AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duleep Trophy: ಚೊಚ್ಚಲ ಪಂದ್ಯದಲ್ಲೇ ದ್ವಿಶತಕ; ಇತಿಹಾಸ ಸೃಷ್ಟಿಸಿದ ಡ್ಯಾನಿಶ್ ಮಾಲೆವಾರ್

Danish Malewar's Double Century: ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಕೇಂದ್ರ ವಲಯದ ಡ್ಯಾನಿಶ್ ಮಾಲೆವಾರ್ ಅದ್ಭುತವಾದ ದ್ವಿಶತಕ (203 ರನ್) ಸಿಡಿಸಿ ವಿದರ್ಭ ಕ್ರಿಕೆಟ್‌ ಪರ ಹೊಸ ಅಧ್ಯಾಯ ಬರೆದಿದ್ದಾರೆ. ಇದು ದುಲೀಪ್ ಟ್ರೋಫಿಯಲ್ಲಿ ವಿದರ್ಭದ ಆಟಗಾರನಿಂದ ದಾಖಲಿಸಲ್ಪಟ್ಟ ಮೊದಲ ದ್ವಿಶತಕವಾಗಿದೆ. ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಡ್ಯಾನಿಶ್, ತಮ್ಮ ಚೊಚ್ಚಲ ದುಲೀಪ್ ಟ್ರೋಫಿ ಪಂದ್ಯದಲ್ಲೇ ಈ ಸಾಧನೆ ಮಾಡಿದ್ದಾರೆ. ಅವರ ಅದ್ಭುತ ಬ್ಯಾಟಿಂಗ್‌ನಿಂದ ಕೇಂದ್ರ ವಲಯವು 532 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

Duleep Trophy: ಚೊಚ್ಚಲ ಪಂದ್ಯದಲ್ಲೇ ದ್ವಿಶತಕ; ಇತಿಹಾಸ ಸೃಷ್ಟಿಸಿದ ಡ್ಯಾನಿಶ್ ಮಾಲೆವಾರ್
Danish Malewar
ಪೃಥ್ವಿಶಂಕರ
|

Updated on: Aug 29, 2025 | 5:34 PM

Share

ದುಲೀಪ್ ಟ್ರೋಫಿಯಲ್ಲಿ (Duleep Trophy) ಪ್ರಸ್ತುತ ಕ್ವಾರ್ಟರ್ ಫೈನಲ್ ಸುತ್ತು ನಡೆಯುತ್ತಿದೆ. ಈ ಸುತ್ತಿನಲ್ಲಿ ಕೇಂದ್ರ ವಲಯ ಹಾಗೂ ಈಶಾನ್ಯ ವಲಯ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೇಂದ್ರ ವಲಯ ತಂಡ 532 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ತಂಡದ ಪರ ದ್ವಿಶತಕದ ಇನ್ನಿಂಗ್ಸ್ ಆಡಿದ ಡ್ಯಾನಿಶ್ ಮಾಲೆವಾರ್ (Danish Malewar), 203 ರನ್‌ ಬಾರಿಸಿದರು. ಡ್ಯಾನಿಶ್ ಅವರ ಇನ್ನಿಂಗ್ಸ್‌ನಲ್ಲಿ 36 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು. ಡ್ಯಾನಿಶ್ ಮಾತ್ರವಲ್ಲದೆ ನಾಯಕ ರಜತ್ ಪಟಿದಾರ್ ಕೂಡ ಶತಕ ಬಾರಿಸಿದರು. ಈ ದ್ವಿಶತಕದೊಂದಿಗೆ ಡ್ಯಾನಿಶ್ ಮಾಲೆವಾರ್ ವಿದರ್ಭದ ಯಾವುದೇ ಆಟಗಾರ ಮಾಡದ ಸಾಧನೆಯನ್ನು ಮಾಡಿದ್ದಾರೆ.

ಡ್ಯಾನಿಶ್ ಮಾಲೆವಾರ್ ದಾಖಲೆ

ದುಲೀಪ್ ಟ್ರೋಫಿಯಲ್ಲಿ ಡ್ಯಾನಿಶ್ ಮಾಲೆವಾರ್ ದ್ವಿಶತಕ ಗಳಿಸಿದ ತಕ್ಷಣ, ಅವರ ಹೆಸರು ವಿದರ್ಭ ಕ್ರಿಕೆಟ್‌ನಲ್ಲಿ ಅಮರವಾಯಿತು. ವಾಸ್ತವವಾಗಿ, ದುಲೀಪ್ ಟ್ರೋಫಿಯಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ದ್ವಿಶತಕ ಗಳಿಸಿದ ವಿದರ್ಭದ ಮೊದಲ ಆಟಗಾರ ಡ್ಯಾನಿಶ್. ಇಲ್ಲಿಯವರೆಗೆ ದುಲೀಪ್ ಟ್ರೋಫಿಯಲ್ಲಿ ಕೇವಲ ನಾಲ್ಕು ಬ್ಯಾಟ್ಸ್‌ಮನ್‌ಗಳು ಮಾತ್ರ ದ್ವಿಶತಕ ಬಾರಿಸಿದ್ದಾರೆ. ಇದರಲ್ಲಿ ಯಶಸ್ವಿ ಜೈಸ್ವಾಲ್, ಬಾಬಾ ಅಪರಾಜಿತ್, ಬಾಬಾ ಇಂದ್ರಜಿತ್ ಸೇರಿದ್ದಾರೆ. ಈಗ ಡ್ಯಾನಿಶ್ ಅವರ ಹೆಸರೂ ಇದರಲ್ಲಿ ಸೇರಿದೆ.

Duleep Trophy 2025: ಮೊದಲ ದಿನವೇ ಸ್ಫೋಟಕ ಶತಕ ಸಿಡಿಸಿದ ಆರ್​ಸಿಬಿ ನಾಯಕ ರಜತ್ ಪಾಟಿದರ್

ಡ್ಯಾನಿಶ್ ವೃತ್ತಿಜೀವನ

ಡ್ಯಾನಿಶ್ ಮಾಲೆವಾರ್ ಕೇವಲ 21 ವರ್ಷ ವಯಸ್ಸಿನವರಾಗಿದ್ದು, ಇವರು ರಣಜಿ ಟ್ರೋಫಿಯ ಕೊನೆಯ ಸೀಸನ್​​ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ರಣಜಿ ಆವೃತ್ತಿಯಲ್ಲಿ ಡ್ಯಾನಿಶ್ ಆಡಿದ 9 ಪಂದ್ಯಗಳಲ್ಲಿ 2 ಶತಕಗಳು ಮತ್ತು 6 ಅರ್ಧಶತಕಗಳ ಸಹಾಯದಿಂದ 783 ರನ್ ಕಲೆಹಾಕಿದ್ದರು. ಈಗ ಅವರ ಬ್ಯಾಟ್‌ನಿಂದ ದ್ವಿಶತಕ ಕೂಡ ಹೊರಬಂದಿದೆ, ಇದು ಅವರ ವೃತ್ತಿಪರ ವೃತ್ತಿಜೀವನದ ಮೊದಲ ದ್ವಿಶತಕವಾಗಿದೆ. ಡ್ಯಾನಿಶ್ ಈ ಮೊದಲು ರಣಜಿ ಟ್ರೋಫಿ ಫೈನಲ್‌ನಲ್ಲಿ ಶತಕ ಬಾರಿಸಿದ್ದರು. ಹಾಗೆಯೇ ವಿದರ್ಭ ಪ್ರೊ ಲೀಗ್‌ನಲ್ಲಿಯೂ ಡ್ಯಾನಿಶ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ಲೀಗ್​ನಲ್ಲಿ ಆಡಿದ್ದ 6 ಪಂದ್ಯಗಳಲ್ಲಿ 160 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 318 ರನ್ ಬಾರಿಸಿದ್ದರು. ಈ ಮೂಲಕ ಅವರು ಟೂರ್ನಮೆಂಟ್‌ನ ಉದಯೋನ್ಮುಖ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ