Dinesh Karthik: ಫೀಲ್ಡ್​ನಲ್ಲಿ ಕಾರ್ತಿಕ್ ಮೇಲೆ ಪುನಃ ಕೋಪಗೊಂಡ ರೋಹಿತ್ ಶರ್ಮಾ: ಈ ಬಾರಿ ಏನು ಮಾಡಿದ್ರು?

India vs Australia: ಭಾರತ- ಆಸ್ಟ್ರೇಲಿಯಾ ನಡುವಣ ಮೂರನೇ ಟಿ20 ಪಂದ್ಯದಲ್ಲಿ ಕೂಡ ದಿನೇಶ್ ಕಾರ್ತಿಕ್ (Dinesh Karthik) ಅವರ ವರ್ತನೆ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಸಿಟ್ಟನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತು.

Dinesh Karthik: ಫೀಲ್ಡ್​ನಲ್ಲಿ ಕಾರ್ತಿಕ್ ಮೇಲೆ ಪುನಃ ಕೋಪಗೊಂಡ ರೋಹಿತ್ ಶರ್ಮಾ: ಈ ಬಾರಿ ಏನು ಮಾಡಿದ್ರು?
Rohit Sharma and Dinesh Karthik
Follow us
TV9 Web
| Updated By: Vinay Bhat

Updated on:Sep 26, 2022 | 10:47 AM

ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ಗೆದ್ದ ಭಾರತ (IND vs AUS) ಕ್ರಿಕೆಟ್ ತಂಡ 2-1 ಅಂತರದಿಂದ ಸರಣಿ ವಶಕೊಂಡಿದೆ. ಇದರ ಜೊತೆಗೆ ಅನೇಕ ದಾಖಲೆಗಳನ್ನು ಕೂಡ ಮಾಡಿದೆ. ಸೂರ್ಯಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಕೊನೆಯ ಒಂದು ಎಸೆತ ಬಾಕಿ ಇರುವಾಗ 6 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲೂ ರೋಹಿತ್ ಪಡೆಯ ಬೌಲಿಂಗ್ ವಿಭಾಗ ಪರಿಣಾಮಕಾರಿ ಆಗಿ ಗೋಚರಿಸಲಿಲ್ಲ. ಸ್ಪಿನ್ನರ್​ಗಳು ತಮ್ಮ ಜವಾಬ್ದಾರಿ ನಿರ್ವಹಿಸಿದರೆ ವೇಗಿಗಳು ದುಬಾರಿ ಆದರು. ಜಸ್​ಪ್ರೀತ್ ಬುಮ್ರಾ ಕೂಡ 4 ಓವರ್​ಗೆ 50 ನೀಡಿದರು. ಇದರ ನಡುವೆ ಭಾರತದ ಫೀಲ್ಡಿಂಗ್ ಕೂಡ ಕಳಪೆ ಆಗಿತ್ತು. ಅದರಲ್ಲೂ ಈ ಬಾರಿ ಕೂಡ ದಿನೇಶ್ ಕಾರ್ತಿಕ್ (Dinesh Karthik) ಅವರ ವರ್ತನೆ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಸಿಟ್ಟನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತು.

ಈ ಸರಣಿಯಲ್ಲಿ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ನಡುವೆ ತಮಾಷೆಗಾಗಿ ಅನೇಕ ಬಾರಿ ಜಗಳ ನಡೆದಿದೆ. ಮೊದಲ ಟಿ20 ಪಂದ್ಯದಲ್ಲಿ ಡಿಆರ್​ಎಸ್ ಮನವಿ ವಿಫಲವಾಗಿದ್ದಕ್ಕೆ ರೋಹಿತ್ ಸಿಟ್ಟಾಗಿ ನಂತರ ತಮಾಷೆಯಾಗಿ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಕುತ್ತಿಗೆ ಹಿಡಿದ ಘಟನೆ ನಡೆದಿತ್ತು. ದ್ವಿತೀಯ ಪಂದ್ಯದಲ್ಲಿ ಎರಡು ಎಸೆದಲ್ಲಿ ಸಿಕ್ಸ್, ಫೋರ್ ಬಾರಿಸಿ ಗೆಲುವು ತಂದುಕೊಟ್ಟ ಸಂದರ್ಭ ನಾನ್ ಸ್ಟ್ರೈಕರ್​ನಲ್ಲಿದ್ದ ರೋಹಿತ್ ಶರ್ಮಾ ಅವರು ಕಾರ್ತಿಕ್ ಬಳಿ ಓಡಿ ಬಂದು ನಗುತ್ತಾ ಖುಷಿಯಲ್ಲಿ ತಬ್ಬಿಕೊಂಡರು. ಹೀಗೆ ಇವರಿಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

ಇದನ್ನೂ ಓದಿ
Image
India vs South Africa Schedule: ಭಾರತ-ಸೌತ್ ಆಫ್ರಿಕಾ ಸರಣಿಯ ವೇಳಾಪಟ್ಟಿ
Image
Virat Kohli: ಕೊನೆ ಕ್ಷಣದಲ್ಲಿ ಕೊಹ್ಲಿ ಔಟಾಗಿ ಪೆವಿಲಿಯನ್​ಗೆ ಬಂದಾಗ ರೋಹಿತ್ ಏನು ಮಾಡಿದ್ರು ನೋಡಿ
Image
IND vs AUS: ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ ಭಾರತ: ಏನಿದು ದಾಖಲೆ?
Image
Ind vs Aus: ಸೂರ್ಯ- ಕೊಹ್ಲಿ ಅರ್ಧಶತಕ.. ಸರಣಿ ಗೆದ್ದ ಭಾರತ..! ಕಾಂಗರೂಗಳಿಗೆ ಸೋಲಿನ ವಿದಾಯ

ಇದೀಗ ಮೂರನೇ ಟಿ20 ಪಂದ್ಯದಲ್ಲೂ ರೋಹಿತ್ಕಾರ್ತಿಕ್ ನಡುವಣ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದಕ್ಕೆ ಕಾರಣವಾಗಿದ್ದು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ರನೌಟ್. ಯುಜ್ವೇಂದ್ರ ಚಹಲ್ ಬೌಲಿಂಗ್​ನಲ್ಲಿ ಎರಡು ರನ್​ಗೆಂದು ಓಡಿದ ಮ್ಯಾಕ್ಸಿ ಅಕ್ಷರ್ ಪಟೇಲ್ ಅವರ ಮಿಂಚಿನ ಎಸೆತಕ್ಕೆ ರನೌಟ್ ಆಗಿದ್ದು ವಿವಾದಾತ್ಮಕವಾಗಿತ್ತು. ಯಾಕೆಂದರೆ ಕಾರ್ತಿಕ್ ಅವರು ಅಕ್ಷರ್ ಎಸೆದ ಚೆಂಡು ಹಿಡಿದು ವಿಕೆಟ್ ತಾಗಿಸುವ ಮೊದಲೇ ಕೀಪರ್ ಗ್ಲೌಸ್ ಆಕಸ್ಮಿಕವಾಗಿ ಸ್ಟಂಪ್‌ಗೆ ತಾಗಿತ್ತು. ಇದರಿಂದ ಬೆಲ್ಸ್ ಲೈಟ್ ಕೂಡ ಮೂಡಿತ್ತು. ಆದರೆ ಬೆಲ್ಸ್ ಬಿದ್ದಿರಲಿಲ್ಲ.

ಭಾರತದ ಕಡೆ ಅದೃಷ್ಟ ಇದ್ದ ಕಾರಣ ಬೆಲ್ಸ್ ಇನ್ನೂ ಸ್ಟಂಪ್‌ನಲ್ಲಿ ಇದ್ದವು ಮತ್ತು ದಿನೇಶ್ ಕಾರ್ತಿಕ್ ಕೈಗೆ ತಾಗಿದ ಚೆಂಡು ನಂತರ ಸ್ಟಂಪ್‌ಗೆ ಬಡಿಯಿತು ಆಗ ಬೆಲ್ಸ್ ಹಾರಿದವು. ಟಿವಿ ರೀಪ್ಲೆಯಲ್ಲಿ ಇದು ಸ್ಪಷ್ಟವಾಗಿತ್ತು. ಹೀಗಾಗಿ ಮೂರನೇ ಅಂಪೈರ್ ಔಟ್ ಎಂದು ತೀರ್ಮಾನ ಪ್ರಕಟಿಸಿದರು. ಕಾರ್ತಿಕ್ ತಪ್ಪು ಮಾಡಿದ್ದರೂ ಇಲ್ಲಿ ಬಚಾವ್ ಆದರು. ಈ ಸಂದರ್ಭ ರೋಹಿತ್ ಮತ್ತೆ ಕಾರ್ತಿಕ್ ಮೇಲೆ ಸಿಟ್ಟುಗೊಂಡು ನಂತರ ತಮಾಷೆಯಾಗಿ ಕಾರ್ತಿಕ್ ಬಳಿಗೆ ಹೋಗಿ ಅವನ ಹೆಲ್ಮೆಟ್‌ಗೆ ಮುತ್ತು ನೀಡಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 186 ರನ್​ಗಳ ಸವಾಲಿನ ಮೊತ್ತ ಗಳಿಸಿತ್ತು. ಕ್ಯಾಮರೂನ್​ ಗ್ರೀನ್​​ 52 ರನ್​ ಚಚ್ಚಿದರು. ಕೊನೆಯಲ್ಲಿ ಸಿಡಿದ ಟಿಮ್​ ಡೇವಿಡ್​ 54 ರನ್​ ಗಳಿಸಿದರು. 2 ಬೌಂಡರಿ, 4 ಸಿಕ್ಸರ್​ ಸಿಡಿಸಿದರು. ಆಲ್​ರೌಂಡರ್​ ಡೇನಿಯಲ್​ ಸ್ಯಾಮ್ಸ್​ 28 ರನ್​ ಬಾರಿಸಿದರು. ಟಾರ್ಗೆಟ್ ಬೆನ್ನಟ್ಟಿದ ಭಾರತ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ 104 ರನ್‌ಗಳ ಜೊತೆಯಾಟದ ನೆರವಿನಿಂದ ಗೆಲುವಿನ ನಗೆ ಬೀರಿತು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೂಡ 16 ಬಾಲ್‌ಗಳಲ್ಲಿ 25 ರನ್‌ ಗಳಿಸಿದರು. ಸೂರ್ಯ ಪಂದ್ಯಶ್ರೇಷ್ಠ ಹಾಗೂ ಅಕ್ಷರ್ ಸರಣಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

Published On - 10:47 am, Mon, 26 September 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ