AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SL vs AFG 2nd ODI: ಶ್ರೀಲಂಕಾ ಆಟಗಾರರ ಅಬ್ಬರದ ಬ್ಯಾಟಿಂಗ್: ಅಫ್ಘಾನ್ ವಿರುದ್ಧ 132 ರನ್​ಗಳ ಜಯ

ಹಂಬನ್​ತೊಟಾದ ಮಹಿಂದಾ ರಾಜಪಕ್ಸಾ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ (ODI Match) ಲಂಕಾ ಆಟಗಾರರು ಸಂಘಟಿತ ಪ್ರದರ್ಶನ ತೋರಿ 132 ರನ್​ಗಳ ಜಯ ಸಾಧಿಸಿದರು.

SL vs AFG 2nd ODI: ಶ್ರೀಲಂಕಾ ಆಟಗಾರರ ಅಬ್ಬರದ ಬ್ಯಾಟಿಂಗ್: ಅಫ್ಘಾನ್ ವಿರುದ್ಧ 132 ರನ್​ಗಳ ಜಯ
SL vs AFG 2nd ODI
Vinay Bhat
|

Updated on: Jun 05, 2023 | 7:49 AM

Share

ಸಿಂಹಳೀಯರ ನಾಡಿಗೆ ಪ್ರವಾಸ ಬೆಳೆಸಿರುವ ಅಫ್ಘಾನಿಸ್ತಾನ ತಂಡ ಶ್ರೀಲಂಕಾ (Sri Lanka vs Afghanistan) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತ್ತು. ಆದರೀಗ ದ್ವಿತೀಯ ಏಕದಿನದಲ್ಲಿ ಸೋಲುಂಡಿದೆ. ಲಂಕಾ ಆಟಗಾರರ ಅಬ್ಬರದ ಬ್ಯಾಟಿಂಗ್ – ಬೌಲಿಂಗ್​ಗೆ ತತ್ತರಿಸಿದ ಅಫ್ಘಾನ್ ತಂಡ ಹೀನಾಯ ಸೋಲು ಕಂಡಿದೆ. ಹಂಬನ್​ತೊಟಾದ ಮಹಿಂದಾ ರಾಜಪಕ್ಸಾ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ (ODI Match) ಲಂಕಾ ಆಟಗಾರರು ಸಂಘಟಿತ ಪ್ರದರ್ಶನ ತೋರಿ 132 ರನ್​ಗಳ ಜಯ ಸಾಧಿಸಿದರು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ 1-1 ಅಂಕಗಳ ಅಂತರದಿಂದ ಸಮಬಲದಲ್ಲಿದೆ.

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಪತುಮ್‌ ನಿಸ್ಸಂಕ (43) ಹಾಗೂ ಕರುಣಾರತ್ನೆ (52) ಮೊದಲು ವಿಕೆಟ್‌ಗೆ 82 ರನ್‌ ಕಲೆಹಾಕುವ ಮೂಲಕ ಅತ್ಯುತ್ತಮ ಅಡಿಪಾಯ ಹಾಕಿಕೊಟ್ಟರು. ನಂತರದಲ್ಲಿ ಬಂದ ಕುಸಲ್‌ ಮೆಂಡಿಸ್‌ ಸಹ ಜವಾಬ್ದಾರಿಯ ಆಟವಾಡಿದರು. ಅಫ್ಘನ್‌ ಬೌಲರ್‌ಗಳ ಬೆಂಡೆತ್ತಿದ ಕರುಣಾರತ್ನೆ 75 ಎಸೆತಗಳಲ್ಲಿ 7 ಫೋರ್, 1 ಸಿಕ್ಸ್‌ ಸಹಿತ 78 ರನ್‌ ಸಿಡಿಸಿದರು.

IPL 2024: ಮತ್ತೆ ಬದಲಾಗಲಿದೆಯಾ RCB ತಂಡದ ನಾಯಕತ್ವ..?

ಬಳಿಕ ಬಂದ ಸಮರವಿಕ್ರಮ (44), ಧನಂಜಯ ಡಿಸಿಲ್ವಾ (29), ನಾಯಕ ದಸನ್ ಶನಕ (23) ಹಾಗೂ ವನಿಂದು ಹಸರಂಗ (29) ಉಪಯುಕ್ತ ರನ್‌ಗಳಿಸಿದರು. ಪರಿಣಾಮ ಲಂಕಾ ಪಡೆ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 323 ರನ್‌ ಕಲೆಹಾಕಿತು. ಅಫ್ಘಾನಿಸ್ತಾನದ ಪರ ಫರೀದ್‌ ಅಹ್ಮದ್‌, ಮೊಹಮ್ಮದ್‌ ನಬಿ ತಲಾ 2 ವಿಕೆಟ್‌ ಪಡೆದರು.

ಕಠಿಣ ಟಾರ್ಗೆಟ್ ಬೆನ್ನಟ್ಟಿದ ಅಫ್ಘಾನಿಸ್ತಾನ ಬೌಲರ್​ಗಳ ದಾಳಿಗೆ ಕುಸಿಯಿತು. ಪ್ರವಾಸಿ ತಂಡದ ಪರವಾಗಿ ಆರಂಭಿಕ ಬ್ಯಾಟರ್‌ ಇಬ್ರಾಹಿಂ ಜದ್ರಾನ್‌ (54) ಹಾಗೂ ನಾಯಕ ಹಸ್ಮತುಲ್ಲಾ ಶಹೀದಿ (57) ಅರ್ಧಶತಕದ ನಡುವೆಯೂ ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿತು. 42.1 ಓವರ್‌ಗಳಲ್ಲಿ 191 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 132 ರನ್‌ಗಳ ಭಾರೀ ಅಂತರದ ಸೋಲು ಕಂಡಿತು. ಒಂದು ಹಂತದಲ್ಲಿ 143ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಅಫ್ಘಾನ್ ಪಡೆ 191 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಯಿತು.

ಶ್ರೀಲಂಕಾ ಪರವಾಗಿ ವನಿಂದು ಹಸರಂಗ ಹಾಗೂ ಧನಂಜಯ ಡಿಸಿಲ್ವ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಎರಡು ವಿಕೆಟ್ ದುಶ್ಮಂತ ಚಮೀರ ಪಾಲಾದರೆ ಮಥೀಶ ತೀಕ್ಷಣ ಹಾಗೂ ನಾಯಕ ದಾಸುನ್ ಶನಕಗೆ ಒಂದು ವಿಕೆಟ್ ದೊರೆಯಿತು. ಇದೀಗ 1-1 ಅಂತರದಲ್ಲಿ ಸರಣಿ ಸಮಬಲ ಸಾಧಿಸಿರುವುದರಿಂದ ಜೂನ್ 7 ರಂದು ನಡೆಯಲಿರುವ ಕೊನೆಯ ಏಕದಿನ ಪಂದ್ಯ ರೋಚಕತೆ ಸೃಷ್ಟಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್