Duleep Trophy 2022 Final: ದುಲೀಪ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಪಶ್ಚಿಮ ವಲಯ

Duleep Trophy 2022 Final: ಕೊನೆಯ ಇನಿಂಗ್ಸ್​ನಲ್ಲಿ ಬೃಹತ್ ಟಾರ್ಗೆಟ್ ಪಡೆದ ದಕ್ಷಿಣ ವಲಯದ ಪರ ಆರಂಭಿಕ ಆಟಗಾರ ರೋಹನ್ (93) ಉತ್ತಮ ಇನಿಂಗ್ಸ್ ಆಡಿದರೂ, ಉಳಿದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

Duleep Trophy 2022 Final: ದುಲೀಪ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಪಶ್ಚಿಮ ವಲಯ
Duleep Trophy 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on:Sep 25, 2022 | 1:34 PM

2022ರ ದುಲೀಪ್ ಟ್ರೋಫಿಯ ಫೈನಲ್ (Duleep Trophy 2022 Final) ಪಂದ್ಯದಲ್ಲಿ ದಕ್ಷಿಣ ವಲಯದ (South Zone) ವಿರುದ್ಧ ಭರ್ಜರಿ ಜಯ ಸಾಧಿಸಿ ಪಶ್ಚಿಮ ವಲಯ (West Zone) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೊಯಮತ್ತೂರಿನ ಎಸ್​ಎನ್​ಆರ್ ಕಾಲೇಜು ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್​ ಆರಂಭಿಸಿದ ಪಶ್ಚಿಮ ವಲಯದ ಪರ ಮೊದಲ ಇನಿಂಗ್ಸ್​ನಲ್ಲಿ ಹೆಟ್ ಪಟೇಲ್ 98 ರನ್​ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ವೆಸ್ಟ್ ಝೋನ್ (ಪಶ್ಚಿಮ ವಲಯ) 270 ರನ್​ ಕಲೆಹಾಕಿತು. ಈ ಗುರಿಯೊಂದಿಗೆ ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯದ ಪರ ಬಾಬಾ ಇಂದ್ರಜಿತ್ (118) ಭರ್ಜರಿ ಶತಕ ಸಿಡಿಸಿದರು. ಪರಿಣಾಮ ಮೊದಲ ಇನಿಂಗ್ಸ್​ನಲ್ಲಿ ದಕ್ಷಿಣ ವಲಯ 327 ರನ್​ ಕಲೆಹಾಕಿತು.

57 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಪಶ್ಚಿಮ ವಲಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (265) ದ್ವಿಶತಕ ಸಿಡಿಸಿ ಮಿಂಚಿದರೆ, ಶ್ರೇಯಸ್ ಅಯ್ಯರ್ 71 ರನ್ ಬಾರಿಸಿದರು. ಇನ್ನು ಸರ್ಫರಾಜ್ ಖಾನ್ (127) ಬಿರುಸಿನ ಶತಕ ಸಿಡಿಸುವ ಮೂಲಕ 2ನೇ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತ ಪೇರಿಸಲು ನೆರವಾದರು. ಅದರಂತೆ 4 ವಿಕೆಟ್ ನಷ್ಟಕ್ಕೆ 585 ರನ್​ಗಳಿಸಿ ಪಶ್ಚಿಮ ವಲಯ ಡಿಕ್ಲೇರ್ ಘೋಷಿಸಿತು.

ಇದನ್ನೂ ಓದಿ
Image
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Image
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಕೊನೆಯ ಇನಿಂಗ್ಸ್​ನಲ್ಲಿ ಬೃಹತ್ ಟಾರ್ಗೆಟ್ ಪಡೆದ ದಕ್ಷಿಣ ವಲಯದ ಪರ ಆರಂಭಿಕ ಆಟಗಾರ ರೋಹನ್ (93) ಉತ್ತಮ ಇನಿಂಗ್ಸ್ ಆಡಿದರೂ, ಉಳಿದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 234 ರನ್​ಗಳಿಗೆ ಸೌತ್ ಝೋನ್ (ದಕ್ಷಿಣ ವಲಯ) ಆಲೌಟ್ ಆಯಿತು. ಇದರೊಂದಿಗೆ 294 ರನ್​ಗಳ ಭರ್ಜರಿ ಜಯ ಸಾಧಿಸಿ ಪಶ್ಚಿಮ ವಲಯ ಚಾಂಪಿಯನ್ ಪಟ್ಟ ಅಲಂಕರಿಸಿತು.

ಫೈನಲ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಜಯದೇವ್ ಉನದ್ಕಟ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ದಕ್ಷಿಣ ವಲಯ ಪ್ಲೇಯಿಂಗ್ ಇಲೆವೆನ್: ರೋಹನ್ ಕುನ್ನುಮ್ಮಳ್ , ಮಯಾಂಕ್ ಅಗರ್ವಾಲ್ , ಬಾಬಾ ಇಂದ್ರಜಿತ್ , ಹನುಮ ವಿಹಾರಿ (ನಾಯಕ) , ಮನೀಶ್ ಪಾಂಡೆ , ರಿಕಿ ಭುಯಿ ( ವಿಕೆಟ್ ಕೀಪರ್ ) , ಕೃಷ್ಣಪ್ಪ ಗೌತಮ್ , ಸಾಯಿ ಕಿಶೋರ್ , ಬೆಸಿಲ್ ಥಂಪಿ , ತೆಲುಕುಪಲ್ಲಿ ರವಿತೇಜ , ಚೀಪುರಪಲ್ಲಿ ಸ್ಟೀಫನ್.

ಪಶ್ಚಿಮ ವಲಯ ಪ್ಲೇಯಿಂಗ್ ಇಲೆವೆನ್: ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಸರ್ಫರಾಜ್ ಖಾನ್ , ಅತಿತ್ ಶೇತ್ , ಶಮ್ಸ್ ಮುಲಾನಿ , ಹೆಟ್ ಪಟೇಲ್ ( ವಿಕೆಟ್ ಕೀಪರ್ ) , ತನುಷ್ ಕೋಟ್ಯಾನ್ , ಜಯದೇವ್ ಉನದ್ಕಟ್ , ಚಿಂತನ್ ಗಜಾ

Published On - 1:32 pm, Sun, 25 September 22