ಟೀಮ್ ಇಂಡಿಯಾ ಗ್ರೂಪ್ ಫೋಟೋದಲ್ಲಿ ಕಾಣಿಸಿಕೊಳ್ಳದ ವಿರಾಟ್ ಕೊಹ್ಲಿ..!
India vs Engalnd 3rd Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಗುರುವಾರದಿಂದ (ಜುಲೈ 10) ಆರಂಭವಾಗಲಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಹೀಗಾಗಿ ಈ ಮ್ಯಾಚ್ ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು.

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಜುಲೈ 10 ರಿಂದ ಶುರುವಾಗಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಲಂಡನ್ಗೆ ಬಂದಿಳಿದಿದೆ. ಇದರ ನಡುವೆ ಟೀಮ್ ಇಂಡಿಯಾ ಆಟಗಾರರಿಗೆ ಭಾರತ ತಂಡದ ಮಾಜಿ ಆಲ್ರೌಂಡರ್ ಯುವಿರಾಜ್ ಸಿಂಗ್ ವಿಶೇಷ ಔತಣಕೂಟ ಏರ್ಪಡಿಸಿದ್ದರು. ಲಂಡನ್‌ನಲ್ಲಿ ಯುವರಾಜ್ ಸಿಂಗ್ ತಮ್ಮ ದತ್ತಿ ಸಂಸ್ಥೆ ಯುವಿಕ್ಯಾನ್ ಫೌಂಡೇಶನ್‌ಗಾಗಿ ಆಯೋಜಿಸಿದ್ದ ಈ ಔತಣಕೂಟದಲ್ಲಿ ಟೀಮ್ ಇಂಡಿಯಾ ಆಟಗಾರರು, ಮುಖ್ಯ ಕೋಚ್ ಗೌತಮ್ ಗಂಭೀರ್, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ಡ್ಯಾರೆನ್ ಸ್ಯಾಮಿ, ಕೆವಿನ್ ಪೀಟರ್ಸನ್ ಅವರಂತಹ ಶ್ರೇಷ್ಠ ಕ್ರಿಕೆಟಿಗರು ಹಾಜರಿದ್ದರು. ಈ ಔತಣಕೂಟದ ಬಳಿಕ ಯುವರಾಜ್ ಸಿಂಗ್ ಎಲ್ಲರನ್ನು ಜೊತೆಗೂಡಿಸಿ ಗ್ರೂಪ್ ಫೋಟೋ ಕ್ಲಿಕ್ಕಿಸಿದ್ದರು. ಆದರೆ ಈ ಫೋಟೋದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ.
ಟೀಮ್ ಇಂಡಿಯಾ ಗ್ರೂಪ್ ಫೋಟೋ:
Stars align in London for a noble cause! #TeamIndia pic.twitter.com/rctbCxMKMx
— BCCI (@BCCI) July 9, 2025
ಪಾರ್ಟಿಯಲ್ಲಿದ್ದ ವಿರಾಟ್ ಕೊಹ್ಲಿ:
ಯುವಿಕ್ಯಾನ್ ಫೌಂಡೇಷನ್ ಆಯೋಜಿಸಿದ್ದ ಈ ಔತಣಕೂಟದಲ್ಲಿ ವಿರಾಟ್ ಕೊಹ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಅಷ್ಟೇ ಅಲ್ಲದೆ ಎಲ್ಲರೊಂದಿಗೆ ಚಿಟ್ ಚಾಟ್ ನಡೆಸಿದ್ದರು. ಆ ಬಳಿಕ ನಡೆದ ಪಾರ್ಟಿಯಲ್ಲಿ ಕೆವಿನ್ ಪೀಟರ್ಸನ್ ಜೊತೆ ಕೂತು ಊಟ ಮಾಡುತ್ತಿರುವ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Virat Kohli finally reveals the “real” reason for his Test retirement… his beard! 😂
“You know it’s time when you are colouring your beard every four days.”
King Kohli at his witty best at Yuvraj Singh’s charity dinner. 🐐 #ViratKohli #CricketTwitter #KingKohli pic.twitter.com/p4WdIBHFQ6
— Ajay. (@Crycloverajay) July 9, 2025
ಇದಾಗ್ಯೂ ಟೀಮ್ ಇಂಡಿಯಾದ ಗ್ರೂಪ್ ಫೋಟೋದಲ್ಲಿ ವಿರಾಟ್ ಕೊಹ್ಲಿ ಅಜಿತ್ ಅಗರ್ಕರ್, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಕೆವಿನ್ ಪೀಟರ್ಸನ್ ಜೊತೆ ಕಾಣಿಸಿಕೊಂಡಿಲ್ಲ.
ಕೊಹ್ಲಿ ಹೊರಗುಳಿಯಲು ಇದೇ ಕಾರಣವೇನು?
ಔತಣಕೂಟದಲ್ಲಿ ಕಾಣಿಸಿಕೊಂಡ ಪ್ರತಿಯೊಬ್ಬರು ಗ್ರೂಪ್ ಫೋಟೋದಲ್ಲಿದ್ದರೂ ವಿರಾಟ್ ಕೊಹ್ಲಿ ಮಾತ್ರ ಹೊರಗುಳಿದರು ಎಂಬುದರ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ. ಒಂದು ವೇಳೆ ಕೊಹ್ಲಿ ಕಾರ್ಯಕ್ರಮ ಮುಗಿಸಿ ಬೇಗನೆ ತೆರಳಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಟ್ಟಿನಲ್ಲಿ ಟೀಮ್ ಇಂಡಿಯಾದ ಗ್ರೂಪ್ ಫೋಟೋದಿಂದ ಹೊರಗುಳಿಯುವ ಮೂಲಕ ವಿರಾಟ್ ಕೊಹ್ಲಿ ಹೊಸ ಪ್ರಶ್ನೆಯೊಂದನ್ನು ಹುಟ್ಟು ಹಾಕಿದ್ದಾರೆ. ಈ ಪ್ರಶ್ನೆಗೆ ಉತ್ತರ ಸಿಗಲು ಮುಂಬರುವ ಸರಣಿಯವರೆಗೆ ಕಾಯಬೇಕಾಗಬಹುದು.
ಇದನ್ನೂ ಓದಿ: IPL 2026: RCB ತಂಡದಿಂದ ಪ್ರಮುಖ ಆಟಗಾರನಿಗೆ ಗೇಟ್ ಪಾಸ್ ಸಾಧ್ಯತೆ
ವಿರಾಟ್ ಕೊಹ್ಲಿ ಕಂಬ್ಯಾಕ್ ಯಾವಾಗ?
ವಿರಾಟ್ ಕೊಹ್ಲಿ ಈಗಾಗಲೇ ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಟೀಮ್ ಇಂಡಿಯಾದ ಮುಂದಿನ ಏಕದಿನ ಸರಣಿ ಇರುವುದು ಅಕ್ಟೋಬರ್ನಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
Published On - 2:17 pm, Wed, 9 July 25
