AB de Villiers: DK ಬ್ಯಾಟಿಂಗ್ ನೋಡಿದ್ರೆ, ನಾನು ಮತ್ತೆ ಕ್ರಿಕೆಟ್ ಆಡ್ಬೇಕು ಅನ್ನಿಸ್ತಿದೆ..!
Dinesh Karthik-AB de Villiers: ನಾನು ದಿನೇಶ್ ಕಾರ್ತಿಕ್ ಅವರನ್ನು ಕೊನೆಯ ಬಾರಿಗೆ ನೋಡಿದಾಗ ಯುಕೆಯಲ್ಲಿ ಕಾಮೆಂಟ್ರಿ ಮಾಡುತ್ತಿದ್ದರು. ಆಗ ನಾನು ಅವರು ತಮ್ಮ ವೃತ್ತಿಜೀವನದ ಅಂತ್ಯದಲ್ಲಿದ್ದಾರೆ ಎಂದು ಭಾವಿಸಿದ್ದೆ.

IPL 2022: ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿನೇಶ್ ಕಾರ್ತಿಕ್ಗೆ ಒಂದು ಜೋಕ್ ಹೇಳುವಂತೆ ಕೇಳಲಾಗಿತ್ತು…ಡಿಕೆ ಹೇಳಿದ ಜೋಕ್- ಎಬಿ ಡಿವಿಲಿಯರ್ಸ್ ಈ ಸಲ RCB ಯಲ್ಲಿ ಆಡ್ತಿಲ್ಲ. ಇದರಲ್ಲೇನು ತಮಾಷೆಯಿದೆ ಎಂದು ನೀವಂದುಕೊಂಡರೆ, ದಿನೇಶ್ ಕಾರ್ತಿಕ್ ಹಾಗೆ ಹೇಳಲು ಮುಖ್ಯ ಕಾರಣ, ಒಬ್ಬ ಆಟಗಾರ ಅತ್ಯುತ್ತಮವಾಗಿ ಆಡುತ್ತಿದ್ದರೂ ನಿವೃತ್ತಿ ಘೋಷಿಸಿರುವುದಕ್ಕಿಂತ ದೊಡ್ಡ ತಮಾಷೆ ಏನಿದೆ ಎಂಬುದಾಗಿತ್ತು. ಇದೀಗ ಅದೇ ದಿನೇಶ್ ಕಾರ್ತಿಕ್ ಅವರನ್ನು ಹೊಡಿಬಡಿ ದಾಂಡಿಗ ಎಬಿ ಡಿವಿಲಿಯರ್ಸ್ ಹಾಡಿಹೊಗಳಿದ್ದಾರೆ. ಅಷ್ಟೇ ಅಲ್ಲದೆ ನನ್ನನ್ನು ಮೈದಾನಕ್ಕಿಳಿಯುವಂತೆ ಪ್ರೇರೇಪಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಹೌದು, ಪ್ರಸ್ತುತ ಸೀಸನ್‌ನಲ್ಲಿ ಆರ್‌ಸಿಬಿ ಪರ 6 ಪಂದ್ಯಗಳನ್ನ ಆಡಿರುವ ದಿನೇಶ್ ಕಾರ್ತಿಕ್ 200 ಕ್ಕಿಂತ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಡಿಕೆ ಬ್ಯಾಟ್ನಿಂದ ಮೂಡಿಬಂದಿದ್ದು ಬರೋಬ್ಬರಿ 18 ಬೌಂಡರಿ ಹಾಗೂ 14 ಸಿಕ್ಸರ್. ಇದರಲ್ಲೇ ದಿನೇಶ್ ಕಾರ್ತಿಕ್ ಅಬ್ಬರವನ್ನು ಊಹಿಸಿಕೊಳ್ಳಬಹುದು. ಇನ್ನು 6 ಪಂದ್ಯಗಳಿಂದ ಒಟ್ಟು 197 ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ 6 ಪಂದ್ಯಗಳಲ್ಲಿ ಐದು ಬಾರಿ ಅಜೇಯರಾಗಿ ಉಳಿದಿದ್ದರು. ಆರ್‌ಸಿಬಿ ಪರ ಹೊಸ ಫಿನಿಶರ್ ಆಗಿ ಅಬ್ಬರಿಸುತ್ತಿರುವ ಡಿಕೆಯ ಬ್ಯಾಟಿಂಗ್ ಅನ್ನು ಎಬಿಡಿ ಹಾಡಿಹೊಗಳಿದ್ದಾರೆ.
ದಿನೇಶ್ ಕಾರ್ತಿಕ್ ಅವರ ಆಟ ನೋಡುತ್ತಿದ್ದರೆ, ನಾನು ಮತ್ತೆ ಕ್ರಿಕೆಟ್ ಆಡಬೇಕು ಎನಿಸಲಾರಂಭಿಸಿದೆ. ಒತ್ತಡದ ನಡುವೆಯು 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಿದ್ರೆ ರೋಮಾಂಚನವಾಗುತ್ತೆ. ಡಿಕೆ ಇದೇ ಫಾರ್ಮ್ ಅನ್ನು ಮುಂದುವರೆಸಿದರೆ ಆರ್‌ಸಿಬಿ ಈ ಸಲ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದು ಎಬಿ ಡಿವಿಲಿಯರ್ಸ್ ಡಿಕೆಯ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾನು ದಿನೇಶ್ ಕಾರ್ತಿಕ್ ಅವರನ್ನು ಕೊನೆಯ ಬಾರಿಗೆ ನೋಡಿದಾಗ ಯುಕೆಯಲ್ಲಿ ಕಾಮೆಂಟ್ರಿ ಮಾಡುತ್ತಿದ್ದರು. ಆಗ ನಾನು ಅವರು ತಮ್ಮ ವೃತ್ತಿಜೀವನದ ಅಂತ್ಯದಲ್ಲಿದ್ದಾರೆ ಎಂದು ಭಾವಿಸಿದ್ದೆ. ಆದರೆ ಪ್ರಸ್ತುತ ಸೀಸನ್‌ನಲ್ಲಿ ಅವರ ಪ್ರದರ್ಶನ ಅದ್ಭುತವಾಗಿದೆ. ನನಗೆ ನಿಜವಾಗಲೂ ಆಶ್ಚರ್ಯವಾಯಿತು. ಅವರು ಸಮರ್ಥ ಆಟಗಾರ, ಆದರೆ ಇಂತಹ ಆಟವನ್ನು ನಾನು ನಿರೀಕ್ಷಿಸಿರಲಿಲ್ಲ. ಡಿಕೆ ಈ ಅಬ್ಬರ ಮುಂದುವರೆಸಿದರೆ ಆರ್‌ಸಿಬಿ ಬಹಳ ದೂರ ಸಾಗುವ ಅವಕಾಶವಿದೆ ಎಂದು ಎಬಿಡಿ ಹೇಳಿದ್ದಾರೆ.
ಒಟ್ಟಿನಲ್ಲಿ ನನಗೆ ಮತ್ತೆ ಕ್ರಿಕೆಟ್ ಆಡಬೇಕೆನಿಸುತ್ತಿದೆ ಎಂದಿರುವ ಎಬಿಡಿಯ ಮಾತು ಕೇಳಿರುವ ಆರ್‌ಸಿಬಿ ಅಭಿಮಾನಿಗಳು ಡಿವಿಲಿಯರ್ಸ್ ಮತ್ತೆ ಆರ್‌ಸಿಬಿ ಬರಲಿ. ಅಷ್ಟೇ ಅಲ್ಲದೆ ABDK (ABD-DK) ಜುಗಲ್ಬಂಧಿ ನೋಡುವ ಅವಕಾಶ ಆರ್‌ಸಿಬಿ ಫ್ಯಾನ್ಸ್ಗೆ ಸಿಗಲಿ ಎಂದು ಎಂದು ಆಶಿಸಿದ್ದಾರೆ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ
Published On - 11:11 pm, Tue, 19 April 22




