AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಇಂಗ್ಲೆಂಡ್​ಗೆ ಭಾರತವನ್ನು ಸೋಲಿಸುವ ಐಡಿಯಾ ಕೊಟ್ಟ ದಿನೇಶ್ ಕಾರ್ತಿಕ್

England vs India 3rd Test: ಜಾಕೋಬ್ ಬೆಥೆಲ್ ಇಂಗ್ಲೆಂಡ್‌ನ ಭವಿಷ್ಯದ ದೊಡ್ಡ ತಾರೆ, ತಂಡವು ಅವರ ಮೇಲೆ ಹೆಚ್ಚು ಕೇಂದ್ರೀಕರಿಸಬೇಕು ಎಂದು ಕಾರ್ತಿಕ್ ಹೇಳಿದರು. ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಪಾಡ್‌ಕ್ಯಾಸ್ಟ್ ಲೈವ್‌ನಲ್ಲಿ, ಕಾರ್ತಿಕ್ ಬೆಥೆಲ್ ಬಹುಮುಖ ಪ್ರಬುದ್ಧ ಬ್ಯಾಟ್ಸ್‌ಮನ್ ಎಂದು ಹೇಳಿದರು. ಅವರು ಅಗ್ರ ಕ್ರಮಾಂಕದಲ್ಲಿ ಇಂಗ್ಲೆಂಡ್‌ಗೆ ದೀರ್ಘಕಾಲೀನ ಪರಿಹಾರವಾಗಬಹುದು ಎಂದಿದ್ದಾರೆ.

IND vs ENG: ಇಂಗ್ಲೆಂಡ್​ಗೆ ಭಾರತವನ್ನು ಸೋಲಿಸುವ ಐಡಿಯಾ ಕೊಟ್ಟ ದಿನೇಶ್ ಕಾರ್ತಿಕ್
Shubman Gill And Dinesh Karthik
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 16, 2025 | 6:33 PM

Share

ಬೆಂಗಳೂರು (ಜು. 09): ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (Dinesh Karthik) ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಪ್ರಮುಖ ಸಲಹೆ ನೀಡಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿ ಓಲ್ಲಿ ಪೋಪ್ ಬದಲಿಗೆ ಇಂಗ್ಲೆಂಡ್ ಜಾಕೋಬ್ ಬೆಥೆಲ್ ಅವರನ್ನು ಆಡಿಸಬೇಕು ಎಂದು ಕಾರ್ತಿಕ್ ಹೇಳಿದ್ದಾರೆ. ಜಾಕೋಬ್ ಬೆಥೆಲ್ ಇಂಗ್ಲೆಂಡ್‌ನ ಭವಿಷ್ಯದ ದೊಡ್ಡ ತಾರೆ, ತಂಡವು ಅವರ ಮೇಲೆ ಹೆಚ್ಚು ಕೇಂದ್ರೀಕರಿಸಬೇಕು ಎಂದು ಕಾರ್ತಿಕ್ ಹೇಳಿದರು. ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಪಾಡ್‌ಕ್ಯಾಸ್ಟ್ ಲೈವ್‌ನಲ್ಲಿ, ಕಾರ್ತಿಕ್ ಬೆಥೆಲ್ ಬಹುಮುಖ ಪ್ರಬುದ್ಧ ಬ್ಯಾಟ್ಸ್‌ಮನ್ ಎಂದು ಹೇಳಿದರು. ಅವರು ಅಗ್ರ ಕ್ರಮಾಂಕದಲ್ಲಿ ಇಂಗ್ಲೆಂಡ್‌ಗೆ ದೀರ್ಘಕಾಲೀನ ಪರಿಹಾರವಾಗಬಹುದು ಎಂದಿದ್ದಾರೆ.

ಕಾರ್ತಿಕ್, ‘ನಾನು ಸ್ವಲ್ಪ ಪಕ್ಷಪಾತಿ. 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಓಲ್ಲಿ ಪೋಪ್ ಬದಲಿಗೆ ಬೆಥೆಲ್ ಅನ್ನು ಆಯ್ಕೆ ಮಾಡುತ್ತೇನೆ’ ಎಂದು ಹೇಳಿದರು. ಅಂದಹಾಗೆ ಜಾಕೋಬ್ ಬೆಥೆಲ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ, ದಿನೇಶ್ ಕಾರ್ತಿಕ್ ಈ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮಾರ್ಗದರ್ಶಕರಾಗಿದ್ದಾರೆ. ಹೀಗಾಗಿ, ಅವರು ಬೆಥೆಲ್ ಅವರ ಪ್ರತಿಭೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಬೆಥೆಲ್ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಸಾಮರ್ಥ್ಯದಿಂದಾಗಿ, ನಾವು ಅವರನ್ನು ಆರ್‌ಸಿಬಿಯ ಭಾಗವಾಗಿಸಿದ್ದೇವೆ ಎಂದು ಅವರು ಹೇಳಿದರು.

ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಕಾರ್ತಿಕ್, ಬೆಥೆಲ್ ಆಟಕ್ಕೆ ಮನಸೋತಿದ್ದಾರೆ. ಅವರು ಕಲಿಯಲು ಬಯಸುತ್ತಾರೆ, ಅತ್ಯುತ್ತಮರಾಗಲು ಬಯಸುತ್ತಾರೆ. ಇದು ಅವರ ದೊಡ್ಡ ಗುಣ ಎಂದು ಹೇಳಿದರು. 21 ವರ್ಷದ ಜಾಕೋಬ್ ಬೆಥೆಲ್ ಇಂಗ್ಲೆಂಡ್ ಪರ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 52 ರ ಸರಾಸರಿಯಲ್ಲಿ 260 ರನ್ ಗಳಿಸಿದ್ದಾರೆ.

ಇದನ್ನೂ ಓದಿ
Image
14 ವರ್ಷದ ವೈಭವ್ ಸೂರ್ಯವಂಶಿ ನಿವ್ವಳ ಮೌಲ್ಯ ಎಷ್ಟು ಕೋಟಿ ಗೊತ್ತೇ?
Image
ಭಾರತಕ್ಕೆ ತಲೆನೋವಾದ ಲಾರ್ಡ್ಸ್ ಪಿಚ್: ಕೋಚ್​ನ ಮಾಸ್ಟರ್ ಪ್ಲ್ಯಾನ್ ಏ
Image
ಕ್ರಿಕೆಟ್ ತಂಡ ಖರೀದಿಸಿದ ಯುಜ್ವೇಂದ್ರ ಚಹಲ್ ಗೆಳತಿ
Image
ಜಸ್​ಪ್ರೀತ್ ಬುಮ್ರಾ ಇಲ್ಲದಿದ್ದಾಗ ಗೆಲ್ಲುವ ಟೀಮ್ ಇಂಡಿಯಾ

Vaibhav Suryavanshi Net Worth: 14 ವರ್ಷದ ವೈಭವ್ ಸೂರ್ಯವಂಶಿ ನಿವ್ವಳ ಮೌಲ್ಯ ಎಷ್ಟು ಕೋಟಿ ಗೊತ್ತೇ?

ಭವಿಷ್ಯದಲ್ಲಿ ಮೂರು ಸ್ವರೂಪಗಳಲ್ಲಿ ಬಹಳ ಮುಖ್ಯ ಎಂದು ಸಾಬೀತುಪಡಿಸಲಿರುವ ಇಂಗ್ಲೆಂಡ್ ಆಟಗಾರರಲ್ಲಿ ಬೆಥೆಲ್ ಅವರ ಹೆಸರು ಎಣಿಸಲ್ಪಟ್ಟಿದೆ. ಓಲಿ ಪೋಪ್ ಕೂಡ ಒಬ್ಬ ಅತ್ಯುತ್ತಮ ಬ್ಯಾಟ್ಸ್‌ಮನ್. ಹೆಡಿಂಗ್ಲಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಶತಕ ಗಳಿಸಿದರು. ಆದರೆ, ಆ ನಂತರದ ಮೂರು ಇನ್ನಿಂಗ್ಸ್‌ಗಳಲ್ಲಿಯೂ ಅವರು ವಿಫಲರಾದರು. ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ 336 ರನ್‌ಗಳ ಸೋಲಿಗೆ ಪೋಪ್ ಅವರ ವೈಫಲ್ಯ ಪ್ರಮುಖ ಕಾರಣವಾಗಿತ್ತು.

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಜುಲೈ 10 ರಿಂದ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ನಡೆಯಲಿದೆ. 2 ಪಂದ್ಯಗಳ ನಂತರ, ಸರಣಿ 1-1 ರಲ್ಲಿ ಸಮಬಲಗೊಂಡಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ತಂಡವು 336 ರನ್‌ಗಳಿಂದ ಐತಿಹಾಸಿಕ ಗೆಲುವು ಸಾಧಿಸಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ನೆಟ್ ಸೆಷನ್‌ನಲ್ಲಿ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬೆವರು ಸುರಿಸಿದ್ದರಿಂದ ಅವರು ಮತ್ತೆ ತಂಡಕ್ಕೆ ಮರಳುವುದು ಖಚಿತ ಎನ್ನಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:55 pm, Wed, 9 July 25