Virat Kohli: ಕೊನೆ ಕ್ಷಣದಲ್ಲಿ ಕೊಹ್ಲಿ ಔಟಾಗಿ ಪೆವಿಲಿಯನ್ಗೆ ಬಂದಾಗ ರೋಹಿತ್ ಏನು ಮಾಡಿದ್ರು ನೋಡಿ
Rohit Sharma, India vs Australia: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕುತ್ತಿರುವಾಗ ಡಗೌಟ್ನಲ್ಲಿದ್ದ ಭಾರತದ ಆಟಗಾರರು ಎದ್ದು ನಿಂತು ಗೌರವ ಸೂಚಿಸಿದರು. ಆದರೆ, ರೋಹಿತ್ ಶರ್ಮಾ ಏನು ಮಾಡಿದ್ರು ನೋಡಿ.
ಭಾನುವಾರ ರಾತ್ರಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಅಂತಿಮ ಮೂರನೇ ಟಿ20 ಪಂದ್ಯ ರಣರೋಚಕವಾಗಿತ್ತು. ಕೊನೆಯ ಓವರ್ ವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು 2-1 ಅಂತರದಿಂದ ಟಿ20 ಸರಣಿ ವಶಪಡಿಸಿಕೊಂಡಿದೆ. ಗೆಲ್ಲಲು 187 ರನ್ಗಳ ಟಾರ್ಗೆಟ್ ಪಡೆದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ (Rohit Sharma), ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಆದರೆ, ವಿರಾಟ್ ಕೊಹ್ಲಿ (Virat Kohli) ಹಾಗೂ ಸೂರ್ಯಕುಮಾರ್ ಯಾದವ್ ಶತಕದ ಜೊತೆಯಾಟ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರೂ. ಆದರೆ ಇವರಿಬ್ಬರ ಪೈಕಿ ಯಾರಿಗೂ ವಿನ್ನಿಂಗ್ ಶಾಟ್ ಹೊಡೆಯಲು ಸಾಧ್ಯವಾಗಲಿಲ್ಲ. ಅಂತಿಮ ಹಂತದಲ್ಲಿ ನಿರ್ಗಮಿಸಿ ನಿರಾಸೆ ಮೂಡಿಸಿದರು.
ಸೂರ್ಯಕುಮಾರ್ 36 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಮೇತ 69 ರನ್ ಗಳಿಸಿ ಔಟಾದರೆ, ಕೊಹ್ಲಿ ಕೊನೆಯ ಓವರ್ನ ಎರಡನೇ ಎಸೆತದಲ್ಲಿ 48 ಬಾಲ್ಗೆ 3 ಫೋರ್, 4 ಸಿಕ್ಸರ್ನೊಂದಿಗೆ 63 ರನ್ ಗಳಿಸಿ ಬ್ಯಾಟ್ ಕೆಳಗಿಟ್ಟರು. ಅಂತಿಮ ಓವರ್ನಲ್ಲಿ ಭಾರತದ ಗೆಲುವಿಗೆ 11 ರನ್ಗಳ ಅವಶ್ಯಕತೆಯಿತ್ತು. ಕ್ರೀಸ್ನಲ್ಲಿದ್ದ ಕೊಹ್ಲಿ ಡೆನಿಯಲ್ ಸ್ಯಾಮ್ಸ್ ಅವರ ಮೊದಲ ಎಸೆತದಲ್ಲೇ ಚೆಂಡನ್ನು ಸಿಕ್ಸರ್ಗೆ ಅಟ್ಟಿ ಭಾರತದ ಗೆಲುವನ್ನು ಹತ್ತಿರ ಮಾಡಿದರು. ಆದರೆ, ಎರಡನೇ ಎಸೆತದಲ್ಲಿ ಫೋರ್ ಸಿಡಿಸಲು ಹೋಗಿ ಕೊಹ್ಲಿ ಔಟಾದರು.
ಕೊಹ್ಲಿ ಔಟಾಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕುತ್ತಿರುವಾಗ ಡಗೌಟ್ನಲ್ಲಿದ್ದ ಭಾರತದ ಆಟಗಾರರು ಎದ್ದು ನಿಂತು ಗೌರವ ಸೂಚಿಸಿದರು. ಆದರೆ, ರೋಹಿತ್ ಶರ್ಮಾ ಪೆವಿಲಿಯನ್ಗೆ ಹೋಗುವ ಮೆಟ್ಟಿಲ ಬಳಿ ಕೊಹ್ಲಿಗೆ ಕಾದುಕುಳಿತು ಅವರು ಬಂದೊಡನೆ ನಗುತ್ತಾ ಬೆನ್ನು ತಟ್ಟಿ ಶಹಭಾಷ್ ಎಂದು ಹೇಳಿದ್ದಾರೆ. ಬಳಿಕ ಹಾರ್ದಿಕ್ ಪಾಂಡ್ಯ ವಿನ್ನಿಂಗ್ ಶಾಟ್ ಹೊಡೆದು ಗೆದ್ದಾಗ ರೋಹಿತ್–ಕೊಹ್ಲಿ ಮೆಟ್ಟಿಲಿನಲ್ಲಿ ಕೂತಲ್ಲಿಂದ ಎದ್ದು ಕುಣಿದು ಸಂಭ್ರಮಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Rohit-Virat Bromance is unparalleled Moment hai vai moment #rohirat #RohitSharma?#ViratKohli #KingKohli #IndianCricketTeampic.twitter.com/Xd34EP66GW
— Diganta Das (@Diggu33) September 25, 2022
Moment hai bhai?? pic.twitter.com/wtKZR4OYin
— gautam (@itsgautamm) September 25, 2022
ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ”ನಾನು ಈ ಕಾರಣಕ್ಕಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ. ನಾನು ನನ್ನ ಅನುಭವವನ್ನು ತಂಡಕ್ಕೆ ಅಗತ್ಯವಿದ್ದಾಗ ನೀಡುತ್ತಲೇ ಇರುತ್ತೇನೆ. ಮಿಡಲ್ನಲ್ಲಿ ಆ್ಯಡಂ ಝಂಪಾ ಪರಿಣಾಮಕಾರಿ ಆಗುತ್ತಾರೆ ಎಂಬುದು ಗೊತ್ತಿತ್ತು. ಆದರೆ, ಸೂರ್ಯಕುಮಾರ್ ದೊಡ್ಡ ಹೊಡೆತ ಹೊಡೆಯಲು ಶುರುಮಾಡಿದಾಗ ನಾನು ಅವರಿಗೆ ಸಾಥ್ ನೀಡಿದೆ. ನೀನು ಆದಷ್ಟು ಕೊನೆಯ ವರೆಗೂ ಕ್ರೀಸ್ನಲ್ಲಿ ಇರಲು ನೋಡು ಎಂದು ರೋಹಿತ್–ರಾಹುಲ್ ದ್ರಾವಿಡ್ ಇಬ್ಬರೂ ನನ್ನ ಬಳಿ ಹೇಳಿದ್ದರು. ಆ ಸಂದರ್ಭ ಜೊತೆಯಾಟ ಆಡುವುದು ಮುಖ್ಯವಾಗಿತ್ತು ಹಾಗೂ ನಾನು ಅದನ್ನು ಮಾಡಿದೆ,” ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ಕೊಹ್ಲಿ, ”ಸೂರ್ಯಕುಮಾರ್ ಅದ್ಭುತ ಬ್ಯಾಟರ್. ಅವರಿಗೆ ತಾನೇನು ಮಾಡುತ್ತಿದ್ದೇನೆ ಎಂಬ ಕ್ಲಾರಿಟಿ ಇದೆ. ಅವರು ಯಾವುದೇ ಸಂದರ್ಭದಲ್ಲಿ, ಯಾವುದೇ ವಾತಾವರಣದಲ್ಲಿ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇಂಗ್ಲೆಂಡ್ನಲ್ಲಿ ಶತಕ ಸಿಡಿಸಿದ್ದರು. ಏಷ್ಯಾಕಪ್ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದರು. ಕಳೆದ ಆರು ತಿಂಗಳುಗಳಿಂದ ಅವರು ಅತ್ಯುತ್ತಮ ಫಾರ್ಮ್ನಲ್ಲಿ ಕಂಡುಬಂದಿದ್ದಾರೆ. ತಂಡದ ಗೆಲುವಿಗೆ ಕೊಡುಗೆ ನೀಡಿದ್ದಕ್ಕೆ ಸಂತಸವಾಗಿದೆ. ವಿಶ್ರಾಂತಿ ಪಡೆದುಕೊಂಡು ಅಭ್ಯಾಸ ನಡೆಸಿ ತಂಡಕ್ಕೆ ಕಮ್ಬ್ಯಾಕ್ ಮಾಡಿದಾಗ ಒಳ್ಳೆಯ ಫಲಿತಾಂಶ ಸಿಗುತ್ತದೆ. ನಾನು ಇದೇ ಪ್ರದರ್ಶನವನ್ನು ಮುಂದುವರೆಸುತ್ತೇನೆ, ಸದಾ ತಂಡಕ್ಕೆ ಕೊಡುಗೆ ನೀಡುತ್ತಿರುತ್ತೇನೆ,” ಎಂಬುದು ಕೊಹ್ಲಿ ಮಾತು.
Published On - 9:19 am, Mon, 26 September 22