎಂಬಂತೆ ಮ್ಯಾಚೆಂಸ್ಟರ್ ಕ್ಲಬ್​ಗೆ ಕ್ರಿಸ್ಟಿಯಾನೊ ಹಿಂತಿರುಗುವಿಕೆ ಹೊಸ ಸಂಚಲನ ಸೃಷ್ಟಿಸಿದೆ. ಸೆಪ್ಟೆಂಬರ್ 11 ರಂದು ಮ್ಯಾಚೆಂಸ್ಟರ್ ಯುನೈಟೆಡ್ ಪರ ಕ್ರಿಸ್ಟಿಯಾನೊ ರೊನಾಲ್ಡೊ ಕಣಕ್ಕಿಳಿಯಲಿದ್ದು, ಆ ಮೂಲಕ ಓಲ್ಡ್ ಟ್ರಾಫರ್ಡ್​​ನಲ್ಲಿ ಸೆಕೆಂಡ್ ಇನಿಂಗ್ಸ್​ ಆರಂಭಿಸಲಿದ್ದಾರೆ.

ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರನ್ನು ಪ್ರೀತಿಸಿ ಮದುವೆಯಾದ ಭಾರತೀಯ ಕ್ರಿಕೆಟಿಗರು ಇವರೇ

ಇದನ್ನೂ ಓದಿ: Shardul Thakur: ಮುಂಬೈ ಲೋಕಲ್ ಟ್ರೈನ್ ಹುಡುಗ ಇದೀಗ ಟೀಮ್ ಇಂಡಿಯಾ ಸೆನ್ಸೇಷನ್

ಇದನ್ನೂ ಓದಿ: IPL 2022: ಐಪಿಎಲ್​ನ 2 ಹೊಸ ತಂಡಗಳಿಗಾಗಿ 6 ನಗರಗಳ ಆಯ್ಕೆ

(Devdutt Padikkal performs Cristiano Ronaldo’s iconic celebration in training)