Viral Video: ಮೈದಾನದಲ್ಲೇ ಭಾರತೀಯ ಆಟಗಾರರ ನಡುವೆ ಜಗಳ..!

Duleep Trophy final: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಶ್ಚಿಮ ವಲಯ ಮೊದಲ ಇನಿಂಗ್ಸ್​ನಲ್ಲಿ 270 ರನ್ ಹಾಗೂ 2ನೇ ಇನಿಂಗ್ಸ್​ನಲ್ಲಿ 585 ರನ್ ಪೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ದಕ್ಷಿಣ ವಲಯ ಮೊದಲ ಇನಿಂಗ್ಸ್​ನಲ್ಲಿ 327 ರನ್​ ಕಲೆಹಾಕಿತು.

Viral Video: ಮೈದಾನದಲ್ಲೇ ಭಾರತೀಯ ಆಟಗಾರರ ನಡುವೆ ಜಗಳ..!
duleep trophy final
TV9kannada Web Team

| Edited By: Zahir PY

Sep 25, 2022 | 2:09 PM

ಭಾನುವಾರ ನಡೆದ ದುಲೀಪ್ ಟ್ರೋಫಿ ಫೈನಲ್ (Duleep Trophy 2022 Final) ಪಂದ್ಯದ ಅಂತಿಮ ದಿನದಾಟವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿತ್ತು. ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಿದ್ದ ದಕ್ಷಿಣ ವಲಯ ಹಾಗೂ ಪಶ್ಚಿಮ ವಲಯ ನಡುವೆ ರೋಚಕ ಹೋರಾಟ ಕಂಡು ಬಂದಿತ್ತು. ಅದರಲ್ಲೂ ಅಂತಿಮ ದಿನದಾಟದಲ್ಲಿ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವ ಪ್ರಯತ್ನಕ್ಕೆ ದಕ್ಷಿಣ ವಲಯ ಮುಂದಾಗಿತ್ತು. ಏಕೆಂದರೆ 2ನೇ ಇನಿಂಗ್ಸ್​ನಲ್ಲಿ 585 ಟಾರ್ಗೆಟ್ ಪಡೆದಿದ್ದ ದಕ್ಷಿಣ ವಲಯವು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಅಲ್ಲದೆ ಕೊನೆಯ ದಿನದಾಟದಲ್ಲಿ ಸೋಲಿನಿಂದ ಪರಾಗುವ ಪ್ಲ್ಯಾನ್​ನೊಂದಿಗೆ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯುವ ಪ್ರಯತ್ನಕ್ಕೆ ಕೈ ಹಾಕಿದ್ದರು.

ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ರವಿತೇಜ ಅವರನ್ನು ಶಾರ್ಟ್ ಲೆಗ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಯಶಸ್ವಿ ಜೈಸ್ವಾಲ್ ಕೆಣಕುತ್ತಿದ್ದರು. ಇದರಿಂದ ಕುಪಿತಗೊಂಡ ರವಿತೇಜ ಹಾಗೂ ಜೈಸ್ವಾಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ಫೀಲ್ಡರ್​ನಿಂದ ತೊಂದರೆಯಾಗುತ್ತಿದೆ ಎಂದು ರವಿತೇಜ ಅಂಪೈರ್​ಗೆ ದೂರು ನೀಡಿದ್ದರು. ಇದೇ ವೇಳೆ ಪಶ್ಚಿಮ ವಲಯ ತಂಡದ ನಾಯಕ ಅಜಿಂಕ್ಯ ರಹಾನೆ ಸಹ ಆಟಗಾರ ಯಶಸ್ವಿ ಜೈಸ್ವಾಲ್​ಗೆ ಬುದ್ಧಿವಾದ ಹೇಳಿದ್ದಾರೆ. ಅಲ್ಲದೆ ಅನುಚಿತ ವರ್ತನೆ ತೋರದಂತೆ ತಾಕೀತು ಕೂಡ ಮಾಡಿದ್ದಾರೆ.

ಇದಾಗ್ಯೂ ರವಿತೇಜ ಜೊತೆಗಿನ ಮಾತಿನ ಚಕಮಕಿ ಮುಂದುವರೆಸಿದ್ದ ಜೈಸ್ವಾಲ್​ ರನ್ನು ನಾಯಕ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್​ನಲ್ಲಿರಿಸಿದ್ದಾರೆ. ಆದರೆ ಬ್ಯಾಟ್ಸ್​ಮನ್ ನಾನ್​ ಸ್ಟ್ರೈಕ್​ನತ್ತ ಬರುತ್ತಿದ್ದಂತೆ ಮತ್ತೆ ಕಿಚಾಯಿಸಲು ಯತ್ನಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಅವರ ಈ ಅನುಚಿತ ವರ್ತನೆಯನ್ನು ಗಮನಿಸಿದ ನಾಯಕ ಅಜಿಂಕ್ಯ ರಹಾನೆ ಮೈದಾನದಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಅಲ್ಲದೆ ಬದಲಿ ಫೀಲ್ಡರ್ ಒಬ್ಬರನ್ನು ಕಣಕ್ಕಿಳಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಶ್ಚಿಮ ವಲಯ ಮೊದಲ ಇನಿಂಗ್ಸ್​ನಲ್ಲಿ 270 ರನ್ ಹಾಗೂ 2ನೇ ಇನಿಂಗ್ಸ್​ನಲ್ಲಿ 585 ರನ್ ಪೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ದಕ್ಷಿಣ ವಲಯ ಮೊದಲ ಇನಿಂಗ್ಸ್​ನಲ್ಲಿ 327 ರನ್​ ಕಲೆಹಾಕಿದರೆ, 2ನೇ ಇನಿಂಗ್ಸ್​ನಲ್ಲಿ 234 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಪಶ್ಚಿಮ ವಲಯ ತಂಡವು 294 ರನ್​ಗಳ ಭರ್ಜರಿ ಜಯ ಸಾಧಿಸಿ ದುಲೀಪ್ ಟ್ರೋಫಿಯಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ದಕ್ಷಿಣ ವಲಯ ಪ್ಲೇಯಿಂಗ್ ಇಲೆವೆನ್: ರೋಹನ್ ಕುನ್ನುಮ್ಮಳ್ , ಮಯಾಂಕ್ ಅಗರ್ವಾಲ್ , ಬಾಬಾ ಇಂದ್ರಜಿತ್ , ಹನುಮ ವಿಹಾರಿ (ನಾಯಕ) , ಮನೀಶ್ ಪಾಂಡೆ , ರಿಕಿ ಭುಯಿ ( ವಿಕೆಟ್ ಕೀಪರ್ ) , ಕೃಷ್ಣಪ್ಪ ಗೌತಮ್ , ಸಾಯಿ ಕಿಶೋರ್ , ಬೆಸಿಲ್ ಥಂಪಿ , ತೆಲುಕುಪಲ್ಲಿ ರವಿತೇಜ , ಚೀಪುರಪಲ್ಲಿ ಸ್ಟೀಫನ್.

ಪಶ್ಚಿಮ ವಲಯ ಪ್ಲೇಯಿಂಗ್ ಇಲೆವೆನ್: ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಸರ್ಫರಾಜ್ ಖಾನ್ , ಅತಿತ್ ಶೇತ್ , ಶಮ್ಸ್ ಮುಲಾನಿ , ಹೆಟ್ ಪಟೇಲ್ ( ವಿಕೆಟ್ ಕೀಪರ್ ) , ತನುಷ್ ಕೋಟ್ಯಾನ್ , ಜಯದೇವ್ ಉನದ್ಕಟ್ , ಚಿಂತನ್ ಗಜಾ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada