Virat Kohli: ರೋಚಕ ಪಂದ್ಯದ ಮಧ್ಯೆ ದೇವರಲ್ಲಿ ವಿರಾಟ್ ಕೊಹ್ಲಿ ಪ್ರಾರ್ಥನೆ: ವೈರಲ್ ಆಗ್ತಿದೆ ವಿಡಿಯೋ

India vs Pakistan, Asia Cup 2022: ಏಷ್ಯಾಕಪ್​ನ ಭಾರತ- ಪಾಕಿಸ್ತಾನ ರೋಚಕ ಪಂದ್ಯದ ಮಧ್ಯೆ ಒಂದು ಹಂತದಲ್ಲಿ ರವೀಂದ್ರ ಜಡೇಜಾ ಔಟಾಗುವುದರಲ್ಲಿದ್ದರು. ಈ ಸಂದರ್ಭ ವಿರಾಟ್ ಕೊಹ್ಲಿ ಅವರು ನೀಡಿದ ರಿಯಾಕ್ಷನ್ ವೈರಲ್ ಆಗುತ್ತಿದೆ.

Virat Kohli: ರೋಚಕ ಪಂದ್ಯದ ಮಧ್ಯೆ ದೇವರಲ್ಲಿ ವಿರಾಟ್ ಕೊಹ್ಲಿ ಪ್ರಾರ್ಥನೆ: ವೈರಲ್ ಆಗ್ತಿದೆ ವಿಡಿಯೋ
Virat Kohli IND vs PAK
Follow us
TV9 Web
| Updated By: Vinay Bhat

Updated on:Aug 29, 2022 | 11:01 AM

ಭಾನುವಾರ ರಾತ್ರಿ ಏಷ್ಯಾಕಪ್​ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ದೊಡ್ಡ ಮೊತ್ತದ ಟಾರ್ಗೆಟ್ ಇರದಿದ್ದರೂ ಕೊನೆಯ ಓವರ್ ವರೆಗೆ ಪಂದ್ಯ ಸಾಗಿತು. 20ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಸಿಕ್ಸ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದಿಟ್ಟರು. ಈ ಮೂಲಕ ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳುವ ಜೊತೆ ಟೀಮ್ ಇಂಡಿಯಾ 5 ವಿಕೆಟ್​ಗಳ ಅಮೋಘ ಗೆಲುವು ಕಂಡಿದೆ. ತನಗೆ ನೀಡಿದ್ದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಾರ್ದಿಕ್ ಆಲ್ರೌಂಡ್ ಪ್ರದರ್ಶನ ತೋರಿದರು. ಇವರಿಗೆ ರವೀಂದ್ರ ಜಡೇಜಾ ಕೂಡ ಉತ್ತಮ ಸಾಥ್ ನೀಡಿದರು. ಬೌಲಿಂಗ್​ನಲ್ಲಿ ಭುವನೇಶ್ವರ್ ಕುಮಾರ್ ಮಿಂಚಿದರು. ವಿರಾಟ್ ಕೊಹ್ಲಿ (Virat Kohli) ಕೂಡ 35 ರನ್ ಸಿಡಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಮೇಲ್ನೋಟಕ್ಕೆ ಭಾರತಕ್ಕೆ 148 ರನ್ ಕಠಿಣ ಟಾರ್ಗೆಟ್ ಆಗಿರಲೇ ಇಲ್ಲ. ಆದರೆ, ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಳ್ಳುವ ಜೊತೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಪೈಕಿ ಯಾರುಕೂಡ ಕೊನೆಯ ವರೆಗೆ ನಿಲ್ಲದೆ ಔಟಾದರು. ಇದು ಆತಂಕ ಉಂಟುಮಾಡಿತ್ತು. ಆದರೆ, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಕ್ರೀಸ್ ಕಚ್ಚಿ ನಿಂತು ಗೆಲುವಿಗೆ ಹೋರಾಟ ನಡೆಸಿದರು. ಇವರಿಬ್ಬರ ಜೊತೆಯಾಟ ತಂಡಕ್ಕೆ ಮುಖ್ಯವಾಗಿತ್ತು. ಕೊನೆಯ ಹಂತದ ವರೆಗೂ ಜಡ್ಡುಪಾಂಡ್ಯ ನಿತ್ತು ಆಡಬೇಕಿತ್ತು.

ಇದನ್ನೂ ಓದಿ
Image
Rohit Sharma: ಪಂದ್ಯ ಮುಗಿದ ಬಳಿಕ ಓರ್ವ ಆಟಗಾರನನ್ನು ಮಾತ್ರ ಹಾಡಿ ಹೊಗಳಿದ ರೋಹಿತ್ ಶರ್ಮಾ
Image
Hardik Pandya: ಹಾರ್ದಿಕ್ ಪಾಂಡ್ಯ ಸಿಕ್ಸ್ ಸಿಡಿಸಿ ಗೆಲುವು ತಂದುಕೊಟ್ಟಾಗ ದಿನೇಶ್ ಕಾರ್ತಿಕ್ ಏನು ಮಾಡಿದ್ರು ನೋಡಿ
Image
IND vs PAK: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ಕೊನೆಯ ಓವರ್​ ಹೇಗಿತ್ತು?: ವಿಡಿಯೋ
Image
IND vs PAK: ಫಾಸ್ಟ್ ಬೌಲರ್ಸ್​ ಪರಾಕ್ರಮ; ಪಾಕ್ ವಿರುದ್ಧ ಐತಿಹಾಸಿಕ ದಾಖಲೆ ಬರೆದ ಟೀಂ ಇಂಡಿಯಾ ವೇಗಿಗಳು..!

ಆದರೆ, ಒಂದು ಹಂತದಲ್ಲಿ ಜಡೇಜಾ ಔಟಾಗುವುದರಲ್ಲಿದ್ದರು. ಈ ಸಂದರ್ಭ ವಿರಾಟ್ ಕೊಹ್ಲಿ ಅವರು ನೀಡಿದ ರಿಯಾಕ್ಷನ್ ವೈರಲ್ ಆಗುತ್ತಿದೆ. 18ನೇ ಓವರ್ ಆರಂಭವಾಗುವ ಹೊತ್ತಿಗೆ ಭಾರತದ ಗೆಲುವಿಗೆ 32 ರನ್​ಗಳ ಅವಶ್ಯಕತೆಯಿತ್ತು. ಜಡೇಜಾ ಕ್ರೀಸ್​ನಲ್ಲಿ ಇದ್ದಾಗ ನಸೀಂ ಶಾ ಬೌಲಿಂಗ್​ನ 4ನೇ ಎಸೆತದಲ್ಲಿ ಪಾಕ್ ಆಟಗಾರರು ಎಲ್​ಬಿಗೆ ಮನವಿ ಮಾಡಿದರು. ಅಂಪೈರ್ ಔಟ್ ಎಂದು ತೀರ್ಮಾನ ಕೂಡ ಪ್ರಕಟಿಸಿದರು. ಆದರೆ, ಈ ತೀರ್ಪಿನ ಬಗ್ಗೆ ಅನುಮಾನವಿದ್ದ ಜಡೇಜಾ ರಿವ್ಯೂ ಮೊರೆಹೋದರು.

ಥರ್ಡ್​ ಅಂಪೈರ್ ರಿವ್ಯೂ ಪರೀಕ್ಷಿಸುತ್ತಿದ್ದರೆ ಅತ್ತ ಭಾರತದ ಅಭಿಮಾನಿಗಳಲ್ಲಿ ಹಾಗೂ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ನಲ್ಲಿ ಆತಂಕ ಮನೆಮಾಡಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ದೇವರ ಮೊರೆ ಹೋದ ಘಟನೆ ಕೂಡ ನಡೆಯಿತು. ಇದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಕೊಹ್ಲಿ ಪ್ರಾರ್ಥಿಸುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಕೊಹ್ಲಿ ಕಾಪಾಡಿಎಂದು ಹೇಳುತ್ತಿರುವುದು ಕಂಡು ಬಂದಿದೆ.

ರಿವ್ಯೂನಲ್ಲಿ ಪರೀಕ್ಷಿಸಿದಾಗ ಚೆಂಡು ಪಿಚ್ ಹೊರಗಡೆ ಇದ್ದಿರುವುದು ತಿಳಿದಿದ್ದು ನಂತರ ನಾಟೌಟ್ ಎಂದು ತೀರ್ಪು ನೀಡಲಾಗಿದೆ. ಇದಾದ ಬಳಿಕ ಜಡೇಜಾ ಸಿಕ್ಸ್ ಸಿಡಿಸಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. 29 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿದ್ದ ಜಡ್ಡು 35 ರನ್​ಗೆ ಔಟಾದರು. ಪಾಂಡ್ಯ ಕೇವಲ 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 33 ರನ್ ಬಾರಿಸಿದರು. ಭಾರತ 19.4 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ 5 ವಿಕೆಟ್​ಗಳ ಭರ್ಜರಿ ಜಯ ಕಂಡಿತು.

Published On - 11:01 am, Mon, 29 August 22

ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್