AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಟೀ ವಿರಾಮದ ವೇಳೆಗೆ ಭಾರತದ ದಾಳಿಗೆ ಹೈರಾಣಾದ ಹರಿಣಗಳು

India vs South Africa Test: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ ಭಾರತೀಯ ಬೌಲರ್‌ಗಳು ಪ್ರಾಬಲ್ಯ ಮೆರೆದಿದ್ದಾರೆ. ಮೊದಲ ದಿನದ ಚಹಾ ವಿರಾಮದ ವೇಳೆಗೆ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಗಳಿಸಿ ಮಿಂಚಿದರು.

IND vs SA: ಟೀ ವಿರಾಮದ ವೇಳೆಗೆ ಭಾರತದ ದಾಳಿಗೆ ಹೈರಾಣಾದ ಹರಿಣಗಳು
Ind Vs Sa
ಪೃಥ್ವಿಶಂಕರ
|

Updated on:Nov 14, 2025 | 2:36 PM

Share

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ (Eden Gardens) ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಮೊದಲ ದಿನದ ಚಹಾ ವಿರಾಮದ ವೇಳೆಗೆ ಎಂಟು ವಿಕೆಟ್​ಗಳನ್ನು ಕಳೆದುಕೊಂಡು 154 ರನ್ ಕಲೆಹಾಕಿದೆ. ಅಕ್ಷರ್ ಪಟೇಲ್, ಕಾರ್ಬಿನ್ ಬಾಷ್ ಅವರನ್ನು ಔಟ್ ಮಾಡಿದ ತಕ್ಷಣ ಅಂಪೈರ್ ಟೀ ವಿರಾಮ ಘೋಷಿಸಿದರು. ಹೀಗಾಗಿ ಟ್ರಿಸ್ಟಾನ್ ಸ್ಟಬ್ಸ್ 15 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಭಾರತದ ಪರ ಇದುವರೆಗೆ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದಿದ್ದರೆ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದಿದ್ದಾರೆ.

ಆಫ್ರಿಕಾಗೆ ಉತ್ತಮ ಆರಂಭ

ಈ ಪಂದ್ಯದಲ್ಲಿ ತೆಂಬಾ ಬವುಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಐಡೆನ್ ಮಾರ್ಕ್ರಾಮ್ ಮತ್ತು ರಯಾನ್ ರಿಕಲ್ಟನ್ ಅವರ ಆರಂಭಿಕ ಜೋಡಿ ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಆರಂಭವನ್ನು ನೀಡಿತು. ಇವರಿಬ್ಬರ ಜೊತೆಯಾಟದಿಂದಾಗಿ ಆಫ್ರಿಕಾ ತಂಡದ ಸ್ಕೋರ್ ಮೊದಲ 10 ಓವರ್‌ಗಳಲ್ಲಿ 50 ರ ಗಡಿ ದಾಟಿತು. ಈ ವೇಳೆ 11ನೇ ಓವರ್ ಬೌಲ್ ಮಾಡಲು ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ಆರಂಭಿಕ ರಯಾನ್ ರಿಕಲ್ಟನ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು.

ಬುಮ್ರಾ ದಾಳಿಗೆ ಆಫ್ರಿಕಾ ತತ್ತರ

ಆ ನಂತರ ಮತ್ತೊಬ್ಬ ಆರಂಭಿಕ ಐಡೆನ್ ಮಾರ್ಕ್ರಾಮ್ ಅವರನ್ನು ಬುಮ್ರಾ ಔಟ್ ಮಾಡಿದರು. ರಿಕಲ್ಟನ್ 23 ರನ್‌ ಬಾರಿಸಿ ಔಟಾದರೆ, ಮಾರ್ಕ್ರಾಮ್ 31 ರನ್‌ ಗಳಿಸಿ ಔಟಾದರು. ನಂತರ ಕುಲ್ದೀಪ್ ಯಾದವ್, ನಾಯಕ ತೆಂಬ ಬವುಮಾ ಅವರನ್ನು ಪೆವಿಲಿಯನ್​ಗಟ್ಟಿದರು. ಬವುಮಾ ಕೇವಲ ಮೂರು ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಮೊದಲ ದಿನದ ಊಟದ ವಿರಾಮದ ವೇಳೆಗೆ ದಕ್ಷಿಣ ಆಫ್ರಿಕಾ ಮೂರು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು.

IND vs SA: ಕ್ಲೀನ್ ಬೌಲ್ಡ್ ಮಾಡಿ ಅಶ್ವಿನ್ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ

ಪ್ರಮುಖ 8 ವಿಕೆಟ್ ಪತನ

ಎರಡನೇ ಸೆಷನ್ ಆರಂಭದಲ್ಲೇ ಕುಲ್ದೀಪ್ ಯಾದವ್ ವಿಯಾನ್ ಮುಲ್ಡರ್ ಅವರನ್ನು ಔಟ್ ಮಾಡಿದರು. ಟೋನಿ ಡಿ ಜಾರ್ಜಿ ಕೂಡ 24 ರನ್ ಬಾರಿಸಿ ಬುಮ್ರಾಗೆ ಬಲಿಯಾದರು. ನಂತರ ದಾಳಿಗಿಳಿದ ಮೊಹಮ್ಮದ್ ಸಿರಾಜ್, ದಕ್ಷಿಣ ಆಫ್ರಿಕಾಕ್ಕೆ ಸತತ ಎರಡು ಹೊಡೆತಗಳನ್ನು ನೀಡಿದರು. ಮೊದಲು ಕೈಲ್ ವೆರೆನ್ ಅವರ ವಿಕೆಟ್ ಪಡೆದ ಸಿರಾಜ್, ನಂತರ ಮಾರ್ಕೊ ಯಾನ್ಸೆನ್ ಅವರನ್ನು ಔಟ್ ಮಾಡಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ 7 ವಿಕೆಟ್‌ ಕಳೆದುಕೊಂಡು 154 ರನ್​ಗಳ ಗಡಿ ದಾಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Fri, 14 November 25

Follow Us
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ
LPG ಕೊರತೆ: 3 ಸ್ಟಾರ್ ಹೋಟೆಲ್​​ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ
LPG ಕೊರತೆ: 3 ಸ್ಟಾರ್ ಹೋಟೆಲ್​​ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ