AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duleep Trophy: ದುಲೀಪ್ ಟ್ರೋಫಿ ಸೆಮಿಫೈನಲ್​ಗೆ 4 ತಂಡಗಳು ಎಂಟ್ರಿ; ಯಾರ್ಯಾರ ನಡುವೆ ಪಂದ್ಯ?

Duleep Trophy Semifinals: ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್‌ಗಳು ಮುಕ್ತಾಯಗೊಂಡಿದ್ದು, ಪಶ್ಚಿಮ, ಕೇಂದ್ರ, ಉತ್ತರ ಮತ್ತು ದಕ್ಷಿಣ ವಲಯ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಿವೆ. ಸೆಪ್ಟೆಂಬರ್ 4 ರಿಂದ ಸೆಮಿಫೈನಲ್ ಪಂದ್ಯಗಳು ಆರಂಭವಾಗಲಿದ್ದು, ರೋಮಾಂಚಕಾರಕ ಸ್ಪರ್ಧೆ ನಿರೀಕ್ಷಿಸಲಾಗಿದೆ. ಪ್ರಮುಖ ಆಟಗಾರರ ಪ್ರದರ್ಶನ ಮತ್ತು ತಂಡಗಳ ತಂತ್ರಗಳು ಪಂದ್ಯಗಳ ಫಲಿತಾಂಶಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

Duleep Trophy: ದುಲೀಪ್ ಟ್ರೋಫಿ ಸೆಮಿಫೈನಲ್​ಗೆ 4 ತಂಡಗಳು ಎಂಟ್ರಿ; ಯಾರ್ಯಾರ ನಡುವೆ ಪಂದ್ಯ?
Duleep Trophy 2025
ಪೃಥ್ವಿಶಂಕರ
|

Updated on: Aug 31, 2025 | 8:32 PM

Share

ದುಲೀಪ್ ಟ್ರೋಫಿಯ (Duleep Trophy) ಕ್ವಾರ್ಟರ್ ಫೈನಲ್ ಸುತ್ತು ಮುಕ್ತಾಯಗೊಂಡಿದ್ದು, ಇದೀಗ ಸೆಪ್ಟೆಂಬರ್ 4 ರಿಂದ ಆರಂಭವಾಗಲಿರುವ ಸೆಮಿಫೈನಲ್‌ ಸುತ್ತಿನಲ್ಲಿ ಯಾವ 4 ತಂಡಗಳು ಮುಖಾಮುಖಿಯಾಗಲಿವೆ ಎಂಬುದು ಖಚಿತವಾಗಿದೆ. ಅದರಂತೆ ಕ್ವಾರ್ಟರ್‌ ಫೈನಲ್‌ನಲ್ಲಿ ಶಾರ್ದೂಲ್ ಠಾಕೂರ್ ನಾಯಕತ್ವದ ಪಶ್ಚಿಮ ವಲಯ ತಂಡ ಹಾಗೂ ಪೂರ್ವ ವಲಯ ತಂಡಗಳು ಮುಖಾಮುಖಿಯಾಗಿದ್ದವು. ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಪಶ್ಚಿಮ ವಲಯ ತಂಡವು ಸೆಮಿಫೈನಲ್​ಗೆ ಟಿಕೆಟ್ ಪಡೆದುಕೊಂಡಿತು. ಇತ್ತ ರಜತ್ ಪಾಟಿದರ್ ನಾಯಕತ್ವದ ಕೇಂದ್ರ ವಲಯ ತಂಡವು ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಈಶಾನ್ಯ ವಲಯ ತಂಡವನ್ನು ಪಂದ್ಯಾವಳಿಯಿಂದ ಹೊರಗಿಟ್ಟು ಸೆಮಿಫೈನಲ್‌ಗೆ ತಲುಪಿದೆ.

ಸೆಪ್ಟೆಂಬರ್ 4 ರಿಂದ ದುಲೀಪ್ ಟ್ರೋಫಿಯ ಫೈನಲ್ ತಲುಪಲು ನಾಲ್ಕು ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಸೆಮಿಫೈನಲ್‌ನಲ್ಲಿ, ಶಾರ್ದೂಲ್ ಠಾಕೂರ್ ತಂಡವು ರಜತ್ ಪಟಿದಾರ್ ತಂಡವನ್ನು ಎದುರಿಸಿದರೆ, ಎರಡನೇ ಸೆಮಿಫೈನಲ್‌ನಲ್ಲಿ, ಉತ್ತರ ವಲಯ ತಂಡ ದಕ್ಷಿಣ ವಲಯ ತಂಡವನ್ನು ಎದುರಿಸಲಿದೆ.

ಸೆಮಿಫೈನಲ್ ತಲುಪಿದ ರಜತ್ ಪಡೆ

ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ರಜತ್ ಪಾಟಿದಾರ್ ತಂಡ ಅದ್ಭುತ ಪ್ರದರ್ಶನ ನೀಡಿ ಈಶಾನ್ಯ ವಲಯವನ್ನು ಸೋಲಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ, ಡ್ಯಾನಿಶ್ ಮಾಲೆವಾರ್ ಅವರ ಅದ್ಭುತ ದ್ವಿಶತಕ (203) ಮತ್ತು ನಾಯಕ ರಜತ್ ಪಾಟಿದಾರ್ ಅವರ ಶತಕ (125) ನೆರವಿನಿಂದ ಕೇಂದ್ರ ವಲಯ 5 ವಿಕೆಟ್‌ಗಳಿಗೆ 532 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಈಶಾನ್ಯ ವಲಯದ ಮೊದಲ ಇನ್ನಿಂಗ್ಸ್ ಕೇವಲ 185 ರನ್‌ಗಳಿಗೆ ಸೀಮಿತವಾಯಿತು.

ಇದಾದ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ಗಳಿಗೆ 331 ರನ್ ಗಳಿಸಿದ ನಂತರ ಸೆಂಟ್ರಲ್ ಜೋನ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಇದಕ್ಕೆ ಉತ್ತರವಾಗಿ, ಈಶಾನ್ಯ ವಲಯ 6 ವಿಕೆಟ್‌ಗಳಿಗೆ 200 ರನ್ ಗಳಿಸಿತು, ನಂತರ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ ಮುನ್ನಡೆಯ ಆಧಾರದ ಮೇಲೆ, ಸೆಂಟ್ರಲ್ ಜೋನ್ ಸೆಮಿಫೈನಲ್‌ಗೆ ಪ್ರವೇಶಿಸಿತು.

ಮೊದಲ ಕ್ವಾರ್ಟರ್‌ ಫೈನಲ್

ಇತ್ತ ಮೊದಲ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಅಂಕಿತ್ ಕುಮಾರ್ ನಾಯಕತ್ವದ ಉತ್ತರ ವಲಯ ತಂಡವು ರಿಯಾನ್ ಪರಾಗ್ ನಾಯಕತ್ವದ ಪೂರ್ವ ವಲಯ ತಂಡವನ್ನು ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಟೂರ್ನಿಯಿಂದ ಹೊರಹಾಕಿತು. ಮೊದಲ ಇನ್ನಿಂಗ್ಸ್​ನಲ್ಲಿ ಉತ್ತರ ವಲಯ ತಂಡ 405 ರನ್ ಬಾರಿಸಿದರೆ, ಪೂರ್ವ ವಲಯ ತಂಡ ಕೇವಲ 230 ರನ್​ಗಳಿಗೆ ಆಲೌಟ್ ಆಯಿತು. ಆ ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಉತ್ತರ ವಲಯ 658 ರನ್ ಕಲೆಹಾಕಿತು. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

Duleep Trophy: ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ತಂಡದಿಂದ ಹೊರಬಿದ್ದ ನಾಯಕ ತಿಲಕ್ ವರ್ಮಾ

ಎರಡನೇ ಸೆಮಿಫೈನಲ್

ಇದೀಗ ದುಲೀಪ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯ ಉತ್ತರ ವಲಯ ಮತ್ತು ದಕ್ಷಿಣ ವಲಯದ ನಡುವೆ ನಡೆಯಲಿದೆ. ಈ ಸಮಯದಲ್ಲಿ, ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ಸೆಮಿಫೈನಲ್‌ನಲ್ಲಿ ಆಡುವುದಿಲ್ಲ. ಅವರ ಸ್ಥಾನದಲ್ಲಿ ಮೊಹಮ್ಮದ್ ಅಜರುದ್ದೀನ್ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ. ಉತ್ತರ ವಲಯ ತಂಡವು ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದು, ತಂಡದ ಬ್ಯಾಟ್ಸ್‌ಮನ್ ಆಯುಷ್ ಬದೋನಿ, ನಾಯಕ ಅಂಕಿತ್ ಕುಮಾರ್, ಯಶ್ ಧುಲ್ ಕ್ವಾರ್ಟರ್ ಫೈನಲ್‌ನಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು.

ಆಯುಷ್ ಬದೋನಿ ಅಜೇಯ ದ್ವಿಶತಕ ಗಳಿಸುವ ಮೂಲಕ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೂರ್ವ ವಲಯ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಆಯುಷ್ ಬಡೋನಿ 223 ಎಸೆತಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ಅಜೇಯ 204 ರನ್ ಗಳಿಸಿದರು. ಇವರ ಜೊತೆಗೆ ಅಂಕಿತ್ ಕುಮಾರ್ 198 ರನ್ ಮತ್ತು ಯಶ್ ಧುಲ್ 133 ರನ್​ಗಳ ಇನ್ನಿಂಗ್ಸ್ ಆಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ