Hardik Pandya: ಹಾರ್ದಿಕ್ ಪಾಂಡ್ಯ ಸಿಕ್ಸ್ ಸಿಡಿಸಿ ಗೆಲುವು ತಂದುಕೊಟ್ಟಾಗ ದಿನೇಶ್ ಕಾರ್ತಿಕ್ ಏನು ಮಾಡಿದ್ರು ನೋಡಿ
IND vs PAK, Asia Cup 2022: ಏಷ್ಯಾಕಪ್ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸ್ ಸಿಡಿಸಿ ಜಯ ತಂದುಕೊಡುತ್ತಿದ್ದಂತೆ ನಾನ್ ಸ್ಟ್ರೈಕರ್ನಲ್ಲಿದ್ದ ದಿನೇಶ್ ಕಾರ್ತಿಕ್ ಏನು ಮಾಡಿದರು ನೋಡಿ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಏಷ್ಯಾಕಪ್ನ ದ್ವಿತೀಯ ಪಂದ್ಯ ಅಂದುಕೊಂಡಂತೆ ರಣರೋಚಕವಾಗಿತ್ತು. ಭಾರತ– ಪಾಕಿಸ್ತಾನ (India vs Pakistan) ಬದ್ದವೈರಿಗಳ ನಡುವಣ ಕಾದಾಟ ಕೊನೆಯ ಓವರ್ಗೆ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಕಠಿಣ ಟಾರ್ಗೆಟ್ ಇರದಿದ್ದರೂ ಅಭಿಮಾನಿಗಳನ್ನ ಈ ಪಂದ್ಯ ಹಿಡಿದುಕೂರಿಸಿತ್ತು. ಕೊನೆಯ ಓವರ್ನಲ್ಲಿ ಭಾರತ ಗೆಲ್ಲಲು 7 ರನ್ಗಳ ಅವಶ್ಯಕತೆ ಇದ್ದಾಗ ರವೀಂದ್ರ ಜಡೇಜಾ (Ravindra Jadeja) ವಿಕೆಟ್ ಕಳೆದುಕೊಂಡ ಕ್ಷಣವಂತು ಪಂದ್ಯದ ಕಿಚ್ಚು ಹೆಚ್ಚಿಸಿತು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ (Hardik Pandya) ರೋಚಕ ಸಿಕ್ಸರ್ ಸಿಡಿಸಿ ಟೀಮ್ ಇಂಡಿಯಾ 5 ವಿಕೆಟ್ಗಳ ಗೆಲುವು ಸಾಧಿಸುವಂತೆ ಮಾಡಿದರು. ಪಾಂಡ್ಯ ಸಿಕ್ಸ್ ಸಿಡಿಸಿ ಜಯ ತಂದುಕೊಡುತ್ತಿದ್ದಂತೆ ನಾನ್ ಸ್ಟ್ರೈಕರ್ನಲ್ಲಿದ್ದ ದಿನೇಶ್ ಕಾರ್ತಿಕ್ ಏನು ಮಾಡಿದರು ನೋಡಿ.
ಮೊಹಮ್ಮದ್ ಜವಾಜ್ ಅವರ 20ನೇ ಓವರ್ನ 4ನೇ ಎಸೆತದ ಕ್ವಿಕ್ ಶಾರ್ಟ್ ಬಾಲ್ ಅನ್ನು ಚೆನ್ನಾಗಿ ಅರಿತ ಪಾಂಡ್ಯ ಲಾಂಗ್ಆನ್ನಲ್ಲಿ ಫ್ಲಾಟ್ ಸಿಕ್ಸ್ ಸಿಡಿಸಿದರು. ಭಾರತದ ಡ್ರೆಸ್ಸಿಂಗ್ ರೂಮ್ ಅಂತು ಸಂತಸದ ಅಲೆಯಲ್ಲಿ ತೇಲಿತು. ಆಟಗಾರರು ಕುಣಿದುಕುಪ್ಪಳಿಸಿದರು. ಇತ್ತ ಪಾಂಡ್ಯ ಅವರ ಪ್ರದರ್ಶನ ಕಂಡು ಸಿಕ್ಸ್ ಸಿಡಿಸುತ್ತಿದ್ದಂತೆ ನಾನ್ ಸ್ಟ್ರೈಕರ್ನಲ್ಲಿದ್ದ ದಿನೇಶ್ ಕಾರ್ತಿಕ್ ಅವರ ಬಳಿ ತೆರಳಿ ತಲೆಬಾಗಿ ನಮಸ್ಕರಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
#INDvsPAK pic.twitter.com/8RPPBRwr85
— Sanju Here ?? (@me_sanjureddy) August 28, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಮುಖ್ಯ ವಿಕೆಟ್ ಕಳೆದುಕೊಂಡಿತು. ನಾಯಕ ಬಾಬರ್ ಅಜಮ್ 10 ರನ್ ಗಳಿಸಿದ್ದಾಗ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿದರು. ಫಖರ್ ಜಮಾನ್ ಕೂಡ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಈ ಸಂದರ್ಭ ರಿಜ್ವಾನ್ ಮತ್ತು ಇಫ್ತಿಕಾರ್ ನಡುವೆ 45 ರನ್ಗಳ ಜೊತೆಯಾಟ ನಡೆಯಿತು. ಆದರೆ 28 ರನ್ ಗಳಿಸಿದ್ದ ಇಫ್ತಿಕರ್,43 ರನ್ ಗಳಿಸಿದ್ದ ರಿಜ್ವಾನ್ ಔಟಾಗಿದ್ದು ತಂಡಕ್ಕೆ ಹಿನ್ನಡೆಯಾಯಿತು. ಅಂತಿಮವಾಗಿ ಪಾಕಿಸ್ತಾನ 19.5 ಓವರುಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪರ ಭುವನೇಶ್ವರ್ 4 ವಿಕೆಟ್ ಪಡೆದರೆ, ಹಾರ್ದಿಕ್ 3 ವಿಕೆಟ್ ಕಿತ್ತು ಮಿಂಚಿದರು.
ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಭಾರತ ಮೊದಲ ಓವರ್ನಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಆಟ 12 ರನ್ಗೆ ಅಂತ್ಯವಾಯಿತು. 100ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ ವಿರಾಟ್ ಕೊಹ್ಲಿ ದೊಡ್ಡ ಮೊತ್ತದ ಸೂಚನೆ ನೀಡಿದರು. ಆದರೆ 35 ರನ್ ಬಾರಿಸಿದ್ದಾಗ ಔಟಾದರು. ಸೂರ್ಯಕುಮಾರ್ 18 ರನ್ ಗಳಿಗೆ ಆಟ ಮುಗಿಸಿದರು.
ಜಡೇಜಾ– ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 52 ರನ್ ಗಳ ಜೊತೆಯಾಟ ನೀಡಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಪಾಂಡ್ಯ ಕೇವಲ 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 33 ರನ್ ಬಾರಿಸಿದರೆ, ಜಡೇಜಾ 35 ರನ್ ಗಳಿಸಿದರು. ಭಾರತ 19.4 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಅಮೋಘ ಪ್ರದರ್ಶನಕ್ಕಾಗಿ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು.